ಪ್ರಕೃತ್ loves ಹೃದಿಮಾ..
ಪ್ರಕೃತ್ ಅಂಡ್ ಹೃದಿಮಾ..
ಹೀಗೊಂದು Love story..
ಅಂದು ಬೆಳಿಗ್ಗೆ ಒಂಭತ್ತು ಒಂಭತ್ತು ಹದಿನೈದರ ಸಮಯ.. ಈ ಸಮಯ ನಮಗೊ ಬಂಗಾರಕ್ಕಿಂತಲೂ ಮಿಗಿಲು.ಈ ಸಮಯದಲ್ಲಿ ಯಾರು ಕಾಲ್ ಮಾಡಿದರೂ ಸಾಮಾನ್ಯವಾಗಿ ಆನ್ಸರ್ ಮಾಡಲ್ಲ ಮಾಡಿದರೂ ಐದತ್ತು ಸೆಕೆಂಡ್ ಅಷ್ಟೆ..ನಾನು ಮೇಲೆ ಸ್ನಾನಕ್ಕೆ ಹೊಗಿದ್ದೆ. ಮೆಟ್ಟಲು ಇಳಿಯುವಾಗ ಸೋಫಾ ಮೇಲೆ ಇದ್ದ ಮೊಬೈಲ್ ಲೈಟ್ ಬ್ಲಿಂಕ್ ಆಗುತ್ತಿತ್ತು. ಯಾರೋ ಕಾಲ್ ಮಾಡ್ತಿದ್ದಾರೆ ಎಂದನೆಸಿ ಸೋಪಾ ಹತ್ತಿರ ಬರವ ವೇಳೆಗೆ ಕಾಲ್ ಕಟ್ ಆಯಿತು. ನೋಡಿದ್ರೆ seven missed cals from ಹೃದಿಮಾ..!
ಏಳು ಭಾರಿ ಏನಕ್ಕೆ ಕಾಲ್ ಮಾಡಿರಬಹುದು. ಏನೋ important ಇರಬಹುದು. ಎಂದು ಕಾಲ್ ಮಾಡಿದೆ.ಒಂದೇ ರಿಂಗಿಗೆ ಕಾಲ್ ಅಟೆಂಡ್ ಮಾಡಿದ ಹೃದಿಮಾ ಸಾರ್ ನಮಸ್ತೆ... ಎಂದು ಏದುಸಿರು ಬಿಡುತ್ತಾ ..ನಮಸ್ತೆಮ್ಮ...ರಯಾಕಮ್ಮ ಟೆನ್ಷನ್ ಲ್ಲಿ ಇದ್ದೀಯ ಏನಾಯಿತು??
ಸಾರ್ ಒಂದ್ ಪ್ರಾಬಲ್ಮು...
ನೀವಷ್ಟೇ ಇದನ್ನು solve ಮಾಡೋಕೆ ಸಾದ್ಯ.. ಪ್ಲೀಸ್ ಸಾರ್.. ಆಗಲ್ಲ ಅನ್ನಬೇಡಿ..ನನ್ ಲೈಪ್ ರಿಸ್ಕಲ್ಲಿ ಇದೆ.. ಪ್ಲೀಸ್ ಸಾರ್ help ಮಾಡಿ ಅಂದಳು..
ಹೇಳಮ್ಮ ಏನಾಯಿತು??
ಸಾರ್ ಪ್ರಕೃತ್ ಇವತ್ತು ಬಸ್ಟಾಂಡ್ ಲ್ಲಿ ಸಿಕ್ಕು gift box ಹಿಡಿದು ಮೇಲೊಂದು ದೊಡ್ಡ ಚಾಕೋಲೇಟ್ ಹಿಡಿದು ಬಸ್ಟಾಂಡ್ ಲ್ಲೇ ಪ್ರಪೋಸ್ ಮಾಡಿದ.. ಆದರೆ ಈ scene ನ್ನು ನಮ್ಮೂರಿನವರು ಯಾರಾದರೂ ನೋಡಿದರೆ ಏನಾದೀತು ಅಂತ ನಾನು ಅರ್ಜೆಂಟ್ ಡ್ಯೂಟಿಗೆ ಹೋಗಬೇಕು. Sorry ಅಂದು ಬಂದುಬಿಟ್ಟೆ..
