ಕೊಡೈಕೆನಾಲ್ ಮತ್ತು ಪಳನಿ.. (ಪ್ರವಾಸ ಕಥನಾ)
ಮೈಸೂರ್ to ಕೊಡೈಕೆನಾಲ್...
(ಪ್ರವಾಸ ಕಥೆ)
ಕುಮುದಾ ನನಗೆ ಕರೆಮಾಡಿ ನಮ್ಮ ರಾಜ್ಯ ಸಂಪನ್ಮೂಲ ತಂಡದವರು ಪಳನಿ ಕೊಡೈಕೆನಾಲ್ ಎರಡುದಿನ ವೀಕೆಂಡ್ ಟ್ರಿಪ್ ಮಾಡೋಣ ಅಂತೀದಾರೆ.. ಹೋಗಾಣವಾ ಎಂದಳು.. ಆದರೆ ನೀವು ತನೇಹಾಳನ್ನು ಕರೆದುಕೊಂಡು ಪ್ರೈಡೇ ಸಂಜೆಯೊಷ್ಟತ್ತಿಗೆ ನೀವು ಮೈಸೂರಿಗೆ ಬರಬೇಕು ಎಂದಳು.ಆಗ ನಾವು ತಿಂಗಳಿಗೆ ಕನಿಷ್ಠ ಎರಡು ಸಾವಿರ ಕಿಲೋ ಮೀಟರ್ ಗಳಷ್ಟು ಟೂರ್ ಮಾಡುತ್ತಿದ್ದ ಕಾಲ... ಕೊಡೈಕೆನಾಲ್ ಬಹಳ ಕೇಳಿದ್ದೆ.. ಹೋಗಾಣ ಬರುತ್ತೀನಿ ತಗೋ ಎಂದು ಒಪ್ಪಿಗೆ ಸೂಚಿಸಿದೆ.
ಕುಮುದಾ ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರ ತಂಡದೊಂದಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಸುತ್ತೂರು ಮಠದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಶಿಕ್ಷಕರಿಗೆ ತರಬೇತಿಯ ನೀಡುತ್ತಿದ್ದರು. ನಾನು ಮಗಳೊಂದಿಗೆ ಮಧ್ಯಾಹ್ನ ಹನ್ನೆರಡು ಹದಿನೈದಕ್ಕೆ ಮೈಸೂರಿಗೆ ಪಯಣ ಆರಂಭವಾಯಿತು.
ತಾತ್ಕಾಲಿಕ ಮ್ಯಾರಿಡ್ ಬ್ಯಾಚುಲರ್ ವಿಥ್ ಚೈಲ್ಡ್ ಆಗಿದ್ದ ನಾನು ಮನೆಯಲ್ಲಿ ಬೆಳಿಗ್ಗೆ ಏನೋ ತಿಂಡಿಯನ್ನು ಮಾಡಿದ್ದೆ. ಮಧ್ಯಾಹ್ನ ಒಂದು ಒಂದು ಹದಿನೈದಕ್ಕೆ ರಾಜ್ಯ ಹೆದ್ದಾರಿ ೧೫೦ ಎ ರಸ್ತೆಗೆ ಹೊಂದಿಕೊಂಡ ರಾಂಪುರ ಎಂಬ ಊರಿನಲ್ಲಿ ಮದ್ಯಾಹ್ನದ ಊಟ ಮುಗಿಸಿಕೊಂಡು ಪುನಃ ಹೆದ್ದಾರಿಯಲ್ಲಿ ನಮ್ಮ ಪಯಣ ಶುರುವಾಯಿತು.. ಬಳ್ಳಾರಿ ಯಿಂದ ಹಿರಿಯೂರಿನ ವರೆಗೆ ವೇಗವಾಗಿ ಸಾಗುವ ರಸ್ತೆ.. ಹಿರಿಯೂರಿನ ನಂತರ ರಸ್ತೆ ಸ್ವಲ್ಪ ಕಿರಿದಾದುದರಿಂದ ನಾವಂದುಕೊಂಡಷ್ಟು ಪಾಸ್ಟ್ ಜರ್ನಿ ಆಗುವುದಿಲ್ಲ..ಜುಲೈ ಆಗಸ್ಟ್ ಆದ್ದರಿಂದ ಅದಾಗಲೇ ಒಂದೆರಡು ಭಾರಿ ಹದ ಮಳೆಯಾಗಿ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಕಂಗೊಳಿಸುತ್ತಿದ್ದರೆ ರೈತರ ಹೊಲಗಳಲ್ಲಿ ಪೈರು ಬೆಳೆಯುತ್ತಾ ಇತ್ತು. ಮುನ್ನೂರೈವತ್ತು ಕಿಲೋ ಮೀಟರ್ ದೂರವನ್ನು