ಮಹತ್ವಾಕಾಂಕ್ಷೆಯ ನಿರಾಶಾ ಜನ..

#ಮಹತ್ವಾಕಾಂಕ್ಷೆಯ_ನಿರಾಶಾ_ಜನ...

ಧರ್ಮಕ್ಕೊಬ್ಬ ಜಾತಿಗೊಬ್ಬ ಪಕ್ಷಕೊಬ್ಬ ನೇತಾರನ ನೇಮಿಸಿ ವರ್ತಮಾನದಿ ಇತಿಹಾಸವ ತಿದ್ದಿ-ತಿರುಚಿ ಮಾಡುತಿಹರು  ಕದನ ಕಾದಾಟವ ಶಾಂತಿಯ ತೋಟದಿ  ಚೆಲ್ಲುತಾ ನೆತ್ತರ ಓಕುಳಿಯ ನನ್ನ ಜನ..

 ಸಾಧಿಸಿ ಹೋದ ಸಾಧಕರ ಸಾಧನೆಯ ಮೆರೆಯುತಾ  ಶಾಲೆಗೆ ಹೋಗದೆ ಶಾಲೆಯ ಕಟ್ಟದೆ ಗುಡಿಗೋಪುರವ ಕಟ್ಟುತ್ತಾ  ಸಾಧನೆ ಮಾಡುವುದ ಮರೆತ ನನ್ನ ಜನ..

ಜಗತ್ತಿನ ಪ್ರತಿ ಆವಿಷ್ಕಾರ ಕ್ಕೂ  ನಮ್ಮದೇ ಮೂಲ-ಮೊದಲೆಂದು  ಕೊಸರುವ ನಾವು ಬೇರೆಯವ್ರು ಪೇಟೆಂಟ್ಪಡೆಯುವ ಮೊದಲು ಪೇಟೆಂಟ್ ಪಡೆಯಲು ಮರೆತ ನನ್ನ ಜನ..

 ಗತಿಸಿದ ಗತ ದಿನಗಳ SILVER jubilee, GOLDEN Jubilee DIAMOND Jublee ಮಹೋತ್ಸವಗಳ  ಆಚರಣೆಗಳ ಸಂಭ್ರಮದಿ ಓಲಂಪಿಕ್ ಗಳಲ್ಲಿ ಕಂಚು ಬೆಳ್ಳಿ ಬಂಗಾರದ ಪದಕವ ತರಲು ಮರೆತ  ನನ್ನ ಜನ..

ಅಸಂಖ್ಯಾತ ದೇಶದ ಜನಸಂಖ್ಯೆಯಲಿ ಬಹುಸಂಖ್ಯಾತ-ಅಲ್ಪ ಅಸಂಖ್ಯಾತ ಹೋರಾಟದಿ  ದೊಡ್ಡವರು ದಡ್ಡರಾಗಿ ಸಹೋದರತೆ ಪ್ರೀತಿ ವಾತ್ಸಲ್ಯ  ಮರೆತ ನನ್ನ ಜನ ..

 ಜಗದ  ನಾನಾ ದೇಶಗಳು ಕಲ್ಪನೆಗೂ ನಿಲುಕದ ಸಾಧನೆಯ ಮಾಡಿ ಜಗತ್ತಿಗೆ ತೋರ್ಪಡಿಸುತ್ತಿರುವಾಗ ನೆರೆಯವರು ಹೊರೆಯಾದರೂ ನೆರೆಬಂದರೂ ಕಥೆ ಹೇಳುತಾ ಕಥೆ ಕೇಳುತಾ ಮಲಗಿ ಮರೆಯಾದ ನನ್ನಜನ...

ಪರಾಧೀನ ಕಾರಕೂನ  ಶಿಕ್ಷಣದಿ ಆರಂಭಿಕ ಶಿಕ್ಷಣ ಪಡೆದರೂ ಪದವಿ ಸ್ನಾತಕೋತ್ತರರನ್ನು ಮೀರಿಸುವ ವಿದ್ವತ್ತು ಗಳಿಸಿದ ದೇಶವು ಸ್ವಾತಂತ್ರೋತ್ತರದಿ ಹಣ ಅಂಕದ ಹಿಂದೆ ಹೋಗಿ ಸ್ನಾತಕೋತ್ತರ  ಪಡೆದರೂ ಸಾಮಾನ್ಯ ಜ್ಞಾನವ ಮರೆತ  ನನ್ನ ಜನ ..

ಜೈಜವಾನ್ ಜೈ ಕಿಸಾನ್ ಎಂದು ಜೈಕಾರ ಹಾಕಿ ಬೆಳೆದ ಬೆಳೆಗೆ ಬೆಲೆಕೊಡದೆ ಬೆನ್ನುಮೂಳೆಯ ಎಡೆಮುರಿಕಟ್ಟಿ ಇಡುವಳಿಗಳ ಮಲ್ಟಿ ನ್ಯಾಶನಲ್ ಕಾರ್ಪೋರೇಟ್  ಗಳ  ಬಾಯಿಗೆ ಹಾಕಿ  ತಾವೂ ನೆಕ್ಕಿಕೊಂಡವರು ನನ್ನ ಜನ...

ಇನ್ನೆಷ್ಟು ದಿನ ನಮ್ಮವರ ಸಾಧನಾ ಸಮಾರಂಭಗಳ ಮಾಡಿ ಕಾಲಕಳೆಯುವುದು?? ನಮ್ಮವರ  ಹಳೆಯ ಸಾಧನೆಗಳ ಜೊತೆಗೆ ನಮ್ಮಗಳ ಹೊಸ ಸಾಧನೆಯೂ ಒಟ್ಟುಗೂಡಬೇಕಲ್ಲ??

✍️ ನಾಗೇಂದ್ರ ಬಂಜಗೆರೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..