MAGPIE SYNDROME-ಮ್ಯಾಗ್ ಪೈ ಸಿಂಡ್ರೋಮ್...
Magpie Syndrome..
ಘಟನೆ-1
ಕಳೆದ ಹತ್ತು ವರ್ಷಗಳ ಹಿಂದಿನ ಘಟನೆ.. ನಾನು British council ಎಂಬ ತರಬೇತಿಯನ್ನು ಕೊಡಲು ಸಂಪನ್ಮೂಲ ಶಿಕ್ಷಕನಾಗಿ ನಿಯೋಜಿತನಾಗಿದ್ದೆ. ತರಬೇತಿ ಪಡೆಯಲು ಹತ್ತಾರು ಹಳ್ಳಿಗಳಿಂದ ಐವತ್ತು-ಅರವತ್ತು ಶಿಕ್ಷಕ/ಶಿಕ್ಷಕಿಯರು ಆಗಮಿಸಿದ್ದರು. ಹೀಗೆ ಒಂದೆರಡುದಿನ ತರಬೇತಿ ನಡೆದಿದ್ದಾಗ ಒಂದು ದಿನ ಮಧ್ಯಾಹ್ನ ಊಟದ ಸಮಯದಲ್ಲಿ ಕೆಲವರು ನಿಂತು ಕುಳಿತು ಊಟಮಾಡುತ್ತಿರುವಾಗ ಒಬ್ಬ ಮಹಿಳಾ ಶಿಕ್ಷಕಿ ತಟ್ಟೆ ಹಿಡಿದು ನಾನು ನಮ್ಮ colleague ಮುಜಾವರ್ ಊಟಮಾಡುತ್ತಾ ಮಾತಾಡುತ್ತಿದ್ದ ನಮ್ಮ ಬಳಿ ಬಂದರು..
"ಸಾರ್ ನೀವು ಕೆಲಸ ಮಾಡುವುದು ವರದಾಪುರನಾ"??
ನಾವು:"ಹೌದು ಮೇಡಂ..."
ಮೆಡಂ: "ಸಾರ್.. ನಮ್ಮದು ರಾಮಾಪುರ...."
ನಾವು:ಹೌದ್ರಾ?? ನಾವು ಅಲ್ಲಿಂದಲೇ ಡೈಲಿ ಓಡಾಡುವುದು ಮೆಡಂ.. ಗೊತ್ತಿರಲಿಲ್ಲ ನೀವು ರಾಮಾಪುರದವರು ಅಂತ..
ಮೆಡಂ- ಸಾರ್ ನೀವು ನಮ್ಮೂರಿಂದನೇ ರಾಜಾಪುರಕ್ಕೆ ಹೋಗುವುದು. ಯಾವಾಗಲಾದರೂ ಮನೆಗೆ ಬನ್ನಿ ಸಾರ್..
ನಾವು:ಖಂಡಿತವಾಗಿಯೂ ಬರುತ್ತೇವೆ ಮೇಡಂ..
ಮೇಡಂ-"ಬರಲೇ ಬೇಕು ಸಾರ್ ನೀವು..ಎಂದು ಕಡಕ್ ಆಗಿ ನುಡಿದರು."
ನಾವು: ಮೆಡಂ.. ದಿನಾಲು ಅಲ್ಲೇ ಓಡಾಡ್ತೀರುತ್ತೇವೆ..ಯಾವಾಗಲಾದರೂ ಬರೋಣ ತಗೋಳಿ..
ಮುಜಾವರ್:ಮತ್ತೆ ರೀ ಮೇಡಂ.. ಮನೆಯಾಗೆ ಅತ್ತೇ ಮಾವ ಇದ್ದರ್ರೀ??