ಸರಿಯಮ್ಮ ಬೇಡ ಅಂದು ಬಂದೀರಲ್ಲ ಈಗ ನಾನೇನು ಮಾಡಬೇಕು??
ಅದೇ ಸಾರ್ ನಾನು ಬಸ್ ಹತ್ತಿ ಬಂದೆ.. ಮೂವ್ ಆಗುತ್ತಿರುವ ಬಸ್ ಪಕ್ಕ ನಿಂತು ಪ್ಲೀಸ್ ಹೃದಿಮಾ.. ನಿನಗೋಸ್ಕರನೇ ಬಂದಿದ್ದು.. ನೀನಗೋಸ್ಕರ ತಂದಿದ್ದು. ತಗೋ ಪ್ಲೀಸ್ ಪ್ಲೀಸ್ ಅಂತಾ ಇದ್ದ.. ನಾನು ಇವೆಲ್ಲಾ ಬೇಡ ಎಂದು ನೂಕಿದ್ದಕ್ಕೆ ಗಿಪ್ಟ್ ಬಾಕ್ಸ್ ಕೆಳಗೆ ಬಿತ್ತು . ಚಾಕೋಲೇಟ್ ಅವನಕೈಯಲ್ಲಿ caych ಹಿಡ್ಕೊಂಡ. ಬಾಕ್ಸ್ ಕೆಳಗೆ ಬಿದ್ದೋಯಿತು. ನಮ್ ಬಸ್ ಮೂವ್ ಆಗಿ ಬಂದು ಬಿಡ್ತು.. ಅವನೂ ಆ ಬಾಕ್ಸ್ ಹಿಡ್ಕೊಂಡ್ ಬಸ್ಸ್ಟಾಂಡ್ ನ ಬಸ್ parking lot ಲ್ಲಿ ನೆಲದಮೇಲೆ ಅಳುಮುಖ ಮಾಡಿ ಕೂತಿದ್ದ..
ಸಾರ್ ಅವನು ನಮ್ಮ ಊರಿಗೆ ಹೋಗುತ್ತಾನೆ..ಮನೆಗೆ ಹೋಗಿ ರಂಪ ಮಾಡುತ್ತಾನೆ ಸಾರ್.. ಅವರತ್ರ ಮಾತಾಡಿ ಏನಾದರೂ ಮಾಡಿ ಅವನನ್ನು ಊರಿಗೆ ಕಳುಹಿಸಿ ಎಂದಳು.
ಯಾಕ್ ಹೃದಿಮಾ?
ಇಷ್ಟ ಇದ್ದರೆ ಹೇಳು ಮನೆಯಲ್ಲಿ ಮಾತಾಡೋಣ.ಅವಸರದ ನಿರ್ಧಾರ ಬೇಡ ಅಂದೆ..
ಸರ್ I already decided ಸರ್.. I can't sir.. Please send him back to his home sir..please please. Sir...
ಪೈನಲ್ ಏನಮ್ಮ??
ಹ್ಞೂಂ ಸರ್ ಪೈನಲ್..
ಸರಿ ಮಾ ಅವನತ್ರ ನಾನು ಮಾತಾಡುವೇ..
ಸರ್ ನನ್ ಮೊಬೈಲ್ ಸ್ವಿಚ್ ಆಪ್ ಇರತ್ತೆ.. ನಾನೇ ಆಮೇಲೆ ಮಾಡುವೆ ಸಾರ್ ಅಂದು ಕಾಲ್ ಕಟ್ ಮಾಡಿದಳು..
ತಕ್ಷಣವೇ ಪ್ರಕೃತ್ ನಂಬರ್ ಗೆ ಡಯಲ್ ಮಾಡಿದ..
