CRIME IN DREAM...
CRIME in DREAM
ಕನಸಿನ ಪಯಣ
Part-1
ಅವನು ಅಮೈರ.. IPS ಮಾಡಬೇಕು ಅನ್ನುವುದು ಅವನ ಕನಸು. ಅದಕ್ಕೆ ಬೇಕಾದ ಜ್ಞಾನ ,ದೈಹಿಕ ಮತ್ತು ಮಾನಸಿಕವಾಗಿ ಸಿದ್ದವಾಗಿದ್ದ. He is also intellectual! ಶಂಕಿತ/ಲಕ್ಷಣಗಳು ಹೇಳಿದರೆ ಕರಾರುವಕ್ಕಾದ ಸ್ಕೆಚ್ ಹಾಕುವ ಕಲೆಯೂ ತಿಳಿದಿತ್ತು. ಹೀಗೆ ಸಕಲ ಸಿದ್ದತೆ ಮಾಡಿಕೊಂಡಿದ್ದ. ಪ್ರತಿದಿನ ಕನಿಷ್ಠ ಎಂಟತ್ತು ಗಂಟೆಗಳ ಅಭ್ಯಾಸ ಮತ್ತು ಒಂದೆರೆಡು ಗಂಟೆಗಳ ದೈಹಿಕ ಕಸರತ್ತು ಪ್ರತಿದಿನ ನಿತ್ಯಕಾಯಕ ಆಗಿತ್ತು.ರಾಜಸ್ಥಾನದ ಜೈಪುರದಲ್ಲಿ ಸೂರ್ಯೋದಯ ನೋಡಲು ಚೆಂದ ಎಂದು ಯಾವುದೋ ಪುಸ್ತಕದಲ್ಲಿ ಓದಿದ ನೆನಪು. ಆಕಸ್ಮಿಕವಾಗಿ ಜೈಪುರಕ್ಕೆ ಹೋದಾಗ ಇಂದು ಸನ್ ರೈಸ್ ನೋಡಲೇಬೇಕೆಂದು ಕೋಟೆಗಳ ನಾಡು,ಎಲ್ಲಿನೋಡಿದರೂ ಕೆಂಪು ಬಣ್ಣದ ಕಟ್ಟಡಗಳ ಮಧ್ಯೆ ಇದ್ದ watching ಟವರ್ ಹುಡುಕಿಕೊಂಡು ಹೊರಟ..
ಅದು ಸಿಟಿ ಮಧ್ಯದಲ್ಲಿರುವ ವೀಕ್ಷಣಾ ಗೋಪುರ. ದೊಡ್ಡ ಛತ್ರಿಯಾಕಾರದ ಮೇಲೆ ಮತ್ತೊಂದು ಸಣ್ಣ ಛತ್ರಿ.. ಎರಡರ ಮೇಲೂ ಪ್ರವಾಸಿಗರು ನಿಂತು ನೋಡಲು ಅವಕಾಶ ಇದ್ದ ಮಲ್ಟಿ ಲೆವೆಲ್ watching tower. ಅದು ನಗರದ ಕೇಂದ್ರ ಭಾಗ,ನಾಲ್ಕಾರು ಪ್ರಮುಖ ರಸ್ತೆಗಳು ಸೇರುವಂತಹ ಪ್ರಧಾನ ರಸ್ತೆ..ರಸ್ತೆಯಲ್ಲಿ ಹಾಲು ಹಾಕುವವರು, ರಿಕ್ಷಾಗಳಲ್ಲಿ ಮಾರುಕಟ್ಟೆಗೆ ಹೋಗುತ್ತಿದ್ದವರು ಮತ್ತು ಅಲ್ಲೊಬ್ಬ ಇಲ್ಲೊಬ್ಬ ರಸ್ತೆ ಸ್ವಚ್ಚತಾ ಕಾರ್ಯ ಮಾಡುತ್ತಿದ್ದ ಪೌರಕಾರ್ಮಿಕರು ಬಿಟ್ಟರೆ ಯಾರೂ ಇರಲಿಲ್ಲ.. ನೂರು ಮೀಟರ್ಗಳಷ್ಟು ಮುಂದೆ ಬಂದಾಗ innova ಕಾರ್ ನಲ್ಲಿ ಪೋಲಿಸ್ ಉನ್ನತಮಟ್ಟದ ಅಧಿಕಾರಿಯೊಬ್ಬರು ಎಸ್ ಪಿ ಮತ್ತು D y sp ಲೆವೆಲ್ ನ ಅಧಿಕಾರಿಗಳಿಗೆ ಯಾರೋ VIP ಈ ರಸ್ತೆಯಲ್ಲಿ ಬರುವರು ಅವರಿಗೆ ಬಂದೋಬಸ್ತ್ ಕಲ್ಪಿಸುವ ವಿಚಾರವಾಗಿ ಚರ್ಚಿಸುತ್ತಿದ್ದರು.