CRIME IN DREAM part-2
CRIME IN DREAM..
(ಕನಸಿನ ಕ್ರೈಮ್ ಕಥಾ ಸರಣಿ...) part-2
ಕಳೆದ ತಿಂಗಳು ತೆರೆಕಂಡ tallywood ಚಿತ್ರ 'ಪುಷ್ಪ' ಚಿತ್ರದ ಬಗ್ಗೆ ಕೇಳಿರಬಹುದು. ಆದರೆ ಆಹಾ ಅಂತೀಯಾ ಮಾಮ .. ಹ್ಞೂ ಹ್ಞೂ ಅಂತಿಯಾ.. ಎಂಬ song ಅನ್ನು ಖಂಡಿತಾವಾಗಿಯೂ ನಿಮ್ಮ ಕಿವಿಗೆ ಬಿದ್ದೇ ಬಿದ್ದಿರುತ್ತದೆ..ಆ ಚಿತ್ರದಲ್ಲಿ ನಾಯಕ 'ರಕ್ತ ಚಂದನದ' illegal ಸ್ಮಗ್ಲರ್ ಆಗಿ,ಚಂದನವನದ ಗೊಂಬೆಯ ಜೊತೆಗೆ ರೋಮ್ಯಾನ್ಸ್ ಮಾಡುವ ಮೂಲಕ ಯಶಸ್ವಿಯಾಗಿ ಬೆಳೆಯುವಂತೆ ಇಲ್ಲೊಂದು ಗಂಧದ ಕಳ್ಳರ ಗ್ಯಾಂಗ್ ಮಾಡಿದ. ಖತರ್ನಾಕ್ ಕಳ್ಳತನದ ಬಗ್ಗೆ ನೀವು ಓದಲೇ ಬೇಕು..
ಆರುಷಿ ಮೊಬೈಲ್ ಹಿಡಿದು Sathish udpi ಎಂಬ ಕಾಂಟ್ಯಾಕ್ಟ್ search ಮಾಡಿ ಡಯಲ್ ಮಾಡಿದ...
ಅಣ್ಣಾ ನನ್ನ ಊರು..ಅಣ್ಣಾ ನನ್ನ ಹೆಸರು..'ಎಂಬ ಕಾಲರ್ ಟ್ಯೂನ್ ಬರುತ್ತಿದೆ.. Long ring ಆಯಿತು ಆದರೂ ಸತೀಶ ಪೋನ್ ತೆಗೆಯಲಿಲ್ಲ.. ಮತ್ತೊಮ್ಮೆ ಮಾಡಿದರೂ ಆಗಲೂ ತೆಗೆಯಲಿಲ್ಲ..!
ಏನೋ ಬ್ಯೂಸಿ ಇರಬೇಕು ಇಲ್ಲ ಬೈಕಲ್ಲೋ ಕಾರಲ್ಲೊ ಇರಬೇಕು ನೋಡೋಣ ಆಮೇಲೆ ಮಾಡುವ ಎಂದು ಸುಮ್ಮನಾದ..
ಒಂದೈದು ನಿಮಿಷದ ನಂತರ ಸತೀಶನೇ ಆರುಷಿಯ ಮೊಬೈಲ್ ಗೆ ಕರೆ ಮಾಡಿದ..ಕರೆ ಸ್ವೀಕರಿಸಿದ ತಕ್ಷಣ
ನಮಸ್ತೇ ಮಾರಾಯ್ರೆ...ಹೊರ್ಗಡೆ ಚೂರ್ ಕೆಲ್ಸ ಇತ್ ಮಾರ್ಎ.. ಪೋನ್ ಒಳ್ಗಿತ್ತು ..ಹೇಳಿ ಹೇಳಿ ಹೇಗಿದ್ದೀರಿ??
ಆರುಷಿ:ನಾವು ಚೆಂದ ಇದ್ದೇವೆ.. ನೀವು?? ಸತೀಶ:ನಾವು ಆರೋಗ್ಯ ವಾಗಿ ಇದ್ದೇವೆ...
ಆರುಷಿ:ಸತೀಶ್ ಎಂತಾ ಗೊತ್ತಾ ನಾನ್ ಕಾಲ್ಮಾಡಿದ್ದು ನಿಮಗೆ
ನಾನು ನಾಳೆ 'ಹೆಬ್ರಿ'ಗೆ ಬರುತ್ತಿದ್ದೇನೆ..
