ನೀನ್ ಜೊತೆಗೆ ನನ್ನ ಇನ್ಮೇಲೆ ಎಲ್ಲೂ ಕರೀಬೇಡಯ್ಯ
#ನೀನ್_ನನ್ನ_ಇನ್ಮೇಲೆ_ಎಲ್ಲೂ_ಕರೀಬೇಡಯ್ಯ_ನಾನು_ನಿನ್ನ_ಜೊತೆಗೆ_ಬರಲ್ಲ_
ದೀಕ್ಷಿತ್ ಕೋಟೆನಾಡು ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ ಶಿಕ್ಷಕನಾಗಲು ಡಿ .ಇಡಿ ಮಾಡಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದ. ಊರಿಗೆ ಹೋಗುವಾಗ ಬಸ್ಸಲ್ಲಿ ಆಕಸ್ಮಿಕವಾಗಿ ಕಂಡ ಕ್ಲಾಸ್ ಮೇಟ್ ಅಕ್ಷತಾಳೊಂದಿಗೆ ಮಾತನಾಡುವಾಗ ನಾನು ಡಿ ಇಡಿ ಅಪ್ಲಿಕೇಶನ್ ಹಾಕಿದ್ದೇನೆ ಎಂದು ಹೇಳಿದ್ದಳು.ದೀಕ್ಷಿತ್ ಮತ್ತು ಅಕ್ಷತಾ ಪ್ರೈಮರಿ ಕ್ಲಾಸ್ಮೇಟ್ಸ್ ಆದರೂ ಹೈಸ್ಕೂಲ್ ಪಿಯೂ ಬೇರೆ ಬೇರೆ ಕಡೆ ಮುಗಿಸಿದ್ದರು. ಪ್ರೈಮರಿ ನಂತರ ಅವರಿಬ್ಬರೂ ಎಂದು ಬೇಟಿಯಾಗಲೇ ಇಲ್ಲ.. ಅಂದು ಬಸ್ಸಿನಲ್ಲಿ ಬೇಟಿಯಾಗಿದ್ದೇ ಪಸ್ಟ್ ಟೈಂ.. ಬಹಳದಿನಗಳ ನಂತರ ಪರಸ್ಪರ ಮಾತನಾಡಿದ ಇಬ್ಬರೂ ಏನು ಮಾಡುತ್ತಿದ್ದೀಯಾ ಅಕ್ಷತಾ ಎಂಬ ಪ್ರಶ್ನೆಗೆ ಡಿ ಇಡಿ ಮಾಡಬೇಕು ಅಂತ ಇದ್ದೀನಿ ಅಪ್ಲಿಕೇಶನ್ ಹಾಕಿದ್ದೇನೆ ಎಂದಳು.ನಾನು ಡಿ ಇಡಿ ಗೆ ಹಾಕಿದ್ದೇನೆ ಸೆಲೆಕ್ಷನ್ ಲಿಸ್ಟ್ ಯಾವಾಗ ಬಿಡುತ್ತಾರೋ ನೋಡಬೇಕು ಎಂದು ಮಾತನಾಡುತ್ತಾ ಬಂದೆವು.
ಒಂದು ತಿಂಗಳಾಗಿರಬಹುದು. ಅಕ್ಷತಾ ಚಳ್ಳಕೆರೆ ನಗರದ ಡಿ ಇಡಿ ಕಾಲೇಜಿಗೆ ಅಡ್ಮೀಷನ್ ಆಗಿ ಕಾಲೇಜಿಗೆ ಹೋಗುತ್ತಿದ್ದಾಳೆ ಎಂದು ತಿಳಿಯಿತು. First ಲಿಸ್ಟಲ್ಲಿ ನನ್ನದು ಸೆಲೆಕ್ಷನ್ ಆಗಿರಲಿಲ್ಲ. ಆದರೆ ಅಕ್ಷತಾ ಪೇಮೆಂಟ್ ಕಟ್ಟಿ ಕಾಲೇಜಿಗೆ ಅಡ್ಮಿಷನ್ ಪಡೆದಿದ್ದಳು. ಎರಡು ಮೂರನೇ ಲಿಸ್ಟ್ ಗೆ ಕಾಯುತ್ತಿದ್ದ ನಾನು ಡಿ ಇಡಿ ಹೇಗಿರುತ್ತದೆಂಬ ಕುತೂಹಲದಿಂದ ಮತ್ತು ಎರಡನೇ ಲಿಸ್ಟ್ ನ ಮಾಹಿತಿಗಾಗಿ ಅಕ್ಷತಾ ರೂಂ ಮಾಡಿದ ವಿಳಾಸಕ್ಕೆ ದೀಕ್ಷಿತ್ ಮತ್ತು ಗೆಳೆಯ ಮಹಾಸ್ವಾಮಿ ಇಬ್ಬರೂ ಹೋದರು..
