ಭಕ್ತಿ..

16. ಭಕ್ತಿ..
ಯಾವುದೇ ಒಬ್ಬ ವ್ಯಕ್ತಿ ವಿಷಯದ ಮೇಲೆ ಇರುವ ಅಪಾರ ನಂಬಿಕೆಯನ್ನು ಭಕ್ತಿ ಎನ್ನಬಹುದು...

 ಒಂದು ಊರಿನಲ್ಲಿ ಒಬ್ಬ ಧನಿಕ ಇದ್ದ. ಅವನಿಗೆ ನಾಲ್ಕು ಮಕ್ಕಳಿರ್ತಾರೆ, ಆ ಧನಿಕ ಸಾಕಷ್ಟು ಸಂಪಾದಿಸಿರುತ್ತಾನೆ.ಆದರೆ ಆ ಧನಿಕ ಆ ಮಕ್ಕಳನ್ನು ನೀವು 'ಪ್ರಾಮಾಣಿಕರಾಗಿದ್ದರೆ' ನೀವು ಎಂದಿಗೂ ಜೀವನದಲ್ಲಿ ಸೋಲರಾರಿರಿ ಎಂದು ಭೋದಿಸಿ ಮಕ್ಕಳಿಗೆ ಏನನ್ನೂ ಕೊಡದೇ ಅವರವರ ಪಾಡಿಗೆ ಅವರು ದುಡಿದು ತಿನ್ನಬೇಕೆಂದು ಅವರನ್ನು ಬೇರೆ ಇಟ್ಟಿದ್ದ.ಆ ಮಕ್ಕಳು ಬೇರೆ ಇದ್ದರೂ ಅವರ ಪ್ರತಿ  ಹೆಜ್ಜೆಯನ್ನು ಗಮನಿಸುತ್ತಿದ್ದ ಆಧನಿಕ. ಆ ನಾಲ್ವರಲ್ಲಿ ಯಾರಿಗೆ ಕಷ್ಟ ಬಂದರೂ ಯಾರಿಗೂ ಗೊತ್ತಾಗದಂತೆ  ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ. ಹತ್ತಾರು ವರ್ಷಗಳ ಕಾಲ ಹೀಗೆ ನಡೆಯಿತು. ಆ ಮಕ್ಕಳಿಗೆ ಎದುರಾದ ನಾನಾ ಸಮಸ್ಯೆಗಳಿಗೆ ಈ ಧನಿಕನೇ ಸಹಾಯ ಮಾಡುತ್ತಿದ್ದುದರಿಂದ ಆ ಮಕ್ಕಳು ಎಂದು ಸೋಲದೇ ನೋಡಿಕೊಂಡಿದ್ದ. ಆ ಮಕ್ಕಳಿಗೂ ನಮ್ಮನ್ನು ಅಪ್ಪ ಹೇಳಿದಂತೆ  ನಾವು ನಡೆದುಕೊಂಡರೇ  ನಾವೆಂದೂ ಸೋಲಲಾರೆವು ಎಂಬ ನಂಬಿಕೆ ಅವರಲ್ಲೂ ಇತ್ತು. ಕಷ್ಟ ಬಂದರೂ ಅವರು ಮಾಡುತ್ತಿದ್ದ ಪ್ರಮಾಣಿಕತೆಗೆ ಅವರು ಗೆಲ್ಲುತ್ತಿದ್ದರು.ದಿನದಿಂದ ದಿನಕ್ಕೆ ಆ ಧನಿಕನ ವಯಸ್ಸು ಏರುತ್ತಿತ್ತು.  ಕೊನೆಯ ದಿನಗಳಲ್ಲಿ ಪೂರ್ವಾಭಿಮುಖವಾಗಿ  ಒಂದು  ಅಂತಸ್ತಿನ  ಮನೆಯನ್ನು ಕಟ್ಟಿಸಿದ. ಈ ಮನೆ ನಿಮ್ಮದಲ್ಲ ಸಂಜೆ ಐದು ಗಂಟೆಯ  ನೆರಳು ಮಾತ್ರ  ನಿಮ್ಮದು..ಎಂದು ಹೇಳಿ ಸತ್ತು ಹೋದ.. ಆ ಧನಿಕ ಸತ್ತ ದಿನದಿಂದ ಈ ಮಕ್ಕಳಿಗೆ ವಿಫರೀತ ಕಷ್ಟಗಳು ಸಾಲು ಸಾಲಾಗಿ ಬಂದವು.  ಬಗೆಹರಿಯಬಹುದೆಂಬ ಕಷ್ಟಗಳು ಬಗೆಹರಿಯಲೇ ಇಲ್ಲ... ತುಂಬಾ ಕಷ್ಟ ಅನುಭವಿಸುತ್ತಿದ್ದರು. ಆದರೂ ಇಂದಲ್ಲ ನಾಳೆ ನಮ್ಮ ಸಮಸ್ಯೆ ಬಗೆ ಹರಿದೇ ತೀರುತ್ತದೆ ಎಂದು ಅಪ್ಪ ಹೇಳಿದಂತೆ ಪ್ರಾಮಾಣಿಕತೆ ಯಿಂದ ಇದ್ದರು.ಅವರಿಗೆ ಬಂದ ಸಮಸ್ಯೆಗಳ ಪರಿಹಾರಕ್ಕೆ ಅಡ್ಡ ದಾರಿ ಹಿಡಿಯುವ ಅವಕಾಶ ಇದ್ದರೂ ದಾರಿ ತಪ್ಪಲಿಲ್ಲ... ಹೀಗೆ ಒಂದೆರಡು ವರಷಗಳಾದ ಮೇಲೆ ಕಷ್ಟಗಳ ಸರಮಾಲೆಯಲ್ಲಿದ್ದ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟು ಸೇರಿ ಅಪ್ಪ ಸಾವಿನ ದಿನ ಹೇಳಿದ ಮಾತನ್ನು ನೆನಪಿಸಿಕೊಂಡರು.   ಮನೆ ನಿಮ್ಮದಲ್ಲ 'ಸಂಜೆ ಐದು ಗಂಟೆ ನೆರಳು ನಿಮ್ಮದು' ಅಪ್ಪನ ಮಾತಿನಲ್ಲಿ ಭಕ್ತಿ ಹೊಂದಿದ್ದ ಇವರು ಆ ಸಮಯದಲ್ಲಿ ಬಿದ್ದಿದ್ದ ನೆರಳಿನ ಜಾಗದಲ್ಲಿ ಮಣ್ಣನ್ನು ಅಗೆದರು. ಏನಾಶ್ಚರ್ಯ ಎಂಟು ಕೊಪ್ಪರಿಗೆ ಧನ ಇವರಿಗೆ ಲಭ್ಯ ಆಯಿತು. ಆ ನಿಧಿಯನ್ನು ಸಮಾನವಾಗಿ ಹಂಚಿಕೊಂಡು ಅವರಿಗೆ ಬಂದಿದ್ದ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಿಕೊಂಡರು.

ನೀತಿ:ಭಕ್ತಿ ಎನ್ನುವ ನಂಬಿಕೆ ಇದ್ದರೆ ನಾವೆಂದೂ ಸೋಲಲಾರೆವು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..