ನಾವು ಸಂತೋಷವಾಗಿ ಏಕೆ ಮತ್ತು ಹೇಗೆ ಜೀವಿಸಬೇಕು??
ನಾವು ಸಂತೋಷವಾಗಿ ಹೇಗೆ ಮತ್ತು ಏಕೆ ಇರಬೇಕು??
ಮೊನ್ನೆ ಅದ್ಯಾರೋ ಪ್ರಖ್ಯಾತ ವಿವಾಹಿತ ನಟಿಯೋರ್ವಳು ಪಕ್ಕದ ರಾಜ್ಯದ ಇನ್ನೊಬ್ಬ ವಿವಾಹಿತ ನಟನೊಂದಿಗೆ livin ನಲ್ಲಿದ್ದಾರಂತೆ..ಅವಳು ಗಂಡನನ್ನು ಬಿಟ್ಟು ಐದು ವರ್ಷ ಆಯಿತಂತೆ..! ಇದನ್ನೆಲ್ಲ ನೋಡಿದವರು -ನೆಟ್ಟಿಗರು ಇವಳೋ ಸಂಪನ್ನ ಗಂಡನಿಗೆ ಮೋಸ ಮಾಡಿದಳು ಎಂತಲೂ,ಅತ್ತ ಅವನೋ ಕಟ್ಟಿಕೊಂಡವಳನ್ನು ಬಿಟ್ಟು ಇನ್ನೊಬ್ಬಳನ್ನ ಕರ್ಕೊಂಡು ಬಂದಾನೆ... ಇವಳು ಎಷ್ಟು ದಿನವೋ..ಎಲ್ಲಾ ದುಡ್ಡು ಆಸ್ತಿಗಾಗಿ..ಹಾಗೆ ಹೀಗೆ ಅದು ಇದೂ ಎಂಥೆಲ್ಲಾ ಮಾತಾಡುತ್ತಿದ್ದುದು ನೀವು ಕೇಳಿರುತ್ತೀರಿ.ಕೆಲವು ಸುದ್ದಿವಾಹಿನಿಗಳಲ್ಲಿ ಬೇರೆ ಯಾವ ಸುದ್ದೀ ಸಮಾಚಾರವನ್ನು ಹಾಕದೇ ವಾರಗಟ್ಟಲೇ ಒಂದೇ ವಿಷಯವನ್ನು ಹಾಕಿಕೊಂಡು 'ಕಾಂಗರೋ ಕೊರ್ಟ್'ನಂತೆ ಮಾತಾಡುತ್ತಿರುವವರನ್ನು ನೀವು ನೋಡಿಯೇ ಇರುತ್ತೀರಿ.ಇಂತಹ ಸಾಂಸಾರಿಕ ಹದ್ದುಮೀರಿದ ಬಿಸಿ ಬಿಸಿ ಸುದ್ದಿಗಳು ನಮ್ಮ ಭಾರತೀಯ ಚಿತ್ರರಂಗದಲ್ಲಿ, ಅಷ್ಟೆ ಯಾಕೆ ನಮ್ಮ ಸಮಾಜದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾವೆ. ನಮ್ಮ ಸಮಾಜದಲ್ಲಿ ಇಂತಹವು ಕಂಡಾಗ ಛೀ.. ಥೂ ಎಂದು ಉಗಳಿ ಉಪ್ಪಾಕಿದರೂ ಕೆಲವು ದಿನಗಳಲ್ಲಿ ಇಂತಹ ಸುದ್ದಿಗಳು ತಣ್ಣಗಾಗಿ ಹೊಸ ಕೇಸ್ಗಳು ಮರಕಳಿಸುತ್ತಲೇ ಇರುತ್ತಾವೆ.ಆದರೂ ಇಂತಹ ಘಟನೆಗಳು ಯಾಕೆ ನಡೆಯುತ್ತಿವೆ...?? ಇಷ್ಟೆಲ್ಲಾ ಹೆಸರು,ಪ್ರತಿಭೆ ಎಲ್ಲಾ ಇದ್ದು 'ಯಾವುದೋ ಒಂದಕ್ಕೇ' ಅವರು ಮಾಡಿದ್ದು ಸರಿನಾ ತಪ್ಪಾ?? ಹೀಗೆ ಸಂಗಾತಿಯೊಂದಿಗೆ ಸರಿಯೆನಿಸುವವರೆಗೆ ಜೊತೆಗಿದ್ದು ಆಮೇಲೆ ಬಿಟ್ಟು ಯಾರೋ ಹಿಂದೆ ಹೋಗುವುದು ಇಂತಹದೊಂದು ಅಂಶ ಎಲ್ಲಾ ಜೀವಿಗಳಲ್ಲಿ ಜೀವಾಂತವಾಗಿರಲು 'ಜೀವಾಂತ ಕಾರಣ' ಏನಿರಬಹುದು ಎಂಬುದರ ಬಗ್ಗೆ ಜೈವಿಕ ಮತ್ತು ಮನೋವೈಜ್ಞಾನಿಕ ಕಾರಣಗಳ practical ಒಳನೋಟ ನೋಡುವುದಾದರೆ...
