ಅಟ್ಟಹಾಸ ಸಿನಿಮಾ ಟೈಟಲ್ ಕೊಟ್ಟಿದ್ದು ನಾನೇ...

'ಅಟ್ಟಹಾಸ'  ಫಿಲಂ ಟೈಟಲ್ ಕೊಟ್ಟಿದ್ದು ನಾನೇ...

 *ಈ ಟೈಟಲ್ ಓದಿದ ಮೇಲೆ ಬಹುಶಃ  ನಿಮ್ಮ ಮುಖದಲ್ಲೊಂದು ದ್ವಂದ್ವ ಅರ್ಥಕೊಡುವ ನಗು ಬಂದೋಗಿರಬಹುದು. ಅದು ನೀನ್ ಯ್ಯಾವಾಗ ಈ ಫಿಲಂಗೆ ಹೆಸರು ಕೊಟ್ಟಿದ್ದೆ ಅಂತಾದ್ರೂ ಇರಬಹುದು..ಅಥವಾ ಹೌದಾ? ನೀನಾ ಈ ಹೆಸರು ಕೊಟ್ಟಿದ್ದು?? ಅಂತಾದ್ರೂ ಇರಬಹುದು.. ಹೌದು. ಈ ವೀರಪ್ಪನ್ ವಿಷಯಾಧಾರಿತ 'ಅಟ್ಟಹಾಸ' ಕನ್ನಡ ಚಲನಚಿತ್ರಕ್ಕೆ ಟೈಟಲ್ ಕೊಟ್ಟಿದ್ದು ನಾಗೇಂದ್ರ ಬಂಜಗೆರೆ.  ಆದರೆ ದುರಾದೃಷ್ಟವಶಾತ್  ಆ ಚಿತ್ರತಂಡ ನನ್ನ ಹೆಸರು ಎಲ್ಲೂ ಪ್ರಸ್ತಾಪ ಮಾಡಿಲ್ಲ!.ಹಾಗಾದರೆ ನೀನು ಅಂತ ಈಗ ಹೇಳಿದರೆ ಒಪ್ಪಕ್ಕಾಗತ್ತಾ??ಅಂತ ನೀವು ಕೇಳಬಹುದು.*

*2007 ನೇ ಇಸವಿಯಲ್ಲಿ ಕೋಟೆನಾಡು ಚಿತ್ರದುರ್ಗದಲ್ಲಿ  ಡಿ ಎಡ್ ಮುಗಿಸಿ  ಕೆಲದಿನಗಳು practice teaching  ಡಿ ಇಡಿ ,ಬಿ ಇಡಿ ಹುಡುಗರಿಗೆ tlms ,paintings  ಬರೆದುಕೊಡುತ್ತಿದ್ದೆ. ಅದರಲ್ಲೇ ನನ್ನ ಜೀವನ.. ಪ್ರತೀದಿನ ಆರ್ಡರ್ ಇರುತ್ತಿರಲಿಲ್ಲ. ಕೆಳಗೋಟೆಯ ಮುನ್ಸಿಪಲ್ ಕ್ವಾಟ್ರಸ್ ಹತ್ತಿರವಿದ್ದ ಒಂದು ಹೋಟೆಲ್ ಗೆ ದಿನಾಲು ಪೇಪರ್ ಓದಕ್ಕೆ ಹೋಗುತ್ತಿದ್ದೆ.ಹಾಗೆ ಒಂದು ದಿನ ಸಂಜೆ ನಾಲ್ಕುಗಂಟೆ ಸಮಯ.. ಹೊಟ್ಟೆ ಹಸಿವಾಗಿತ್ತು.ಕಾಪಿ ಟೀ ಕುಡಿದರೆ ಅದು ಓವರ್ ಕಿಕ್ ಹೊಡೆದು ಹೆಂಗೆಂಗೋ ಆಗುತ್ತಿದ್ದರಿಂದ ಹೊಟ್ಟೆ ಹಸಿವಾದಾಗ ಬ್ರೆಡ್/ಬನ್ ತೆಗೆದುಕೊಂಡು ನೀರಲ್ಲಿ ಅದ್ದಿಕೊಂಡು ತಿನ್ನುತ್ತಾ ಪೇಪರ್ ನೋಡುತ್ತಾ ಇದ್ದೆ. ಅಂದು ಶುಕ್ರವಾರ ಆಗಿದ್ದರಿಂದ 'ಸಿನಿಮಾ ಸಮಾಚಾರಗಳ'ಪುರವಣಿ ಇದ್ದೇ ಇರುತ್ತಿತ್ತು.ಯಾವುದೋ ಒಂದು ಮೂಲೆಯಲ್ಲಿ ಒಂದು ಪ್ರಕಟಣೆ ನನ್ನ ಕಣ್ಣಿಗೆ ಬಿತ್ತು.  ಅದೇನೆಂದರೆ ಯಾವುದೋ ಚಿತ್ರ ನಿರ್ಮಾಣದ ಹೆಸರು ಹಾಕಿ ವೀರಪ್ಪನ್ ವಿಷಯಾಧಾರಿತವಾಗಿ  ಚಲನ ಚಿತ್ರ ತೆಗೆಯಲು ಉದ್ದೇಶಿಸಲಾಗಿದೆ.ನೀವೂ ಟೈಟಲ್ ಕೊಡಬಹುದು. ಸೂಕ್ತ ಟೈಟಲ್ ಕೊಟ್ಟವರಿಗೆ ಬಹುಮಾನ ಅಂತ ಇತ್ತು.ಅದನ್ನು ನೋಡಿದ ನಾನು ಆ ಹೋಟೆಲ್ ಮಾಲಿಕರನ್ನು ಕೇಳಿ ಆ ಪುಟವನ್ನು ರೂಂ ಗೆ ತೆಗದುಕೊಂಡು ಹೋಗಿದ್ದೆ.*

