ಚಿತ್ರದುರ್ಗದ ಪಾಳೆಯಗಾರರು ಮತ್ತು ಮುರುಘಾ ಮಠ

 ದುರ್ಗದ ಪಾಳೆಯಗಾರರು ಮತ್ತು ಮುರಘಾ ಮಠ... 


(ಇತಿಹಾಸದಿಂದ ಇಂದಿನವರೆಗೆ...)

   ಅದು ಬಯಲು ಸೀಮೆ..ಹಳ್ಳದ ಪ್ರದೇಶದಲ್ಲಿ ಮಾತ್ರ  ಅಲ್ಲಲ್ಲಿ ಗುಂಪು ಗುಂಪುಗಳಲ್ಲಿ ಪೊದೆಗಳಂತೆ ಬೆಳೆದ ಈಚಲಮರಗಳು.ಅಲ್ಲೋಂದು ಇಲ್ಲೋಂದು ಕರಿಜಾಲೀಮರಗಳು.ಮಳೆಗಾಲದಲ್ಲಿ ಮಾತ್ರ ದನಕರುಗಳಿಗೆ ಸೊಂಪಾದ ಹುಲ್ಲು.ಬೇಸಿಗೆಯಲ್ಲಿ ಬಿಸಿಲಿಗೆ ನೆಲ ಒಣಗಿ ಬಿರುಕು ಬಿಟ್ಟಿರುತ್ತದೆ.ನೂರಾರು ದನಕರುಗಳು ವಿಶಾಲ ಗೋಮಾಳದಲ್ಲಿ ಹನ್ನೆರಡು ಹದಿಮೂರು ವರ್ಷಗಳ ಒಬ್ಬ ಹುಡುಗ ದನಗಳ  ಕಾಯುತ್ತಿದ್ದ. ಅಂದಿನ ಜಾತಿಪದ್ದತಿಯಿಂದ ಅವನು ನಾಯಕ ಜನಾಂಗಕ್ಕೆ ಸೇರಿದ ಹುಡುಗ.ನಿತ್ಯವೂ ಅವನದು ದನಕಾಯುವುದೇ ಕಾಯಕ..ಬೇಸಿಗೆಯ ಬಿರು ಬಿಸಿಲಿನ ತಾಪಕ್ಕೆ ದನಗಳ ನೋಡುತ್ತಾ ಬಿಸಿಲಲ್ಲೇ ನೆಲದ ಮೇಲೆ ಕುಳಿತ ಬಾಲಕನಿಗೆ ನಿದ್ದೆಯ ಮಂಪರು ಬಂದು ಅಲ್ಲೇ ಮಲಗಿಬಿಟ್ಟ.ಮಲಗಿದ್ದು ಅವನಿಗೆ ಅರಿವಿರಲಿಲ್ಲವಾದರೂ ನೆತ್ತಿಯಮೇಲೆ ಸುಡುಬಿಸಿಲು ಉರಿಯುತ್ತಿತ್ತು.ಮಲಗಿದ ಬಾಲಕನ ಮುಖಕ್ಕೆ ಬಿಸಿಲು ಬೀಳದಂತೆ ದೊಡ್ಡ ನಾಗರಹಾವೊಂದು ಹೆಡೆ ಬಿಚ್ಚಿ ಹೆಡೆಯ ನೆರಳು ಆ ಬಾಲಕನ ಮುಖಕ್ಕೆ ಬೀಳುವಂತೆ ಮಾಡಿತ್ತು. ಆ ಕ್ಷಣಕ್ಕೆ ಸರಿಯಾಗಿ ಅಲ್ಲಿಗೆ ಬಂದ   ಮುರಿ ಮುರಿ ಪೇಟ ಸುತ್ತಿ ಕೈಯ್ಯಲೊಂದು ಬೆತ್ತವ ಹಿಡಿದು ಬಂದ  ಕಾವಿಧಾರಿಯೊಬ್ಬ ಆ ದೃಶ್ಯವನ್ನು ನೋಡಿ ಕೈಯಲ್ಲಿ ಹಿಡಿದ ಬೆತ್ತದಿಂದ ಶಬ್ಧಮಾಡಿ  ಆ ಹಾವನ್ನು ಅಲ್ಲಿಂದ ಕದಲಿಸಿದ. ಆ ಕ್ಷಣವೇ ಆ ಬಾಲಕನನ್ನು ಎಬ್ಬಿಸಿ "ಏ ಬಾಲಕ ನಿನಗೆ  ಈ ಭೂಮಿಯನ್ನು ಆಳುವ ಯೋಗವಿದೆ. ನೀನು ಮುಂದೊಂದು ದಿನ ದೊರೆಯಾಗಿ ಆಳುವೆ".