ನಮ್ಮ ಮನಸ್ಸಿಗೆ ಸಂತೋಷವನ್ನು ನೀಡುವ ವಸ್ತು,ವ್ಯಕ್ತಿ,ಸ್ಥಳ,ಸಂದರ್ಭಗಳನ್ನು ಹೆಚ್ಚು ಇಷ್ಟ ಪಡುತ್ತೇವೆ.ಅವು ಎಷ್ಟು ಬಾರಿ ಎದುರುಗೊಂಡರೂ ಆ ಎಲ್ಲಾ ಸಂಧರ್ಭಗಳಲ್ಲೂ ನಮ್ಮ ಮನಸ್ಸು ಪ್ರಪುಲ್ಲವಾಗಿ ಸಂತಸದೀ ಹಾಯೆನಿಸುವಂತಹ ಹಿತಕರ, ಸಿಹಿ ಸುಮಧುರ ವಾಗಿ, ಯಾವೆಲ್ಲಾ ಪದಗಳ ಬಳಸಿದರೂ ಒಟ್ಟಾರೆಯಾಗಿ ' ನಗುವಿನ ಸಂತಸ' ಇದ್ದೇ ಇರುತ್ತದೆ. ಅದೇ ಒಂದು ಸ್ಥಳ, ವ್ಯಕ್ತಿ, ವಸ್ತು, ಸಂದರ್ಭ ನಮಗೆ ಬೇಜಾರು ಮಾಡಿದ್ದು ಎದುರಾದರೆ ಎಂದೋ ನಡೆದು ಹೋದ ಕಹಿ ಗಳಿಗೆಯು ಪ್ರತೀ ಬಾರಿ ನೆನೆದಾಗಲೂ ಅಂದು ನಾವು ಅನುಭವಿಸಿದ್ದ ಕೋಪ,ಕ್ರೋಧ,ವ್ಯಥೆ,ನಿರಾಶೆ,ಹತಾಶೆಯಂತಹವುಗಳು ಎಷ್ಟು ಬಾರಿ ನೆನೆದಾಗಲೂ ನಮ್ಮ ಶರೀರ ಮತ್ತು ಮನಸ್ಸು ಮಾನಸಿಕವಾಗಿ ಹಿಂಸೆ ಎನಿಸಿ ಮನಸ್ಸು ಜರ್ಜರಿತವಾಗಿ ನೊಂದು ಬಳಲುತ್ತದೆ.ಆ ಸನ್ನಿವೇಶದ ಮುಂದೆ ಮುಂದುವರೆಯಲು ಇಚ್ಚಿಸದೇ ಇಂತಹ ದೌರ್ಭಾಗ್ಯ ಎಂದೂ ಬಾರದಿರಲಿ ಎಂದು ಕೋರಿಕೊಳ್ಳುತ್ತೇವೆ. ಈ ಎರಡೂ ಘಟನೆಗಳನ್ನು ನೋಡಿದರೆ ಎಲ್ಲಾ ಮನುಷ್ಯರು ಇಷ್ಟ ಪಡುವುದು ಸಂತಸದಾಯಕ ಆನಂದದ ಕ್ಷಣಗಳನ್ನು.. ಅಂದರೆ ಅಸಂಖ್ಯಾತ ಜೀವಕೋಶಗಳಿಂದಾದ ದೇಹ ಮತ್ತು ಮನಸ್ಸು ನಮ್ಮ ಜೀವಕೋಶಗಳಿಗೆ ಬೇಕಾದ ಪ್ರೋಟಿನ್,ವಿಟಮಿನ್ ಮಿನರಲ್ಸ್ ಇನ್ನಿತರ ಅಗತ್ಯ ಪೋಷಕಾಂಶಗಳಂತೆ ಜೀವಕೋಶಗಳು ಹೆಚ್ಚು ಇಷ್ಟಪಡುವುದು ಸಂತೋಷವನ್ನು.ಅದೂ ಸದಾ ಉಲ್ಲಾಸವಾಗಿರುವಂತಹ ಮನಸ್ಸನ್ನು.ಅಂದರೆ ನಮ್ಮ ಜೀವಕೋಶಗಳು ತಮ್ಮ ಜೀವಿತಾವಧಿಯವರೆಗೂ ಸಂತಸದಲ್ಲಿಯೇ ಕಾಲಕಳೆಯುತ್ತಾವೆಯೇ ಹೊರತು ದುಃಖದ ಕ್ಷಣಗಳನ್ನಲ್ಲ ಎಂದಾಯಿತು. ಅದಕ್ಕೆ ಬಹುಶಃ ಹಿರಿಯರು / ನಮ್ಮ ಶ್ರೇಯೋಭಿಲಾಷಿಗಳು ಆಶೀರ್ವದಿಸಿ ಹೇಳುವುದು "ಜೀವನ ಪೂರಾ ನಗು ನಗುತಾ ಸಂತೋಷವಾಗಿರಿ" ಅಂತ...ಹೌದಲ್ಲವೇ??
ಮಾನವನ ದೇಹವು ಸಂಪೂರ್ಣ ಜೀವಕೋಶಮಯ. ಮಾನವನ ದೇಹದಲ್ಲಿ ಸುಮಾರು 37.2 ಟ್ರಿಲಿಯನ್ (3720 ಶತಕೋಟಿ) ನಷ್ಟು ಜೀವಕೋಶಗಳಿಂದ ಈ ದೇಹ ಆಗಿದೆ...ಈ ಅಖಂಡ ಜೀವಕೋಶಗಳು ನರವ್ಯವಸ್ಥೆಯ ನಿಯಂತ್ರಣಕ್ಕೊಳಪಟ್ಟು ಮೆದುಳಿನ ಕಾರ್ಯಕ್ಕೆ ಏಜೆಂಟ್ ಗಳಂತೆ ವರ್ತಿಸುವ 'ಹಾರ್ಮೋನ್ ಗಳು' ಮನುಷ್ಯನ ಸಂತೋಷ,ದುಃಖ, ಹಾವ,ಭಾವ,ಭಯ,ನಿರಾಸೆ, ಖಿನ್ನತೆ,ಒಂಟಿತನ,ವಿನಾಕಾರಣ ಅಳುವಂತಹ ವರ್ತನೆ,ಕೋಪ,- ತಾಪ,ಹಸಿವು-ನಿದ್ರೆ ಆಸೆ-ಆಕಾಂಕ್ಷೆ ಹೀಗೆ ಸಂಪೂರ್ಣವಾಗಿ ಮನುಷ್ಯನ ಜೀವಿತಾವಧಿಯಲ್ಲಿ ಮಾಡಬೇಕಾಗಿರುವುದು & ಮಾಡಬಾರದವುಗಳೆಲ್ಲವೂಗಳನ್ನು ನಮ್ಮ ದೇಹದಲ್ಲಿರುವ ಹಾರ್ಮೋನ್ ಗಳು ಮನುಷ್ಯನ ಪಂಚೇಂದ್ರಿಯಗಳ ಮೂಲಕ ಮಾಡಿಸುತ್ತಾವೆ.ಈ ಜ್ಞಾನೇಂದ್ರಿಯಗಳು ನಮಗೆ ಒಳ ಮತ್ರು ಹೊರ ಹೋಗುವ ಜ್ಞಾನದ ಹೆಬ್ಬಾಗಿಲುಗಳಾಗಿರುವಂತೆ ಅಜ್ಞಾನ ಪ್ರತಿನಿಧಿಗಳಾಗಿಯೂ, ಕ್ರೌರ್ಯ,ಹಿಂಸೆ ನಡೆಯುವುದೂ ಕೂಡ ಇದೇ ಜ್ಞಾನೇಂದ್ರಿಯಗಳ ದ್ವಾರದ ಮುಖೇನವೇ ಆಗಿದೆ.