ಟ್ರ್ಯಾಕ್ ಸೂಟ್ ಧರಿಸಿದ್ದ ಅಮೈರ ಅದನ್ನು ನೋಡುತ್ತಾ watching tower ಕಡೆ ಬಂದನು.. ಹೊರಗಡೆಯೇ ವಿರಳವಾಗಿದ್ದ ಜನ, ಸುಮಾರು ನೂರೈವತ್ತು-ಇನ್ನೂರು ಜನ ಒಮ್ಮೇಲೆ ನಿಂತು ನೋಡಬಹುದಾದ watching tower ನಲ್ಲಿ ಒಂದಿಬ್ಬರು ಐವತ್ತು-ಐವತ್ತೆರಡು ವಯಸ್ಸಿನ ಆಸುಪಾಸಿನವರು ಸರಳ ವ್ಯಾಯಾಮ ಮಾಡುತ್ತಿದ್ದರು. ನೋಡಿದರೆ ಮೇಲೆ ಹತ್ತಲು ಸ್ಟೆಪ್ಸ್ ನೋಡಿ ಮೇಲೆಯೇ ಹೋಗೋಣ ಎಂದೆನಿಸಿ ಮೇಲೆ ಹತ್ತಿದ..almost ಬೆಳಕಾಗಿದೆ.ಮೂಡಣದ ದಿಗಂತದ ಅಂಚಿನಲ್ಲಿ ಹಳದಿ ಮತ್ತು ಕೆಂಪು ಮಿಶ್ರಿತ ಹೊಂಬೆಳಗು ರಂಗು ರಂಗಾಗಿ ಕಾಣುತ್ತಿದೆ. ವಿವಿಧ ಜಾತೀಯ ನೂರೆಂಟು ಪಕ್ಷಿಗಳು ಚಿಲಿಪಿಲಿ ಕಲರವದೊಂದಿಗೆ ಅವುಗಳು ಕಾಳಿನ ಚೀಲ ತುಂಬಿಸಲು ಪಯಣ ಆರಂಭಿಸಿದ್ದಾವೆ. ಇನ್ನೇನು ಮೂರ್ನಾಲ್ಕು ನಿಮಿಷಗಳಲ್ಲಿ ಆ ದಿನದ ದಿನಕರ ದರ್ಶನ ಆಗುತಲಿತ್ತು. ಮೂಡಣದ ಆಗಸ ನೋಡುತ್ತಾ ಹಾಗೆ ಆ ಛತ್ರಿಯಾಕಾರದ ಟವರ್ ನ ಮೇಲ ಹೊದಿಕೆಯನ್ನು ಒಮ್ಮೇ ತಲೆ ಎತ್ತಿ ನೋಡಿದ. ಹಿಡಿ ಗಾತ್ರದ ಕಬ್ಬಿಣದ ಪೈಪ್ ಗಳು.. ಮುಟ್ಟಿ ನೋಡಿದರೆ ಗಟ್ಟಿ ಮುಟ್ಟಾಗಿಯೇ ಇವೆ.. ಹಾಗದರೆ ಎರಡು push ups ಆದರೂ ಹೋಡೆಯೋಣ ಎಂದು ಎರಡೂ ಕೈಯಲ್ಲಿ ಪೈಪ್ ಹಿಡಿದು push ups ಹೊಡೆದು ಕೈಯನ್ನು ಬೀಸುತ್ತಾ ಅಡ್ಡಲಾಗಿ ಕಟ್ಟಿದ್ದ ಗ್ರಿಲ್ಸ್ ಕಡೆ ಬಂದ. ಮೂಡಣದ ನೇಸರನ ಉದಯ ಕುಂಕುಮದಂತೆ ತೇಲಿ ಬರುತ್ತಿತ್ತು.. ವಾವ್ಹ್...!! Amazing.. Super... Wonderful sunrise..ಎಂದು ಅಂದು ಕೊಳ್ಳುತ್ತಿರುವಾಗಲೇ ಕೆಳಗಿನಿಂದ ಯಾರೋ black ಸ್ವೇಟರ್ ಖಾಕಿ pant,ಶೂ ಹಾಕಿದ ವ್ಯಕ್ತಿಯೊಬ್ಬ ಕೆಳಗಿನಿಂದ ನನ್ನ ಕಡೆ ನೋಡಿ
" hello... You.."