ಸುಮಾರು ಆರು ಗಂಟೆಗೆ ಕ್ರಮಿಸಿ ಮೈಸೂರು ನಗರವನ್ನು ಸೇರಿದೆವು. ಕುಮುದಾ ಅಂಡ್ ಟೀಂ ಇದ್ದದ್ದು ಸುತ್ತೂರು ಮಠವಾದ್ದರಿಂದ ಸುತ್ತೂರಿನ ಕಡೆಗೆ ಹೊರಟೆ.. ಸುತ್ತೂರು ಮಠದ ಹಾದಿಯ ಸುತ್ತಲೂ ಕಬ್ಬು ಕಟಾವು ಮಾಡಿ ರಸ್ತೆಯ ಬದಿಯಲ್ಲಿ ಸಾವಣೆ ಹಾಕಿದ್ದರು. ಮಗಳಿಗೆ ಕಬ್ಬಿನ ಗದ್ದೆಗಳನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆಯನ್ನು ನೀಡುತ್ತಾ ,ಕಬ್ಬಿನ ಜಲ್ಲೆಗಳ ರಾಶಿಯನ್ನು ನೋಡುತ್ತಾ ಮುಂದೆ ಸಾಗುತ್ತಿದ್ದೆವು. "ಕಬ್ಬು ತಿನ್ನೋಣ ಪಪ್ಪಾ" ಎಂದು ಮಗಳು ಕೇಳಿದಳಾದರೂ ಕೆಲವು ರಾಶಿಗಳ ಅಕ್ಕ ಪಕ್ಕ ಯಾರೂ ಮಾಲಿಕರು ಇಲ್ಲದ ಕಾರಣ ಹಾಗೆ ಮುಂದೆ ಬಂದೆ.. ಸುತ್ತೂರು ಸಮೀಪದ ಕಪಿಲ ನದಿಯ ಬ್ರಿಡ್ಜ್ ಮುಂಚಿತವಾಗಿ ಅಲ್ಲೊಂದು ಕಬ್ಬಿನ ಜಲ್ಲೆಯ ರಾಶಿ ನೋಡಿ ಕಾರನ್ನು ನಿಲ್ಲಿಸಿದೆ. ಯಾರೋ ಒಬ್ಬ ನಲವತ್ತೈದು ಐವತ್ತು ವರ್ಷದ ಒಬ್ಬ ವ್ಯಕ್ತಿಯನ್ನು "ಯಜಮಾನ ನಾಲ್ಕು ಕಬ್ಬಿನ ಕೋಲು ಕೋಡು ತಿನ್ನಾಕೆ ಅಂತ ಕೇಳಿದೆ.. ಧಾರಾಳ ಮನಸ್ಸಿನಿಂದ ತಗೊಂಡ್ ಹೋಗ್ರಿ ಎಷ್ಟು ಬೇಕೋ ಅಷ್ಟು ಅಂದ.. ಕೆಳಗಿಳಿದು ಕಬ್ಬಿನ ರಾಶಿಯ ಮೇಲೇರಿದ ತನೇಹಾ ಈ ಎಲ್ಲಾ ಕಬ್ಬನ್ನು ಜ್ಯೂಸ್ ಮಾಡಿದರೆ ಎಷ್ಟು ಜ್ಯೂಸ್ ಆಗತ್ತೆ ಪಪ್ಪ ಎಂದಳು.. ಬಹಳಷ್ಟು ಆಗತ್ತೆ ಅದರಿಂದ ಬೆಲ್ಲ ಮತ್ತು ಸಕ್ಕರೆಯನ್ನು ಮಾಡುವವರೆಂದು ಹೇಳಿ ಮನಸ್ಸಿಗೆ ಇಷ್ಟವಾದ ನಾಲ್ಕೈದು ಕೋಲುಗಳನ್ನು ಎಳೆದು ಕಾರಿಗೆ ಹಾಕಿಕೊಂಡು ಏನಾದರೂ ಕೊಡಬೇಕಾ ಯಜಮಾನ ಎಂದೆ... ಏನು ಬೇಡ.. ಮಕ್ಕಳು ತಿನ್ನಕಲ್ಲ ಏನು ಬೇಡ ಹೋ..ಗಿ ಎಂದ.. ಬನ್ನಿ ಇಲ್ಲಿ ಹಂಗೆ ತಗೋಬಾರದು ತಗೋ..ಹಿಡಿ ಎಂದು ಐವತ್ತು ಅರವತ್ತು ರೂಗಳನ್ನು ಬೇಡ ಬೇಡ ಎನ್ನುತ್ತಿದ್ದ ಆತನ ಕೈಗೆ ಇಟ್ಟು ಮುಂದೆ ಹೋದೆವು.ನಮ್ಮ ಬರುವಿಕೆಗಾಗಿ ಕಾಯುತಲಿದ್ದ ಸಂಪನ್ಮೂಲ ವ್ಯಕ್ತಿಗಳ ತಂಡದವರು ಒಂದು Tempo traveller ಮಾಡಿ ಲಗೇಜ್ ಸಹಿತ ರೆಡಿಯಾಗಿದ್ದರು. ಹೋದ ತಕ್ಷಣ ಮಠದ ಗೆಸ್ಟ್ ಹೌಸ್ ಪಕ್ಕದಲ್ಲಿ ಕಾರ್ ಪಾರ್ಕ್ ಮಾಡಿ ಹೊರಟೆವು...