ಮೇಡಂ- suddenly "ಸರ್ರ್...ಅವಳಾ.. ಲೋಪರ್ ಮುಂಡೆ ಸಾರ್...."ಎಂದು ಗರಿಷ್ಠ ಏರು ಧ್ವನಿಯಲ್ಲಿ ಕ್ಷಣಾರ್ಧದಲ್ಲಿ ಕಣ್ಣು ಕೆಂಪಗೆ ಮಾಡಿ ಅವರ ಅತ್ತೆಯ ಬಗ್ಗೆ ರೋಷದ ಮಾತುಗಳು ಪುಂಖಾನುಪುಂಖವಾಗಿ ಸ್ಫೋಟಗೊಂಡವು.
ಅಲ್ಲಲ್ಲಿ ನಿಂತೋ,ಕುಳಿತೊ ಊಟಮಾಡುತ್ತಿದ್ದವರೆಲ್ರೂ ಅವರ ರೋಷದ ಆರ್ಭಟಕ್ಕೆ ನಮ್ಮ ಕಡೆ ತಿರುಗಿ ನೋಡಿದರೆ ಕೆಲವರು ಏನಾಯಿತೋ ಎಂದು ನಮ್ಮತ್ತ ಧೌಡಾಯಿಸಿದರು.
ಧಿಗ್ಭ್ರಮೆಗೊಂಡ ಮುಜಾವರ್ ನಾನೇನಾದರೂ ತಪ್ಪು ಮಾತಾಡಿದೆನಾ ಎಂದು ವಿಚಾರ ಮಾಡುತ್ತಿದ್ದರೆ ಅವರ ಕೈಗೆ ನನ್ನ ಕೈಯಿಂದ ಸಂಜ್ಞೆ ಮಾಡಿದೆ. ಕೆಲವರು ಏನು ಏನು.. ಏನಾಯಿತು ಎಂದು ಬಂದವರಿಗೆ ಮೇಡಮ್ ಅವರು ಕೋಪ ಬಂದ್ರೆ ಹೇಗೆ ಮಾತಾಡುವಿರಿ ಎಂದು ಕೇಳಿದ್ದಕ್ಕೆ ಹೀಗೆ ಮಾತಾಡುತ್ತಿದ್ದಾರೆ ಏನಿಲ್ಲ ಬಿಡ್ರಿ ಎಂದು topic ಚೇಂಜ್ ಮಾಡಿದೆ.
ಮುಜಾವರ್ ಅವರು ಮೊಸರು ಮಜ್ಜಿಗೆ ಇದೆಯೇನೋ ಹಾಕಿಸಿಕೊಂಡು ಬರುವೆ ತಡೀರಿ ಎಂದು ಅವರು ಜಾಗ ಖಾಲಿ ಮಾಡಿದರು.ಅದೇ ನೆಪ ಇಟ್ಕೊಂಡ್ ನಾನು ಸೈಡಾಗಿ ಬಿಟ್ಟೆ..ಆಮೇಲೆ ಅವರು ಆಗಾಗ್ಗೆ ಎದುರಾದರೂ ನಮಸ್ಕಾರಗಳಿಗಷ್ಟೆ ಸೀಮಿತವಾಗಿತ್ತು.