You
"Come down.. Come down quick..." ಅಂದ.
ಮೇಲೆ ಹತ್ತಬಾರದಿತ್ತೇನೋ ಅದಕ್ಕೇ ಯಾರೋ watching tower ಕಾಯೋ watchman ಇರಬೇಕೆಂದು ಕೆಳಗಿಳಿದು ಬಂದ ಅಮೈರ..
"ಹಾವೋ ಇದರ್..."ಎಂದು ಮತ್ತಿಬ್ಬರು ಪ್ಯಾರಾ ಮಿಲಿಟರೀ ಪರ್ಸನ್ಸ್ ತರ ಇದ್ದರು.. ಬಟ್ ಗನ್ ಬ್ಯಾಗ್ ಯಾವುದೂ ಇರಲಿಲ್ಲ.. ಒಂಥರಾ ದೊಡ್ಡ ದೊಡ್ಡ casino ಗಳಲ್ಲಿ ಇರುವಂತಹ bouncers ತರಹ ಇದ್ದರು..
ನನ್ನನ್ನು ಕೆಳಗಡೆ ಕರೆದ ವ್ಯಕ್ತಿ
"Take him to control room..."
ಅಮೈರನಿಗೆ ಯಾಕೇ take him to control room ಅಂತ ಹೇಳುತ್ತಿದ್ದಾರೋ ಗೊತ್ತಾಗುತ್ತಿಲ್ಲ.
"ಸರ್ ಸರ್.. Í am from Karnataka.. Why you people taking to me to control room.?"
"ಸಾರ್ ಬೋಲೇನಾ..??"ಸಾರ್ ಬೊಲೇತೋ ಖತಂ
ಕುಚ್ ನೈ ಬಾತ್ಕರ್ನೇಕಾ ಜರೂರತ್ ನಹೀ..
ತುಮ್ ಚುಪ್ಕೇ ಹಾನೆಪಡೇಗಾ" ಎಂದು ಒಬ್ಬ ಕೈ ಹಿಡಿದರೆ ಇನ್ನೊಬ್ಬ ಕೊರಳಪಟ್ಟಿ ಹಿಡಿಯಲು ಬಂದ..
ಅಮೈರನೂ ಗಟ್ಟಿ ಮುಟ್ಟಾಗೇ ಇದ್ದ.. ಪ್ರೊಫೆಷನಲ್ ಜಿಮ್ ಬಾಡಿ..
"ಹೊಯ್ ...ಹಟ್.. ಮೈ ಕಿದರ್ ಹಾನಾ ?ಚಲ್ ಮೈ ಹಾತೂ ನಾ...??"
ಎಂದು ಜೋರಾಗಿಯೇ ಮಾತಾಡಿದ್ದಕ್ಕೇ ಕೊರಳಪಟ್ಟಿಗೆ ಕೈ ಹಾಕದೇ ಹಾಗೇಯೇ ಕರೆದುಕೊಂಡು ಹೋದರು..