ಈ ಸಂಪನ್ಮೂಲ ವ್ಯಕ್ತಿಗಳಿಗೆ ನಾಯಕರು ಸಂಪನ್ಮೂಲ ವ್ಯಕ್ತಿಗಳಿಗೆ ಸಂಪನ್ಮೂಲ ಶಿಕ್ಷಕರಾಗಿದ್ದವರು ನಲಿಕಲಿ ರವೀಂದ್ರ ಸಾರ್ ಅವರು..ಅವರೊಟ್ಟಿಗೆ ಹಿರಿಯರಾದ ರಾಮನಾಥನ್,ಗಂಗಾಧರ ಹೀರೇಮಠ್,ಬಸವರಾಜ ತೇಲಿ, ಪೂರ್ಣೇಶ್,ಪ್ರಶಾಂತ ಸುಜಾತ ಮುಂತಾದವರು ತಂಡದಲ್ಲಿದ್ದರು. ನಂಜನಗೂಡಿನ ನಂತರ ಯಾವುದೋ ಒಂದು ಡಾಬದಲ್ಲಿ ಊಟ ಮಾಡಿಕೊಂಡು ಕುಳಿತೆವು.
ಮೈಸೂರಿನಿಂದ ಕೊಡೈಕೆನಾಲ್ ಸುಮಾರು ಮುನ್ನೂರು ಕಿಲೊಮೀಟರ್ ಅಂತರ..ಆಗಸ್ಟ್ ತಿಂಗಳ ಆರಂಭ ಆದ್ದರಿಂದ ಕರ್ನಾಟಕ ಮತ್ತು ತಮಿಳುನಾಡಿನ ಬಾರ್ಡರ್ ನಲ್ಲಿ ಸ್ವಲ್ಪಮಟ್ಟಿಗೆ ಮಳೆಯ ಸಿಂಚನವೂ ಇತ್ತು.ಮಂಗಳಂ ಸಮೀಪ ರೈಲ್ವೇ ಕ್ರಾಸಿಂಗ್ ಗಾಗಿ TT ನಿಂತಿತ್ತು.ಕಾಕತಾಳೀಯ ವಾಗಿ ನಮ್ಮ ಗಾಡಿಯ ಪಕ್ಕ ಪೋಲಿಸ್ ವಾಹನವೂ ನಿಂತಿತ್ತು.ಅದರ ಮೇಲಿನ ರೆಡ್,ಬ್ಲೂ ಕಲರ್ ಗಳ ಸೈರನ್ ಲೈಟ್ ನೋಡಿ ವೀರಪ್ಪನ್ ಹತ್ಯೆಯ ದೃಶ್ಯ ನೆನಪಾಗಿ ಸೈಲೆಂಟಾದೆನು. ಕರ್ನಾಟಕ ಕೇರಳದಲ್ಲಿ ಮೇ ಕೊನೆ ಅಥವಾ -ಜೂನ್ ಆರಂಭದಲ್ಲಿ ಮುಂಗಾರು ಆರಂಭವಾದರೆ ತಮಿಳುನಾಡಿನ ಪ್ರದೇಶಗಳಲ್ಲಿ ಆಗಸ್ಟ್ ಮುಂಗಾರಿನ ಆರಂಭ.. ಆಗತಾನೇ ಹೊಲಗಳ ಉಳುಮೆ ಆರಂಭಿಸಿದ್ದರು. ನೀರಾವರಿ ಅನೂಕೂಲ ಇರುವವರು ತೆಂಗು ಮತ್ತು ಬಾಳೆ ಗಿಡಗಳು ಹದಿನೆಂಟು ಇಪ್ಪತ್ತು ಅಡಿ ಎತ್ತರವಾಗಿ ಬೆಳೆದ ಆ ನುಣುಪಾದ ಬಾಳೆಗಿಡಗಳನ್ನು ನೋಡಿ ದೇವಲೋಕದ ಅಪ್ಸರೆ ರಂಬೆ ಹೇಗಿದ್ದಿರಬಹುದು? ವಿಷ್ಣುವು ಒಮ್ಮೇ ರೆಂಬೆಯನ್ನು ಭೂ ಲೋಕದಲ್ಲಿ ಬಾಳೆಗಿಡವಾಗಿ ಜನಿಸು ಎಂದು ಶಾಪ ಕೊಟ್ಳೆಟಿದ್ದನಂತೆ.