 *ಆಗ ಮಾಡಲಿಕ್ಕೇ ಏನು ಕೆಲಸ ಇರಲಿಲ್ಲ. ಆ ಪೇಪರ್ ಹಿಡಿದು ಹಾಗೆ ಕುಳಿತು ವೀರಪ್ಪನ್ ಕೃತ್ಯಗಳನ್ನು ನನಗೆ ಗೊತ್ತಿದ್ದಷ್ಟು ಜ್ಞಾಪಿಸಿಕೊಂಡು "ಅಟ್ಟಹಾಸ" ಎಂದು ಪೈನಲ್ ಮಾಡಿದೆ. ಆ ಚಿತ್ರತಂಡದವರಿಗೆ ನನ್ನದೇ ಆದ ಡಿಸೈನ್ ಲ್ಲಿ ಟೈಟಲ್ ನ್ನೂ ಒಂದು ಪೋಸ್ಟ್ ಕಾರ್ಡಲ್ಲಿ ಬರೆದೂ ಕಳಿಸಿದೆ.ಒಂದೆರೆಡು ವರ್ಷಗಳೇ ಕಳೆದರೂ ಆ ಸಿನಿಮಾದ ಬಗ್ಗೆ ಎಲ್ಲೂ ಏನೂ ಮಾಹಿತಿ ಸಿಗಲಿಲ್ಲ. ನಾಲ್ಕು ವರ್ಷದ ನಂತರ ಅಟ್ಟಹಾಸ ಚಿತ್ರ ತೆರೆಗೆ ಬಂತು. ಆಗ ನನಗನಿಸಿದ್ದು* *ನಾನ್ ಕೊಟ್ಟ ಹೆಸರು ತಗೊಂಡ್ ನನಗೆ ಒಂದು ಮಾತು ಹೇಳಿಲ್ಲ ನೋಡು ಎಂದು ಬಹಳ ನೋವಾಯಿತು. ಆಗ ಇದನ್ನು ಕೇಳಲು ನನ್ನ ಬಳಿ ಯಾವುದೇ ಸೂಕ್ತ ದಾಖಲೆಗಳೂ ಇರಲಿಲ್ಲ. ಈಗಲೂ ನನ್ನ ಬಳಿ ಇದನ್ನು ಬೆಂಬಲಿಸಲು ಯಾವುದೇ ದಾಖಲೆ ,ಪತ್ರಗಳು ಇಲ್ಲ. ಈ ದಾಖಲೆಗಳ ಪ್ರಪಂಚದಲ್ಲಿ ದಾಖಲಾತಿಗಳು ಇದ್ದರೂ ನಂಬುವುದು ಕಷ್ಟ..ಆದರೆ ನಾನು ಕೊಟ್ಟದ್ದು ನಿಜ,ನಾನು ಕೊಟ್ಟ ಟೈಟಲ್  ಸೆಲೆಕ್ಟ್ ಆಗಿದ್ದು ನಿಜ.*
*ಇರುವ ವಾಸ್ತವವನ್ನು ಹಂಚಿಕೊಂಡೆ...😀😀*

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..