ನಮ್ಮ ಮೆದುಳು ಮತ್ತು ಹಾರ್ಮೋನ್ ಗಳ ಪರಸ್ಪರ ಕ್ರಿಯೆ ಮತ್ತು ಪ್ರತಿಕ್ರಿಯೆ ನಮ್ಮ ಮೆದುಳಿನಲ್ಲಿ ನಡೆಯುವ ರಾಸಾಯನಿಕ ಪರಿಣಾಮ.ಯಾವುದೇ ಸಂದರ್ಭದಲ್ಲಿ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳಿಗೆ ತಕ್ಕಂತೆ ಮೆದುಳಿಗೆ ಸಂಜ್ಞೆಗಳು(ಸೂಚನೆಗಳು)ಹೋದಾಗ ನಮ್ಮ ಮೆದುಳೇ ಆ ಸೂಚನೆಗಳಿಗೆ ತಕ್ಕಂತೆ ಹಾರ್ಮೋನುಗಳನ್ನು ಉತ್ಪತ್ತಿಮಾಡಲು ನಿರ್ದೇಶಿಸುತ್ತದೆ.
ಒಂದು ಮಗುವಿನ ಜೊತೆಗೆ ಕೆಲವೇ ನಿಮಿಷಗಳು ಜೊತೆಯಲ್ಲಿದ್ದು ಸ್ಪರ್ಶ ಮತ್ತು ಆತ್ಮೀಯತೆಯ ಮೂಲಕ ಆ ಮಗುವನ್ನು ಮಾತನಾಡಿಸಿದರೆ ಕೆಲ ಸಮಯದ ನಂತರ ನಮ್ಮನ್ನು ನೋಡಿ ಮಂದಸ್ಮಿತ ನಗುವಿನೊಂದಿಗೆ ನಮ್ಮೊಂದಿಗೆ ಸಲುಗೆಯಿಂದ ಆಟ ಆಡಲು ಪ್ರಾರಂಭಿಸುತ್ತದೆ. ಯಾಕೆ ಹೇಳಿ..?? ನಾವು ಮಾಡಿದ ಸ್ಪರ್ಶ ಮತ್ತು ಪ್ರೀತಿಯ ಮಾತುಗಳಿಗೆ ಆ ಮಗುವಿನ ಜೀವಕೋಶಗಳು ನಮ್ಮ ಸ್ಪರ್ಶದ ನಗುವಿನ ನುಡಿಗಳನ್ನು ಇಷ್ಟಪಟ್ಟವು. So ಮೆದುಳಿನಲ್ಲಿ ಯಾವುದೋ ಹಾರ್ಮೋನ್ ಬಿಡುಗಡೆಯಾಯಿತು ಅದರ ಪರಿಣಾಮ ಆ ಮಗು ನಮ್ಮೊಂದಿಗೆ ಆತ್ಮೀಯವಾಗಿ ಬೆರೆತು ಆಡುವಂತಾಯಿತು.ಇಲ್ಲಿ ಆ ಮಗುವಿಗೆ ಮಾಡಿದ ಸ್ಪರ್ಶದ ನುಡಿಗಳು ಮತ್ತು ಪ್ರೀತಿಯ ನುಡಿಗಳಿಗೆ ಮಗುವಿನಲ್ಲೂ,ಮತ್ತು ಮಾತನಾಡಿಸಿದವರಲ್ಲೂ ಕೆಮಿಸ್ಟ್ರಿ ಉಂಟಾಗುತ್ತದೆ. ಇದರ ಪರಿಣಾಮವೇ ವಯಸ್ಸಿನ ಅಂತರದಂತಹ ಯಾವುದೇ ಇತಿಮಿತಿ ಇಲ್ಲದೇ ಇಬ್ಬರ ಮನಸ್ಸೂ ಆನಂದವಾಗಿ,ಆತ್ಮೀಯವಾಗಿ ಆಡುವಂತಾಯಿತು.
ಈ ಮೇಲೆ ಹೇಳಿರುವ ಅಂಶ ವೈಜ್ಞಾನಿಕವಾಗಿ ಸತ್ಯವಲ್ಲವೇ??ಇದನ್ನೆ ನಾವು 'ಹಾರ್ಮೋನ್ಸ್ ಪರಿಣಾಮ' ಎನ್ನುವುದು.
ನಮ್ಮ ದೇಹದವು 50 ರೀತಿಯ ಹಾರ್ಮೋನ್ಸ್ ಗಳನ್ನು ಬಿಡುಗಡೆ ಮಾಡುತ್ತದೆ. ಅದರಲ್ಲಿ ಏಳು ರೀತಿಯ ಹಾರ್ಮೋನ್ ಗಳು ಬಹು ಮುಖ್ಯವಾದವು ಎಂದು ವರ್ಗಿಕರಿಸಲಾಗಿದೆ. ಆ ಏಳು ಬಹುಮುಖ್ಯ ಹಾರ್ಮೋನ್ಸ್ ಗಳಲ್ಲಿ ನಾಲ್ಕು ಹಾರ್ಮೋನ್ಸ್ ಗಳು ನಮ್ಮ ಮನಸ್ಸಿಗೆ,ನಮ್ಮ ಜೀವಕೋಶಗಳಿಗೆ ಬರೀ 'ಸಂತಸ'ವನ್ನೇ ಉಂಟುಮಾಡುವಂತಹ ಹಾರ್ಮೋನ್ಸ್ ಗಳು ಆಗಿವೆ. ಅಂತಹ ಸಂತೊಷದ ಹಾರ್ಮೋನ್ ಗಳು ಯಾವ್ಯಾವು ಅಂದರೆ..