ಅದಕ್ಕೆ ಅವು ಅಷ್ಟು ಲಾವಣ್ಯ ನುಣುಪು ನಾಜೂಕಾಗಿರುತ್ತಾವಂತೆ.ಸೋ ಈ ಕವಿ ಪುಂಗವರು ಹೆಣ್ಣನ್ನು ಯಾವ ಯಾವ ಕಾರಣಕ್ಕೆ ಬಾಳೆ ಗಿಡದಲ್ಲಿ ಕಂಡಿರಬಹುದು ಎಂಬುದರ ಬಗ್ಗೆ ಚಿಂತನೆ ಮಾಡುತ್ತಿರುವಾಗ ನಮ್ಮ ಟೂರ್ ಮ್ಯಾನೇಜರ್ ಆದಂತಹ ರಾಮನಾಥ್ ಸರ್ ಅವರು ಪಳನಿ ಎಷ್ಟು ದೂರ ಇದೆ ಡ್ರೈವರ್ ಸಾಹೇಬ್ರೇ?? ಎಂಬ ಪ್ರಶ್ನೆಗೆ ಡ್ರೈವರ್ ಹತ್ತು ಕಿಲೋಮೀಟರ್ ಇದೆ ಉತ್ತರಿಸಿದರು.ಹತ್ತು ಹದಿನೈದು ನಿಮಿಷದಲ್ಲಿ ಐದುವರೆ ಸುಮಾರಿಗೆ ಪಳನಿಯ ಯಾವುದೋ ಒಂದು ಲಾಡ್ಜ್ ಮುಂದೆ ನಿಲ್ಲಿಸಿದರು. ನಾವು ಗಾಡಿಯಲ್ಲೇ ಕೂತಿದ್ದೇವೆ..ಆ ಡ್ರೈವರ್ ಹೋಗಿ "ತಂಬಿ.. ಸುಡು ತಣ್ಣಿ ಇರಕ್ಕಾ..??ಅಪ್ಪಡಿಯಾ... ಅಂಜಿ ರುಪಾಯ? ಪತ್ತು ರುಪಾಯ.. ಹ್ಹಾ ಹ್ಹಾ.. ಎಂದು ಎನೇನೋ ಮಾತನಾಡಿಕೊಂಡು ಬಂದು ಎಲ್ಲರಿಗೂ " ಸರ್ ಬಿಸಿ ನೀರು ಸಿಗತ್ತಂತೆ..ಒಂದು ಬಕೆಟ್ ಹತ್ತು ರುಪಾಯಿ... ಎಲ್ಲಾರೂ fresh up ಆಗಿ ಎಂದರು. ಎಲ್ಲರೂ ಹೋಗಿ fresh up ಆಗಿ ಅಲ್ಲೇ ಯಾವುದೋ ತಳ್ಳುವ ಗಾಡಿಯಲ್ಲಿ ಟೀ ಬಿಸ್ಕೆಟ್ ತಿಂದ ಮೇಲೆ ಗಾಡಿ ಹತ್ತಿ ಹತ್ತಿ ಎಂದರು.ಪಳನಿಯಿಂದ 60 km ಕೊಡೈಕೆನಾಲ್..ಇಷ್ಟು ಬಟ್ಟಬಯಲು ಸೀಮೆಯಂತಿದ್ದ ಪಳನಿಯ ದಾಟಿ ನೀಲಗಿರಿಬೆಟ್ಟಗಳನ್ನು ಹತ್ತಿದರೆ weather ಬದಲಾಗಿ ಹೋಯಿತು.