ಕನಸು ಕಥೆಯಾದಾಗ...part-7

ಕನಸು ಕಥೆಯಾದಾಗ...

       Part-7

 ಸಂಜೆಯ ಮುಸುಕು ಗತ್ತಲು..ಒಬ್ಬರಮುಖ ಒಬ್ಬರಿಗೆ ಸ್ಪಸ್ಟವಾಗಿ  ಕಾಣದಂತಹ ಕತ್ತಲು ಕವಿದಿದೆ. ಅತ್ತಪೂರಾ ಕತ್ತಲು ಆಗಿಲ್ಲ ಇತ್ತ ಪೂರಾ ಬೆಳಕೂ ಇಲ್ಲ..ನಾನು ಕಂಡಂತೆ ಇಂತಹ ಕತ್ತಲು ತುಂಬಾ ಅಪಾಯಕಾರಿ. ವಾಹನ ಸವಾರರಿಗೆ ಈ ಸಮಯದಲ್ಲಿ ಡ್ರೈವ್ ಮಾಡುವುದು ಚಾಲೇಂಜ್ ಆಗಿರುತ್ತದೆ. ಆರುಷಿಯು ಸಾಮಾನ್ಯವಾಗಿ ಲಾಂಗ್ ಡ್ರೈವ್ ಲ್ಲಿ ಇರುವಾಗ ಇಂತಹ ಸಮಯದಲ್ಲಿ ಎಲ್ಲಿಯಾದರೂ ಒಂದತ್ತು ನಿಮಿಷ ಕಾರು ನಿಲ್ಲಿಸಿ ಪೂರ್ಣ ಕತ್ತಲಾದ ಮೇಲೆಯೇ ಹೊರಡುತಿದ್ದ. ಅಂದು ಆರುಷಿ ಡ್ಯಾನ್ಸ್ ಕ್ಲಾಸ್ ಮುಗಿಸಿ  ಮಗಳೊಂದಿಗೆ  ಬೈಕ್ ಲ್ಲಿ ಮನೆಗೆ ಬರುತ್ತಿದ್ದ.ಆರುಷಿಯು left ಸೈಡ್ ಲ್ಲೇ ಇದ್ದ.. ಹಳದಿ ಬಣ್ಣದ ಟಿಪ್ಪರ್ ಒಂದು ಬಹಳ ವೇಗವಾಗಿ ಕರ್ಕಶ ಶಬ್ದ ಮಾಡುತ್ತಾ ಬ್ಯುಸಿ ರಸ್ತೆಯಲ್ಲಿ ಓವರ್ ಟೇಕ್ ಮಾಡಿ ಮುಮದೆ ಹೋಯಿತು. ನಂಬರ್ ಪ್ಲೇಟ್ ಇಲ್ಲ.. ಹಿಂದಿನ ಟೈರ್ಗಳಿಗೆ mudguard  ಕೂಡ ಇಲ್ಲ..ಬ್ರೇಕ್ ಹಾಕಿದಾಗ blink ಆಗಲು tail ಲೈಟ್ ಕೂಡ ಇಲ್ಲ..ಇವನ್ಯಾವನ್ ಇವನು ಈ ಬ್ಯುಸಿ ರೋಡಲ್ಲಿ ಇಷ್ಟು ವೇಗವಾಗಿ ಹೋಗುತ್ತಿದ್ದಾನೆ ಎಂದು ಅಂದುಕೊಂಡು ಹೋಗುತ್ತಿರುವಾಗ. ನನಗಿಂತ ಐವತ್ತು ಮೀಟರ್ ಮುಂದಕ್ಕೆ ಹೋಗಿದ್ದ ಲಾರಿ ರಸ್ತೆಯ ಮದ್ಯದಲ್ಲಿ ನಿಂತುಕೊಂಡಿತ್ತು.ರಸ್ತೆಯ ಮೇಲೆಯೇ  ಬೈಕ್ ಆಟೋಗಳು ನಿಂತಿದ್ದವು.ಕೆಲವರು ಪಕ್ಕದಲ್ಲಿ vehicles ನಿಲ್ಲಿಸಿ ಜನರೆಲ್ಲಾ ಲಾರಿಯ ಮುಂದೆ ಜಮಾಯಿಸಿದ್ದರು. ಮಗಳು ತನೇಹಾ "ಯಾಕ್ ಪಪ್ಪಾ ಇಸ್ಟೊಂದು ಟ್ರಾಪಿಕ್ ಜಾಮ್ ಆಗಿದೆ ಅಲ್ಲಿ? ಎಂದು ಕೇಳುತ್ತಿದ್ದಳು.ಏ‌ನೋ ಅಲ್ಲಿ ಯಾವುದೋ ಗಾಡಿ ಕೆಟ್ಟು ನಿಂತಿರುತ್ತೆ ಇಲ್ಲ ಆಕ್ಸಿಡೆಂಟ್ ಆಗಿರತ್ತೆ ಎಂದೇಳಿದ.ಅಲ್ಲಿ ಇಲ್ಲಿ ತೂರಿ ಆ ಲಾರಿಯ ಮುಂದೆ ಬಂದಾಗ ಒಂದು ಬೈಕ್ ಲಾರಿಯಕೆಳಗೆ ಇತ್ತು. ಒಬ್ಬ ವ್ಯಕ್ತಿ ಲಾರಿಯ ಅಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ.ಬೈಕ್ನ ಬ್ಯಾಗಲ್ಲಿದ್ದ ಹೂವು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.ಮಗಳು ಇದ್ದದರಿಂದ ಆ ಭೀಭತ್ಸ ದೃಷ್ಯ ನೋಡಿ ಮಕ್ಕಳು ಹೆದರಬಹುದೆಂದು ಆರುಷಿ ಮುಂದಕ್ಕೆ ಹೋದರು...