1️⃣👉ಎಂಡೋರ್ಪಿನ್
2️⃣👉ಡೋಪಮೈನ್
3️⃣👉ಸೇರೋಟನೈನ್
4️⃣👉ಆಕ್ಸಿಟೋಸಿನ್
🔴 ಎಂಡೋರ್ಪಿನ್ ಹಾರ್ಮೋನ್;
ನಾವು ಕಾಮಿಡಿ ನೋಡಿ ನಗುವಾಗ,ಜೋಕ್ಸ್ ,ಹಾಸ್ಯ ಬರಹಗಳನ್ನು ಓದಿದಾಗ,ಸಿನಿಮಾ ನೋಡುವಾಗ,ಸಮವಯಸ್ಕರೊಂದಿಗೆ ಹರಟೆ ಹೊಡೆಯುವಾಗ ನಮ್ಮ ಮೆದುಳಿನಲ್ಲಿ ಎಂಡೋರ್ಪಿನ್ ಬಿಡುಗಡೆಯಾಗುತ್ತದೆ.ಇದರ ಸಾಲಿಗೆ ಹಲವು ಪ್ರಾಣಿ ಪಕ್ಷಿಗಳ ಚಿನ್ನಾಟ ನೋಡುವಾಗಲೂ ಎಂಡೋರ್ಪಿನ್ ನ್ನು ನಾವು ಪಡೆಯಬಹುದು. ಕಾಮಿಡಿ ಯುನಿವರ್ಸಲ್ ಆಗಿ ಎಲ್ಲರಿಗೂ ಇಷ್ಟ ಆಗುವಂತಹದ್ದು. ಅದರಲ್ಲೂ ಕೆಲವರು ಕಾಮಿಡಿ ಫಿಲಂ /ಸೀನ್ಸ್ ಗಳನ್ನು ಹೆಚ್ಚುಹೆಚ್ಚು ಇಷ್ಟ ಪಟ್ಟು ನೋಡುವರು. ಕೆಲವರಂತೂ ನಿತ್ಯ ಜೀವನದ ಸನ್ನಿವೇಶಗಳಲ್ಲೂ ಮನೆಯಲ್ಲಿ, ಸ್ನೇಹಿತರು, ಕಚೇರಿಗಳಲ್ಲೂ ಕಾಮಿಡಿಗಾಗಿಯೇ ಮಾತಾಡುತ್ತಿರುವವರು.ಎಂಡೋರ್ಪಿನ್ ಬಿಡುಗಡೆಗೆ ಸಹಾಯ ಮಾಡುವಂತಹ ಕೆಲಸಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ.ವ್ಯಾಯಾಮ ಮಾಡುವಾಗ ಹಿತ ಎನಿಸುವುದೂ ಕೂಡ ಇದೇ ಹಾರ್ಮೋನಿನಿಂದಲೇ. ಈ ಪಟ್ಟಿಗೆ ಸ್ಟಾರ್ ನಟ ನಟಿಯರನ್ನು ಬೇಟಿಮಾಡಿ ಮಾತನಾಡಿಸಿದಾಗಲೂ, ಸಾಕುಪ್ರಾಣಿಗಳಾದ ಬೆಕ್ಕು ನಾಯಿ ಇಂತವುಗಳನ್ನು ಮಾತನಾಡಿಸುವುದೂ ,ಆ ಪ್ರಾಣಿಗಳಿಗೆ ಹಿಂಸಿಸಿ ಖುಷಿ ಪಡುವುದೂ ಸೇರಿದೆ.
🔴 ಡೋಪಮೈನ್;
✅ ಸಾಮಾಜಿಕ ಜಾಲತಾಣಗಳಾದ WhatsApp, Instagram, Facebook ನಂತಹವುಗಳಲ್ಲಿ ನಮ್ಮ ಸ್ಟೇಟಸ್ ಗಳಿಗೋ /ನಮ್ಮ ಪೋಟೋಗಳಿಗೋ/Reels ಗಳಿಗೆ likes ಕೊಟ್ಟರೆ /ಮೆಚ್ಚಿ ಮಾತಾಡಿದರೆ ನಮಗೆ ಸಂತೋಷ ಎನಿಸುವುದಿಲ್ಲವೇ?? ಈ ಸಂತೋಷ ಎನಿಸುವುದು 'ಡೋಪಾಮೈನ್'ಎಂಬ ಹಾರ್ಮೋನ್ ನಮ್ಮ ಶರೀರದಲ್ಲಿ ಉತ್ಪತ್ತಿಯಾದಾಗ..ಈ ಸಂತಸಕ್ಕಾಗಿಯೇ ನಾವು ಆಗಾಗ ಸ್ಟೇಟಸ್ update ಮಾಡಿ ಎಷ್ಟು views ಆದವು,ಎಷ್ಟು likes ಬಂದವು ಎಂದು ಕೈಯಲ್ಲಿ ಮೊಬೈಲ್ ಹಿಡಿದು ನೋಡುತ್ತಲೇ ಇರುತ್ತೇವೆ.
✅ ನಿಮ್ಮ ಮನೆಯಲ್ಲಿ ನಿಮ್ಮ ಹೆಂಡತಿಗೋ/ಪತಿಗೋ ಅವರು ಮಾಡಿದ ಕೆಲಸಕ್ಕೆ ಹೊಗಳದೇ "ಇದೇನು ಹಿಂಗೈತೇ ಥೂ..." ಎಂದು ಒಮ್ಮೆ ಅಂದು ನೋಡಿ..ಅವರ reaction ಹೇಗಿರತ್ತೆ ಅಂತ..
ಮರುದಿನ ಅದೇ ವ್ಯಕ್ತಿಗೆ ಯಾವುದಾಕ್ಕಾದರೂ ವ್ಹಾವ್ ಸೂಪರ್ ಸಕ್ಕಾತ್ತಾಗಿದೆ... ಎಂದು ನೋಡಿ .. ಎರಡರ ರಿಯಾಕ್ಷನ್ ಗಳು ಬಹಳ ವಿಭಿನ್ನವಾಗಿ ಇರುತ್ತಾವೆ.ಮೊದಲ ಸನ್ನಿವೇಶದಲ್ಲಿ ಸಿಟ್ಟಿನಿಂದ ಎಗರಾಡಿದರೆ ಎರಡನೇ ಸನ್ನಿವೇಶದಲ್ಲಿ ನಕ್ಕು ನಲಿಯುತ್ತಾರೆ... ಈ ನಲಿವಿಗೆ ಕಾರಣ ಪ್ರಶಂಸೆ.ಪ್ರಶಂಸಾ ಮಾತುಗಳಾಡಿದಾಗ ಡೋಪಾಮೈನ್ ಉತ್ಪತ್ತಿಯಾಗುತ್ತದೆ.So ನಿಮ್ಮ ಮನೆಯ ಶ್ರಮಜೀವಿಗಳಿಗೆ ಸಾಧ್ಯವಾದಷ್ಟೂ ಜಾಸ್ತಿ ಆಗಾಗ ಮೆಚ್ಚಿ ಹೊಗಳುತ್ತಿರಿ.. ಈ ಡೋಪಾಮೈನ್ ಅವರ ದಿನವಿಡೀ ಶ್ರಮವನ್ನು ಹಗುರವಾಗಿಸುವುದು.
