ಅವರರವರ ಕರ್ಮ...
#ಅವರವರ ಕರ್ಮ..
ನವೆಂಬರ್ ಆರನೇ ತಾರೀಖು KA-34 ಪ್ರಾದೇಶಿಕ ಸಾರಿಗೆ ಕಛೇರಿ(RTO)ಗೆ ಹೋಗಿದ್ದೆ.
ನನ್ನ ಕಾರೋಂದು Re Registration and renewal ಮಾಡಬೇಕಾಗಿದೆ ಎಷ್ಟಾಗತ್ತೆ ಎಂದು ಎರಡ್ಮೂರು ದಳ್ಳಾಳಿ (Rto agent ) ಗಳ ಬಳಿ ವಿಚಾರಿಸಿದೆ.ಎಲ್ಲರದ್ದೂ 50-100 ಹೆಚ್ಚುಕಡಿಮೆ ಒಂದೇ ದರ.ಅವರೆಲ್ಲರೂ ಒಂದೇ. ನಾನೂ ಬ್ಯುಸಿ ಇದ್ದದ್ದರಿಂದ ಅನಿವಾರ್ಯ ವಾಗಿ ಬ್ರೊಕರ್ ಕೈಗೆ ಕೊಡಬೇಕಾಯಿತು. ಹೇಳಿದ ಬೆಲೆಗೆ ಒಪ್ಪಿಕೊಂಡೆ.
ಗಾಡಿ ಯಾವಾಗ ತರೋದು??
ಬ್ರೋಕರ್: ಸರ್ ಪೇಪರ್ಸ ರೆಡಿ ಮಾಡಿಸಿ ನಾನು ಕಾಲ್ ಮಾಡುವೆ..ಆದರೆ ನನಗೆ ಒರಿಜಿನಲ್ RC CARD ಬೇಕೆಂದರು.
ಇಟ್ಸ್ ಓಕೆ..ತಗೊಳಿ ಎಂದು original RC ಕೊಟ್ಟು ದಯಮಾಡಿ ಬೇಗ ಮಾಡಿಕೊಡಿ ಎಂದೆ.
ಬ್ರೋಕರ್:ಸರ್ ಈಗ ಜವಾಬ್ದಾರಿ ನನ್ನದು ಸರ್ ಯೋಚನೆ ಮಾಡಬೇಡಿ ಎಂದರು.
ಸರಿ ಸರಿ ಮತ್ತೊಮ್ಮೆ ಹೇಳುವೆ ದಯಮಾಡಿ ಲೇಟ್ ಮಾಡಬೇಡಿ. ಎಂದೇಳಿ ಎಂದಿನಂತೆ ನನ್ನ ಕಾಯಕದಲ್ಲಿ ಬ್ಯುಸಿ ಆದೆ..
ಒಂದು ವಾರದ ನಂತರ ಆ ಬ್ರೋಕರ್ ಕರೆ ಮಾಡಿದರು..
ಸರ್ ನಿಮಗೆ ಸುಮಾರು ಒಂದು ವಾರದಿಂದ ಕಾಲ್ ಮಾಡುತ್ತಿದ್ದೇನೆ. ಯಾವುದೇ ರೆಸ್ಪಾನ್ಸ್ ಇಲ್ಲದೇ ಕಟ್ ಆಗುತ್ತಿದೆ ಅಂದ..!
ಹೌದಾ?? ಏನೋ ನೆಟ್ ವರ್ಕ್ ಪ್ರಾಬಲ್ಮ್ ಇರಬಹುದು. ಹೇಳಿ ಯಾವಾಗ ಗಾಡಿ ತಗೊಂಡು ಬರಲಿ ಎಂದು ಕೇಳಿದೆ.
ಬ್ರೋಕರ್: "ಸಾರ್ ಶುಕ್ರವಾರ ತಗೊಂಡು ಬನ್ನಿ ಅಂತ ಹೇಳಿದ ಸರಿ ಆಯ್ತು ಬಿಡಿ ಎಂದೇಳಿದೆ..