ದನಗಳ ಕಾಯುವ ಬಾಲಕನು ರಾಜನಾಗುವನೇ?? ಹ್ಹ ಹ್ಹ..ಸಾಧ್ಯವಿಲ್ಲದ ಮಾತು..

ನಿಜ ಕಣಯ್ಯ ನಾನು ಹೇಳೋದು..

ಸ್ವಾಮೀ ಹಾಗೇನಾದರೂ ಆದರೆ "ನಿಮ್ಮದು ಕುಳಿತ ಪಟ್ಟ ನನ್ನದು ನಿಂತ ಪಟ್ಟ.." ಎಂದು ನುಡಿದು ದನಗಳನ್ನು ಕಾಯಲು ಈ ಬಾಲಕ ಅತ್ತ ಕಡೆ ಹೋದರೆ ನಿತ್ಯ ಸಂಚಾರಿಯಾದ ಕಾವಿಧಾರಿ  ತನ್ನ ಸಂಚಾರದ ದಾರಿ ಹಿಡಿದು ಹೊರಟರು..

ಕೆಲವು ವರ್ಷಗಳ ನಂತರ  ಆ ಬಾಲಕ ಪಾಳೇಗಾರರ ಮುಖಂಡನಾಗಿ ಒಂದಷ್ಟು ಪ್ರದೇಶ ಮತ್ತು ಸೈನಿಕರೊಂದಿಗೆ  ಚಿತ್ರದುರ್ಗದ ಕೋಟೆಯಲ್ಲಿ ಸ್ವತಂತ್ರ ರಾಜ್ಯಭಾರವನ್ನು ಮಾಡುತ್ತಿದ್ದ. ಸಂಚಾರ ಮುಂದುವರೆಸಿ ದುರ್ಗದಲ್ಲಿ  ಆ ಕಾವೀಧಾರಿ ಓಡಾಡುತ್ತಿದ್ದುದ ನೋಡಿದ    ಆ ಪಾಳೆಗಾರರ ಮುಖಂಡ  ಆ ಕಾವೀಧಾರಿಗೆ ನಮಸ್ಕರಿಸಿ ಗತದಲ್ಲಿ ನಡೆದ  ಸಂಭಾಷಣೆಯ ಸಂದರ್ಭವನ್ನು  ನೆನೆದು ಪರಸ್ಪರ ಉಭಯ ಕುಶೋಲಪರಿ ವಿಚಾರಿಸಿ ಹಣ್ಣು ಹಂಪಲು ಧನ ಧಾನ್ಯ ದಾನ ನೀಡಿ  ಅಂದು ಕೊಟ್ಟ ಮಾತು 'ಕುಳಿತಪಟ್ಟ ನಿಮ್ಮದು ನಿಂತ ಪಟ್ಟ ನನ್ನದಾಗಲಿ" ಎಂಬ ಮಾತಿಗೆ ಬದ್ದನಾಗಿ ಆಗ ತಾನೇ ಆರಂಭವಾದ ತಮ್ಮ ಪಾಳೆಪಟ್ಟಿಗೆ ಧರ್ಮ ಗುರುವಾಗಿ ತಮ್ಮ ರಾಜಾಶ್ರಯದಲ್ಲೇ ಇರಲು ಕೋರಿಕೊಂಡರು. ಒಲ್ಲದ ಮನಸ್ಸಿನಿಂದ ಅನೇಕ ದಿನಗಳ ನಂತರ ಆ ಕಾವೀಧಾರಿ ರಾಜಾಶ್ರಯದಲ್ಲಿರಲು ಒಪ್ಪಿಗೆ ಸೂಚಿಸಿದರು.