✅ ನೀವು ನೋಡಿರಬಹುದು ಬಡವರಿಂದ ಶ್ರೀಮಂತವರೆಗೂ ಯಾವುದೇ ವಯಸ್ಸಿನ ಅಂತರ ಇಲ್ಲದೇ ರಸ್ತೆಯ ಬದಿಗಳಲ್ಲಿ ಗೋಲ್ಗಪ್ಪ,ಪಾನಿಪೂರಿ,ಗೊಬಿ ಮಂಚೂರಿ,ಗಿರ್ಮಿಟ್,ಐಸ್ ಕ್ರಿಮ್ ಇತ್ಯಾದಿಗಳನ್ನು ತಿನ್ನುತ್ತಿರುತ್ತಾರೆ. ಇವೆಲ್ಲವನ್ನೂ ತಿಂದಾಗ ಮನಸ್ಸಿಗೆ ಸಂತೋಷ ಎನಿಸುವುದು.ಅದಕ್ಕೆ ಕಾರಣ ಡೋಪಾಮೈನ್ ಹಾರ್ಮೋನ್ಸ್ .
✅ ಹಾಗೆಯೇ ನೀವು ಯಾವುದಾದರೂ ಶಾಪಿಂಗ್ ಮಾಲ್ ಗೆ ಹೋದಾಗ ನೀವು ನೋಡಿರಬಹುದು. ಅಲ್ಲಿ ಕೆಲವು ಜೋಡಿಗಳು/ಯುವ ಪ್ರೇಮಿಗಳು ಶಾಪಿಂಗ್ ಎಂಬುದು ಒಂದು ಹಬ್ಬ ಎಂಬಂತೆ ಸಂಭ್ರಮಿಸುತ್ತಾರೆ.ಈ ಸಂಭ್ರಮದಲ್ಲಿ ಬಿಲ್ ಎಷ್ಟಾಗಬಹುದೆಂಬ ಆಲೋಚನೆಯೂ ಇರದೆ ಕೊಳ್ಳುವ ಸಂತೋಷದಿಂದ ಮಗ್ನರಾಗಿರುತ್ತಾರೆ. ಅಂದರೆ ಹೊಸ ವಸ್ತುಗಳನ್ನು ಕೊಂಡಾಗಲೂ ಕೂಡ ಡೋಪಾಮೈನ್ ಹಾರ್ಮೋನ್ಸ್ ನಿಂದ ಆಗುವ ಸಂತೋಷವೇ ಇದಕ್ಕೆ ಕಾರಣ.ಮನೆಯ ಒಳಗಡೆಯ ಇದ್ದು ಬೇಜಾರಾಗಿದೆ ಎಂದು ಒಂದು ಸುತ್ತು ಬಿಸಿಲಿನಲ್ಲಿ ಓಡಾಡಿಕೊಂಡು ಬಂದರೂ ಡೋಪಾಮೈನ್ ಸಿಗುತ್ತದೆ.
✅ ಹೆಣ್ಣಿಗೂ ಹೂವಿಗೂ ಅವಿನಾಭಾವ ಸಂಬಂಧ.ಹೂವನ್ನು ನೋಡಿ ಹೆಣ್ಣನ್ನು ಸೃಷ್ಠಿಸಲಾಯಿತೋ ಅಥವಾ ಹೆಣ್ಣನ್ನು ನೋಡಿ ಹೂವನ್ನು ಸೃಷ್ಠಿಸಲಾಯಿತೋ ಎಂಬ confusion ನನಗೆ ಸದಾ ಕಾಡುವುದು. ಹೆಣ್ಣಿಗೆ ಎಷ್ಟೇ ಸಮಸ್ಯೆಗಳು ಇದ್ದರೂ ಒಂದು ಮೊಳ ಹೂವಿನ ಘಮದಲ್ಲಿ ಸಮಸ್ಯೆಗಳನ್ನು ಮರೆಯುವಳು.all boys n gents flowers are mood changers...if she sad.. Give to her flower.. She ll happy all that day...
ಈ ಹೂವಿನ ಪರಿಮಳ ಕ್ಕೆ ಡೋಪಾಮೈನ್ ಹಾರ್ಮೋನ್ ಬಿಡುಗಡೆಯಾಗಿ ಸಂತಸದಲ್ಲಿ ಮುಳುಗಿಹೋಗುವಳು.
✅ ಕೆಲವು ಭಿನ್ನ ರೀತಿಯ ಹೇರ್ ಸ್ಟೈಲ್ ಮಾಡಿಕೊಳ್ಳುವವರು.ಉದಾಹರಣೆಗೆ ಹುಡುಗಿಯರ pony tail,French braid,finger wave,bun ನಂತಹ ಹೇರ್ ಸ್ಟೈಲ್ ಮಾಡಿದರೆ ಹುಡುಗರು buzz ಕಟ್,crew cut,French crop.. ಡಿಸೈನ್ ಡಿಸೈನ್ ಗಡ್ಡ ಬಿಡುವುದು, ಬ್ಯೂಟಿ ಪಾರ್ಲರ್,ಮೇಕಪ್ ಮತ್ತು ವಿವಿಧ ಪ್ಲೇವರ್ನ scents ಬಳಸಿ ಖುಷಿ ಪಡುವುದು ಇದರ ವ್ಯಾಪ್ತಿಗೆ ಬರುತ್ತದೆ.
✅ ನೆಗೆಟಿವ್ face ಹೊಂದಿರುವ ಇದು ಮದ್ಯ,ಸೀಗರೇಟ್ ಮತ್ತು ಮಾದಕ ವ್ಯಸನಗಳಂತಹ ಚಟುವಟಿಕೆಗಳಿಂದಲೂ ಡೋಪಾಮೈನ್ ಸಿಗುತ್ತದೆ. ಈ ಡೋಪಾಮೈನ್ ಎನ್ನುವ 'ಕಿಕ್' ಗೋಸ್ಕರವೇ ಬಾರ್ ಗಳ ಮುಂದೆ 'ಕಿಕ್ಕಿರಿದ' ಜನಸ್ತೋಮವನ್ನು ಯಾವಾಗ ಬೇಕಾದರೂ ನೋಡಬಹುದು.