ನಾನು ಪುನಃ ಶುಕ್ರವಾರ ಬೆಳಿಗ್ಗೆ ಕಾಲ್ ಮಾಡಿ ನಾನ್ ಗಾಡಿ ತಗಂಡ್ ಬರುತ್ತಿದ್ದೀನಿ ಇರುತ್ತೀರಲ್ಲಾ?
ಬ್ರೋಕರ್: ಕ್ಷೀಣ ದ್ವನಿಯಲ್ಲಿ " ಹಲೋ ಸಾರ್".. ಎಂದರು. ನಾನು ಗಾಡಿ ತಗಂಡ್ ಬರುತ್ತಿದ್ದೀನಿ . ನೀವ್ ಕನ್ಪರ್ಮಾಗಿ ಸಿಗುತ್ತೀರಿ ತಾನೇ? ಇವತ್ತೇ ಆರ್ ಟಿ ಒ ಅವರು ಗಾಡಿ ಇನ್ಸಪೇಕ್ಷನ್ ಮಾಡುತ್ತಾರ??? ಅಂತ ಕೇಳಬೇಕೆಂದು ಕರೆ ಮಾಡಿದವನು ಅವರ ದ್ವನಿ ಕೇಳಿ ಯಾಕ್ ರೀ ಏನಾಯಿತು ಎಂದೆ..
ಬ್ರೋಕರ್: "ಸಾರ್ ನಮ್ ಹುಡ್ಗ ಒಬ್ಬ ಮಿಸ್ ಆಗಿದ್ದಾನೆ.. ಇವತ್ತಿಗೆ ನಾಲ್ಕುದಿನ ಆಯಿತು ಕೆಲಸಕ್ಕೆ ಹೋದವನು ಮನೆಗೆ ಬಂದಿಲ್ಲ.
ನಾನು:ಅವನ ಪ್ರೆಂಡ್ಸ್ ರಿಲೇಟಿವ್ಸ್ ವಿಚಾರ್ಸಿ..
ಎಲ್ಲಾ ಹುಡುಗರು ಸಂಬಂಧಿಕರನ್ನು ಕೇಳಿದೆವು. ಎಲ್ಲೂ ಮಾಹಿತಿ ಇಲ್ಲ Police complaint ಕೊಟ್ಟಿದ್ದೀವಿ. ಇವತ್ತೂ ನಾವು ಹುಡುಕಲಿಕ್ಕೆ ಹೋಗಬೇಕು " ..
ನಾನು: ಘಟನೆಯ ಹಿನ್ನೆಲೆಯನ್ನು ಕೇಳಬೇಕು ಅನಿಸಿದ್ದರೂ ಏನನ್ನೂ ಕೇಳದೇ ಹೌದ್ರಾ??
ಸರಿ ಮತ್ತೆ ಇವತ್ತು ನಾಳೆ ನಿಮ್ ಕೆಲಸ ಮುಗಿಸ್ಕೊಂಡ್ ನನಗೆ ಮರೆಯದೇ ಕಾಲ್ ಮಾಡಿ.. ನನಗೆ ಸ್ವಲ್ಪ ಅರ್ಜೆಂಟ್ ಇದೆ.
ಬ್ರೋಕರ್:ಸರಿ ಸರ್ ಮಾಡುತ್ತೀನಿ...