'ನನ್ನ ಕಾಡಿಸ ಬೇಡ್ವೇ ಗೆಳತಿ.. ಎಂಬ ಕಾಲರ್ ಟ್ಯೂನ್ ಬರುತ್ತಿದೆ.. ಒಂದೆರಡು ಭಾರಿ ಅವನ ಹತ್ರ ಮಾತಾಡಿದ್ದೇನೆ. ಆಗ ಗುರುಗಳೇ... ಎಂದು ಬಾಯ್ತುಂಬ ಗುರುನಾಮ ಜಪಿಸುತ್ತಿದ್ದವನು ಇಂದು ಕಾಲ್ ರಿಜೆಕ್ಟ್ ಮಾಡುತ್ತಿದ್ದಾನೆ..
"Urgent attend the call..." ಎಂದು text ಮೆಸೇಜ್ ಮಾಡಿದ..
ಕ್ಷೀಣವಾದ ಧ್ವನಿ.. ಸಾರ್ ಎಂದು ಮೂಗಿನಿಂದ ಉಸಿರು ಎಳೆದುಕೊಂಡು ಸಮಾಧಾನಿಸಿಕೊಳ್ಳುತ್ತಾ.."ಪ್ರಕೃತನ ಜೀವನ ಮುಗಿದು ಹೋಯಿತು ಸಾರ್.."
ಪ್ರಕೃತ ಇನ್ನಿಲ್ಲ ಎಂದು ಅಳುತ್ತಿದ್ದಾನೆ..
ಏನಾಯಿತು ಪ್ರಕೃತ್?
ಎಲ್ಲಿದ್ದೀಯಾ??
ಸರ್ ಬಳ್ಳಾರಿಯಲ್ಲಿ ಇದ್ದೇನೆ ಅಂದ.. ಸರಿ ಹತ್ತು ನಿಮಿಷ ಇರು ಬಂದೆ ಎಂದೇಳಿ ಕರೆ ಕಟ್ ಮಾಡಿ ಕುಮುದಾಳಿಗೆ ಇರುವ ವಿಷಯ ಸಂಕ್ಷಿಪ್ತವಾಗಿ ಹೇಳಿ ಟೂ ವಿಲರ್ ತೆಗೆದುಕೊಂಡು ಬಸ್ಟಾಂಡ್ ಗೆ ಹೋದ..
ಹೋಗುವಾಗ ಎಂಟತ್ತು ಕರೆಗಳು ನಿರಂತರವಾಗಿ ಮಾಡುತ್ತಲೇ ಇದ್ದಾನೆ.. ಕರೆ ಸ್ವೀಕರಿಸದೇ ಬಸ್ಸ್ಟಾಂಡ್ ಮುಂದೆ ಹೋಗಿ ಅವನಿಗೆ ಕರೆ ಮಾಡಿ ಎಲ್ಲಿದ್ದೀಯಾ ಅಂದೆ..
ಸಾರ್ ..ಅದು ಇದು ಅಂತ ಮಾತಾಡುತ್ತಾ ಇದ್ದ.. ಎಲ್ಲಿದ್ದೀಯ ಎಂದು ಜೋರಾಗಿ ಕೇಳಿದ್ದಕ್ಕೆ ಗೇಟ್ ಕಡೆ ಇದ್ದೀನಿ..
ನಾನು ಮುಂದೆ ಬಂದವನು ಹಿಂತಿರುಗಿ ನೋಡಿದ್ರೆ..ವೈಟ್ ಶರ್ಟ್.. ಕಪ್ಪು ಬ್ಯಾಗೊಂದನ್ನು ಹಾಕಿಕೊಂಡು ಆ ಗಿಪ್ಟ್ ಬಾಕ್ಸ್ ಕೈಯಲ್ಲೇ ಹಿಡಿದು ನಿಂತಿದ್ದಾನೆ! ಹತ್ತರ ಹೋಗಿ ಯಾವಾಗ ಬಂದೆ ಕಾಲ್ ಮಾಡ್ಬೇಕು ಅನ್ನವಷ್ಟರೊಳಗೆ ಬಿಗಿಯಾಗಿ ತಬ್ಬಿಕೊಂಡು "ಎಲ್ಲಾ ಸರ್ವ ನಾಶ ಆಗಿಹೋಯಿತು ಗುರೂಜಿ".. ಎಂದು ಗಳಗಳನೇ ಕಣ್ಣೀರಾಕಿ ಸುಮಾರು ಒಂದೂವರೆ ನಿಮಿಷಗಳ ಕಾಲ ಅತ್ತ..ಏನಾಯಿತಪ್ಪ ಯಾಕ್ ಅಳುತ್ತಿದ್ದೀಯಾ?? ಗಾಡಿ ಹತ್ತು ಮನೆಗೆ ಹೋಗೋಣ ನಡೆ ಎಂದು ಬೈಕಲ್ಲಿ ಕೂರಿಸಿಕೊಂಡು ಮನೆಗೆ ಬಂದೆ..