ಆರುಷಿಯ ಮುಂದೆ ಒಬ್ಬ ಹೆಣ್ಣುಮಗಳು ಅವಳ ಗಂಡನಿಗೆ ಕರೆ ಮಾಡಿದಳು..

ಎಲ್ಲಿದ್ದೀರಾ??

ಆರ್ಮಿಕ್ಯಾಂಪ್ ಸರ್ಕಲ್ ಲ್ಲಿ ಇದ್ದೇನೆ..ಏನಾದರೂ ತರಬೇಕಿತ್ತ??

ಹ್ಞೂಂ.. ಎರಡುಮೊಳ ದುಂಡು ಮಲ್ಲಿಗೆ...

ಸರಿ ಸರಿ ಬಂದೆ..ಎಂಬ ಪುರುಷ ದ್ವನಿ ಕೇಳಿಸುತ್ತದೆ..

ಈ ಹೆಣ್ಣುಮಗಳು ಮತ್ಯಾರಿಗೋ ಪೋನ್ ಮಾಡಿ ಆರ್ಮಿಕ್ಯಾಂಪ್ ಸರ್ಕಲ್ ಲ್ಲಿ ಬರುತ್ತಿದ್ದಾರಂತೆ.. ಎಂದೇಳಿ ಕರೆ ಕಟ್ ಮಾಡಿದರು.. ಕರೆ ಕಟ್ ಮಾಡಿ ಮನೆಯೊಳಗೆ ಹೋಗಿ ಬಾಗಿಲ ಬೋಲ್ಟ್ ಹಾಕಿಕೊಂಡಳು..

ಯಾರೋ ಆ ಮಹಿಳೆಗೆ ಮತ್ತೊಮ್ಮೆ ಕರೆ ಮಾಡಿದರು..

ಪೋನ್ ರಿಸೀವ್ ಮಾಡಿದ ಮಹಿಳೆ ಹ್ಞುಂ... ಎಂದಷ್ಟೇ ಉದ್ಗಾರ ತೆಗೆದು ಬಲಗೈಯಿಂದ ಮೊಬೈಲ್‌ ಕೆಳಗಿಡುತ್ತಾ, ಎಡಗೈಯಿಂದ ಹಣೆಗೆ zandu balm ಹಚ್ಚಿಕೊಳ್ಳುವ ಹಾಗೆ ಹಣೆಯನ್ನು ಜೋರಾಗಿ ಉಜ್ಜಿಕೊಳ್ಳುತ್ತಿದ್ದಾಳೆ. ಒಮ್ಮೆ ತಲೆಯನ್ನು ಮೇಲಕ್ಕೆ ಎತ್ತಿ ಧೀರ್ಘ ಏದುಸಿರನ್ನು ಬಿಟ್ಟು ಅವಸರ ಅವಸರವಾಗಿ ಅಡುಗೆ ರೂಂಗೆ ಹೋಗೆ ಮೊದಲೇ ತುಂಬಿಟ್ಟಿದ್ದ ವಾಟರ್ ಬಾಟಲ್ ಎತ್ತಿಕೊಂಡು ಗಟಗಟನೆ ನೀರು ಕುಡಿದಳು.. ಚಡಪಡಿಕೆ ಹೆಚ್ಚಾಗುತ್ತಿದೆ..  ಆರುಷಿಗೆ ಅವಳ ಚಡಪಡಿಕೆ ಕಂಡು ಏನೋ ಆಗಿದೆ ಎಂದೆನಿಸುತ್ತಿದೆ..ಆದರೆ ಅವಳಿಗೆ ಕೇಳಲಾಗುತ್ತಿಲ್ಲ.. ಅಲ್ಲಿ ಆರುಷಿಗೆ ಏನೋ ದೂರದಲ್ಲಿ ಕಂಡ ಭ್ರಮೆಯಂತೆ ಭಾಸವಾಗುತ್ತಿದೆ.. ಕೆಲವೇ ನಿಮಿಷಗಳಲ್ಲಿ ಬಾಗಿಲ knock ಆಯಿತು.. ಬಾಗಿಲು ತೆಗೆದು ನೋಡಿದರೆ ಯಾರೂ ಇಲ್ಲ..