ಈ 'ಬ್ರೋಕರ್'ಗಳೆಲ್ಲಾ ಮಹಾನ್ ಸುಳ್ಳುಗಾರರು.. ನಾನು ಕಂಡ ಹಾಗೆ ಎಲ್ಲಾ ವ್ಯವಹಾರದ ಬ್ರೋಕರ್ಗಳು ನಿತ್ಯಜೀವನದಲ್ಲಿ ಸತ್ಯವಾದ ನುಡಿಗಳು ಮಾತಾಡುವುದೇ ಅಪರೂಪ..ಬರೀ ಸುಳ್ಳಿನಿಂದಲೇ ದಿನ ಕಳೆಯುವ ಮಿಥ್ಯ ವಾದಿಗಳು. ಎರಡುವರ್ಷದ ಮುನ್ನಾ ಇದೇ ಕಾರನ್ನು ownership ಚೇಂಜ್ ಮಾಡಿಕೊಡಲು ಇನ್ನೊಬ್ಬ ಬ್ರೋಕರ್ ಮೂರು ತಿಂಗಳು ಮಾಡಿದ್ದ. ನಾನು ಪ್ರತಿದಿನ ಕರೆ ಮಾಡಿದಾಗಲೂ ಸುಳ್ಳನ್ನು ಮಾತ್ರ ಆತ ಹೇಳಿದ್ದು ಬಿಟ್ಟರೆ ಸತ್ಯದ ಮಾತನ್ನು ಹೇಳಲೇ ಇಲ್ಲ.. ಅಸಲಿ ವಿಷಯ ಏನೆಂದರೆ ನನ್ನ ಕಾರಿನ ಪೈಲ್ ಮೂವ್ಮೆಂಟ್ ಮಾಡಲು ಸೂಚಿಸಿದ ಆರ್ ಟಿ ಓ ಕಚೇರಿಯ ಎಪ್ ಡಿ ಎ ಗ್ರೇಡ್ ನ ನೌಕರನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ 'ಭ್ರಷ್ಟ ಹಣದ' ಸಮೇತ ಸಿಕ್ಕು ಬಳ್ಳಾರಿಯ ಸೆಂಟ್ರಲ್ ಜೈಲಲ್ಲಿ ಮುದ್ದೆ ಮುರಿದಿದ್ದ..ಘಟನೆಯಿಂದ ವಿಚಲಿತರಾದ ಇವರು ಯಾವು ಯಾವುದೋ ಕಾರಣ ಹೇಳಿ ದಿನದೂಡಿದ್ದರು.
ನಾಲ್ಕೈದು ದಿನಗಳ ನಂತರ ಪುನಃ ಅವರಿಗೆ ಕಾಲ್ ಮಾಡಿದೆ.. ರಿಂಗ್ ಆಗುತ್ತಿದೆ ಆದರೆ ಕಾಲ್ ಅಟೆಂಡ್ ಮಾಡುತ್ತಿಲ್ಲ..* *ಸುಮಾರು ಎಂಟತ್ತು ಬಾರಿ ಕರೆ ಮಾಡಿ ಕೊನೆಗೆ "ನನಗೆ ಅರ್ಜೆಂಟ್ ಇದೆ ನನ್ನ ಕಾರಿನ ನೊಂದಣಿ ಕಾರ್ಯ ತುರ್ತಾಗಿ ಮಾಡಿಕೊಡಿ ಎಂದು ವಾಟ್ಸಾಪ್ ಮೆಸೇಜ್ ಹಾಕಿದೆ. ನನಗನಿಸಿದ್ದು ಇವರು ಉದ್ದೇಶ ಪೂರ್ವಕವಾಗಿ ಕರೆ ತೆಗಯುತ್ತಿಲ್ಲ. ಎಂದು ಅವರ ಕಚೇರಿಯಲ್ಲಿ ಕೆಲಸ ಮಾಡುವ ಮತ್ತೊಬ್ಬ ಹುಡುಗನಿಗೆ ಕರೆ ಮಾಡಿದೆ.
ಏನಪ್ಪಾ ನಿಮ್ ಬ್ರೋಕರ್ ಕಾಲ್ ಅಟೆಂಡ್ ಮಾಡುತ್ತಿಲ್ಲ.ನನಗೆ ಸ್ವಲ್ಪ ಅರ್ಜೆಂಟ್ ಇದೆ ಎಂದೇಳಿದೆ.