ಪ್ರಕೃತ್ ಮತ್ತು ಹೃದಿಮಾ ಇಬ್ಬರೂ ನನ್ನ ತರಬೇತಿಯ ಶಿಭಿರಾರ್ಥಿಗಳು..ಇಪ್ಪತ್ತೈದು ಇಪ್ಪತ್ತಾರು ವಯಸ್ಸಿನ ಅವಿವಾಹಿತ ಸರ್ಕಾರಿ ನೌಕರರು. ತರಬೇತಿಯು ಮುಗಿದಮೇಲೆ ಐದಾರು ಭಾರಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಹೆಚ್ಚೇ ನನ್ನತ್ರ ಮಾತನಾಡಿದ್ದಾರೆ.ಇವರ ಪ್ರೇಮದ ಬಗ್ಗೆ ಮಾತಾಡಿಲ್ಲ. ಆದರೆ ಪ್ರಕೃತ್ ನನ್ನ ಮತ್ತು ಕುಮುದಾ ನಮ್ಮಿಬ್ಬರ ಪೋಟೋವನ್ನು ಯಾವಾಗಲೂ ವಾಟ್ಸಪ್ ಸ್ಟೇಟಸ್ ಗೆ ವಾರಕ್ಕೊಮ್ಮೆ ಹತ್ತುದಿನಕ್ಕೊಮ್ಮೆ ಪ್ರಕೃತ್ ಇಡುತ್ತಿದ್ದನಂತೆ ಇದನ್ನು ಹೃದಿಮಾನೆ ನನಗೆ ಹೇಳಿದ್ದಳು.ಯಾಕಂತೆ ಎಂಬ ಪ್ರಶ್ನೆಗೆ ನಾನು ಅವರತರ ಇರಬೇಕು ಅವರ ಹಾಗೆ ಆಗಬೇಕು ಅಂತ ಹೇಳ್ತಿದ್ದಾನೆ ಎಂದಿದ್ದಳು.ಅಂದು ನನಗೆ ಇವರಿಬ್ಬರು ಬಹುಶಃ ಪ್ರೀತಿ ಸ್ನೇಹದ ಗಡಿಯಲ್ಲಿದ್ದಾರೆ ಎಂದೆನಿಸಿತ್ತು. ನಾವಷ್ಟೆ ಚರ್ಚೆ ಮಾಡಿ ಸುಮ್ಮನಾಗಿದ್ದೆವು. ಆದರೆ ಅಂದು ಆಕಸ್ಮಿಕ ದೀಡೀರ್ ಬೆಳವಣಿಗೆ ನಾವು ನೀರೀಕ್ಷಿಸಿರಲಿಲ್ಲ.
ಮನೆಗೆ ಬಂದ ಪ್ರಕೃತ್ ಗೆ ಕುಮುದಾ ನೀರು ಕೊಡಲು ಹೋದಾಗ ಒಂದು ಗುಟಕಷ್ಟೇ ಕುಡಿದು ಕೆಳಗಿಟ್ಟು ಮತ್ತೆ ಅಳತೊಡಗಿದ..