ದೊಡ್ಡ ಗೇಟ್... ಅದು ಬೆಂಗಳೂರಿನ ಕಬ್ಬನ್ ಪಾರ್ಕ್ ರೀತಿಯ ಸ್ಥಳ.. ಪಿಂಕ್ ಕಟ್ಟಡಗಳ ಸುತ್ತಲೂ ಮಿಲಿಟರೀ ಯೂನಿಪಾರ್ಮನಂತೆ ಪೇಂಟ್ ಮಾಡಿ ಏನೇನೊ ಬರೆದಿರುವುದು ಕಾಣಿಸಿತು..ಆದರೆ ಗಡಿಬಿಡಿಯಲ್ಲಿ ಏನೆಂದು ನೋಡಲೂ ಅಗಲಿಲ್ಲ..
ಕಂಟ್ರೋಲ್ ರೂಂ ಒಳಗಡೆ ಹೋದರೆ ಅಲ್ಲೊಬ್ಬ ಮುಸುಕುದಾರಿ ಒಂದು ದೊಡ್ಡ sharp shooters ಬಳಸುವ ಒಂದು ಗನ್! ಗನ್ ಸ್ಟಾಂಡ್ ಲ್ಲಿಟ್ಟು ಮುಖ್ಯ ರಸ್ತೆಗೆ ಪಾಂಯಿಂಟ್ ಬ್ಲಾಂಕ್ ಮಾಡಿ ಇಟ್ಟಿದ್ದಾನೆ.. ಅಲ್ಲಿಂದ ಆ ಮುಖ್ಯ ರಸ್ತೆಯಲ್ಲಿ ಓಡಾಡುವ ಎಲ್ಲಾ ವಾಹನಗಳೂ,ವಾಹನದಲ್ಲಿರುವ ವ್ಯಕ್ತಿಗಳೂ ಪುಲ್ ಕ್ಲಿಯರ್ ಆಗಿ ಕಾಣಿಸುತ್ತಿದೆ.
ಅಮೈರನನ್ನು ಕರೆದುಕೊಂಡು ಹೋದ ವ್ಯಕ್ತಿಗಳು ಅವನನ್ನು ಅಲ್ಲಿ ನಿಲ್ಲಿಸಿ ಟೇಬಲ್ ಡ್ರಾದಿಂದ 8mm ನ ಗನ್ ತೆಗೆದು ಟೇಬಲ್ ಮೇಲಿಟ್ಟರು.
ಅಮೈರನಿಗೆ ಇಲ್ಲೇನೋ ವಿದ್ವಂಸಕ ಕೃತ್ಯ ಕ್ಕೆ ದುಷ್ಕರ್ಮಿಗಳು ಸಿದ್ದತೆ ನಡೆಸಿದ್ದಾರೆ.
ಓ ಆಗ
ನಾನು watching tower ಕಡೆ ಆಗ ಬರುವಾಗ ಯಾರೋ VIP ಬರುವರು ಅಂತ ಪೋಲಿಸ್ ಅಧಿಕಾರಿಗಳು ಮಾತಾಡುತ್ತಿದ್ದರಲ್ಲಾ ಅವರಿಗೇ ಹೊಡೆಯಲು ಸಿದ್ದತೆ ನಡೆಸಿದಂತಿದೆ ಎಂದು ಅಂದುಕೊಳ್ಳುತ್ತಿರುವಾಗ ಆ ಮುಸುಕುಧಾರಿ ವಾಕಿ ಟಾಕಿ ಪಕ್ಕಕ್ಕಿಟ್ಟು ತನ್ನ ಜೇಬಿಂದ ಮೊಬೈಲ್ ತೆಗೆದು
"ಹ್ಞೂಂ...ಹ್ಞೂಂಂ.."
"Everything alright and fixed..."
OK
Done..
ನೋಡಿದ ಮೇಲೆ ಟೇಬಲ್ ಮೇಲಿದ್ದ ಒಂದೂವರೆ ಎರಡಿಂಚು ಗಾತ್ರದ 10*8 ಅಳತೆಯ ಒಂದು ಬಾಕ್ಸನ್ನು ನೀಡಿ ಮರಾಠಿ,ಗುಜರಾತೀ ಭಾಷೆಯಂತಹ ಮಿಕ್ಸ್ language ಲ್ಲಿ ಅಮೈರನಿಗೆ ಪ್ರಧಾನ ರಸ್ತೆಯ ಚೌಕನಲ್ಲಿ ನಿಂತಿದ್ದ ಪೋಲಿಸ್ ಅಧಿಕಾರಿಗಳಿಗೆ ನೀಡಲು ತಿಳಿಸಿದರು..