ಓಹ್...ಏನ್ರೀ ನೀವು ಬರ್ರೀ ಸ್ವಾಮಿ.. ನಿಮ್ಮನ್ನ ಆಗ ಎಷ್ಟು ಭಾರಿ ಕರೆದರೂ ನೀವು ಬರಲಿಲ್ಲ ಬನ್ನಿ ಬನ್ನಿ..
ಸತೀಶ: ದೂರ ಹೊರಟಿದ್ದ ಅಥವಾ ದೂರದಿಂದ ಬರುತ್ತಿರೋದಾ??
ಆರುಷಿ:ಎಂಥಾ ಇಲ್ಲ ಮಾರ್ರೆ.. ಎರ್ಡಮೂರು ವರ್ಷ ಆಯ್ತು ಎಲ್ಲೂ ಹೋಗಿಲ್ಲ.. ಹಾಗೆ ಬರುತ್ತಾ ಇದ್ದೀವಿ ಎರಡ್ಮೂರು ದಿನ ಇದ್ದು ಬರುವೆವು ಹೇಳುವಾ ಅಂತ ಕಾಲ್ ಮಾಡ್ದೆ..
ಸತೀಶ: ನಾವೆಲ್ಲಿ ಹೋಗೋಣರೀ ..? ಇಲ್ಲೇ ಇದ್ದೇವೆ.. ಬನ್ನಿ ನೀವ್ ಬಂದಾಗ ತಪ್ಪದೇ ಕಾಲ್ ಮಾಡಿ ..ಆಯ್ತಾ ಎಂದೇಳಲು ಆಯ್ತು ಮಾರ್ರೆ ಎಂದೇಳಿದಾಗ ಸರಿ ಮತ್ತೆ ಬರಲಾ?? ಎಂದು ಹೇಳಿ ಕಾಲ್ ಕಟ್ ಮಾಡಿದ..
ಆರುಷಿ ಮತ್ತು ಆರೋಹಿ ಮಕ್ಕಳಾದ ತನೇಹಾ ಮತ್ತು ಲಭನ್ಯ ನಾಲ್ಕು ಜನ ಸೇರಿ ಆಗುಂಬೆಯ ಸೂರ್ಯಾಸ್ತ ನೋಡುವ view point ಅಲ್ಲಿ ಇದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಹತ್ತಾರು ಭಾರಿ ಆಗುಂಬೆಯ ಸೂರ್ಯಾಸ್ತದ ಸೊಬಗು ಸವಿದಿದ್ದರೂ ಪ್ರತಿಬಾರಿಯೂ ವಿಭಿನ್ನ ಮತ್ತು ವಿಶೇಷ.. ಅಂದಿನ ಸೂರ್ಯಾಸ್ತ ನೋಡಿಕೊಂಡು 'ಆಗುಂಬೆಯಾ ಪ್ರೇಮ ಸಂಜೆಯಾ.. ಎಂದು ಹಾಡನ್ನು ಕೇಳುತ್ತಾ ಹಾಡುತ್ತಾ.. ಕಿರ್ ಕಿರ್ ಎನ್ನುವ ಹುಳಗಳ ಶಬ್ಧದ ನಡುವೆ ಕಡಿದಾದ sharp airpin ghat ನ ತಿರುವುಗಳನ್ನು ಇಳಿಯುತ್ತಿರುವಾಗ ಘಟ್ಟಪ್ರದೇಶ ಮತ್ತು ಸಮುದ್ರದ ಮಟ್ಟದ ವಾತಾವರಣದ ವ್ಯತ್ಯಾಸ ಕ್ಕೆ ಆಗಾಗ್ಗೆ ಕಿವಿಗಳು ದಬ್ಬಾಕಿಕೊಂಡ ಅನುಭವ.ಆರೋಹಿ ಮಲೆನಾಡಿನವಳಾದರೂ ಅವಳಿಗೆ ಈ ಕೋಲ್ಡ್ effect ಜಾಸ್ತಿಯೇ. ಹೀಗೆ ಕಿವಿ ದಬ್ಬಾಕಿಕೊಂಡಾಗ ಬಾಯಿ ಮತ್ತು ಮೂಗು ಒಟ್ಟಿಗೆ ಮುಚ್ಚಿ ಹೊಟ್ಟೆಯಿಂದ ಉಸಿರನ್ನು ಬಾಯಿಯಲ್ಲಿ ಎಷ್ಟು ಸಾದ್ಯನೋ ಅಷ್ಟು ತುಂಬಿಸಿದರೆ ಕಿವಿ ಸರಿ ಹೋಗುತ್ತಿತ್ತು.. ಕಿವಿ ದಬ್ಬಾಕಿಕೊಳ್ಳುತ್ತಿದ್ದರಿಂದ ಆರೋಹಿ ಎಲ್ಲಿಯಾದರೂ ಕಾಫಿ ಕುಡಿಯೋಣ ಎಂದಳು..