ಈ ಮೇಲೆ ತಿಳಿಸಿದ ಜಾನಪದ ಕಥಾನಕದಲ್ಲಿರುವ ಬಾಲಕನೇ ಚಿತ್ರದುರ್ಗದ ಪಾಳೆಯಗಾರ ಭರಮಣ್ಣನಾಯಕ ಮತ್ತು ಆ ಕಾವೀಧಾರಿಯೇ ಮುರಿಗೇಸ್ವಾಮಿ...ಇವರು ಸದಾ ಹಿಡಿದಿರುತ್ತಿದ್ದ ಬೆತ್ತ ಹಿಡಿಯ ಭಾಗದಲ್ಲಿ ಹುರಿಯಂತೆ  ಮದುರಿಕೊಂಡಿರುವಂತಹ ಬೆತ್ತ ಹಿಡಿದುದರಿಂದಲೋ ಅಥವಾ ಸದಾ ತಲೆಗೆ ಸುತ್ತಿರುತ್ತಿದ್ದ ಪೇಟ(ಮುರಿಗೆ)ಯ ಕಾರಣ ಇವರನ್ನು ಮುರಿಗೇಸ್ವಾಮಿ ಎಂದು ಕರೆದಿರಬಹುದು.

 ಮೌರ್ಯರು, ಗಂಗರು,ಕದಂಬರು,ರಾಷ್ಟ್ರಕೂಟರು ಹೊಯ್ಸಳರು ವಿಜಯನಗರ ಅರಸರು ಹೀಗೆ ಹಲವು ರಾಜಮನೆತನದವರ ಆಳ್ವಿಕೆ ಗೆ ಚಿತ್ರದುರ್ಗ ಒಳಪಟ್ಟಿತ್ತು. ಏಳು ಸುತ್ತಿನ ಕೋಟೆ,ಉಕ್ಕಿನಕೋಟೆ ಎಂದು ಕರೆಯುವ  ಚಿತ್ರದುರ್ಗದ ಕೋಟೆಯ ನಿರ್ಮಾಣವನ್ನು ಯಾರು ಆರಂಭಿಸಿದರು ಎಂಬುದರ ಬಗ್ಗೆ ನನಗೆ ಸಂಶಯವಿದೆ. ಏಕೆಂದರೆ ಇಂದು ನೋಡುವ ಕೋಟೆಯ ಅಧ್ಬುತ  ಹೆಬ್ಬಾಗಿಲಿನ ಕಲ್ಲಿನ ಗಾತ್ರ ಮತ್ತು ವಿನ್ಯಾಸಕ್ಕೂ ಮತ್ತು  ಬೊಂಬೆ ಮಂಟಪಕ್ಕೆ ಹೊಂದಿಕೊಂಡಂತೆ ಇರುವ  ಸುತ್ತಲಿನ ಬೃಹತ್ ಲ್ಲುಗಳನ್ನು  ನೋಡಿದರೆ  ಮುಖ್ಯದ್ವಾರ ಮತ್ತು ಸದ್ಯದ ಉತ್ಸವಾಂಬ  ದೇವಸ್ಥಾನದ ಬಹುಮಹಡಿ ಕಟ್ಟಡಗಳು  ಬಹುಶಃ ಬೇರೆ ಯಾರದೋ ಕಾಲದಲ್ಲಿ ನಿರ್ಮಾಣ ಆಗಿರಬೇಕು. ಸೂಕ್ಷ್ಮವಾಗಿ ನೋಡಿದಾಗ ಮುಖ್ಯದ್ವಾರಕ್ಕೂ ಉತ್ಸವಾಂಭ ದೇವಸ್ಥಾನದ ಬಹುಮಹಡಿ ಕಟ್ಟಡಗಳಿಗೆ ಬಳಸಿದ ಕಲ್ಲುಗಳಿಗೆ  ಮತ್ತು ಬೊಂಬೆಮಂಟಪದಲ್ಲಿ ಕೆತ್ತಿರುವ  ಶಿಲಾ ಕೆತ್ತನೆಗೂ ಸಾಮ್ಯತೆಯನ್ನು ಕಾಣಬಹುದು. ಈ ಮಂಟಪದಲ್ಲಿರುವ ಆನೆಗಳು,ಮತ್ತು ಆನೇ ಬಾಗಿಲ ಬಳಿ ಇರುವ ಶಿಲಾ ಕೆತ್ತನೆಯನ್ನು ಹೊರತುಪಡಿಸಿದರೆ ದುರ್ಗದ ಎಲ್ಲಿಯೂ ಕೂಡ ಈ ಶೈಲಿಯ ಕೆತ್ತನೆಗಳು ಕಂಡು ಬಂದಿರುವುದಿಲ್ಲ.ಹಾಗಾಗಿ ನಿರ್ಮಾಣ ಮಾಡಿದವರು ಮತ್ತು ಕಾಲಮಾನದಲ್ಲಿ ವ್ಯತ್ಯಾಸವನ್ನು ನೋಡಬಹುದು.