ಅಕ್ಷತಾ ರೂಂ ಇದ್ದದ್ದು ಚಳ್ಳಕೆರೆಯ BSNL ಆಫೀಸ್ ಬಳಿಯ ಟವರ್ ಪಕ್ಕದಲ್ಲಿ.ನಗರದಲ್ಲೇ ಎತ್ತರದ ಜೋಡಿ ಟವರ್ ಅವು..ಅವುಗಳ ಮೇಲೆ ಅಳವಡಿಸಿದ ಸಿಗ್ನಲ್ ರಿಸೀವರ್ ಗಳು ದೊಡ್ಡ ಡ್ರಮ್ ಕಂಡ ಹಾಗೆ ಕಾಣುತ್ತಿದ್ದವು.ಅವುಗಳನ್ನು ಹತ್ತಿ ದೊಡ್ಡಕೋಲು ತೆಗೆದುಕೊಂಡು ಡ್ರಮ್ ಬಾರಿಸುವ ಹಾಗೆ ಬಾರಿಸಬೇಕು ಅಂತ ಹೈಸ್ಕೂಲ್ ದಿನಗಳಲ್ಲಿ ಅಂದುಕೊಂಡಿದ್ದೆವು. ಅದಕ್ಕಾಗಿ ಒಮ್ಮೆ ಅವು ಓಪನ್ ಲ್ಯಾಂಡ್ ಲ್ಲಿ ಇದ್ದರೆ ಹತ್ತಬೇಕು ಅಂತ ಹೋಗಿ ಹತ್ತಲು ವಿಫಲವಾಗಿ ವಾಪಾಸಾಗಿದ್ದು ನೆನಪಾಯಿತು. ಅಕ್ಷತಾ ರೂಂ ನ ಒಳಗಡೆ ಹೋಗಿ ಕೂತೆವು. ಆಗ ತಾನೇ ಸಿಂಗಲ್ ಸೀಮೆಎಣ್ಣೆ ಬತ್ತಿ ಸ್ಟೌವ್ ಲ್ಲಿ ಅನ್ನಕ್ಕೆ ಇಟ್ಟಿದ್ದ ಅಕ್ಷತಾ ಅಪರೂಪದ ಗೆಳೆಯರ ಆಗಮನಕ್ಕೆ ಅನ್ನ ಇಳಿಸಿ ಒಂದೆರಡು ಲೋಟ ಕಾಫಿಯನ್ನು ಮಾಡಿದಳು. ಅಗಲವಾದ ಒಂದು ಗುಂಡುಲೋಟಕ್ಕೆ ಹಾಕಿದಳು. ಸೋಸುವಾಗ ಲೋಟ ತುಂಬಿಹೊಗಿದ್ದರಿಂದ ಮತ್ತು ಬಿಸಿ ಇದ್ದುದರಿಂದ ಇನ್ನೊಂದು ಸಣ್ಣ ಲೋಟಕ್ಕೆ ಒಂದೆರಡು ಬಾರಿ ಎತ್ತಿಹಾಕಿದ ದೀಕ್ಷಿತ್. ಸಣ್ಣಲೋಟವನ್ನು ಮಹಾಸ್ವಾಮಿಗೆ ಕೊಟ್ಟು ದೊಡ್ಡ ಲೋಟವನ್ನು ದೀಕ್ಷಿತ್ ಹಿಡಿದುಕೊಂಡು ಕಾಫಿ ಕುಡಿಯಲು ಆರಂಭಿಸಿದರು.ಮಹಾಸ್ವಾಮಿ ದೀಕ್ಷಿತ್ ಇಬ್ಬರೂ ಏಕಕಾಲದಲ್ಲಿ ಕಾಫಿ ಕುಡಿಯುವುದನ್ನು ಮುಗಿಸಿ ಡಿ ಎಡ್ ನಲ್ಲಿ ಅಕ್ಷತಾಳ ಕೆಲವು ದಿನಗಳ ಅನುಭವ ಪಡೆದುಕೊಂಡು 'ಸರಿಯಮ್ಮ ನಾವು ಬರುವೆವು' ಎಂದು ರೂಂ ನಿಂದ ಹೊರಬಂದೆವು.