ಸದ್ಯ ಅಮೈರನಿಗೆ ಅಲ್ಲಿಂದ ಹೊರಬರಬೇಕಿತ್ತು..ಅಪರಿಚಿತ ಸ್ಥಳದಲ್ಲಿ ಏಕಾಏಕಿ ಬಂದೊದಗಿದ ಅದೂ ಆ ಶಾರ್ಪ್ ಶೂಟರ್ಸ ಜೊತೆ fight ಮಾಡುವ ಸ್ಥಿತಿಯಲ್ಲಿ ಇರಲಿಲ್ಲ.
ಆ ಸಣ್ಣ ಕವರ್ ಹಿಡಿದು ಸಿಟ್ಟು ಮತ್ತು ಏನಾಗತ್ತೋ ಈಗ ಎಂಬ ಆತಂಕದಿಂದ ರಸ್ತೆಯ ಕಡೆ ಹೊರಗೆ ಬರುತ್ತಿದ್ದಾನೆ.
ಅಮೈರನಿಗೆ ಹೊರಗಡೆ ಬಂದ ತಕ್ಷಣ ಕಿವಿಗೆ ಕೇಳಿಸಿದ್ದು ಪೋಲಿಸ್ ವಾಹನಗಳ ಸೈರನ್...ಅಮೈರ ರೋಡಿಗೆ ಹತ್ತಿರವಾಗುತ್ತಿದ್ದಂತೆ ಆ ಸೈರನ್ ಶಬ್ಧವೂ ಹತ್ತಿರ ಆಗುತ್ತಿದೆ..
ನೋಡು ನೋಡುತ್ತಿದ್ದಂತೆಯೇ ಒಂದು ಬಿಳಿ Scorpio ವಾಹನ ಸೈರನ್ ಮಾಡುತ್ತಾ ಮುಂದೆ ಪಾಸ್ ಆಯಿತು.ಅದರ ಹಿಂದೆ ಸ್ವಲ್ಪವೇ ದೂರದಲ್ಲಿ ಒಂದು ಕಡು ನೀಲಿ ಬಣ್ಣದ ಅಂಬಾಸಿಡರ್ ರೀತಿಯ ದೊಡ್ಡದಾದ foreign ಲಕ್ಸೂರಿ ವಾಹನವೊಂದು ಬರುತ್ತಿದೆ.ಕ್ರೀಮ್ ಕಲರ್ ನ ಲಕ್ಸೂರಿ ಸೀಟ್ನಲ್ಲಿ ಬಿಳಿಬಣ್ಣದ ಬಟ್ಟೆಗಳು ಹಾಕಿದ ಬಾರೀ VIP ಗಳು ಕಾಣುತ್ತಿದ್ದಾರೆ. ಅವರು ಹೊರಗಡೆಯ ಸಿಟಿಯನ್ನು ನೋಡುವಲ್ಲಿ ತಲ್ಲೀನರಾಗಿದ್ದಾರೆ. ಇತ್ತ ಆ ಶಾರ್ಪ್ ಶೂಟರ್ಸ ಆ ವಾಹನದ ಕಡೆಯೇ ಪಾಯಿಂಟ್ ಮಾಡುತ್ತಿದ್ದಾನೆ.
ಅಮೈರ ದೊಡ್ಡ ದೊಡ್ಡ ಹೆಜ್ಜೆ ಹಾಕುತ್ತಾ ಆ ಪೋಲಿಸ್ ವಾಹನದ ಕಡೆ ವೇಗವಾಗಿ ಬರುತ್ತಿರಲು ಒಮ್ಮೇಲೇ ಪಳ್ ಪಳ್ ಎಂದು ಗ್ಲಾಸ್ ಒಡೆದು ಪುಡಿ ಪುಡಿಯಾಯಿತು.. ಗಾಜಿನ ಹರಳುಗಳು ಅಮೈರನಿಗೂ ತಾಗಿ ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾದವು. ಗ್ಲಾಸ್ ಒಡೆದಿದ್ದು ಆ VIP ವಾಹನದ್ದಲ್ಲ ಅದರ ಬೆಂಗಾವಲಿಗೆ ಇದ್ದ ಮತ್ತೊಂದು ವಾಹನದ್ದು.. ಎಲ್ಲಾ ವಾಹನಗಳೂ long ಬ್ರೇಕ್ ಹೊಡೆದ ಶಬ್ಧ..ಆದರೆ ಆ VIP ವಾಹನ ನೋಡು ನೋಡುತ್ತಾ ಕಣ್ಮರೆಯಾಯಿತು.