ಮೇಲ್ದುರ್ಗದ ಸಂಪಿಗೆ ಸಿದ್ದೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ 360 ಕೋಣೆಗಳುಳ್ಳ ಮಠವನ್ನು ರಾಜಗುರು ಮುರಿಗೇಸ್ವಾಮಿ ಗಳಿಗೆ ಭರಮಣ್ಣನಾಯಕ ನಿರ್ಮಿಸಿಕೊಟ್ಟರು. ನಿತ್ಯವೂ ಒಂದೊಂದು ಕೋಣೆಯಲ್ಲಿ ವಚನಗಳನ್ನು ಬೋಧಿಸುತ್ತಾ,ಹಿತವಚನ ನೀಡುತ್ತಾ ಮನುಷ್ಯರಿಗೂ ಪ್ರಾಣಿಗೂ ಗಿಡಮೂಲಿಕೆಗಳ ಔಷಧೋಪಚಾರ ಮಾಡುತ್ತಾ ದಿನ ದೂಡುತ್ತಿದ್ದರು. ಇತ್ತ ಏಳು ಸುತ್ತಿನ ಕೋಟೆಯನ್ನು ಶತೃಗಳ ದಾಳಿ ತಪ್ಪಿಸಲು ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದವರೆಗೂ ಗಾರೆ ಮಿಶ್ರಣದಿಂದ  ಭತೇರಿ ನಿರ್ಮಿಸಿ ಮದ್ದುಗುಂಡು ಬೀಸುವ ಕಲ್ಲುಗಳ ಸಮೀಪದಿಂದ ಚಂದ್ರವಳ್ಳಿಯ ಕೆರೆಯ ವರೆಗೆ ಆಳವಾದ ಕಂದಕವನ್ನು ನಿರ್ಮಿಸಿದರು. ದಿನದಿಂದ ದಿನಕ್ಕೆ  ದೈವಾಂಶ ಸಂಭೂತ ಮುರಿಗೇ ಸ್ವಾಮಿಗಳ ಆಶೀರ್ವಾದದಿಂದ ಪಾಳೆಯಗಾರರು ಪ್ರಬಲ ಶಕ್ತಿಯಾಗಿ ಬೆಳೆಯುತ್ತಾ ಬಂದರು. ಇತ್ತ  ಪ್ರಸ್ತುತ   N H ⁴ ನ ಕುರಬರಹಟ್ಟಿಯ ಸಮೀಪ ಲೋಕಕಲ್ಯಾಣಕ್ಕಾಗಿ ವಿಶಾಲವಾದ ಅವಳೀ ಕೆರೆಗಳ ನಿರ್ಮಿಸಿ  ಕೆರೆಯ ಮದ್ಯದಲ್ಲಿ ಬೇಸಿಗೆ ಅರಮನೆಯನ್ನು ಪರ್ಯಾಯವಾಗಿ  ಭರಮಣ್ಣನಾಯಕ ನಿರ್ಮಿಸಿಕೊಂಡಿದ್ದನು. ಮೇಲ್ದುರ್ಗದ ಮಠದ ಸುತ್ತಾಮುತ್ತಾ ಟಂಕಸಾಲೆ,ಅರಮನೆ ಇದ್ದುದರಿಂದ ಸುರಕ್ಷತೆಯ ದೃಷ್ಠಿಯಿಂದ ಜನಸಾಮಾನ್ಯರು ಶ್ರೀಗಳ ಬಳಿ ಪ್ರವಚನ ಪಡೆಯಲು ಸಾಧ್ಯವಾಗದೇ ಇದ್ದುರಿಂದಲೋ ಅಥವಾ  ಸೈನಿಕರುಗಳಿಗೆ  ಸಿದ್ದಪಡಿಸುತ್ತಿದ್ದ ಮಾಂಸಹಾರದಂತಹ  ಆಹಾರ ಅಭ್ಯಾಸ ಆಚರಣೆಗಳು ಬಹುಶಃ ಮೆಲ್ದುರ್ಗದಲ್ಲಿ ಮುರಿಗೇಸ್ವಾಮಿಗಳು ಆ ವಾತಾವರಣದಲ್ಲಿ ವಾಸಿಸಲು ಕಸಿವಿಸಿಯಾಗಿರಬೇಕು.ಇತಿಹಾಸ ತಜ್ಞರು ಹೇಳುವ ಪ್ರಕಾರ ಮಠವನ್ನು ಸ್ಥಳಾಂತರ ಮಾಡಲು ಕಾರಣ ಕೋಟೆಯ ಒಳಗಡೆ  ಸದಾ ನಡೆಯುತ್ತಿದ್ದ ಯುದ್ಧ ಮತ್ತು ರಕ್ತಪಾತ ಎಂಬುದು.ಆದರೆ ಅದೇ ಇತಿಹಾಸ ಹೇಳುವಂತೆ ಚಿತ್ರದುರ್ಗದ ಪಾಳೆಯಗಾರರು ಶತೃಗಳನ್ನು ಕೋಟೆಯ ಒಳಗಿರಲಿ ಸಮೀಪದವರೆಗೂ ಯಾರನ್ನೂ ಎಂದಿಗೂ ಬಿಡಿಸಿಕೊಂಡಿದುದಿಲ್ಲ. ಇವರು ಸದಾ ಶತೃಗಳಿರುವಲ್ಲಿಗೇ ಹೋಗಿ ಕ್ಯಾಂಪ್ ಹಾಕಿ ಯುದ್ದ ಮಾಡಿ  ಬರುತ್ತಿದ್ದವರು.