ಹ್ಞೂಂ... ಯಾವುದಾದರೂ ಹೋಟೆಲ್ ಕಂಡರೆ ನೋಡೋಣ ಇಲ್ಲ ನಾವು ಆಗಾಗ್ಗೆ ಆ ರಸ್ತೆಯಲ್ಲಿ ಹೋದಾಗ ಹೆಬ್ರಿ ಹೊರವಲಯದ 'ಹೋಟೆಲ್ ಸೀತಾನದಿ' ಯಲ್ಲಂತೂ ಖಂಡಿತಾ ಕುಡಿಯೋಣ ಎಂದೇಳಿದೆ..
ಮಗಳು ತನೇಹಾಳಿಗೆ ಏನಾದರೂ ಸ್ನ್ಯಾಕ್ಸ್ ಬೇಕಿತ್ತಾದರೂ ಅಮ್ಮನೇ ಈಗಾಗಲೇ ಹೇಳ್ತಿದ್ದಾರೆಂದು ಸುಮ್ಮನಿದ್ದಳು.. ಆಗುಂಬೆ ಘಾಟ್ ಇಳಿದಾಗ ನಮಗೆ ಮೊದಲು ಎದುರಾಗುವುದು ಶಂಕರನಾರಾಯಣ ಎಂಬ ಸ್ಥಳ.. ಅಲ್ಲಲ್ಲಿ ಕೆಲವು ಹೊಟೇಲ್ ಕಂಡರೂ ನಿಲ್ಲಿಸುವ ವೇಳೆಗೆ ಕಾರ್ ಮುಂದಕ್ಕೆ ಹೋಗಿದ್ದರಿಂದಲೂ, ಮುಂದೆ ನೋಡುವ ಬೇರೆ ಯಾವುದಾದರೂ ಅಂತ ಮುಂದೆ ಮುಂದೆ ಬರಲು ಕೊನೆಗೆ ನಮಗೆ ಮುಂದೆ ಸಿಕ್ಕಿದ್ದೇ ಹೋಟಲ್ ಸೀತಾನದಿ..ಘಟ್ಟ ಇಳಿದರೆ coastal ಪರಿಣಾಮಿತ ವಾಯುಗುಣ... ಬಿಸಿ ಬಿಸಿ ಕಾಫಿ ಕುಡಿದು,ತನೇಹಾಳಿಗೆ ಮತ್ತು ಸತೀಶನ ಮನೆಗೆ ಒಂದೆರಡು ಪೊಟ್ಟಣ ತಿಂಡಿ ತೆಗೆದುಕೊಂಡು ಸತೀಶನಿಗೆ ಕಾಲ್ ಮಾಡಿ ಹೊರಟೆವು..
'ಈಶಾ ವಾಸ್ಯಂ' ನಿವಾಸದಲ್ಲಿ ಸತೀಶ ಸುಮಾ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳ ಸುಖೀ ಕುಟುಂಬ.. 400-450 km ಡ್ರೈವ್ ಮಾಡಿದ್ದರಿಂದ ಸಹಜವಾಗಿ ಸುಸ್ತಾಗಿತ್ತು.ಊಟ ಮಾಡಿ ಉಭಯ ಕುಶಲೋಪರಿ ಮಾತಾಡಿ ಮೂರ್ನಾಲ್ಕು ದಿನ ಇಲ್ಲೇ ನೋಡದೇ ಇರುವ ಒಳ್ಳೆ ಪ್ಲೇಸ್ ತೋರಿಸಿ ಎಂದೇಳಿ ಹಾಸಿಗೆ ಹಿಡಿದು ಬಿದ್ದುಕೊಂಡಿದ್ದೇ ನೆನಪು ನಿದ್ದೆ ಯಾವಾಗ ಹತ್ತಿತ್ತೋ ಗೊತ್ತಿಲ್ಲ..