ಶಾರ್ಪ ಕರ್ವ್ ಘಾಟ್ ರಸ್ತೆಯ ಟರ್ನಿಂಗ್ ಪೋರ್ಸ್ ಗೆ ಘಟ್ಟ ಹತ್ತುವ ಮುನ್ನ ತಿಂದ ಟೀ ಬಿಸ್ಕೆಟ್ ರಿವರ್ಸ್ ಬರಲು ನೋಡುತಿತ್ತು. ನೀಲ್ ಕುರಂಜಿ ಹೂ ನೋಡಬೇಕು ಎಂದು ಪೂರ್ಣೇಶ್ ಎಂದರೆ ಎಲ್ಲಿಯಾದ್ರೂ ತಿಂಡಿಮಾಡಬೇಕು ಮಾರ್ರೆ ಎಂದು..ಡ್ರೈವರ್ ಸಾಹೇಬರೇ ಎಲ್ಲಿಯಾದರೂ ಹೋಟೆಲ್ಗಳು ಕಂಡ್ರೆ ನಿಲ್ಲಸಿ ಎಂದು ರಾಮನಾಥ್ ಅವರು ಹೇಳುತ್ತಿದ್ದರು. ಸುಂದರ ವಾತಾವರಣದಲ್ಲಿ ಮನಮೋಹಕ ನೀಲಗಿರಿ ಬೆಟ್ಟಗಳ ಸಾಲುಗಳ ಸೌಂದರ್ಯ ಸವಿಯುತ್ತಾ ಮೂವತ್ತು ನಲವತ್ತು ಕಿಲೋಮೀಟರ್ ಸಾಗಿದ ನಂತರ ಕಾಫಿ ಎಸ್ಟೇಟ್ ಮದ್ಯದಲ್ಲಿ ಒಂದು ಹೋಟೆಲ್ ಕಾಣಿಸಿತು.ಇಡ್ಲಿ ವಡ ಪೂರಿ ದೊಸೆ ಇದ್ದುದರಿಂದ ಅವರವರಿಗೆ ಇಷ್ಟವಾದ ತಿಂಡಿ ತಿಂದು ಮುಂದೆ ಬರುತ್ತಿದ್ದೆವು. ಆ ನೀಲಗಿರಿ ಬೆಟ್ಟಗಳ ಮಡಿಲಲ್ಲಿ ಎಲ್ಲಿನೋಡಿದರೂ ಹಲಸು ಮತ್ತು ಬಟರ್ ಪ್ರೂಟ್ ಮರಗಳು ಫಲ ತುಂಬಿ ಬಾಗುತ್ತಿವೆ.. ನಮ್ಮ ಕಡೆ ಹಲಸಿನ ಹಣ್ಣು ಜೂನ್ ತಿಂಗಳಲ್ಲಿ ಫಲ ಬಂದು ಕೊನೆಯಾದರೆ ನೀಲಗಿರಿ ಅರಣ್ಯಗಳಲ್ಲಿ ಅದಾಗಲೇ ಆರಂಭ.. ನಿಸರ್ಗದ ನೋಟ ನೋಡುತ್ತಾ ಬರುತಿದ್ದ ನಮಗೆ ಮುಂದೆ ಎದುರಾದದ್ದು 'SILVER CASCADE' ಎಂಬ ಬ್ಯೂಟಿಪುಲ್ ವಾಟರ್ ಪಾಲ್ಸ್... ನೊರೆನೊರೆಯಾಗಿ ಬಿಳಿಯ ಧಾರೆಯಾಗಿ ಧರೆಗೆ ಬೀಳುವ ಮೋಹಕ ಪಾಲ್ಸ್ ನೋಡುವುದೇ ಹಬ್ಬ.. ಎಲ್ಲರೂ ಇಳಿದು ಪಾಲ್ಸ್ ನ ಸೊಬಗು ನೋಡುತ್ತಾ ಹತ್ತಾರು ಪೋಟೋಗಳನ್ನು ಕ್ಲಿಕ್ಕಿಸಿಕೊಂಡೆವು.