ಆದ್ದರಿಂದ ಮೇಲ್ದುರ್ಗದಲ್ಲಿ ಯುದ್ದವಾಗಲೀ ರಕ್ತಪಾತವಾಗಲೀ ಇರಲಿಲ್ಲ ಎನ್ನುವುದು ಸ್ಪಷ್ಟ.ಆದ್ದರಿಂದ ಮೇಲೆ ತಿಳಿಸಿದಂತೆ  ಬಹುಶಃ ಸೈನಿಕರಿಗೆ ತಯಾರಿಸುತ್ತಿದ್ದ ಮಾಂಸ ಆಹಾರದ ತಯಾರಿಯೇ ಆ ಸ್ಥಳದಲ್ಲಿ ಇರಲು ಅವರಿಗೆ ನಿರಾಸಕ್ತಿ ತೋರಿದ್ದರಿಂದ  ಭರಮಣ್ಣನಾಯಕನು ತನ್ನ ಬೇಸಿಗೆಯ* *ಅರಮನೆಯನ್ನು ಬಿಟ್ಟುಕೊಟ್ಟು ನೂರಾರು ಎಕರೆ ಜಾಗವನ್ನು ಉಂಬಳಿಯಾಗಿ ನೀಡಿದನು. ತದ ನಂತರದ ದಿನಗಳಲ್ಲಿ ಅಧಿಕಾರಕ್ಕೆ ಬಂದ ಇತರ ಪಾಳೆಗಾರರು ಭರಮಣ್ಣನಾಯಕನಷ್ಟು ಮಠವನ್ನು ಪ್ರೀತಿಸಲಿಲ್ಲ ಅಂತ ಕಾಣಿಸುತ್ತೆ.ದುರ್ಗದ ಪಾಳೇಗಾರರ ಆಡಳಿತ ಗಂಡುಗಲಿ ಮದಕರಿನಾಯಕನ ಅವಧಿಯಲ್ಲಿ ಹೈದರ್ ಆಲಿಯ ಸೈನಿಕರು ದಾಳಿ ಇಟ್ಟು ಮದಕರಿಯನ್ನು ಸೆರೆ ಹಿಡಿದು ಶ್ರೀರಂಗಪಟ್ಟಣ ದಲ್ಲಿಟ್ಟಿದ್ದರು.ಅಮೇಲೆ ಅವರು ಅಲ್ಲೇ ಅಂತ್ಯವಾದರು ಕೂಡ. ಚಿತ್ರದುರ್ಗದಲ್ಲಿ ಶೃಂಗೇರಿ ಮಠ,ಕಬೀರಾನಂದ ಮಠದ ಪೀಠಗಳು ಉದಯಿಸಿದವು.ಆಯಾ ಮಠಗಳ ಒಬ್ಬೋಬ್ಬ ಸ್ವಾಮೀಜಿಗಳು ಕಾರ್ಯಪ್ರವೃತ್ತರಾದರು.ಮುರಿಗೇಸ್ವಾಮಿ ಯವರಿಂದ ಆರಂಭಗೊಂಡ ಮುರುಘಾ ಪರಂಪರೆಯಲ್ಲಿ ಶಾಂತವೀರ ಮಲ್ಲಿಕಾರ್ಜುನ ಸ್ವಾಮಿ, ಜಯದೇವ ಮುರುಘಾರಾಜೇಂದ್ರ,ಶಿವಮೂರ್ತಿ ಮುರುಘಾರಾಜೇಂದ್ರ ಸಾಮಿ ಗಳನ್ನೂ ಸೇರಿ ಇಪ್ಪತ್ತು ಮಠಾದೀಶರನ್ನು ಮುರಘಾ ಪರಂಪರೆ ಮುಂದುವರದಿದೆ.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ವಚನ ಧರ್ಮ ಪಾಲಿಸಿದರಾದರೂ ಬಸವಣ್ಣನವರೂ ಸೇರಿ ಹಲವು ಶರಣರು ವೈವಾಹಿಕ ಜೀವನವನ್ನು ನಡೆಸುತ್ತಿದ್ದರು.ಅಂದಿನ ಸಾಮಾಜಿಕ ಜಾತಿ ಪದ್ದತಿಯ ಆಚರಣೆಯನ್ನು ಕಟುವಾಗಿ ಟೀಕಿಸಿದ್ದಲ್ಲದೇ ಜಾತೀಯ ಪಿಡುಗು ತೊಲಗಿಸಲು ಮೇಲ್ಜಾತಿಯ ಹುಡುಗ ಕೆಳಜಾತಿಯ ಹುಡುಗಿಗೆ ಮದುವೆ ಮಾಡಿಸಿ  ಸಾಮಾಜಿಕವಾಗಿ ಹಲವು ಕಾರ್ಯಗಳನ್ನು ಮಾಡಿದರಾದರೂ ಅಂದು ಮಾಡುತ್ತಿದ್ದ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂಚಕ ದ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು.


