ಸಮರದೀಂ ಸಾಮರಸ್ಯದೆಡೆಗೆ...

#ಸಮರದಿಂ_ಸಾಮರಸ್ಯದೆಡೆಗೆ...

ಹಣೆಗೆ ತಿಲಕವಿಟ್ಟು ದಾಸ್ಯವ ಬಿಡಿಸಿ ಐಕ್ಯತೆಯ ಮೆರೆಯಲು  ಟೊಂಕಕಟ್ಟಿ ಮಾಡಿದರು ನಾನ ಹಬ್ಬವ
ದೇಶಿಕರೆಲ್ಲರೂ ಸೇರಿ ಸಂಭ್ರಮಿಸಿದರು ದೇಸೀ ಕುಣಿತ ಹಾಡು ಆಟವ...

ಹಬ್ಬವ ಮಾಡುತಾ,ಆಟವ ಆಡುತಾ ಮೊಳಗಿಸಿದರು ಸ್ವಾತಂತ್ರ್ಯದ ಕಹಳೆ ಎದೆಯೊಡ್ಡಿ ಹೊರಾಡಿ ಅಮರರಾದರು  ಪರಂಗಿಯರ ಫಿರಂಗಿಗೂ ಜಗ್ಗದೆ ಬಗ್ಗದೆ ...

ರಾಮರಾಜ್ಯದ ಕನಸ ಕಂಡು ರಾಮ ರಹೀಮನು ಒಂದೇ ಎಂದು
ದೇಶ-ದೈವಭಕ್ತಿಗಾಗಿ,ಜನ-ಮನರಂಜನೆಗಾಗಿ ಸಾಮರಸ್ಯಕ್ಕಾಗಿ ಮಾಡಲ್ಪಡುತ್ತಿದ್ದವು ಇಂದಾಗಿವೆ 'ಸೋಮರಸ'ಕ್ಕಾಗಿ  ಮಾಡುವಂತವುಗಳು..

 ಅಹಿಂಸೆಯ ದೇಶದಿ ಹಿಂಸಿಸಲು ಬೀಜಾಸುರರ ಪಡೆ ಶಿಷ್ಟಾಚಾರ ಮರೆತು  ದುಷ್ಟಾಚಾರದೀ  ಉಗ್ರರಾಗಿ ಇನ್ನೊಬ್ಬರ ನೆತ್ತರು ಚೆಲ್ಲುತಿಹರು ತಮ್ಮ ಮನೋರಂಜನೆಗಾಗಿ..

  ಧರ್ಮ ದರ್ಗಾ ಮಾನ ಮುಚ್ಚುವ ಬಟ್ಟೆಯಲ್ಲೂ ಕೊಳಕ ಕಂಡು ಸಮಾಜದಲ್ಲಿ  ಕಳೆ ತುಂಬ ಬೇಕಾದವರು ಸಮಾಜದಕಳೆಯಾಗಿಹರು.

ಸಹೋದರರೋಳ್ ಕಾದಾಡಿ ಗಳಿಸುವುದೆಂತೆಂಬುದ ಅರಿಯಬೇಕಿದೆ ಅವರೂ- ಇವರು..ಹೊರಡಬೇಕಿದೆ ಸಮರದೀಂ- ಸಾಮರಸ್ಯದೆಡೆಗೆ ಮರೆಯಾದ ಐಕ್ಯತೆಯ ಸ್ಥಾಪಿಸಿ ಮೆರೆಯಲು..

✍️ನಾಗೇಂದ್ರ ಬಂಜಗೆರೆ..

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..