ಘಟನೆ-2
ವರ್ಷಕ್ಕೆ ಒಮ್ಮೇಯೋ ಎರಡು ಬಾರಿಯೋ ಅಲ್ಲಲ್ಲಿ ಮೀಟಿಂಗ್/ಟ್ರೈನಿಂಗ್ ಗಳಲ್ಲಿ ಎದುರಾಗುತ್ತಿದ್ದ ಆ ಮೇಡಂ ಅವರು ಕೆಲವು ವರ್ಷಗಳ ನಂತರ ನಮ್ಮ ಶಾಲೆಗೆ ವರ್ಗಾವಣೆಗೊಂಡರು. ಆಗ ಆ ಶಾಲೆಗೆ ನಾನೇ ಪ್ರಭಾರಿ ಮುಖ್ಯಗುರುಗಳಾಗಿದ್ದು, ಮೊದಲಬಾರಿಗೆ ನಡೆದ ಘಟನೆಯಿಂದ ಒಂದಷ್ಟು ಅವರ ಬಗ್ಗೆ ಮಾಹಿತಿ ಪಡೆದಿದ್ದು ಸ್ವಲ್ಪ ಮಟ್ಟಿಗೆ ಹುಷಾರಾಗಿರಬೇಕು ಎಂದು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೆ. ಬಾತ್ ರೂಮೇ ಇಲ್ಲದ ಊರಿನಲ್ಲಿ ಬಾಲಕಿಯರ ಶೌಚಾಲಯದ ಬೀಗ ಮತ್ತು ಬೀಗದ ಕೈ ಆ ಮೇಡಂ ಅವರ ಸುಪರ್ದಿಯಲ್ಲಿತ್ತು.ಆಗಾಗ್ಗೆ ಬೀಗ, ಬೀಗದ ಕೈ ನಾಪತ್ತೆ ಆಗುತ್ತಿದ್ದವು. ಅದು ಸರಾಸರಿ ವಾರಕ್ಕೊಂದರಂತೆ!!..* *ವಿಧಿಯಿಲ್ಲದೆ ಬೀಗಗಳನ್ನು ಕೊಡಿಸುತ್ತಿದ್ದೆ.ಕೆಲವೊಮ್ಮೆ ಕಛೇರಿಯ ಟೇಬಲ್ ಮೇಲೆ ಇಟ್ಟಿರುತ್ತಿದ್ದ Stapler,ಸಿಂಗಲ್ ಪೇಪರ್ ಪಂಚ್ ಇತರೆ ಪರಿಕರಗಳು ನಾಪತ್ತೆಯಾಗುತ್ತಿದ್ದವು.ಎಷ್ಟು ಹುಡುಕಿದರು ಅವು ಪತ್ತೆ ಆಗಲೇ ಇಲ್ಲ.. ಹೀಗೆ ಇರುವಾಗ ನನ್ನ ಅರ್ಧಾಂಗಿ ಒಂದು Parker ಗೋಲ್ಡ್ ಕಲರ್ ಪೆನ್ ಗಿಪ್ಟ್ ಕೊಡಿಸಿದ್ದಳು.ಅದು ಕೇವಲ ಅಟೆಂಡೆನ್ಸ್ ಸಿಗ್ನೇಚರ್ಗಷ್ಟೇ ಬಳಕೆಯಾಗುತ್ತಿತ್ತು. ಆ ಪೆನ್ನನ್ನು ಆಕಸ್ಮಿಕವಾಗಿ ಟೆಬಲ್ ಮೇಲಿಟ್ಟು ಯಾವುದೋ ಕ್ಲಾಸಿಗೆ ಹೋಗಿದ್ದಾಗ ನನ್ನ ಪೆನ್ ಮಾಯ ಆಗಿತ್ತು. ಬಹಳ ಬೇಜಾರಾಗಿ ಯಾರೋ ಮಕ್ಕಳು ತೆಗೆದುಕೊಂಡಿರಬಹುದೆಂದು, ಕೇಳುವುದು ತಪ್ಪಾದರೂ ಗೊತ್ತಿಲ್ಲದೇ ತೆಗೆದುಕೊಂಡಿರಬಹುದೆಂದು ಎಲ್ಲಾ ತರಗತಿಗಳಿಗೆ ಹೋಗಿ ವಿಚಾರಿಸಿದೆ ಯಾರೋ ಮಕ್ಕಳು ಆ ಮೇಡಂ ಮಾತ್ರ ಆಪೀಸಿಗೆ ಹೋಗಿದ್ದರು ಎಂಬ ಮಾಹಿತಿ ಸಿಕ್ಕಿತ್ತು. ಅವರನ್ನು ವಿಚಾರಿಸಿದರೂ "ತೆಗೆದುಕೊಂಡಿಲ್ಲ ಸಾರ್..ನಾನು ನೋಡೇ ಇಲ್ಲ..." ಎಂದುಬಿಟ್ಟರು. ಹಾಗೆ ಆಕ್ಟಿವ್ ಆಗಿ ಸಾರ್ ಪೆನ್ ಯಾರೋ ಅದು ತಗೊಂಡಿರೋದು ಹೆಡ್ ಮಾಸ್ಟರ್ ಪೆನ್ ತಗಳೊಷ್ಟು ದೊಡ್ಡವರಾಗಿದ್ದೀರೇನ್ರೋ?? ಎಂದು ಪ್ರತಿ ಕ್ಲಾಸಿಗೆ ಹೋಗಿ ಮಕ್ಕಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಆದರೂ ಸಂಶಯಗೊಂಡ ನಾನು ಅವರ ವ್ಯಾನಿಟಿ ಬ್ಯಾಗ್ ಒಮ್ಮೆ ನೋಡಬೇಕು ಎಂದೆನಿಸಿತು.ನಮ್ಮ ಅಡುಗೆ ಸಹಾಯಕರಾದ ಕಲಾವತಿ ಅವರನ್ನು ಬಾಗಿಲ ಬಳಿ ನಿಲ್ಲಿಸಿ ಬ್ಯಾಗ್ ಚೆಕ್ ಮಾಡಿದರೆ ನನ್ನ ಪಾರ್ಕರ್ gold coloured ಪೆನ್ನು ಅಲ್ಲಿ ಕಾಣಿಸಿತು. ಅದಷ್ಟೇ ಅಲ್ಲ. ನಾಪತ್ತೆಯಾಗಿದ್ದ ಒಂದೆರಡು ಬೀಗಗಳು, ಸ್ಟಪಲರ್,ಪಂಚ್, ಅಲ್ಲದೇ ಇಪ್ಪತ್ತು ಮೂವತ್ತು ವಿವಿಧ ಹೊಸ ಪೆನ್ ಪೆನ್ಸಿಲ್ ಶಾರ್ಪನರ್ ಪತ್ತೆಯಾದವು. ಅವೆಲ್ಲವನ್ನೂ ಹೊರತೆಗೆದು ಯಥಾ ರೀತಿಯಾಗಿ ಬ್ಯಾಗನ್ನು ಇಟ್ಟೆ..
ಮನಸ್ಸಿಗೆ ಬೇಜಾರಾಯಿತು. ಈ ಮೇಡಂ ಯಾಕೆ ಹೀಗೆ ಮಾಡಿದರು ಅಂತ ಗೊತ್ತಾಗಲಿಲ್ಲ. ಅವರಿಗೆ ಏನೂ ಹೇಳದೆ ಹಾಗೆ ಸ್ವಲ್ಪಕಾಲ ಈ ವಿಷಯವಾಗಿ ಸ್ಟಡಿ ಮಾಡುವ ಅಂತ ನೋಡುತಲಿದ್ದೆ.. ಅವರ ಬ್ಯಾಗಿನಿಂದ ತೆಗೆದದ್ದು ಇದುವರೆಗೂ ಅವರ ಅರಿಗೆ ಬಂದಿಲ್ಲದೇ ಇರಬಹುದು.