ಯಾಕಪ್ಪ??ಏನಾಯಿತು ಎಂದು ಕುಮುದಾ ನಾನು ಇಬ್ಬರೂ ಸಂತೈಸಲು ಗುರೂಜಿ ಮಾತಾಜಿ ನನಗೆ ಒಂದೆರಡು hour ಟೈಮ್ ಕೊಡಿ ಅಂದು ಟೆರಸ್ ಮೇಲೆ ಹೋಗಿ ಮುಖ ಕಿವುಚುತ್ತಾ ಛೇ.. ಛೇ.. ಎನ್ನುತ್ತಾ ಕುಳಿತ. ತನ್ನದೇ ಅವಧಿಯ ಕಳೆದ ನಂತರ ಮದ್ಯಾಹ್ನ ಆಗಿದ್ದರಿಂದ ಬಾ ಊಟ ಮಾಡು ತಿಂಡಿನೂ ತಿನ್ಲಿಲ್ಲ ಎಂದು ನಾನೇ ಟೆರಸ್ ಇಂದ ಕರೆದುಕೊಂಡು ಬಂದೆ.
ಮುಖ ತೊಳದುಕೊ. ಎಂದು ಟವೆಲ್ ಕೊಟ್ಟೆ..
ಊಟ ಎಂತಹುದು ಬೇಡ ಮಾತಾಜಿ.. ಪ್ಲೀಸ್ ಪ್ಲೀಸ್ ಎನ್ನುತ್ತಾಲಿದ್ದ. ಏಯ್ ಊಟ ಮಾಡು.. ಬೆಳಿಗ್ಗೆನೂ ಮಾಡಿಲ್ಲ ತಗೋ ಕೈ ತೊಳಕೊ ಎಂದು ಜೋರಾಗಿ ಹೇಳಿದ್ದಕ್ಕೆ ಹಸಿವಿಲ್ಲ ಗುರೂಜಿ ಎಂದೇಳುತ್ತಾ ಸಿಂಕಲ್ಲಿ ಕೈತೊಳೆದು ಬಂದ..ತಣ್ಣನೆಯ ಅನ್ನ ಬಿಸಿಸೊಪ್ಪು ಸಾರು.. ತುಪ್ಪದಜೊತೆಗೆ ಸ್ವಲ್ಪ ಊಟ ಮಾಡಿದ.
ಏನ್ ಸಮಾಚಾರ ಪ್ರಕೃತ್?? ಆಮೇಲೆ ಮಾಡುವೆ ಅಂದೆ..ಹೇಳಪ್ಪ ..
"ಸಾರ್ ಅದೇ ಸಾರ್ ಹೃದಿಮಾ ನಾನು..."
ಹೃದಿಮಾ ನೀನು??
ಸರ್ ನಾವಿಬ್ಬರೂ ಟ್ರೈನಿಂಗ್ ನಿಂದ ಇಲ್ಲಿವರೆಗೂ ಮಾತಾಡ್ಕೊಂಡು ಇದ್ದೇವೆ. ನನ್ನ ಪರಿಚಯ ಅವರ ತಂಗಿಗೂ ಇದೆ.. ಆದರೆ ಇವತ್ತು ನಿವೇದನೆ ಮಾಡುವಾಗ ಅವಳು ವರ್ತಿಸಿದ ರೀತಿ ಸರಿ ಕಾಣಲಿಲ್ಲ.. ಅವಳಿಗೆ ನನ್ನ ಪ್ರೀತಿ ಬೇಕಾಗಿಲ್ಲ. ನಾನು ಕೊಟ್ಟ ಉಡುಗೊರೆ ಎಸೆದು ಹೋಗಿದ್ದಾಳೆ ಎಂದು ಕಣ್ಣು ತೇವಮಾಡಿದ.... ಪ್ರಕೃತ್ ಹೆಗಲಮೇಲೆ ಕೈ ಹಾಕಿ "ಪ್ರೀತಿ ಪ್ರೇಮ ಅವರರವರ ಇಷ್ಟ.ಇದರ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರತ್ತೆ. ಇದರಲ್ಲಿ ಯಾರೂ ಒತ್ತಡ ಹಾಕುವುದು, ಹೇಳುವುದು ಸರಿಯಾಗಲ್ಲ..ನಾನು ಒಮ್ಮೆ ಹೃದಿಮಾನತ್ರ ಮಾತಾಡುವೆ ಮಾತನಾಡಿ ಏನು ಅಂತ ಕನ್ಪರ್ಮ್ ಆಗಿ ಹೇಳುವೆ"..