 ಹದಿನಾರನೇ ಶತಮಾನದಿಂದೀಚೆಗೆ ಶರಣರ ಜಾಗದಲ್ಲಿ ಆಯಾ ಪೀಠದ ಮಠಾಧೀಶರಾಗಿ ಕಾಣಲಾಯಿತು.ಮಠಗಳೆಂದರೆ ಅಕ್ಷರ ದಾಸೋಹ, ಅನ್ನದಾಸೋಹ ಮಾಡುತ್ತಾ ಸಾಮಾಜಿಕ ಕಳಕಳಿ ಇರುವವರೊಂದು ಕಡೆಯಾದರೆ  ಜಾತಿ ರಾಜಕೀಯ ವಕ್ತಾರರಾಗಿ ಮಠಗಳು ಮತ್ತು ಮಠದ ಮುಖ್ಯಸ್ಥರು ಇಂದು ಪ್ರತಿನಿಧಿಸುತ್ತಿರುತ್ತಾರೆ."ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂಬ ಮಾತಿನಂತೆ ಈ ಮಠಗಳು(ಕೆಲವು ಮಠಗಳೂ ಹೊರತುಪಡಿಸಿ.)ಸ್ಥಾವರ ಮತ್ತು ಸ್ಥಾನ ಮತ್ತು ಹಣಗಳಿಕೆಯೇ ಮುಖ್ಯ ಉದ್ದೇಶಗಳಾದವು.ಶೂನ್ಯ ಸಿಂಹಾಸನದ  ಬಸವ ತತ್ವಗಳ ಪ್ರಚಾರದ ಅಡಿಯಲ್ಲಿ ಜಾತಿಗೊಬ್ಬ 'ಬಸವ' prefix ನೊಂದಿಗೆ ಶಿವಮೂರ್ತಿ ಮುರಘರಾಜೇಂದ್ರ ಶರಣರು ಜಾರಿಗೊಳಿಸಿದರು. ಇದುವರೆಗೆ ಶೂದ್ರರೂ ಕಾವಿ ಧರಿಸಿರಲಿಲ್ಲ. ಅದಕ್ಕೆ ವೇದಿಕೆ ಹಾಕಿದರಾದರೂ ಜಾತಿ ಪದ್ದತಿ ತೊಡೆದು ಹಾಕಬೇಕಿದ್ದ ಮಠ ಮಾನ್ಯಗಳು ಜಾತಿಯ ಹೆಸರಲ್ಲೇ ಪೀಠ ಸ್ಥಾಪಿಸಿ ಜಾತಿ ಪದ್ದತಿಯ ಪೋಷಣೆಗೂ ನೀರು ಗೊಬ್ಬರ ಹಾಕಿದ್ದೂ ಈ ಶತಮಾನದ ದುರಂತ.ಒಂದುವೇಳೆ ಅಲ್ಲ ಎನ್ನುದಾದರೆ ಬಸವ ಮಾದರ,ಚಲವಾದಿ,ಬೋವಿ ,ವಾಲ್ಮೀಕಿ ಯಂತಹ ತಳ ಸಮುದಾಯದವರಿಗೆ ಮಠದ ಉತ್ತರಾಧಿಕಾರಿಯಾಗಿ ಬೇಷಾರತ್ ಆಗಿ ಘೋಷಿಸಿದರೆ ಒಪ್ಪಬಹುದೇನೋ..

