ಸ್ವಾತಂತ್ರ್ಯ ಇದ್ದರೂ ಬದುಕು ಅತಂತ್ರ..

#ಸ್ವಾತಂತ್ರ್ಯ_ಬಂದರೂ_ಬದುಕು_ಅತಂತ್ರ...

  ದಾಸ್ಯಕ್ಕೆ ತೆರಿಗೆಯ ತೇದು ಗ್ಯರಸೆ ಗ್ಯರಸೆ  ದಿನಸೀ ಧಾನ್ಯ ಬೆಳೆದ ಅನ್ನದಾತ  ತಲೆಯಲ್ಲಿ ಅಕ್ಷರವಿರಲಿಲ್ಲ ಎದೆಯಲ್ಲಿ ಅಕ್ಕರೆಯಿತ್ತು ಸಕಲ ಜೀವಿಗಳಲ್ಲಿ...

ಜವಾರಿ ಬೆಳೆದು ತಿಂದುಂಡ ಜವಾನನ ಜೀವ  ಗುಂಡ್ಕಲ್ಲು ಗುಡಿಸಲಾದರೂ ಜೋಪಡಿಯಾದರೂ ಚಳಿ ಮಳೆ ಸಿಡಿಲಿಗೆ  ಬೆದರದೆ.

ಸ್ವದೇಶಿಗಳೇಕೆ ತೆರಬೇಕು  ಪರದೇಶಿಯರಿಗೆ ತೆರಿಗೆ ದಂಗೆದ್ದರು  ಒಟ್ಟಾದರು ಇಷ್ಟಾದರೂ ಪರದೇಶಿಗಳ ಸ್ವದೇಶದಿ ಓಡಿಸಿ ತಿರಂಗವ ಹಾರಿಸಿ ಜನಗಣಮನ ಹಾಡಿ..ಅಖಂಡ ದೇಶವು ಮೂರಾಗಿ ಇಬ್ಬಾಗಿಸಿ

 ಬರ ಬಡಿಯಿತು ಬರ ಸಿಡಿಲಂತೆ ಭರತ ಮಾತೆಯ ಒಡಲಿಗೆ ಬರದಿ ಬರಿದಾದರು ಅನ್ನಧಾತರು ಬಾರದ ಮಳೆಯ ಕರೆಯುತಾ..

ಭಾರತಮಾತೆ ಹೆಣ್ಣು..ಆದಿವಕಾಲದಿಂದಲೂ ಸ್ವಾತಂತ್ರ ಕಸಿದ ಜನ ಸ್ವತಂತ್ರ ಸಿಕ್ಕ ಮೇಲೂ  ಸ್ವಾತಂತ್ರ್ಯ ಕೊಡದೆ ಜನಗಣಮನ ಹೇಳುವ ಜನಮನ...

ಅನ್ನದಾತನಿಗೆ ಬೆಳೆಗೆ ಬೆಲೆ ಇಲ್ಲದಾಯ್ತು ಅನ್ನವಿಲ್ಲದಂತಾಯ್ತು..ಅನ್ನದಾತನಿಗೆ ಬೀಜದ ಹೆಸರಲ್ಲಿ ಅರೆ ಜೀವ ಕೀಟನಾಶಕದಿ ಪೂರ ಜೀವವ ತೆಗದು ತರಾವರಿ ತೆರಿಗೆಯ ಬರೆ ಹಾಕಿ ಬೀದಿಗೆ ನೇತಾಕಿದರು ಅವನ...

ಶ್ರಮಿಕರ ರಕ್ತ ಬೆವರು ಹೀರಿ ಸಂಪಾದಿಸಿದ ಧನಿಕನ ಮನೆಯ ಮೇಲೆ ತಿರಂಗ ಧರ್ಪದಿ ನಗುತ್ತಿದ್ದರೆ ತಿರುಕನ ಮನೆಯ ತಿರಂಗ ಸ್ವಾತಂತ್ರ್ಯದ ಸಂಕೇತವಾದರೂ ನಿಂದೇನು ನಡೆಯದೆಂಬಂತಿತ್ತು...

Happy Independence day...

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..