ಒಲವು..
💕ಒಲವು💕
ಒಲವೆ ಓ ಒಲವೇ.. ಎಷ್ಟೊಂದು ಮಧುರ ಒಲವೇ... ನಿನ್ನೊಲವಿನ ಒಲವೇ ಈ ಜಗದಬಾಳ್ವೆಯ ಬಲವು..
//ಒಲವೇ//
ಒಲವೇನೇ ನನ್ ಉಸಿರು ಈ ಒಲವಿನ ಜೀವನದೀ ಎಲ್ಲವೂ ಸಿಕ್ಕಿದೆ ಅಂದುಕೊಂಡರೂ ನಮ್ಮಿಂದ ದೂರವೇ ಉಳಿದಿದೆ ಅದೇ ನಮ್ಮವರ 'ಒಲವು'*//ಒಲವೇ//
ನಗುವಾಗಿದೆ ಗೆಲುವಾಗಿದೆ ನೋವಾಗಿದೆ ಈ ಒಲವು ಒಲವಿಗೆ ಒಲವೇ ಸಾಟಿ ಆಗಬೇಕಿತ್ತು ಆದರೆ ಇಹರು ಹಲವರು ಒಲವಿನ ಕ್ರೂರಿಗಳಾಗಿ..
ನಿಷ್ಕಲ್ಮಶ ಒಲವಿಗೆ ಬಂದಿದೆ ಇಂದು ಆಪತ್ತು... ಜಗದ ಎಲ್ಲಾ ಒ'ಲವ್ವಿ'ನ ಹಿಂದೆ ಅಡಗಿದೆ ಸಂಪತ್ತು...!!
ಒಲವು ಸದಾ ಹಸಿರಾಗಿರಲಿ ನಮ್ಮೊಲವದೀ ಉಸಿರಾಗಿರುವವರಿಗೆ ಹುಸಿಯಾಗದಿರಲಿ ನಮ್ಮೊಲವ ನಂಬಿರುವವರಿಗೆ..
/ಒಲವೇ/
✍️ನಾಗೇಂದ್ರ ಬಂಜಗೆರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