ಈ ಮೇಲಿನ ಎರಡೂ ಘಟನೆಗಳು ಬೇರೆಬೇರೆಯಾದರೂ ಕತೃ ಒಬ್ಬರೇ.. ಇವರ ಈ ಎರಡೂ ವರ್ತನೆಗಳಿಗೆ ಇವರನ್ನು ನಾನು ದೂರುತ್ತಿಲ್ಲ. ಅವರ ಇಂತಹ ವರ್ತನೆಗೆ ಕಾರಣ ಏನು ಎಂದು ಅಧ್ಯಯನ ಮಾಡಬೇಕು ಎನಿಸಿತು. ದಿನ ಕಳೆದಂತೆ ನನಗೆ ಕಂಡು ನನಗೆ ಈ ಮೊದಲು ಅನೇಕ ಬಾರಿ ಮಾನಸಿಕ ಅಸ್ವಸ್ಥರು ಒಂದೇ ತೆರನಾದ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿ, ಅವರ ಬಳಿ ಅದರ ರಾಶಿಯನ್ನು ನೋಡಿದ್ದೆ.ಕೆಲವರು ಬಟ್ಟೆ,ಇನ್ನೂ ಕೆಲವರು ಖಾಲಿ ವಾಟರ್ ಬಾಟಲ್ ಹೀಗೆ ಯಾವೂದಾದರೂ ಒಂದು ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿರುತ್ತಾರೆ. ಅದೇ ರೀತಿಯಾಗಿ ಅವರ ವರ್ತನೆಗೂ ಇವರ ವರ್ತನೆಗೂ ಸಾಮ್ಯತೆ ಇದೆ ಎಂದು ಅಧ್ಯಯನ ಮಾಡಿದಾಗ ನನಗೆ ಸಿಕ್ಕ ಮಾಹಿತಿ ಎಂದರೆ,*
*ನಮ್ಮಲ್ಲಿ ಕೆಲವು ವಸ್ತುಗಳು ಕೆಲವರಿಗೆ ಇಷ್ಟ.. ಇದರಲ್ಲಿ ಬಣ್ಣ,ಬಟ್ಟೆ,ಲೋಹ ಹೀಗೆ ಹಲವಾರು ವಿಧದಲ್ಲಿ ಹೇಳಬಹುದು. ಕೆಲವರಿಗೆ ಹೊಳೆಯುವ ವಸ್ತುಗಳು ಮಾತ್ರ ಇಷ್ಟವಾಗುತ್ತಾವೆ. ಈಹೊಳೆಯುವ ವಸ್ತುಗಳು ಇಷ್ಟವಾಗುವಂತಹವರು 'MAGPIE SYNDROME' ಎಂಬ psychological ರೋಗ ಇರುವ ಮನೋರೋಗಿಗಳು...
ಈ ಖಾಯಿಲೆಯವರು ಸಾಮಾಜಿಕ ಜೀವನದಲ್ಲಿ ಎಲ್ಲರೊಂದಿಗೂ ಸಹಜವಾಗಿ social ಆಗಿಯೇ ಇರುತ್ತಾರೆ. ಆದರೆ ಇವರು ಡೈಲಿ ಲೈಪಲ್ಲಿ ಕೆಲವು ಹೊಳೆಯುವ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗುವರು. ಇವರು ತೆಗೆದುಕೊಂಡ ವಸ್ತುಗಳೆಲ್ಲವೂ ಹೊಳೆಯುವಂತಹವೇ..ಆ ವಸ್ತುವಿನ ಬೆಲೆ ಇವರಿಗೆ no matter..ಆದರೆ ಹೊಳಪಿಗೆ ಮಾತ್ರ ಇವರ ಆದ್ಯತೆ.. ಹೊಸದಾದ ಹೊಳೆಯುವ ವಸ್ತುಗಳು ಯಾವುದಾದರೂ ಅವರಿಗೆ ಇಷ್ಟವೇ. ಅವರಿಗೆ ಗೊತ್ತಿಲ್ಲದೇ ಅದು ಅವರ ವಶವಾಗಿಬಿಡುತ್ತೆ ಆದರೆ ಅದು ಅವರತ್ರ ಇದೆ.. ನಾನು ತಗೊಂಡಿದ್ದೇನೆ ಎಂಬ ಯಾವ ಭಾವವೂ ಅವರನ್ನು ಕಾಡುವುದಿಲ್ಲ. ಅದಕ್ಕೂ ಮಿಗಿಲಾಗಿ ಅವರು ಬಲವಾಗಿ ನನಗೂ ಈ ವಸ್ತು/ಘಟನೆಗೆ ಸಂಬಂಧವೇ ಇಲ್ಲ ಎಂಬಂತೆ ವಾಧಿಸುತ್ತಾರೆ.ಅದು ವಿಚಾರಣೆ ಎಂತಹವರು ಮಾಡಿದರೂ.. ಯಾವುದೇ ಬೆದರಿಕೆ,ಸಾಕ್ಷಿಗೂ ಜಗ್ಗುವುದಿಲ್ಲ.
