ಮನಸೇ..ಮನಸೇ..ಮಾತಾಡು ನನ್ನಲ್ಲಿ...
ಮನಸೇ ಮನಸೇ ಮಾತಾಡು ನನ್ನಲ್ಲಿ.. ನಾನು ನೀನು ಎಂದಿಗೂ ಒಂದೇ ಮಾತಾಡು ಮನದಲ್ಲಿ..ಆಸೆಗಳು ನೂರಾರು ಕೇಳುವವರೂ ಯಾರೂ.. ನೀನೇ ನನಗಾಗಿ ನಾನೇ ನಿನಗಾಗಿ ಒಂದು ಸರಿ ಮಾತಾಡು ಮನದಲ್ಲಿ ನಲಿದಾಡು.. ತನು ಮನದ ಒಳಗಡೆ ಹಾಡಲು ಬಾ..ಬಾ.../ಪ/ ಓ ಬೆಳದಿಂಗಳಾಗೋ ನನ್ನಾಸೆಗಳು ಕಿರಣಗಳಾಗೋ ನನ್ನ ಕನಸುಗಳು ಹಗಲು ಇರಳು ನಿನ್ನದೇ ಧ್ಯಾನ.. ಹಾಡಿ ಹೊಗಳುವ ಹಂಬಲ ನನದು.. ಚಂದ್ರನೇ ನಿನ್ನಲ್ಲಿಗೆ ಬರವೆ ನಾ ಬಳಿಗಲ್ಲಿಗೆ ಮನಸೇ ಬಾ ಹೊಗೋಣ.. ಅಲ್ಲಿಯೂ ನಾವು ಹಾಡೋಣ ಕುಣಿಯುತಾ ನಲಿಯುತಾ ಹಾಡೋಣ ಬಾ.. ಬಾ.. //ಪ// ಓ ಬೆಳದಿಂಗಳಾಗೋ ನಿನ್ನಾಸೆಗಳು ಪರಿಮಳ ಬೀರೋ ನನಕನಸುಗಳು ವರುಷದ ಹರುಷದಿ ಘಮಘಮಸುತಲಿರಲು..ವರ್ಣಿಸಲಾಗದು ಬರೀ ಮಾತಿನಲಿ ದುಂಬಿಯೇ ನಾ ಬಾರಲು ಸಿಹಿ ಜೇನನು ನಾ ಹೀರಲು..ಮನಸಾರೆ ನಿನ ನೋಡಿ ನನಗಾಗಿ ನೀ ಹಾಡಿ..ಜೀವನವೆಲ್ಲಾ ಹೀಗೆ ಹಾಡುತಲಿರುವ ಬಾ..ಬಾ..//ಮನಸೇ// ಹಾಡನ್ನು ಕೇಳಲು ಕೆಳಗೆ👇👇 ಕ್ಲಿಕ್ ಮಾಡಿ.. ಹಾಡಿಗಾಗಿ ಕ್ಲಿಕ್ ಮಾಡಿ .