 ಮಠಾಧೀಶರಾಗುವ ಇವರು ಅವಿವಾಹಿತರಾಗಿಯೇ ಉಳಿದು ಸೇವೆಯಲ್ಲಿ ತೊಡಗುವರು. ಮದುವೆಯಾದರೆ ಹೆಂಡತಿ ಮಕ್ಕಳ ಮೇಲೆ ಮೋಹ ಉಂಟಾಗಿ ಸಮಾಜವನ್ನು ಸ್ವಾರ್ಥಪರ ಹಿನ್ನೆಲೆಯಲ್ಲಿ ನೋಡಲಾದೆಂಬ ಉದ್ದೇಶದಿಂದ ಇದು ಪಾಲನೆಯಲ್ಲಿದೆಯಾದರೂ ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇಂತಹ ಪವಿತ್ರ್ಯ ಪಾವಿತ್ರ್ಯತೆ ಕೊನೆಯಾಗಿವೆ ಎಂದು  ಹೇಳಬಹುದು. ಆಗೊಮ್ಮೆ ಈಗೊಮ್ಮೆ ಮಠಾಧೀಶರು ಮಹಿಳೆ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಉದಾಹರಣೆ ನಮ್ಮ ಮುಂದೆ ಸಾಕಷ್ಟು ಇವೆ.ಹನ್ನೆರಡನೆಯ ಶತಮಾನದಲ್ಲಿಯೂ ಅನುಭವ ಮಂಟಪದಲ್ಲಿ ವೃತ್ತಿಗನುಸಾರವಾಗಿ ಪೀಠ ಸ್ಥಾಪಿಸಿದರಾದರೂ ಎಲ್ಲೂ ಶರಣ ಧರ್ಮವನ್ನು ಪಾಲಿಸುವರು ವಿವಾಹವಾಗದೇ ಉಳಿಯ ಬೇಕೆಂದು ಎಲ್ಲೂ ಹೇಳಿದ ಉಲ್ಲೇಖಗಳು ಇಲ್ಲ.