"ಸರ್ ಅವರ ಮಗ ಡೆತ್ ಆಗಿದ್ದಾನೆ". ನಮ್ ಶೋ ರೂಂ ಲ್ಲಿ ಬಹಳಷ್ಟು ಗಾಡಿ ಆರ್ಟೀಓ ವರ್ಕ್ ಪೆಂಡಿಂಗ್ ಇವೆ. ಅವರು ಬಂದ ನಂತರ ನಿಮಗೆ ಇನ್ಪಾರ್ಮ ಮಾಡುತ್ತೀನಿ ಸರ್ ಎಂದೇಳಿದ..
ಒಂದೆರಡು ವಾರಗಳ ನಂತರ ಮತ್ತೆ ಆ ಬ್ರೋಕರ್ಗೆ ಕರೆ ಮಾಡಿದೆ..
ಹೇಗಿದ್ದೀರಿ??
ಪರವಾಗಿಲ್ಲ ಸರ್..
ಇಪ್ಪತ್ತೆರಡು ವರ್ಷದ ಮಗನನ್ನು ಕಳ್ಕಂಬಿಟ್ಟೆ ಸಾರ್ ..ಎಂದು ತನ್ನ ನೋವನ್ನು ದುಃಖದಿಂದ ಹೇಳಿಕೊಂಡರು. ನಾನು ಯಾಕೆ? ಹೇಗಾಯಿತು ಅಂತ ವಿಷಯ ಕೆದಕಿ ಮತ್ತೆ ನೋವು ಕೊಡಲು ಮನಸಾಗದೇ ಕಣ್ಣಂಚಲ್ಲಿ ನೀರು ಒಸರಿತು. ಒಂದೆರಡು ಸಂತೈಸುವ ಮಾತನಷ್ಟೇ ಹೇಳಿದೆ.
ಸರ್ ನಿಮ್ಮ ಪೈಲ್ ಬೇರೊಬ್ಬ ಏಜೆಂಟ್ ಕೈಗೆ ಕಳುಹಿಸುವೆ ಅವರು ನಿಮಗೆ ಕಾಲ್ ಮಾಡುವರು ಹೋಗ್ರಿ ಎಂದೇಳಿದ ಆಗಲಿ ನೀವು ಆರೋಗ್ಯನೋಡಿಕೊಳ್ಳಿ ಎಂದೇಳಿ ಕಾಲ್ ಕಟ್ ಮಾಡಿದೆ..
ನಾನು ನೋಡಿದ ಹಾಗೆ ಈ ಭ್ರಷ್ಟಾಚಾರ ಮೂಲಕ ಹಣ ತೆಗೆದುಕೊಳ್ಳುವವರು ಯಾರು ನೆಮ್ಮದಿಯಾಗಿಲ್ಲ..* *ವಿಪರೀತ ಆರೋಗ್ಯ ಸಮಸ್ಯೆಗಳ ಜೊತೆಗೆ ಅವರ ಕುಟುಂಬ ಸದಸ್ಯರ ಅಕಾಲ ಮರಣಗಳು ಕಂಡು ಅನಾಥರಾಗಿರುತ್ತಾರೆ. ಇದಕ್ಕೆ ಕಾರಣ ಇವರು ಸಾರ್ವಜನಿಕರಿಂದ ಸುಳ್ಳು ವಂಚನೆಯಿಂದ ಕನಿಷ್ಟ ಒಂದಕ್ಕೆ ಮೂರರಷ್ಟು ಹಣವನ್ನು ಲಪಟಾಯಿಸಿರುವುದು ಎನ್ನುವುದು ನನ್ನ ಅಭಿಪ್ರಾಯ. ನೂರಾರು ಜನರ ಶಾಪ ತಟ್ಟಿರಬಹುದು.ಯಾವ ಜನರು ಹೆಂಡತಿ ಮಕ್ಕಳು ಸಾಯಲಿ ಎಂದು ಹೇಳದಿದ್ದರೂ ಅನ್ಯಾಯ ಮತ್ತು ಅಧರ್ಮಿಯವಾದ ವ್ಯವಹಾರದಿಂದ ಈ ಪರಿಸ್ಥಿತಿ ಬಂದಿರಬಹುದು.ಇವರು ಗಳಿಸಿದ ಅನ್ಯಾಯದ ಹಣ,ಜನರ ಶಾಪ ಅನ್ಯಾವಾಗಿ ಅವರನ್ನು ಅಕಾಲ ಮೃತ್ಯುವಾಗಿಸಿದೆ. ಇಷ್ಟೆಲ್ಲಾ ಜನಗಳಿಗೆ ಗೊತ್ತಿದ್ದೂ ಭ್ರಷ್ಟಾಚಾರ ಮಾಡುವುದು ಬಿಡದೇ ತನ್ನ ಕುಟುಂಬದ ಸದಸ್ಯರಿಗೇ ಇವರು ಅಕಾಲ ಮೃತ್ಯುಕಾರಕರಾಗಿರುವುದಂತೂ ಸತ್ಯ....