ವಯೋಸಹಜ ಲವ್ ಬ್ರೇಕಪ್ ಪೀಲಿಂಗ್ಸ್ ಇದ್ದೇ ಇತ್ತು. ಏಳು-ಬೀಳು,ಸೋಲು ಗೆಲುವು ಜೀವನದಲ್ಲಿ ಸಹಜ.. ಎದೆಗುಂದದೆ IAS/KAS ಅಂತಹ ಹೆಬ್ಬಯಕೆ ಇಟ್ಕೊಂಡು ಪ್ರಯತ್ನ ಮಾಡು..ಇವತ್ತು ಅವಳು ನಿನ್ನ ಪ್ರೀತಿಗೆ ಒಪ್ಪಿಲ್ಲ ಅಂತ ದುಶ್ಚಟಗಳು ಮಾಡಬಾರದು..ಮನೆಯಲ್ಲಿ ಅಮ್ಮ-ಅಪ್ಪ ಅಕ್ಕಂದಿರನ್ನು ನೋಡು.. ನಾನು ಹೃದಿಮ ಹತ್ರ ಮಾತಾಡುವೆ ಎಂದು ಸಂತೈಸಿದೆ.ಈ ಬಾಕ್ಸ್ ಒಂದು ಅವಳಿಗೆ ಕೊಡಿ ಎಂದ..ನಾನೂ ಅದನ್ನು ತಿರಸ್ಕರಿಸೋ ಹಾಗೆ ಇಲ್ಲ..ಬೆಳಿಗ್ಗೆ ಇಂದನೂ ನೊಂದು ಬೆಂದಿರುವ ಜೀವ...ಅದನ್ನು ನೀನೆ ಕೊಡುವ ಘಳಿಗೆ ಬರಬಹುದು..ಇಟ್ಕೊ ಎಂದು ಪುನಃ ಅವನ ಬ್ಯಾಗೊಳಗೆ ಹಾಕಿದೆ..ಹಂಗೂ ಹಿಂಗೂ ಮಗುವಿನಂತೆ ಸಂತೈಸಿ ಅಂತೂ ದೂರದ ಬೀದರ್ ಗೆ ಬಸ್ ಹತ್ತಿಸಿ ಬಂದೆ..
ಇತ್ತ ಡ್ಯೂಟಿಯಿಂದ ಹಿಂದುರುಗಿದ ಹೃದಿಮಾ ಕಾಲ್ ಮಾಡಿದಳು..
ಸರ್.. ಏನಾಯಿತು ಸರ್ ಹೋದ್ರ ಅವರು??
ಹ್ಞು... ಮಾ ಹೋದ.. ಸುದೀರ್ಘ ಕಾಲದ ಹಿತವಚನದ ನಂತರ ಹೋಗಿದ್ದಾರೆ. ಅಂದೆ ಸರಿ ಸಾರ್ ಮನೆಗೆ ಬಂದೆ ಐದು ನಿಮಿಷ ಅಂದಳು...
ಏನಮ್ಮ ಮ್ಯಾಟರ್ ಇದೆಲ್ಲಾ..ಏನ್ ಕಥೆ...?
ಸರ್ ಅದುಂದು ದೊಡ್ ಕಥೆ..
ಬಹಳದಿನಗಳಿಂದ ಮಾತಾಡ್ಕೊಂಡು ಚೆನ್ನಾಗಿಯೇ ಇದ್ದಿವಿ ಸರ್.. ಆದ್ರೆ ಲವ್ ,ಮ್ಯಾರೆಜ್ ಅನ್ನುವ ಹಂತಕ್ಕೆ ನಾನಿರಲಿಲ್ಲ..ಮನೆಯಲ್ಲಿ ಅಪ್ಪಾಜಿ ಈತರದವುಗಳನ್ನು ಸಹಿಸಲ್ಲ.