ಬೆಲ್ಜಿಯಂ ಸಂಶೋದನಾ ವರದಿ ಪ್ರಕಾರ ಹೊಳೆಯುವ ವಸ್ತುಗಳನ್ನು ಇಷ್ಟಪಡುವವರು, ತನಗರಿವಿಲ್ಲದೇ ಅದು ಬೇಕು ಎಂದು ಪಡೆಯುವವರು ಅವರಿಗೆ ನೀರಿನ ಅಗತ್ಯತೆ ಇದೆ ಎಂದು ಅರ್ಥ.. ನೀರಿನ ಅಗತ್ಯವಿರುವುದರಿಂದ ಅವರು ಹೊಳಪಿನ ವಸ್ತಗಳನ್ನು ಇಷ್ಟ ಪಡುವರಂತೆ..ಇವರಿಗೆ ನೀರಿನ ಅವಶ್ಯಕತೆ ಯಾವಾಗ ಈ ಮನೋರೋಗಕ್ಕೆ ತಿರುಗಿತೋ ಗೊತ್ತಿಲ್ಲ. ಆದರೆ ಹೊಳೆಯುವಂತಹ ವಸ್ತುಗಳ ಕಂಡು ಇಷ್ಟವಾದರೆ ಅದು ಅವರದು..ಇದು ಆ ವ್ಯಾದಿಯ ಶೇಕಡವಾರು ಪ್ರಕಾರ ಅವರ ವರ್ತನೆ ಅವಲಂಬಿಸಿದೆ.
ಸಾಮಾನ್ಯವಾಗಿ ಈ ಮಾನಸಿಕ ಅಸ್ವಸ್ಥರ ಮೆದುಳು ಮತ್ತು ಕಾರ್ಯವಿಧಾನಗಳು ಇಂತಹ ವಿಶೇಷ ವರ್ತನೆಗಳ ಕೆಲಸಗಳ ವ್ಯಾಪ್ತಿಯಲ್ಲಿ ನಿಯಂತ್ರಿಸಲ್ಪಪಡಲಾಗುತ್ತದೆ. ಅದು ಅವರಿಗೆ ರೆಗ್ಯೂಲರ್ ಡ್ಯೂಟಿ ಎಂಬಂತೆ ಈ ವಿಶೇಷ ವರ್ತನೆಯಲ್ಲಿ ತೊಡಗಿಕೊಂಡಿರುತ್ತಾರೆ. ಒಂದು ವೇಳೆ ಇವರು ಈ ತೆರನಾದ ವಿಶೇಷ ವರ್ತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದೇ ಇದ್ದರೆ ಅಪಾಯಕಾರಿ ಸನ್ನಿವೇಶಗಳು ಉಂಟಾಗುತ್ತಿದ್ದವು.ಇವರ ನಿಯಂತ್ರಣ ಬಹು ಕಷ್ಟ ಆಗುತ್ತಿತ್ತು.
ಈ Magpie syndrome ವರ್ತನೆಯನ್ನು ಅಪರಾಧದ ಜಗತ್ತಿನ ಹಿನ್ನೆಲೆಯಲ್ಲಿ ನೋಡುವುದಾದರೆ ಇದೊಂದು suspense thriller ACTION..ಅವರು ಅದನ್ನು ಮಾಡಿರುತ್ತಾರೆ ಅದು ಅವರಿಗೇ ಗೊತ್ತಿರಲ್ಲ.! ಅವರ ಸ್ಮರಣಶಕ್ತಿಗೆ ಗೊತ್ತಿರುವುದಿಲ್ಲ. Enquiry ಯಲ್ಲಿ ಅವರು ಸಿಕ್ಕಿಬಿದ್ದಿರುವುದಿಲ್ಲ. ಇಂತಹ ಅದೆಷ್ಟು ಅಪರಾಧಗಳು ಆಗಿ ಹೋಗಿವೆಯೋ...ಮುಂದೆ ಆಗುವವೋ ಗೊತ್ತಿಲ್ಲ. ಆದರೆ ಅಪರಾಧ ಜಗತ್ತಿಗೂ ಮತ್ತು magpie ತೆರನಾದ ವಿವಿಧ ಮುಖಗಳು ಅಪರಾಧ ಜಗತ್ತಿನಲ್ಲಿ ಇರುವುದನ್ನು ತಳ್ಳಿಹಾಕುವಂತಿಲ್ಲ..