 
 ಮಠಾಧೀಶರಾಗುವ ಇವರು ಅವಿವಾಹಿತರಾಗಿಯೇ ಉಳಿದು ಸೇವೆಯಲ್ಲಿ ತೊಡಗುವರು. ಮದುವೆಯಾದರೆ ಹೆಂಡತಿ ಮಕ್ಕಳ ಮೇಲೆ ಮೋಹ ಉಂಟಾಗಿ ಸಮಾಜವನ್ನು ಸ್ವಾರ್ಥಪರ ಹಿನ್ನೆಲೆಯಲ್ಲಿ ನೋಡುವ ಉದ್ದೇಶದಿಂದ ಇದು* * ಇಪ್ಪತ್ತನೇ ಶತಮಾನದ ಕೊನೆಯಲ್ಲಿ ಇಂತಹ ಪಾವಿತ್ರ್ಯತೆ ಕೊನೆಯಾಗಿವೆ ಎಂದು  ಹೇಳಬಹುದು. ಆಗೊಮ್ಮೆ ಈಗೊಮ್ಮೆ ಮಠಾಧೀಶರು ಮಹಿಳೆ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಉದಾಹರಣೆ ನಮ್ಮ ಮುಂದೆ ಸಾಕಷ್ಟು ಇವೆ.ಹನ್ನೆರಡನೆಯ ಶತಮಾನದಲ್ಲಿಯೂ ಅನುಭವ ಮಂಟಪದಲ್ಲಿ ವೃತ್ತಿಗನುಸಾರವಾಗಿ ಪೀಠ ಸ್ಥಾಪಿಸಿದರಾದರೂ ಎಲ್ಲೂ ಶರಣ ಧರ್ಮವನ್ನು ಪಾಲಿಸುವರು ವಿವಾಹವಾಗದೇ ಉಳಿಯ ಬೇಕೆಂದು ಎಲ್ಲೂ ಹೇಳಿದ ಉಲ್ಲೇಖಗಳು ಇಲ್ಲ.ಮಠಾದೀಶ ಆಗುವವರು ಪ್ರಾಣಿಗಳಿಗೆ ಕಸಿ ಮಾಡುವಂತಹ ರೀತಿಯಲ್ಲಿ ವೈಜ್ಞಾನಿಕ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ಮಠಾದೀಶರಾಗುವುದು ಒಳ್ಳೆಯದು. ಇಲ್ಲ ಸಂಸಾರಿಕ ಜೀವನದಲ್ಲೂ ಮಠಾದೀಶರಾಗಿ ತನ್ನ ಕಳ್ಳುಬಳ್ಳಿಯಲ್ಲಿ ಆಸ್ತಿ ನೊಂದಣಿ ಮಾಡುವ ಕಾನೂನಾತ್ಮಕ ಮತ್ತು ಸಾಮಾಜಿಕ ಅವಕಾಶ  ರಚಿಸಿಕೊಳ್ಳಬೇಕು.ಇಲ್ಲವೇ  ಕಳಂಕವಿರುವ ಮಠಗಳನ್ನು ಸರ್ಕಾರ ವಶ ಪಡಿಸಿಕೊಂಡು ಸರ್ಕಾರದ ಆಸ್ತಿಯನ್ನಾಗಿ ಮಾಡಿಕೊಳ್ಳಬೇಕು. ಏನಂತೀರಾ??




✍️ ನಾಗೇಂದ್ರ ಬಂಜಗೆರೆ.


ಕಾಮೆಂಟ್‌ಗಳು

  1. ದುರ್ಗದ ಇತಿಹಾಸವನ್ನು ತು೦ಬಾ ಉತ್ತಮ ವಾಗಿ ಬರೆದಿರುವಿರಿ ಸರ್... 👌👌💐💐

    ಪ್ರತ್ಯುತ್ತರಅಳಿಸಿ
  2. ತುಂಬಾ ಚೆನ್ನಾಗಿ ಬರೆದಿದ್ದೀರಿ ಸರ್.ನಿಮ್ಮ ಬರವಣಿಗೆ ಅದ್ಭುತ

    ಪ್ರತ್ಯುತ್ತರಅಳಿಸಿ
  3. ಒಬ್ಬ ಶ್ರೇಷ್ಠ ಕವಿಯ ರೀತಿಯಲ್ಲಿ ಬರೆದಿದ್ದೀರಿ ಸರ್

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..