ಮಧ್ಯರಾತ್ರಿ 1:00-1-30 ಆಗಿರಬಹುದು.. ಅಪೇ ಟಾಮ್ ಟಾಮ್ goods vehicle ಲ್ಲಿ ಇಳಿದು ದೊಡ್ಡ ಸಂತೆ ಬ್ಯಾಗ್ ಹಿಡಿದು ಅತ್ತಕಡೆ ಹೋದರು. ಬೆಡ್ ರೂಮ್ನ ಕಿಟಕಿಯಿಂದ ಕಾಣುತ್ತಿದೆ. ಬ್ಯಾಗ್ ಹಿಡಿದು ಹೋದವರು ಬ್ಯಾಗನ್ನು ಕೆಳಗಿಟ್ಟು ಬ್ಯಾಗ್ ನಿಂದ ಮತ್ತೆ ಏನನ್ನೋ ಹಿಡಿದು ಇಬ್ಬರು ಒಂದೊಂದು ಮರ ಹತ್ತಿದರು.ಆರುಷಿಗೆ ವಿಪರೀತವಾದ ನಿದ್ದೆ ಇದ್ದದ್ದರಿಂದ ಎದ್ದು ನೋಡದೇ ಮಲಗಿದಲ್ಲೇ ಏನೋ ಯಾರೋ ಬಂದಂತಹ ಕನಸು ಎಂದು ಒದ್ದಾಡುತ್ತಿದ್ದಾನೆ.. ಹತ್ತು ಹದಿನೈದು ನಿಮಿಷಕ್ಕೊಮ್ಮೇ ಕೆರ್ರ್...ಕೆರ್ರ್... ಎಂಬಂತಹ ಶಬ್ದವು ಕೇಳುತ್ತಿತ್ತು. ಮಲೆನಾಡಿನ ಪ್ರದೇಶದಲ್ಲಿ ಒಂದು ರೀತಿಯ ಹುಳು ಆ ರೀತಿಯಾಗಿ ಶಬ್ಧ ಮಾಡುತ್ತದೆ. ಅವುಗಳನ್ನು ಅಡಕೆ ಹುಳು ಎಂದು ಕರೆಯಲಾಗುತ್ತದೆ ಆ ಹುಳ ಇಲ್ಲೆಲ್ಲಾ ಇದ್ದಾವೆ ಆ ಹುಳಗಳೇ ಈ ರೀತಿಯ ಕೆರ್ರೋsss ಎಂಬಂತಹ ಶಬ್ಧವನ್ನು ಮಾಡುತ್ತಿದ್ದಾವೆ ಎಂದು ಅಂದುಕೊಂಡು ಪಕ್ಕಕ್ಕೆ ತಿರುಗಿ ಹಾಗೆ ಮಲಗಿದಲ್ಲೇ ಮಲಗಿದ್ದ...ಒಂದೊಮ್ಮೆ ದೊಪ್ಪನೆ ಏನೋ ಬಿದ್ದ ಶಬ್ದ ಕೇಳಿದಂತಾಯಿತು. ಆದರೆ ಎದ್ದೇಳಲಾಗಲಿಲ್ಲ.ಆ ಕೆಲಹೊತ್ತಿನಲ್ಲಿ ಆಟೋ ಸ್ಟಾಟ್ ಮಾಡಿಕೊಂಡು ಹೋದಂತಹ ಶಬ್ದವಾಯಿತು. ಆರುಷಿಗೆ ವಾಹನ ಕಾಣದೇ ಇದ್ದರೂ ಅವನ ನಿರಂತರ ಅಭ್ಯಾಸ ಬಲದಿಂದ ಇದು ಇಂತದ್ದೇ ವಾಹನ ಎಂದು ಕರೆಕ್ಟಾಗಿ ಹೇಳುವ ಪರ್ಫೆಕ್ಟ್ನೆಸ್ ಇತ್ತು. ಆದರೆ ಅದೆಲ್ಲವೂ ಕನಸು ಎಂದು ನಿದ್ದೆಯಲ್ಲೇ ಇದ್ದ ಆರುಷಿ..