ಹೊರಬಂದ ಇಬ್ಬರೂ ಅವರ ರೂಂ ಕಡೆ ಹೋಗಲು ಹೆಜ್ಜೆ ಹಾಕುತ್ತಿದ್ದಾರೆ.
ಮಹಾಸ್ವಾಮಿ:ಲೇ ದೀಕ್ಷಿತ ಕಾಫಿ ಚೆನ್ನಾಗಿತ್ತಾ??
ದೀಕ್ಷಿತ್: ಹ್ಞೂಂ...ಯಾಕೋ ಚೆನ್ನಾಗಿಯೇ ಇತ್ತಲ್ಲ? ನಿಮ್ ಕಡೆ ಹಿಂಗೆ ಮಾಡಲ್ಲವಾ??
ಮಹಾಸ್ವಾಮಿ:ಲೇ ದೀಕ್ಷಿತ ಕಾಪೀ ಮಾಡುವುದು ಎಲ್ಲಾ ಕಡೆ ಒಂದೇ.. ನಮ್ ಹಳ್ಳಿ ಕಡೆ ಬೆಲ್ಲ ಹಾಕ್ತಾರೆ. ಇದ್ದಂತಹವರು ಸಕ್ಕರೆ ಹಾಕ್ತಾರೆ ನಾನು ಹೇಳಿದ್ದು ಅದಕ್ಕಲ್ಲ ಎಂದು ಅತೃಪ್ತಭಾವನೆಯಿಂದ ನುಡಿದ..
ದಿಕ್ಷೀತ್:ಏನಾಯಿತೋ ಯಾಕ ಮಹಾಸ್ವಾಮಿ ಏನಾದರೂ ಬೇಜಾರಾಯಿತಾ??
ಮಹಾಸ್ವಾಮಿ:ಬೇಜಾರಿಲ್ಲ ಗೀಜರ್ ಇಲ್ಲ "ಇನ್ಮೇಲೆ ನಿನ್ನ ಜೊತೆಗೆ ನನ್ನ ಎಲ್ಲಿಯೂ ಕರೀಬೇಡಯ್ಯ ನಾನು ಬರಲ್ಲ" ಅಂದ..
ದೀಕ್ಷಿತ್: ಮಹಾಸ್ವಾಮಿ ನನ್ನಿಂದ ಏನು ತಪ್ಪಾಯಿತು ಅಂತಾ ಗೊತ್ತಾಗುತ್ತಿಲ್ಲ..ಯಾಕಿಂಗ್ ಮಾತಾಡ್ತಿದ್ದೀಯಾ?? ಏನಾಯಿತು ಅಂತ ಹೇಳ್ಲೇ ..
*ಮಹಾಸ್ವಾಮಿ:ಅಲ್ಲಲೇ ನಿನ್ ನನಗೆ ಸ್ವಲ್ಪನಾದ್ರೂ ಕಾಫಿ ಕೊಟ್ಟೇನ್ಲೇ??
ದೀಕ್ಷಿತ್: ಕೊಡ್ಲಿಲ್ಲ??ನೀನು ನನ್ನ ಜೊತೆಗೆ ಸುರ್..ಸುರ್.. ಅಂತ ಕುಡಿದೆಯಲ್ಲೋ...??
ಮಹಾಸ್ವಾಮಿ: ಎಲ್ಲ್* *ಕುಡಿದೆ...?ಸುಮ್ಮನೇ ಸುರ್ ಸುರ್ ಅಂದೀನಿ ಕಾಫಿ ಇಲ್ಲ ಗೀಪಿ ಗೊತ್ತಾ??