ಮುತ್ತಾತ ಮಾಡಿದ ಪುಣ್ಯ ಮೊಮ್ಮಕಳನ್ನು ಕಾಪಾಡುತ್ತದಂತೆ ಎಂದು ಇಪ್ಪತೆಂಟು ಮೂವತ್ತು ವರ್ಷಗಳ ಹಿಂದೆ ಅಲ್ಲಲ್ಲಿ ಹಿರಿಯ ಅನುಭವಿಗಳು ಹೇಳುತ್ತಿದ್ದರು. ಆದರೆ ಈಗ ಎಲ್ಲವೂ ಹೈಬ್ರಿಡ್ ಅಲ್ಲವೇ? ಆಗ ವೈಜ್ಞಾನಿಕವಾಗಿ ಹಿಂದುಳಿದದ್ದರಿಂದ ಮಾಡಿದ ಕರ್ಮ ಫಲಗಳು ಎರಡ್ಮೂರನೇ ತಲೆಮಾರಿಗೆ ಬಂದು ತಲುಪುತಿದ್ದವು. ಆದರೆ ಇಂದು ಐದಾರನೇ ಜನರೇಶನ್ ನೆಟ್ವರ್ಕ್ ನಂತೆ ಅವುಗಳು ಕೂಡ ಇಂದಿನ ವೇಗಕ್ಕೆ ಅಬ್ಡೇಟ್ ಆಗಿರಬಹುದು.ಎಂಥಾ ವಿಪರ್ಯಾಸ ಅಲ್ಲವೇ??
ಬರಹ ಮುಗಿಸುವ ಮುನ್ನಾ...
ಈ ಕರ್ಮದ ಬಗ್ಗೆ ನನಗೆ ಅಷ್ಟೊಂದು ನಂಬಿಕೆ ಇಲ್ಲವಾದರೂ 'ಪುತ್ರ ಶೋಕಂ ನಿರಂತರಂ..' ಎಲ್ಲಾ ತಂದೆ ತಾಯಿಗಳಿಗೆ ಮಕ್ಕಳು ಕಳೆದುಕೊಂಡ ಮೇಲೆ ಅದರ ನೋವು ಊಹಿಸಲು ಕಷ್ಟ ಆಗಬಹುದು.ಆದರೆ ನಾವು ಮಾಡುವ ನಿಯತ್ತಿನ ಕೆಲಸ ನಮ್ಮನ್ನು , ನಮ್ಮವರನ್ನು ಉಳಿಸುತ್ತದೆ. ಈ ಘಟನೆ ನನಗೂ ಮನಕಲುಕಿತು ಸೋ ನಿಮಗೂ ಹೇಳಬೇಕೇನಿಸಿತು ಹೇಳಿದೆ..ಅಂದಹಾಗೆ ನನ್ನ ಕಾರಿನ ಆರ್ಟಿಒ ಇನ್ಪೇಕ್ಷನ್ ಆಗಿದೆ.
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