🔴 ಸೇರೋಟಿನೈನ್;
ನಾವು ಯಾರಿಗಾದರೂ ಏನಾದರು ಒಂದು ವಸ್ತುವನ್ನೋ/ಮಾಹಿತಿಯನ್ನು ಕೊಟ್ಟು ಸಹಾಯ ಮಾಡಿದಾಗ ನಮ್ಮ ಮನಸ್ಸು ಕೆಲಕಾಲ ಸಾರ್ಥಕ ತೃಪ್ತ ಭಾವದಿಂದ ನನ್ನಿಂದ ಏನೋ ಸಹಾಯವಾಯಿತು ಎಂಬ ಹಿತವೆನಿಸುವಂತಹ ಮನಸ್ಥಿತಿಯಲ್ಲಿ ಕೆಲಸಮಯ ಇರುತ್ತದೆ.ಯಾರಿಗಾದರೂ ಅಡ್ರೆಸ್ ಹೇಳುವಂತಹ ಸಣ್ಣಪುಟ್ಟ ಸಹಾಯ ಮಾಡಿದರೂ ಧನ್ಯತಾ ಭಾವ ನಮ್ಮಲ್ಲಿ ಉಂಟಾಗುತ್ತದೆ.ಇದಕ್ಕೆ ಕಾರಣ ಸೇರೋಟಿನೈನ್ ಎಂಬ ಹಾರ್ಮೋನ್.ಇಂತಹ ಸಣ್ಣಪುಟ್ಟ ಸಹಾಯಗಳು ಮಾಡಿದಾಗ ನಮ್ಮ ಮನಸ್ಸು ಮುದಗೊಂಡು ನಮ್ಮ ಜೀವಕೋಶಗಳನ್ನು ಉತ್ತೇಜಿಸುತ್ತದೆ.ಅದಕ್ಕಾಗಿ ಕೆಲವರು ವಿವಿಧ ಸಂಘ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿ ಅವರಿವರ ಕೆಲಸ ಮಾಡಿಕೊಡುವರು.(ಸ್ವಾರ್ಥ ಪರ ಲಾಭದ ಉದ್ದೇಶ ಹೊಂದದೇ ಇರುವವರು)
🔴 ಆಕ್ಸಿಟೋಸಿನ್;
ಲವ್,ರೊಮ್ಯಾಟಿಂಕ್ ಹಾರ್ಮೋನ್ ಎಂದು ಕರೆಯಲ್ಪಡುವ ಹಾರ್ಮೋನ್ ಇದು. ಸಂಬಂಧಗಳ 'ಬಂಧ'ವನ್ನು ಗಟ್ಟಿಗೊಳಿಸುವ, ವ್ಯಕ್ತಿ ವ್ಯಕ್ತಿಗಳ ನಡುವೆ ನಂಬಿಕೆ ಮತ್ತು ಬಾಂಧವ್ಯ ಸುಗಮಗೊಳಿಸುವ,ನಾನು ನನ್ನವರು ನಮ್ಮವರು ಎಂಬ ಸ್ವಾರ್ಥಪರತೆ ಉಂಟಾಗುತ್ತದೆ. ಪರಸ್ಪರ ಗಂಡು -ಹೆಣ್ಣಿನಲ್ಲಿ ತಮ್ಮ ತಮ್ಮ ಲೈಂಗಿಕ ಸಂಗಾತಿಗಳಲ್ಲಿ ಬಾಂಡಿಂಗ್ ಹೆಚ್ಚಿಸುವ, ನಂಬಿಕೆಯ ಅತ್ಯುನ್ನತ ಮಟ್ಟವನ್ನು ತೋರಿಸುವ ರಾಸಾಯನಿಕ ವ್ಯವಸ್ಥೆಯೇ ಆಕ್ಸಿಟೋಸಿನ್ ಹಾರ್ಮೋನ್ಸ್ ಮಾಡುವ ಕಾರ್ಯ.ಇದು ಸಾಮಾನ್ಯವಾಗಿ ಲೈಂಗಿಕ ಚಟುವಟಿಕೆಯ ಪರಾಕಾಷ್ಠೆ ಯ ಸಮಯದಲ್ಲಿ ಬಿಡುಗಡೆಯಾಗುವ ಈ ಹಾರ್ಮೋನ್ ಪ್ರೀತಿ, ಸಂತೋಷ ಮತ್ತು ಸಂಬಂಧಗಳ ಆಳದ ಅಡಿಪಾಯ ಆಗಿದೆ. ಪರಸ್ಪರ ಸಂಗಾತಿಯ ಜೀವನದಲ್ಲಿ ಶಾಂತತೆ ಮತ್ತು ಭದ್ರತೆಯ ಭಾವಹೊಂದುವಂತೆ ಮಾಡುತ್ತದೆ.ಉತ್ತಮ ಸಾಮಾಜಿಕ ನಡವಳಿಕೆ ಮತ್ತು ಸಾಮಾಜಿಕ 'ಗಾಯ'ಗಳಿಗೆ ಮದ್ದಿನಂತೆ ಇದು ಕೆಲಸಮಾಡುತ್ತದೆ.ಎಲ್ಲಾ ಪ್ರಾಣಿಗಳ ಜೀವಕೋಶಗಳಿಗೂ ಯಾವುದೂ ಇರಲಿಲ್ಲವೆಂದರೂ ಕೆಲಕಾಲ ನಡೆಯಬಹುದೇನೋ ಆದರೆ ಈ 'ಆಕ್ಸಿಟೋಸಿನ್' ಇಲ್ಲವಾದರೆ ಈ ಜೀವಕೋಶಗಳ ಆಕ್ಸಿಟೋಸಿನ್ ಬಯಕೆಗೆ ಎಂಥವರೂ ವಿಚಲಿತರಾಗುವರು.ಇದರಕೊರತೆಯಾದಾಗ ಖಿನ್ನತೆಗೊಳಗಾಗಿ 'ಸಾಮಾಜಿಕ ದ್ರೋಹ' ಹೆಚ್ಚಾಗುತ್ತವೆ.
ನಮ್ಮ ದೇಹದಲ್ಲಿ ಯಾವ ಯಾವ ಸಂತಸದ ಕಾರಣಕ್ಕೆ ಯಾವ ಯಾವ ಹಾರ್ಮೋನ್ಸ್ ಗಳು ಬಿಡುಗಡೆಯಾಗುವವು ಎಂಬುದರ ಬಗ್ಗೆ ತಿಳಿದ ಮೇಲೆ ಮನೆಯವರು ಮಕ್ಕಳು ಹೊರಗಡೆ ಏನಾದರೂ ತಿನ್ನಲು ಕೇಳಿದಾಗ "ಮನೆಯಲ್ಲಿ ಕೂಳ್ ತಿನ್ನಲ್ಲೇನು" ಎಂದು ಗದರುವ ಮುನ್ನ.. ಹೆಂಡತಿಗೆ ಒಂದು ಮೊಳ ಹೂ ಕೊಡಿಸಲು ಕಂಜ್ಯೂಸ್ ತನ ಮಾಡುವ ಮುನ್ನ ಅದರ ಹಿನ್ನೆಲೆಯನ್ನು ನಾವು ತಿಳಿಯಲೇಬೇಕು.ಒಂದು ಮೊಳದ ಹೂವಿನ ಕರೆನ್ಸಿ ಮುಖ ಬೆಲೆಗಿಂತ ಅದರ ಪರಿಣಾಮಕಾರಿ ಮೌಲ್ಯ ಬೆಲೆಕಟ್ಟಲಾಗದು. ಬಲ್ಲವರಿಗೆ ಬೆಲೆ ಗೊತ್ತಿರುತ್ತದೆ.ಎಲ್ಲರೂ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಶಕ್ತರಾಗಿಲ್ಲ.ಅದೆಷ್ಟೋ ಜನರು ಮೇಲೆ ತಿಳಿಸಿದ ನಾಲ್ಕು ಪ್ರಕಾರದ ಹಾರ್ಮೋನ್ ಗಳಿಗೆ ಕಾರಣವಾಗುವ ಸಂದರ್ಭಗಳನ್ನು ಶೇ 100%ಕ್ಕೆ 100% ರಷ್ಟು ಎಲ್ಲ ಅಂಶಗಳನ್ನು ಹಾದು ಹೋಗುವವರು ವಿರಳವೇ ಎನ್ನಬಹುದು.ಆದರೆ ಇವತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳು ಅಂಗೈಯಲ್ಲಿ ಇದೆ.ವಾಟ್ಸಾಪ್,Facebook, Instagram ಗಳಲ್ಲಿ ಸಾವಿರಾರು ಜನರು ತಮ್ಮತನವನ್ನು ತೋರಿಸಿಕೊಳ್ಳಲು ನಾನಾ ಪ್ರಕಾರದ ಪೋಟೊಸ್,ವೀಡಿಯೋ,Reels ಗಳನ್ನು upload ಮಾಡುವರು.ಯಾರಿಗೆ ಯಾವುದು ಕೊರತೆಯ ಕೊರಗು ಇರುವುದೋ ಅಂತಹ ಅಂಶಗಳು ದಿನವಿಡೀ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವಲ್ಲೇ ತೊಡಗಿರುವ ವ ನಮ್ಮ ಕಣ್ಣು ಕುಕ್ಕಿಸುವುದು.ಉದಾಹರಣೆಗೆ ಒಬ್ಬ ವಿವಾಹಿತ ಮಹಿಳೆಗೆ ತನ್ನ ಗಂಡ ಎಲ್ಲಿಗೂ ಕರೆದುಕೊಂಡು ಹೋಗದ ಹೆಂಡತಿಯು ಹ್ಯಾಪಿ ಅಂಡ್ ಎಂಜಾಯ್ couples ಗಳನ್ನು ಅವಳು ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಾಳೆ. ಹೀಗೆ ಒಬ್ಬರು ಒಡವೆ ವಸ್ತ್ರ ಗಳನ್ನು,ಕ್ರೀಡೆ ಪ್ಯಾಷನ್ ನೋಡಿದರೆ, ಹುಡುಗರು/ ಪುರುಷರು ಸುಂದರ ಹುಡುಗಿಯರ ಪೋಟೋಗಳನ್ನೋ/ಹುಡುಗಿಯರ ರೀಲ್ಸ್ ಗಳನ್ನು ತಮ್ಮ ಹವ್ಯಾಸಕ್ಕೆ ತಕ್ಕಂತೆ ಸಾಮಾಜಿಕ ಮಾಧ್ಯಮಗಳು ಗಮನಸೆಳೆಯುತ್ತಾ ಹೋಗುತ್ತಾವೆ.ಬೇರೆಯವರು ಖುಷಿಗಾಗಿ ಹಾಕುವ ಪೋಸ್ಟ್ ಗಳು ನೋಡುವವರಿಗೆ ಅವನಂತೆ-ಅವಳಂತೆ,/ಅವರಂತೆ ನಾನು ಇರಬೇಕು,ನಾನೂ ಕಾರು ,ಮನೆ,ಆಭರಣ ಎಲ್ಲವನ್ನೂ ಹೊಂದಿ ಅನುಭವಿಸಬೇಕು ಎನ್ನುವ ಅನುಕರಣೆ ಜಾಸ್ತಿಯಾಗಿ ಅವರ ಜೀವಕೋಶಗಳಿಗೆ ಅಗತ್ಯ ಇರುವ, ಅವರಿಗೆ ಇದುವರೆಗೆ ಸಿಗದೇ ಇರುವಂತಹ ಅಂಶಗಳ ಮೇಲೆ curiosityಸಹಜವಾಗಿ ಉಂಟಾಗುತ್ತದೆ. ಒಬ್ಬಂಟಿಯಾಗಿ ಯಾವತ್ತಿಗೂ ಹೊರಗಡೆಯೇ ಬಾರದೇ ಇರುವ ಅವಿವಾಹಿತ, ವಿವಾಹಿತ ಮಹಿಳೆಯರು ಹೊರಗಡೆ ಬಂದು ನಾನು ಯಾವತ್ತೂ ಒಬ್ಬಳೇ ಹೊರಗಡೆ ಬಂದೇ ಇಲ್ಲ.. ಈ ಖುಷಿ because of you my dear ..ಎನ್ನುವ ಮಾತುಗಳನ್ನು ರೆಸ್ಟೋರೆಂಟ್ ಗಳಲ್ಲಿ ಅನೇಕ ಬಾರಿ ನಾನು ಕೇಳಿರುವೆ. ಇಂತಹವು ಮುಂದಿನ ಕೆಲವು ದಿನಗಳ ನಂತರ ಏನಾಗಬಹುದು ಎಂಬುದನ್ನು ಊಹಿಸಬಹುದು. ಇನ್ನೂ ಹುಡುಗರು /ಪುರುಷರು ಹದಿನೆಂಟರ ಮುನ್ನ ನೋಡಬಾರದ ಸ್ಥಳಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾರ್ಯಾರೋ ಜೊತೆ ಅಸ್ವಾಭಾವಿಕ ಚಾಟಿಂಗ್,ಪ್ಲರ್ಟಿಂಗ್,ಡೇಟಿಂಗ್... ಇಂತಹ ಬೆಳವಣಿಗೆ ಸ್ವಾತಂತ್ರ್ಯ ಸಿಕ್ಕು ಇಷ್ಟಕ್ಕೆ ತಕ್ಕಂತೆ ಬದುಕುವ ಅವಕಾಶ ಸಿಕ್ಕಿತು ಅಂತಾ ಖುಷಿ ಪಡಬೇಕಾ ಅಥವಾ ಸಾಮಾಜಿಕ ಸ್ವಾಸ್ಥ್ಯ ಸಾಮಾಜಿಕ ಮಾದ್ಯಮಗಳಿಂದನೇ ಹರಣ ಆಯಿತು ಎಂದು ದೂಷಿಸಬೇಕೋ ಗೊತ್ತಾಗುತ್ತಿಲ್ಲ..