If you permit me I will talk once with your father..
ಬೇಡ ಸಾರ್...ಮೇಲಾಗಿ ಅವರ ನಿರ್ಧಾರಗಳು ಗಟ್ಟಿಯಾಗಿಲ್ಲ ಅತಂತ್ರ ನಿರ್ಧಾರ ಗಳೇ ಹೆಚ್ಚು.. ಆಗಲ್ಲ ಸಾರ್.. ಹಿಂಗಾದ್ರೆ ಲೈಪ್ ಏರು-ಪೇರಾಗುತ್ತದೆ ಬೇಡ ಅಂದಳು..
ನೋಡಮ್ಮ ನಿಮ್ಮಿಬ್ಬರ ನಿರ್ಧಾರ ಗಟ್ಟಿ ಇರಲಿ.. ನಾವು ಹೇಗೆ ಅಂದುಕೊಳ್ಳುತ್ತೇವೋ ಹಾಗೆಯೇ ಜೀವನ ಮಾಡಿ ತೋರಿಸಬಹುದು ಆದ್ರೆ ಇಬ್ಬರಿಗೂ ಬಲವಾದ ಇಚ್ಛಾಶಕ್ತಿ ಬೇಕು... ಆಲೋಚನೆ ಮಾಡಿ.. ಒಂದು ವೇಳೆ ಓಕೆ ಅನಿಸಿದರೆ ಹೇಳಿ ನೋಡುವ..
ಸರ್ ಏನೇನೋ ಹುಚ್ಚು ಮೆಸೇಜ್ ಹಾಕ್ತಿದ್ದಾನೆ..
ಪೀಲಿಂಗ್ ಇರತ್ತೆ.. ಸರಿಯಾಗತ್ತೆ ಬಿಡಿ..
ಹೃದಿಮಳಿಗೆ ಪ್ರಕೃತ್ ಮೇಲೆ ಒಲವಿತ್ತು ಅನ್ಸತ್ತೆ.. ಆದ್ರೆ ಯಾವುದೋ ಕೆಲ ಸಂಗತಿಗಳು ಅವನು ಬೇಡ ಎಂದೆನಿಸಿರಬೇಕು. ನಾ ಕಂಡಂತೆ ಮದುವೆಯ ವಯಸ್ಸಿನ ಇಬ್ಬರಲ್ಲೂ ಅಸ್ಪಸ್ಟತೆ ಇರುತ್ತದೆ.ಹಾಗೆಯೇ ಇವಳಿಗೂ ಅನಿಸಿರಬೇಕು. ಮರುದಿನ ಮುಂಜಾನೆ ಬೀದರ್ ತಲುಪಿದ ಪ್ರಕೃತ್ ತಲುಪಿದ್ದೇನೆ ಗುರುಗಳೇ ಎಂದ.. ಮತ್ತೆ ಪದೇ ಪದೇ ಕಾಲ್ ಮಾಡಕೆ ಹೋಗಬೇಡ ಬಿಟ್ ಬಿಡು ನೀನು ಜಾಸ್ತಿ ತಲೆಕೆಡಿಸ್ಕೋಬೇಡ ಅರಾಮಾಗಿರು ಅಂದೆ..
"ಗುರುಗಳ ಆಜ್ಞೆ ಮೀರೆನು ಗುರೂಜಿ "..ಎಂದು ಹೇಳಿದ.
ಎಂಟತ್ತು ತಿಂಗಳು ಕಳೆದ ಮೇಲೆ ಪ್ರಕೃತ್ "ಮಡದಿಯೊಂದಿಗೆ ಸೆಲ್ಪಿ" ಎಂಬ ಟ್ಯಾಗ್ ಲೈನ್ ಹಾಕಿ ಪೋಟೋ ಹಾಕಿದ್ದ..ಶಿಷ್ಯ ಮದುವೆಗೆ ಹೇಳಲಿಲ್ಲ ಎಂದೆನಿಸಿತಾದರೂ ಇವಳ ನೆನಪಲ್ಲಿ ದಾರಿ ತಪ್ಪಿಲ್ಲ. ಚೆನ್ನಾಗಿರಲಿ ಎಂದು ವಾಟ್ಸಪ್ಪಲ್ಲೇ ಹಾರೈಸಿದೆವು.