ಬೆಳಿಗ್ಗೆ ಆರೂವರೆ ಏಳು ಆಗಿರಬಹುದು. ಎದ್ದು ಪ್ರೆಶ್ ಅಪ್ ಆಗಿ ಹೊರಗಡೆ ಹೋದೆ.. "ಅಣ್ಣು.. ಏ ಯಾರೋ ರಾತ್ರಿ ಗಂಧದಮರ ಕಡ್ಕೊಂಡು ಹೋಗಿದ್ದಾರೆ ಮಾರ್ರೆ..ಗೊತ್ತೆ ಆಗಿಲ್ಲ ." ಅಂತ ಸತೀಶ ಮಾತನಾಡುತ್ತಿರುವ ಶಬ್ದ ಕೇಳಿಸುತ್ತಿದೆ. ಮನುಷ್ಯ ಕಾಣುತ್ತಿಲ್ಲ. ಒಂದೆರೆಡು ಹೆಜ್ಜೆ ಮುಂದೆ ಹೋಗಿ ನೋಡಿದರೆ ..ಸತೀಶ ಅವರೆಂತ ಗೊತ್ತಾ ಆ ಕಾಂಡದ ಮೇಲ್ಬಾಗದಲ್ಲಿ ಇತರೆ ಮರಗಳಿಗೆ ಗಟ್ಟಿ ವಯರ್ ಹಾಕಿ ಸಮಾ ಕಟ್ಟಿದ್ದಾರೆ ಮಾರ್ರಾಯ.. ಕಾಂಡ ಮಾತ್ರ ಕಟ್ ಮಾಡಿ ಕದ್ದೊಯ್ದಿದ್ದಾರೆ. ಎಂದ ಸರಿ ನೀ ಬಾ ಬಾ.. ನಾನು ಆಮೇಲೆ ಮಾತಾಡುವೆ ಎಂದು ಪೋನ್ ಕಟ್ ಮಾಡಿ ಕೈಯಲ್ಲಿ ಹಿಡ್ಕೊಂಡ್ ನೋಡಿ ಸರ್ ರಾತ್ರಿ ಕಳ್ಳರು ಗಂಧದ ಮರ ಕಡ್ಕೊಂಡ್ ಹೋಗಿದ್ದಾರೆ ಎಂದೇಳಿದ ಸತೀಶ..ಅಯ್ಯೋ ಅದ್ಹೇಗೆ ಮಾಡಿದ್ದಾರೆಂದು ನೋಡಿದರೆ ಸುಮಾರು ಒಂದೂವರೆ ಅಡಿ ಸುತ್ತಳತೆಯ ಎಂಟೊಂಭತ್ತು ಅಡಿ ಎತ್ತರದ ಮರ. ಮೊದಲು ಗಂಧದಮರದ ಮೇಲ್ಭಾಗದ ರೆಂಬೆಕೊಂಬೆಗಳನ್ನು ತೇಗ,ಹಲಸು ಇತರೆ ಮರಗಳಿಗೆ ಕಟ್ಟಿದ್ದಾರೆ.ಇದರಿಂದ ರೆಂಬೆಕೊಂಬೆಗಳು ನೆಲಕ್ಕುರುಳದೇ ಮೇಲ್ಗಡೆಯೇ ಜೋತು ಬಿದ್ದಿವೆ. ಆಮೇಲೆ ಕಾಂಡ ಕತ್ತರಿಸಿದ್ದಾರೆ. ಹೆಚ್ಚು ಶಬ್ದ ಬಾರದೇ ಇರಲಿ ಎಂದು ಸತೀಶನ ಬಾವಿಯಿಂದಲೇ ಬಕೆಟ್ ಲ್ಲಿ ನೀರು ಜಗ್ ತಗೊಂಡ್ಹೋಗಿ ನೀರು ಹಾಕಿ ಕಟ್ ಮಾಡಿದ್ದಾರೆ.. ಆನಂತರ ಎರಡ್ಮೂರು ತುಂಡುಮಾಡಿ ಹೊತ್ತುಕೊಂಡು ಹೋಗಿದ್ದಾರೆ.ಆಗಲೇ ಆರುಷಿಗೆ ರಾತ್ರಿ ಯಾರೋ ಓಡಾಡಿದ್ದು,ಮರ ಹತ್ತಿದಹಾಗೆ ನನಗೆ ಅನಿಸಿತು ಆದರೆ ಅದೆಲ್ಲಾ ಕಂಡದ್ದು ಕನಸು ಅನ್ಕೊಂಡ್ ಸುಮ್ಮನಾದೆ ಮಾರ್ರೆ ಥೋ ಎಂದ ಖತರ್ನಾಕ್ ಖಧೀಮರೋ ಏನೋ ಮಾರ್ರೆ..ನಮ್ ಕಡೆ ಈತರಹದ ಕಳ್ಳರಿದ್ದಾರೆ ಆದರೆ ಈ ಭಾಗದಲ್ಲೂ ಈತರಹದ ಕಳ್ಳರು ಇದ್ದರಾ ಎಂದು ಆ ಆಶ್ಚರ್ಯಕರವಾಗಿ ಪತ್ನಿ ಆರೋಹಿಯನ್ನು ಕರೆದು ಆ ಘಟನಾ ಸ್ಥಳವನ್ನು ಆಶ್ಚರ್ಯ ಚಕಿತರಾಗಿ ನೋಡುತ್ತಾ ನಿಂತರು...
Crime in dream..
(ಕನಸಿನ ಕ್ರೈಮ್ ಕಥಾ ಸರಣಿ ) will continue...
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