ಎಲ್ಲಾ ಸಜೀವಿಗಳಿಗೂ ಸ್ವಾಭಾವಿಕವಾಗಿ ಈ ಹಾರ್ಮೋನ್ ಉತ್ಪತ್ತಿಯಾಗುತ್ತಿರುತ್ತಾವೆ.ಅವು ಎಲ್ಲರಿಗೂ ಎಲ್ಲಾಕಾಲಕ್ಕೂ ಸಾಮಾಜಿಕ ಚೌಕಟ್ಟಿನಲ್ಲಿ ಈ ಸಂತಸದ ಹಾರ್ಮೋನ್ಸ್ ಗಳಿಗೆ ನ್ಯಾಯ ಕೊಡಬೇಕಾಗಿರುವುದು ಪ್ರತಿಯೊಬ್ಬರ ಆದ್ಯತೆಯಾಗಬೇಕು.ಈ ಹಾರ್ಮೋನ್ಸ್ ಗಳಿಗೂ ಗ್ರಾಹಕ ಮತ್ತು ವಿರೋಧಿ ಗಳಿವೆ. ಜೀವಕೋಶಗಳನ್ನು ಉತ್ತೇಜಿಸುವಂತಹ ಗ್ರಾಹಕ ಚಟುವಟಿಕೆಗಳು ವ್ಯಕ್ತಿ ಕೈಗೊಂಡಾಗ ಪ್ರಪುಲ್ಲಗೊಂಡು ಸಂತಸದಿ ನಲಿದಾಡುವವು. ಇಲ್ಲದೇ ಇದ್ದರೆ ಜೀವಕೋಶಗಳ ಸಂತೋಷಕ್ಕೆ ಅವರವರ ದಾರಿ ನೋಡಿಕೊಂಡು ಅವರವರ ಇಚ್ಚೆಯಂತೆ ಅವರು ಯಾರೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಅವರೇ ನಿರ್ಧರಿಸಿದ ಪರಿಣಾಮವಾಗಿ ಇಂದು ವಿವಾಹೇತರ ಸಂಬಂಧಗಳನ್ನು,ಡಿವೋರ್ಸ ನಂತಹ ಸಾಮಾಜಿಕ ಪಿಡುಗುಗಳನ್ನು ನೋಡಬಹುದು.
ಬರಹ ಮುಗಿಸುವ ಮುನ್ನ ನಾವು ಹೇಗೆ ಕಲಿಸುತ್ತೇವೋ ಹಾಗೆ ನಮ್ಮ ದೇಹ ಕಲಿಯುತ್ತದೆ. ಅಂದರೆ ನಮ್ಮ ಜೀವಕೋಶಗಳು ಅದಕ್ಕೆ ಹೊಂದಿಕೆಯಾಗುತ್ತಾ ಹೋಗುತ್ತದೆ.ಮರ್ಕಟದಂತಹ ಜ್ಞಾನೇಂದ್ರಿಯಗಳು ಬಯಸಿದ್ದೆಲ್ಲವನ್ನೂ ಕೊಡುತ್ತಾ ಹೋದರೆ ನಮ್ಮ ಅಂತ್ಯ ಅವುಗಳಿಂದಲೇ ಆಗುತ್ತದೆ.ಆದರೆ ನಮ್ಮ ಮನಸ್ಸು ಅವುಗಳಿಗೆ ನಿಯಂತ್ರಣ ಹಾಕಬಹುದು. ಈ ಮಾತನ್ನು ಕಠೋಪನಿಷತ್ ಗಳಲ್ಲೂ ಕಾಣಬಹುದು. ಅದರಂತೆ ನಮ್ಮ ಜೀವಕೋಶಗಳಿಗೆ ನೈತಿಕತೆಯ ತಳಹದಿಯಲ್ಲಿ ಆ ನೆಲದ ಸಾಮಾಜಿಕ ನಿಯಮಗಳನುಸಾರ ನಮ್ಮ ಜೀವನದ ಎಲ್ಲಾ ಅಗತ್ಯತೆಗಳನ್ನು ಈಡೇರಿಸಿಕೊಳ್ಳುವ ಅಭ್ಯಾಸವನ್ನು ನಾವೇ ಈ ಜೀವ (ಕೋಶಗಳಿಗೆ)ಕ್ಕೆ ಕಲಿಸಿಕೊಡಬೇಕು. ಇರುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸಂತಸದಿಂದ ಬಾಳುವ ಯೋಜನೆ ನಮ್ಮ ಇತಿಮಿತಿಯಲ್ಲಿ ಮಾಡಿಕೊಳ್ಳಬೇಕು.ನಮ್ಮಲ್ಲಿ ಎಲ್ಲದೂ ಇದ್ದು ಬೇರೋಂದರ ಹಿಂದೆ ಹೋಗುವ ಚಾಳಿಯಿಂದ ಹೊರಬಂದು ನೆಮ್ಮದಿಯ ಬಾಳು ಎಲ್ಲರೂ ಬಾಳುವಂತಾಗಬೇಕಿದೆ.
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