ಆಗ ತಾನೇ ಮಳೆ ಬಿಟ್ಟು ಮೋಡ ಸರಿದು ಬಿಸಿಲು ಭೂಮಿಗೆ ತಾಗುತಿತ್ತು.. ಆಹಾ... ಬಿಸಿಲು ಬಂದಿತು ಎಂದು ಚಳಿ ಕಾಯಿಸಿಕೊಳ್ಳುತ್ತಿದ್ದರೆ ನಮ್ಮ ಮೇನೇಜರ್ ರಾಮನಾಥನ್ ಅವರು ಹತ್ರಿ ಹತ್ರಿ.. ನೋಡುವುದು ಇನ್ನೂ ಜಾಸ್ತಿ ಇದೆ ಎಂದು ಕೂಗುತ್ತಿದ್ದರು. ನಂತರ ನಮ್ಮ ಪಯಣ ಶುರು ಆದದ್ದು Upper lake view ಎಂಬ view point ಕಡೆ.. ಆ ವೀವ್ ಪಾಯಿಂಟ್ ನೋಡಲು ಹೋಗಲು ಆರಂಬಿಸಿದ್ದು ಮಳೆ ಸುರಿಯಲು ಆರಂಭಿಸಿದ್ದು ಎರಡೂ ಒಮ್ಮೇಲೆ ಶುರುವಾಯಿತು. ದಟ್ಟ ಅರಣ್ಯದ ಮದ್ಯದಲ್ಲಿ ದಟ್ಟ ಟ್ರಾಫಿಕ್ ಮಧ್ಯೆ view point ನೋಡಲು ಹೋದರೆ ಆ ವಿಪರೀತವಾದ ಮಳೆಗೆ ಗಾಡಿ ಬಿಟ್ಟು ಇಳಿಯಾಲಾಗುತ್ತಿಲ್ಲ. ಕೆಲಹೊತ್ತಿನಲ್ಲಿ ಮಳೆ ತುಸು ಕಡಿಮೆಯಾಯಿತು. ಮಳೆ ಕಡಿಮೆಯಾದರೂ ಸೋನೆ ಮತ್ತು ದಟ್ಟವಾದ ಇಬ್ಬನಿ ಇದ್ದೇ ಇತ್ತು. ಆ upper lake view Point ನೋಡಲು ವೀವ್ ಪಾಯಿಂಟ್ ಲ್ಲಿ ನಿಂತರೆ ಆ ಲೇಕ್ ವೀವ್ ಕಾಣಲೇ ಇಲ್ಲ.. ಎತ್ತ ನೋಡಿದರೂ ನಮಗೆ ಕಂಡಿದ್ದು ದಟ್ಟವಾದ ಮಂಜು... ಕ್ಷಣ ಕ್ಷಣಕ್ಕೂ ಗಾಳಿಯ ವೇಗ ಹೆಚ್ಚಾದಂತೆ ಮಳೆಯ ಅಧಿಕವಾಗುತಿತ್ತು.
Upper lake ವೀವ್ ಪಾಯಿಂಟ್ ನೋಡಲು ಹೋದ ನಮಗೆ ಮಂಜಿನ ಧಾರೆಯಿಂದ ತುಸು ನಿರಾಸೆಯಾಯಿತಾದರೂ ಬೇರೆ ಸ್ಥಳಗಳನ್ನು ನೋಡಾಣ ಎಂದು man made lake ಕಡೆ ಹೋದೆವು. ಲೇಕ್ ಅಂದ್ರೇನೇ ಬೋಟಿಂಗ್.. ಚಿಟಪಟ ಮಳೆಯ ಮದ್ಯೆಯೂ ನಾವು ಎಲ್ಲರೂ ಬೋಟಿಂಗ್ ಟಿಕೆಟ್ ಪಡೆದು ಬೋಟಿಂಗ್ ಗೆ ಹೋದೆವು.ಊಟಿಯ ಬೋಟಿಂಗ್ ಮತ್ತು ಕೊಡೈಕೆನಾಲ್ ಬೋಟಿಂಗ್ ಲೋಕೇಶನ್ ಎರಡೂ ಒಂದೇ ಎನಿಸುತ್ತದೆ. ಆದರೂ ಆ ವೆದರ್ ಮತ್ತು ಸೀನ್ ಗೆ ಬೋಟಿಂಗ್ ಮಜಾ ಕೊಡುವುದು ವಿಭಿನ್ನ ಮತ್ತು ವಿಶೇಷ ಆಗಿರುತ್ತದೆ.
ಕೊಡೈಕೆನಾಲ್ ಬೋಟ್ ರೈಡಿಂಗ್..
