ಗೆಳತಿಯ ನೆನಪು
ಗೆಳತಿಯ ನೆನಪು..
ನಿನ ನೆನಪೇ ನೆನಪಾಗುತಿಹುದು ಗೆಳತಿ ನಿನ ನೆನಪೇ ನೆನಪಾಗುತಿಹುದು..
/ಪ/
/ನೆನಪಿದೆಯಾ ನಿನಗೆ ಕೈ ಹಿಡಿದು ಸುತ್ತಾಡಿದ ನೆನಪು../
ನಿನ ನೆನಪೇ ನನಗಾಗುತಿಹುದು ಗೆಳತಿ
ನಿನ ನೆನಪು ನನಗಾಗುತಿಹುದು..
/ಪ/
/ನೆನಪಿದೆಯಾ ನಿನಗೆ ನಾವಾಡಿದ ಕಣ್ಣ ಭಾಷೆ../
/ನಾ ಕೊಟ್ಟ ಕೆಂಗುಲಾಬಿಯ ನೀ ಮುಡಿದದ್ದು../
/ಪ/
/ನಾ ಹೋಳಿ ಬಣ್ಣ ಹಚ್ಚಿದ್ದು ನಮ್ ಬಾಳು ರಂಗುರಂಗಾಗಿರಲಿ ಎಂದು./.
/ನೆನಪಿದೆಯಾ ಗೆಳತಿ ನೀ ನನ ಮೇಲೆ ಮುನಿಸಿಕೊಂಡಿದ್ದು/
/ಪ/
/ನನ ಮನ ಕವಲಾಗಿ ನಿನ ಮನೆಯ ಹಾದಿ ನೆನಪಾಗುತಿಹುದು ಇಂದು/
/ ನೆನಪಾಗುತಿಹುದು ನಾವು ನಕ್ಕು ನಲಿದಾಡಿದ್ದು/ /ಪ/
ನೆನಪಿದೆಯೇ ನಾ ಮಾಡಿದ ನವಿಲಗರಿಯ ನಿವೇದನೆ
/ನಾನೊಬ್ಬನೇ ನಗುತಿರುವೆ ನಿನ ಸವಿ ನೆನಪ ನೆನೆದು/./ಪ/
/ನನ ಜೊತೆಯಿರಬೇಕು ನೀ ಎಂದೆಂದಿಗೂ ನೆರಳಿನಂತೆ../
/ಇರದಿದ್ದರೆ ನಿನ ನೆನಪುಗಳೇ ಸಾಕು ಈ ಜೀವಕೇ../
/ಪ/
ರಚನೆ-ರಾಗ ಸಂಯೋಜನೆ-ಗಾಯನ-ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