"ತಗೋಳೆ... ಈ ಬ್ಯಾಗ್... ಅದರಲ್ಲಿ ಹೂವು ಹಣ್ಣು ಎಲ್ಲವೂ ಇದ್ದಾವೇ ನೋಡು..."

ಬಂದಿದ್ದು ಆ ಹೆಂಗಸಿನ ಗಂಡ ಅಂತ ಅನಿಸಿತು ಆದರೆ ಅವರ ಆಕಾರ ಆರುಷಿಗೂ ಕಾಣಲಿಲ್ಲ..

 ಆ ಹೆಂಗಸು ಅಳುತ್ತಾ...ರೀ ಎಲ್ಲಿದ್ರೀ??? ನೀವು ಕಾಣಿಸುತ್ತಿಲ್ಲ...ಎಲ್ರೀ??

ಇವಳ ಪ್ರಶ್ನೆಗೆ ಯಾವ ಮರು ಉತ್ತರವೂ ಬರಲಿಲ್ಲ..ಇತ್ತ ಕನಸಿ ನಲ್ಲಿ ಕನಸು ಕಾಣುತ್ತಿದ್ದ ಒಂದು ಒಳಕನಸಿನ ತೆರೆ ಸರಿಯಿತು..

 ಬೈಕ್ನಲ್ಲಿ ಮಗಳೊಂದಿಗೆ ಮುಂದೆ ಬಂದ ಆರುಷಿಯು ಆಕ್ಸಿಡೆಂಟ್ ಆದ ಸ್ಥಳದಲ್ಲಿ ಬೈಕನಲ್ಲಿ ಬರುತ್ತಿದ್ದ ವ್ಯಕ್ತಿ ಮೃತ ಪಟ್ಟಿದ್ದ ಅನಿಸಿತು.. ಅದನ್ನು ನೋಡಿದ ಆರುಷಿಗೆ ಆ ಕನಸು ನೆನಪಾಗಿ  "ಆ ಕನಸು ಕಂಡಿದ್ದು ನಿಜ ಆಯಿತು.. ಆತ ಸತ್ತೇ ಹೋದ ಛೇ.. ಎಂತೆಂಥವರು ಈ ಪ್ರಪಂಚದಲ್ಲಿದ್ದಾರೋ ಏನೋ ಎಂದುಕೊಳ್ಳುತ್ತಾ ಆರುಷಿ ಮುಖ್ಯ ಕನಸಿನಿಂದ ಕಣ್ತೆರೆದು ಕಿಟಕಿಯಿಂದ ಹೊರನೋಡಿದರೆ ಆರುಷಿಯ ಮನೆಯ ಸುತ್ತಲೂ ಖಾಲಿ ಜಾಗದಲ್ಲಿ ನೀರು ನಿಂತಿವೆ.. ಇದು ಕನಸಿರಬೇಕು ಎಂದು ಜೆಸ್ಸಿಯನ್ನು ಹೊರಗೆ ಬಿಡೋಣ ಎಂದು main door ತೆಗೆದು ನೋಡಿದರೆ ನಿಜವಾಗ್ಲೂ ಮಳೆಯಾಗಿದೆ.. ಬೇಸಿಗೆಯ ತಾಪ ಮುಗಿತು ಎಂದು ತಣ್ಣನೆಯ ಗಾಳಿಗೆ ಹಾಯಾದ ವಾಕ್ ಮುಗಿಸಿದ..

ಕಥೆ ಮುಗಿಸುವ ಮುನ್ನಾ.. ಇದು ಆಕ್ಸಿಡೆಂಟ್ ಕಥೆಯೋ? ದೆವ್ವದ ಕಥೆಯೋ ಅಥವಾ ಕೊಲೆಯೋ ಅಂತ   ದ್ವಂದ್ವ ಆಯಿತು..ಆದರೆ ಕನಸಿನಲ್ಲಿ ಕಂಡದ್ದು ದಾಖಲಿಸಿದೆ..ಅಂದ ಹಾಗೆ ಆ ಗಂಡ ಹೆಂಡತಿ ಮತ್ತು ಅವನು ಯಾರು ಅಂತ ಸ್ಪಷ್ಟವಾಗಿ ಗೊತ್ತಾಗಲಿಲ್ಲ..😀😀

✍️ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..