ಬೋಟ್ ಹೌಸ್ ನಂತರ ನಮ್ಮ ಪಯಣ ಸಾಗಿದ್ದು ಗಾಲ್ಪ್ ಮೈದಾನ ನೋಡಲು.. ಎಡೆಬಿಡದೇ ಸುರಿಯುತ್ತಿದ್ದ ಮಳೆಯಲ್ಲಿ ಗಾಲ್ಪ್ ಮೈದಾನದ ಸುತ್ತಲೂ ತಿರುಗಿದೆವು ಆದರೆ ಒಳ ಹೋಗುವ ಯಾವ entrance ನಮಗೆ ಕಾಣಲಿಲ್ಲ.ಕೊನೆಗೂ ಒಂದು entrance ತಲುಪಿದರೆ ಅಲ್ಲಿ ನೂರಾರು ಯಾತ್ರಿಕರ ದಂಡು ನೆರದಿತ್ತು.ಆ ದಂಡಿಗೆ ಹೆದರಿದ ನಾವು ಅಷ್ಟೊತ್ತಿಗಾಗಲೇ ಹೊಟ್ಟೆಯಲ್ಲಿ ತಾಳ ಶುರುವಾದರಿಂದ ಹೋಟೆಲ್ ಹುಡುಕುತ್ತಾ ಗಾಲ್ಪ್ ಮೈದಾನ ನೋಡದೇ ಯಾವುದೋ ಒಂದು ಹೋಟೆಲ್ ನಲ್ಲಿ ಅವರವರಿಗೆ ಇಷ್ಟವಾದ ತಿನಿಸುಗಳನ್ನು ತಿಂದು ನಮ್ಮ ಪಯಣ ಪಳನಿಗೆ ರಿಟರ್ನ್ ಆಗುತ್ತಲಿತ್ತು.
ಪಳನಿಯಿಂದ ಕೊಡೈಕೆನಾಲ್ ಬರುವಾಗ ಸವಿಯದ ನಿಸರ್ಗದ ಸೊಬಗು ನಮಗೆ ಸಿಕ್ಕಿದ್ದು ಹಿಂದಿರುಗವಾಗ...
ಮಳೆಯ ಪ್ರಮಾಣ ಪೂರಾ ಕಡಿಮೆಯಾಗಿ ಕ್ಲಿಯರ್ ಬೆಳಕು ಬೆಟ್ಟಗಳ ಮೇಲೆ ಬಿದ್ದಿತ್ತು. ಹಸಿರು ವನ ರಾಶಿಯ ಮದ್ಯೆದಲ್ಲಿ ಬೆಳ್ಳನೆ ಯ ಮಂಜು ಸೌಂದರ್ಯವನ್ನು ಇಮ್ಮಡಿಗೊಳಿಸುತಿತ್ತು. ಅದ್ಭುತ ಸೀನರಿಗಳನ್ನು ನೋಡುತ್ತಾ
ಪಳನಿಯ ಲಾಡ್ಜ್ ಒಂದರಲ್ಲಿ ಆ ದಿನ ವಸತಿ ಮಾಡಿ ಮರುದಿನ ಮುಂಜಾನೆ ರೆಡಿಯಾದದ್ದು ಬೆಟ್ಟದ ಮೇಲಿರುವ ಪಳನಿ ಸ್ವಾಮಿಯ ದರ್ಶನಕ್ಕಾಗಿ..ಕಿಲೋಮೀಟರ್ ಗಿಂತ ಅಧಿಕ ಪೂಜಾ ಸಾಮಾಗ್ರಿಗಳ ವಿಶಾಲ ಅಂಗಡಿ ಮುಂಗಟ್ಟುಗಳು... ಅಷ್ಟೊಂದು ಅಂಗಡಿಗಳಲ್ಲಿ ಒಂದೇ ತೆರನಾದ ಐಟಮ್ಸ್ ಗಳು ಅದ್ಹೇಗೆ ಮಾರಾಟವಾಗುವವೋ ಎಂದು ಮಾತನಾಡುತ್ತಾ ನಾವು ತಲುಪಿದ್ದು ಬೆಟ್ಟದ ಮೇಲೆ ಹೋಗಲು ರೋಪ್ ವೇ train ಹತ್ರ.. ಈ ರೋಪ್ ವೇ ಟ್ರೈನ್ ನಲ್ಲಿ ಪಯಣ ಹೆಚ್ಚು ಥ್ರಿಲ್ ಕೊಡುವಂಥದ್ದು.. ಈ ಟ್ರೈನ್ ಸುಮಾರು 70-80 ಡಿಗ್ರಿ ಏರುಮುಖವಾಗಿ ಚಲಿಸುತ್ತದೆ. ಭಯ ಅನಿಸಿದರೂ ಇಂಥಹದೊಂದು ಅನುಭವ ಪಡೆಯಲೇ ಬೇಕು..