ಇತ್ತ ಮದುವೆಯ ಗೊಡವೆಯೇ ಬೇಡ ಎಂದು ಹೇಳುತ್ತಿದ್ದ ಹೃದಿಮಾ ಬಹಳ ದಿನಗಳ ವರೆಗೆ ಕಾಲ್ ಮೆಸೇಜ್ ಏನನ್ನೂ ಮಾಡಲ್ಲಿಲ್ಲ. ಒಮ್ಮೆ ಯಾವಾಗ್ಲೋ ಬಿಡುವು ಮಾಡಿಕೊಂಡು ಕರೆಮಾಡಿ ಪೋನ್ ತೆಗೆದ ಕೂಡಲೇ "ಏನಮ್ಮ ಮದುವೆ ಗಿದುವೆ ಆಯ್ತ ಹೇಂಗೆ??ಮರೆತು ಬಿಟ್ಟಿಯಲ್ಲಮ್ಮಾ ಅಂದೆ... ಹ್ಞೂ ಸಾರ್.. ಇನ್ನೂ ಹದಿನೈದು ದಿನದಲ್ಲಿ ಇದೆ ಹೇಳುವೆ..ಆದರೆ ನಾನು ಆಪೀಸಲ್ಲಿ ಇದ್ದೀನಿ ಸಂಜೆ ಕಾಲ್ ಮಾಡ್ತೀನಿ ಅಂತ ಹೇಳಿದ್ದಾಳೆ ಎಂದು ಕುಮುದಾಗೆ ಹೇಳಿದೆ.ಹೋಗಣಪ್ಪ ಮದುವೆಗೆ ಆದರೆ ನಮ್ ಮಲೆನಾಡಿಕಡೆ ಮಾಡಿದ ಹಾಗೆ ಮದುವೆ ಅಡಿಗೆ ಮಾಡಲ್ಲ ಈ ಕಡೆ ಎಂದಳು.. ಏನ್ ಮಾಡಿರ್ತಾರೋ ಅದನ್ನೇ ಊಟ ಮಾಡಿ ಬರಬೇಕು.. ಹಿಂಗಂದ್ರೆ ಹೇಗೆ ಎಂದೇಳಿ.ಸಂಜೆ ಕಾಲ್ ಮಾಡುವೆ ಎಂದಿದ್ದಾಳೆ ನೋಡೋಣ ತಾಳು ಎಂದೇಳಿದೆ. ಸಂಜೆ ಕಾಲ್ ಮಾಡುವೆ ಎಂದವಳು ಇನ್ನೂ ಕರೆಮಾಡಿಲ್ಲ.. ಅಂದಹಾಗೆ ಮದುವೆ ಅವಳು ಹೇಳಿದ ಹಾಗೆ ಮುಗಿದು ಹೋಯಿತು..
ಒಂದು ವರ್ಷದೊಳಗೆ ಇಬ್ಬರೂ ಬೇರೆ ಬೇರೆಯವರೊಂದಿಗೆ ಮದುವೆಯಾದರು. ಇಷ್ಟೆಲ್ಲಾ ಬುದ್ದಿವಾದ ಹೇಳಿದ ನಮ್ಮನ್ನೂ ಮದುವೆಗೆ ಇಬ್ಬರೂ ಕರೆಯಲ್ಲಿಲ್ಲ ಅನ್ನುವ ಸಣ್ಣ ಬೇಜಾರಿದೆ. ಆದರೂ ನೂರ್ಕಾಲ ಸುಖವಾಗಿ ಬಾಳಿ ಬದುಕಲಿ ಎನ್ನುವ ಹೃನ್ಮನದ ಹಾರೈಕೆ ಸದಾ ಅವರ ಮೇಲಿದೆ..
✍️ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