ಅವತ್ತು ನನ್ನದೇ ದುಡ್ಡಲ್ಲಿ ಬಾಳೆಹಣ್ಣು ತಗೊಂಡ್ ರವಸ್ಟು ಕೊಡ್ಲಿಲ್ಲ.. ಅದಕ್ಕೂ ಬೇಜಾರ್ ಆಗಿಲ್ಲ. ಇವತ್ತು ಹಂಗೆ ಮಾಡಿದೆಯಲ್ಲಾ?? ಹೆಣ್ಮಗಳ ರೂಂ ನಲ್ಲಿ ಮರ್ಯಾದೆ ತೆಗಿಬಾರದು ಅಂತ ಸುಮ್ಮನಾದೆ. ಸುಮ್ಮನೇ ಯಾಕಯ್ಯ ನನಗೂ ನಿನಗೂ... ಇನ್ಮೇಲೆ ನಿನ್ ಜೊತೆಗೆ ನಾನು ಬರಲ್ಲ ಎಂದು ಜೊತೆಗೆ ನಡೆದು ಬರುತ್ತಿದ್ದ ಮಹಾಸ್ವಾಮಿ ದಡದಡ ನಡೆದು ಮುಂದೆ ಹೋಗಿಬಿಟ್ಟ...
ದೀಕ್ಷಿತ: ಮಹಾ ಸ್ವಾಮಿ ನಿಲ್ಲು ನಿಲ್ಲು.. ಸ್ವಲ್ಪ ಹೇಳೋವರೆಗೆ ಕೇಳಲೇ...
ಮಹಾಸ್ವಾಮಿ:ಏ ಹೋಗಯ್್ಯ..
ದೀಕ್ಷಿತ್:ಏ ಮಹಾಸ್ವಾಮಿ ಹೇಳದು ಕೇಳು.. ಏನೋ ತಪ್ಪಾಯಿತು.. Sorry ಬೇಕು ಅಂತ ಮಾಡ್ಲಿಲ್ಲ..ಆ ಲೋಟದಲ್ಲಿ ಕಾಫಿ ಇದೆ ಅಂತ ಅನ್ಕೊಂಡ್ ಕೊಟ್ಟಿದ್ದೆ ಆದರೆ ಅದರಲ್ಲಿ ಇಲ್ಲದೇ ಇರುವುದು ನಾನು ನೋಡಿರಲಿಲ್ಲ.. ಸಾರೀ ಕಣಪ್ಪ ಇನ್ಮೇಲೆ ಹಂಗಾಗಲ್ಲ.. Pls pls ಲೇ..
ಮಹಾ ಸ್ವಾಮಿ ಗೆ ಎರಡೆರಡು ಬಾರಿ ಆದ ಅವಮಾನ ತಡೆದುಕೊಳ್ಳಲು ಆಗುತ್ತಿಲ್ಲ . ಆ ಅಸಮಾಧಾನ ಸರಿಹೋಗಲು ಒಂದೆರಡು ದಿನಗಳೇ ಬೇಕಾದವು.
ದೀಕ್ಷಿತನಿಗೆ ಕೈಯಲ್ಲಿರುವ ಏನಾದರೂ ತಿನ್ನುವ ವಸ್ತು ಬೇರೆಯವರಿಗೆ ಕೊಡಬಾರದು ಅಂತ ಇಲ್ಲ ಆದರೆ ಆ ಸಮಯದಲ್ಲಿ ಹಾಗೆ ಆಗುತ್ತದೆ. ರುಚಿ ಹತ್ತಿದಾಗ ಪಕ್ಕದಲ್ಲಿರುವರು ಯಾರು ಅಂತ ಗೊತ್ತಾಗಲ್ಲ.. ಇವನ ಜೀವನದಲ್ಲಿ ಇಂತಹ ಹತ್ತಾರು ಪ್ರಸಂಗಗಳು ನಡೆದಿವೆ.. ದೀಕ್ಷಿತ್ ಮದುವೆಯ ನಂತರವೂ ತನ್ನ ಮಡದಿಯೊಂದಿಗೆ ಇಂತಹ ಅನೇಕ ಪ್ರಸಂಗಗಳು ಆಗಿವೆ. ಮುನಿಸು ಕ್ಷಮೆಗಳ ನಂತರ ದೀಕ್ಷಿತ್ ಇತ್ತೀಚಿನ ವರ್ಷಗಳಲ್ಲಿ ಸುಧಾರಿಸಿದ್ದಾನೆ. ಇಂತಹವುಗಳು ಯಾವೂ ಆಗಿಲ್ಲ..😀😀
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