ಪಳನಿ ರೋಪ್ ಟ್ರೈನ್ ನ ಒಂದು ನೋಟ...
ರೋಪ್ ಟ್ರೈನ್ ಒಳಗಡೆ...
ಅನೇಕ ಸುತ್ತುಗಳ ಕ್ಯೂ ನಲ್ಲಿ ನಿಂತು ಪಳನಿಸ್ವಾಮಿ (ಮುರುಗನ್) ದರ್ಶನ ಪಡೆದು ಅದೇ ರೋಪ್ ಟ್ರೈನ್ ಮೂಲಕ ಹಿಂತಿರುಗಿದೆವು. ಪಳನಿಯಿಂದ ನೇರವಾಗಿ ನಾವು ಮೈಸೂರಿಗೆ ಹಿಂತಿರುಗಿ ಎಲ್ಲರಿಗೂ ಬೀಳ್ಕೊಟ್ಟು ಮರುದಿನ ಶಾಲೆಗೆ ಹಾಜರಾಗಬೇಕಿದ್ದರಿಂದ ರಾತ್ರಿನೇ ನಮ್ಮ ಜರ್ನಿ ಬಳ್ಳಾರಿ ಕಡೆಗೆ ಸಾಗಿತು..
✍️ ನಾಗೇಂದ್ರ ಬಂಜಗೆರೆ.
ನಿಜವಾಗ್ಲೂ ನಿಮ್ಮೊಳಗೆ ಒಬ್ಬ ಅದ್ಭುತ ಕತೆಗಾರ ಇದಾನೆ sir super story ನಾನು ಊಟಿ ಕೊಡೆಕೆನಾಲ್ ನೋಡಿದ್ದು. ನೆನಪಿಗೆ ಬಂತು ಬೆಸ್ಟ್ ಗುಡ್ ಲಕ್
ಪ್ರತ್ಯುತ್ತರಅಳಿಸಿಹಿಡಿರಿ ಅವನನ್ನು... ಬರಹ ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು..
ಅಳಿಸಿನಿಮ್ಮ ಈ ಪಯಣದ ಅನುಭವ ಕೊಡಾಯಿಕೇನಲಾಗೆ ಹೋದ ಹಾಗೆ ವರ್ಣನಿಯವಾಗಿತ್ತು ಸರ್ 🙏🙏
ಪ್ರತ್ಯುತ್ತರಅಳಿಸಿಲೇಖನ ಓದಿದ್ದಕ್ಕೆ ತುಂಬಾ ಧನ್ಯವಾದಗಳು..
ಪ್ರತ್ಯುತ್ತರಅಳಿಸಿಪ್ರಯಾಸದ ನಡುವೆಯೂ ಈ ಪ್ರವಾಸದ ಅನುಭವ ನಿಜಕ್ಕೂ ರೋಚಕ ವಾಗಿತ್ತು ಸರ್.ತುಂಬಾ ಖುಷಿಯಾಗಿತ್ತು.ಈ ಲೇಖನ ಓದಿ ಮತ್ತೆ ಆ ದಿನಕ್ಕೆ ಮನಸ್ಸು ಜಾರಿತು.
ಪ್ರತ್ಯುತ್ತರಅಳಿಸಿಅದ್ಭುತವಾಗಿ ಕಟ್ಟಿಕೊಟ್ಟಿದ್ದೀರ ಒಂದು ಅಬುಭವವನ್ನು ಸರ್. ನಾನೂ ತಮ್ಮೊಂದಿಗೆ ಅಂದು ಇದ್ದರೂ, ನೆನಪಿನಂಗಳದಿಂದ ಮರೆಯಾಗುತ್ತಿದ್ದ ಬೆನಪುಗಳನ್ನು ಮರುಕಳಿಸುವಂತೆ ಮಾಡಿದ್ದೀರ. ಮುಂದೆ ಪ್ರವಾಸ ಹೋಗುವವರಿಗೆ ಒಂದು ಗೈಡ್ ಸಹ ಇದು. ತಮ್ಮೊಳಗೊಬ್ಬ ಅದ್ಭುತ ಬರಹಗಾರನಿದ್ದಾನೆ. ನಿದ್ರಿಸಲು ಬಿಡಬೇಡಿ ಸರ್.
ಪ್ರತ್ಯುತ್ತರಅಳಿಸಿ