ಆ ಕಂಟ್ರೋಲ್ ರೂಂ ನಿಂದ ನಾಲ್ಕಾರು ಅರೆ ಸೇನಾಪಡೆಯ ಸೈನಿಕರು ಗನ್ ಹಿಡಿದು " ಏ.." ಎಂದು vip ಕಾರುಕಡೆ ಬರುತ್ತಿದ್ದಾರೆ.. ಒಂದೆರಡು ಟಪ್ ಟಪ್ ಎಂದು ಬಂದೂಕಿನಿಂದ ಬಂದ ಸೌಂಡ್.. ಆ ಪೋಲಿಸ್ ವಾಹನದತ್ತ ಓಡಿ ಬರುತ್ತಿದ್ದ ಅಮೈರನನ್ನು "stop him" ಎಂದು ಯಾರೋ ಒಬ್ಬ ಕೂಗಿದರೆ ಉಳಿದವರು ಗನ್ ತೆಗೆದು ಅವನ ಕಡೆ point blank ಮಾಡಿದರು.. ಅಮೈರನಿಗೆ ಬೇರೆ ಯಾವುದೇ option ಇರಲಿಲ್ಲ.. ಹಿಡಿದು ಬಂದ ಆ ಕವರ್ ಸಹಿತ ಎರಡೂ ಕೈಗಳನ್ನು ಮೇಲಕ್ಕೆತ್ತಿ ಮೊಣಕಾಲೂರಿ ಕೂತ.. ಕ್ಷಣಾರ್ಧದಲ್ಲಿ ಆ watching tower ನಿಂದ ಕೆಳಗೆ ಕರೆದವರು ,ಕಂಟ್ರೋಲ್ ರೂಂ ಗೆ ಕರೆದುಕೊಂಡು ಹೋದವರು ಆ ಮುಸುಕು ದಾರಿ ಹೊರತುಪಡಿಸಿ ಎಲ್ಲರೂ ಅಮೈರನಿಗೆ ಗನ್ ಹಿಡಿದು ನಿಂತಿದ್ದಾರೆ..!
ಅಮೈರನಿಗೆ ಇವರು ಎಲ್ಲರೂ ಡಿಪಾರ್ಟ್ಮೆಂಟಿಂದಲೇ ಶಾಮೀಲಾಗಿ ಈ ದುಷ್ಕೃತ್ಯ ಮಾಡಲು ಪ್ಲಾನ್ ಮಾಡಿದಂತಿದೆ. ಈ ಕವರ್ ಹಿಡಿದು ತಂದದ್ದಕ್ಕೆ ನನ್ನನೇ ಆರೋಪಿಯನ್ನಾಗಿ ಮಾಡಬಹುದು. ಹೀಗೇನು ಮಾತನಾಡುವುದು ಬೇಡ ಮುಂದೆ investigation ಟೈಮ್ ಲ್ಲಿ ಕೊರ್ಟಲ್ಲೇ ಸತ್ಯ ಹೇಳಿದ್ರಾಯಿತು, ಆದರೂ ಎಂತ ಕೆಲಸ ಆಯಿತು ಅಂತ ದಡಕ್ಕನೆ ಹಾಸಿಗೆಯಿಂದ ಎದ್ದ ಅಮೈರ ಹೊರಗಡೆ ನೋಡಿದರೆ time is same but ಅಮೈರ in his home on bed...😀😀
( CRIME in DREAM ಕನಸಿನ ಬರಹಗಳ ಸರಣಿ ಮುಂದುವರೆಯುವುದು....)
✍️ ನಾಗೇಂದ್ರ ಬಂಜಗೆರೆ.
Super dream story 👌🏻👌🏻
ಪ್ರತ್ಯುತ್ತರಅಳಿಸಿ