ಕಲಿಯುಗದ ಕೌರವರು..
ಜಾತ್ಯಾತೀತ ರಾಷ್ಟ್ರದ ರಾಜಕಾರಣಿಗಳಿಗೆ ಜಾತೀಯೇ ಮುಖ್ಯ..
ಗತಿಸಿದೆರಡು ವರ್ಷ ಕಲಿತದ್ದು ಸೊನ್ನೆ..
ಕಲಿಯುವ ಹೊಸ್ತಿಲಲ್ಲಿ ಇರುವಾಗ ಬೀಸಿದೆ ವಸ್ತ್ರದ ವಿವಾದ..
ಕಿರಾತಕರ ಸಂಚಿಗೆ ಕಲಿತು ಬೆಳೆಯಬೇಕಾದ ವಿದ್ಯಾಲಯದಲ್ಲಿ ಕಲಿಯುತಿಹರು ಜಾತೀಯತೆ, ಬೇದ-ಭಾವ, ಅನೇಕತೆ, ವೈಷಮ್ಯ,ದುಷ್ಕೃತ್ಯದ ಪರಿ ಹೇಗೆಂದು..
ಹೆತ್ತವರು ಕನಸು ಕಾಣಿತಿಹರು ನಮ್ಮ ಕುಡಿಗಳು ಕಲಿತು ಕಟ್ಟೆಹಾಕುತಿಹರೆಂದು.. ಪಾಪ ಅವರಿಗೆ ತಿಳಿದಿಲ್ಲ ಕಿಡಿಗೇಡಿಗಳ ಬಿರ್ಯಾನಿ ಪುಡಿಗಾಸಿಗೆ ಜೀವನ ಕಮರೀತೆಂದು..
ಮಾನ ಮುಚ್ಚಬೇಕಾದ ವಸ್ತ್ರ ಧರ್ಮ ಜಾತಿಯ ಅಸ್ತ್ರವಾಗಿ ಭಿಕರಿಯಾಗಿಹವು ಧರ್ಮಕ್ಕೊಂದು ಬಣ್ಣ ಜಾತಿಗೊಂದು ವಸ್ತ್ರ...
ಮತೀಯ ತಿಳಿಗೇಡಿಗಳಿಗೆ ಅದುವೇ ಅಸ್ತ್ರ.
ಕೌರವರಿಗೆ ವಸ್ತ್ರ ಅಪಹರಣವೇ ಅಸ್ತ್ರ ಕಲಿಯುಗದ ಕೌರವರಿಗೂ ವಸ್ತ್ರ ವೇ ಅಸ್ತ್ರ.. ಓ ವಸ್ತ್ರ ವೇ ದೇಶದ ಮಾನ ಮೂರಾಬಟ್ಟೆಯಾಗದಂತೆ ಕಾಪಾಡು..
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