ನಗಿಸುವ ಹೂವು v/s ಎಂದೂ ಬಾಡದ ಹೂವು..
ಅಂದು ನಗುವು ಅರಳುವ ಹೂವು..ಇಂದು ಎಂದೂ ಬಾಡದ ಹೂವು...
ಹೆಂಗೆಳೆಯರು ಸಂಜೆಯ ಹೊತ್ತಲ್ಲಿ ಹಿತ್ಲಿನ ಹೂ ಕೊಯ್ದು ಮೊಗದಲ್ಲಿ ನಗೆಯರಳಿಸಿ ಮುತ್ತಿನಂಥ ಘಮ ಘಮಿಸುವ ಮೊಗ್ಗು ಪೋಣಿಸುವ ಕೆಲಸ.*
*ಹೂ ಹಿಡಿದು ಹೂ ಮುಡಿದು ಮಖವರಳಿಸಿ ನಗುವಲ್ಲಿ ನಲಿದಾಡುತ್ತಿದ್ದರು ನೀಳವೇಣಿಯಲ್ಲಿ ನೇತಾಡುವ ಅರಳಿದ ಹೂವ ಮುಡಿದು ಶೃಂಗಾರ ಸಾಗರದಿ..
ಸುಮಗಳ ಘಮ ಅರಸಿ ಮಧು ಹೀರುವ ಚಿಟ್ಟೆ ರಂಗು ರಂಗಿನ ಸುಮಗಳ ಕಾಣುತೆಂದಿತು ಓ ಜಗವೇ 'ನಾ ನಿನ್ನ ಪ್ರೀತಿಸಿಬಿಟ್ಟೆ...'
ಈಗಿನ ಪೋರಾ-ಪೋರಿಯರು ನಗುವ ಗುಲಾಬಿಯ ಹಿಡಿದೆಂದರು ನಿಜಾ ನಾ ಪ್ರೀತಿಸಿ-ಬಿಟ್ಟೆ..!!
ಹಿತ್ಲಲ್ಲಿ ಹೂ ಗಿಡವಿಲ್ಲ..ನಗುವ ಮೊಗದಲ್ಲಿ ನಗುವಿಲ್ಲ..ಶೃಂಗಾರಕ್ಕೂ ಶೋಭೆಯಿಲ್ಲ.. ನಗುವು ಅರಳದ ಕಾಲಕ್ಕೆ ಶೋಕಕ್ಕೂ -ಶೃಂಗಾರಕ್ಕೂ ಕಂಡು ಹಿಡಿದನಾ 'ಎಂದೂ ಬಾಡದ 'ಬಟ್ಟೆಯ ಹೂವ'..???
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