ಲೇಖನ ಮುಗಿಸುವ ಮುನ್ನಾ... WHO ಪ್ರಕಾರ ಪ್ರತಿ ಎಂಟು ಜನರಲ್ಲಿ ಒಬ್ಬರಿಗೆ ಮನೋವೈಜ್ಞಾನಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಕದಿಯುವಿಕೆ .. ಖಾಯಿಲೆಯೂ ಹೌದು ಹವ್ಯಾಸವೂ ಹೌದು ವೃತ್ತಿಯೂ ಹೌದು.. ಇವುಗಳಿಗೆ ಔಷಧ ಇಲ್ಲ...ಹವ್ಯಾಸ,ವೃತ್ತಿ ಆಗಿದ್ದರೆ ಕಡಿಮೆ ಮಾಡಬಹುದಿತ್ತು,ಅಥವಾ ಬದಲಾಯಿಸಬಹುದಿತ್ತು. ಇದು ಕೆಲವರಿಗೆ ಖಾಯಿಲೆ ಆಗಿರುವುದರಿಂದ ಇದಕ್ಕೆ ವೈದ್ಯಲೋಕದಲ್ಲೂ ಔಷಧ ಲಭ್ಯ ಇಲ್ಲ... ಶುಗರ್ ಬಿ ಪಿ ಇದ್ದ ಹಾಗೆ ಒಮ್ಮೆ ಬಂತು ಅಂದರೆ ಸಂಪೂರ್ಣವಾಗಿ ಓಡಿಸಲಾಗದು... ಆಗಾಗ ಕಡಿಮೆ ಹೆಚ್ಚು ಆಗುತ್ತಿರತ್ತೆ ಆದರೆ ನಿರ್ನಾಮ ಮಾಡಲಾಗುವುದಿಲ್ಲ.. ಅಲ್ಪ ಮತ್ತು ಸುಧಾರಣೆಯನ್ನು ತರಬಹುದು.ಈ ಬದುಕಿನ ಬಲೆಯಲ್ಲಿ ಯಾವ ವಿಚಾರ ಹೆಚ್ಚಾಗಿ ತಲೆಕೆಡಿಸಿಕೊಂಡರೂ,/Neglect ಮಾಡಿದರೂ ಮಾನಸಿಕ ಅನಾರೋಗ್ಯದ ಸ್ಥಿತಿ ತಲುಪ ಬಹುದಾದ ಅಪಾಯ ಇದ್ದೆ ಇದೆ... ಆದರೆ ನಾವಿದನ್ನು ಗಮನಿಸಿ ಯಾವುದಕ್ಕೆ ಎಷ್ಟು ಪ್ರಮಾಣದ ಪ್ರಾಮುಖ್ಯತೆಯನ್ನು ಕೊಡಬೇಕೋ ಅಷ್ಟನ್ನು ಕೊಟ್ಟು ಮಾನಸಿಕ ಆರೋಗ್ಯಕರ ಜೀವನದಿಂದ ಸಂತಸದಿಂದ ಇರಬಹುದು..
(ಇದು ಕಾಲ್ಪಾನಿಕ ಉದಾಹರಣೆಯಾಗಿದ್ದು ಇಲ್ಲಿ ಪ್ರಸ್ತಪಿಸಿರುವ ವ್ಯಕ್ತಿ ಮತ್ತು ವಿಷಯ ನೇರವಾಗಿ ಯಾರಿಗೂ ಸಂಬಂದಿಸಿದ್ದಲ್ಲ..)
✍️ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