ಕನಸು ಕಥೆಯಾದಾಗ...ಕನಸು-10
ಕನಸು -10
ನಾವಿಬ್ಬರೂ ವೃತ್ತಿಯಲ್ಲಿ ಸರ್ಕಾರಿ ನೌಕರರು ಯಾವುದೇ ಹಣಕಾಸಿಗೆ ಕೊರತೆ ಇಲ್ಲವಾದರೂ ಆಗಾಗ ಯಾವುದಕ್ಕಾದರೂ ಕೆಲವೊಂದು ಸಂದರ್ಭದಲ್ಲಿ ಹಣಕಾಸಿನ ಕೊರತೆ ಬಂದಾಗ ನಾನು"ನನ್ನದೂ ದುಡ್ಡು ಇದೆ ಕಣೇ ....ಬರತ್ತೇ..." ಎಂದು ಆಗಾಗ ಹೇಳುತ್ತಿದ್ದೆ. ಅವಳು ಆರಂಭದಲ್ಲಿ ಇರಬಹುದೇನೋ ಎಂದು ನಂಬಿದ್ದಳು... ಯಾವಾಗಲಾದರೂ ಕೇಳಿದಾಗಲೂ ಇದೆ ಯಾವಾಗಲಾದರೂ ಹೇಳುತ್ತೇನೆ...ಅಂತಾನೆ ಹೇಳುತ್ತಿದ್ದೆ. ನಿಮ್ಮದೂ ದುಡ್ಡಿದೆ ದುಡ್ಡಿದೆ ಎಂದು ಹದಿನೈದು ವರ್ಷದಿಂದಲೂ ಹೇಳುತ್ತಿದ್ದೀರಿ...ಅದು ಒಮ್ಮೆ ಆದರೂ ನೋಡಲೇ ಇಲ್ಲ... ಅವಳ ಪಾಲಿಗೆ ಅದೊಂದು ' ಈಗ ದುಡ್ಡು ಇಲ್ಲ ಏನೂ ಕೊಡಿಸಲಾಗುವುದಿಲ್ಲ ' ಎಂದು ನೇರವಾಗಿ ಹೇಳಲಾಗದೇ "ನನ್ನದು ದುಡ್ಡು ಇದೆ " ಅಂತ ಹೇಳಿಕೊಂಡು ಒಂದಷ್ಟು ದಿನ ಕಳೆದಿರುವೆ.ನಾನು ನಿಜವಾಗ್ಲು ಅವಳಿಗೆ shopping ನ ಆಸೆ ಬಿಟ್ಟು Shop ಇಂದ ಹೊರಗಡೆ ಬರಲು ಹೇಳಿದ್ದು.. ಅದರಿಂದ ನನಗೂ ಏನೋ ಸಮಾಧಾನ.. ಖರ್ಚು ಮಾಡಲು ದುಡ್ಡಿಲ್ಲದಿದ್ದಾಗ ಏನನ್ನೋ ತೆಗೆದುಕೊಳ್ಳಲು ಹೆಂಡತಿ ಕೇಳಿದಾಗ ಮುಂದಿನ ಸರಿ ಬಂದಾಗ ನೋಡೋಣ ಎಂದೇಳಿದರೆ ಅದೆಷ್ಟು ಗೊಣ ಗೊಣ ಎಂದು, ಎಷ್ಟು ಸರಿ ಬಂದರೂ ಅಷ್ಟೇ ಎನ್ನುವಂತಹ ಹೇಳಿಕೆಗಳು ಕೆಲವೊಮ್ಮೆ ಕಿರಿ ಕಿರಿಯನ್ನು ಉಂಟುಮಾಡುತ್ತಿರುತ್ತಾವೆ. ಅದಕ್ಕೆ ನಾವೂ ಕಿರಿಕಿರಿ ಮಾಡಿಕೊಂಡರೇ ನಷ್ಟದಲ್ಲಿ ನಷ್ಟ ಇನ್ನೂ ಕಷ್ಟ ಆಗಬಹುದಾದ ಸಾಧ್ಯತೆ ಇರುವುದರಿಂದ "ನನ್ನದೂ ದುಡ್ಡು ಇದೆ ಅದು ಬಂದಾಗ ನೋಡುವ..." ಎಂದು ಕಷ್ಟ ಬಂದಾಗ ನೀಡುವಂತಹ ರಕ್ಷಣಾ ಹೇಳಿಕೆ ಆಗಿಯೂ, ಸಮಾಧಾನ ಪಟ್ಟುಕೊಳ್ಳಲು ಇರುವಂತಹ ಒಂದು ಆಶಾಭಾವನೆಯಾಗಿಯೂ ಇದು ಆಗಿತ್ತು.
ಆರುಷಿಯು adventurous ಆಗಿ ಆಗಾಗ ಅಲ್ಲಲ್ಲಿ ತಿರುಗಾಡುತಿದ್ದನು. ಕೈಯಲ್ಲಿ ಕ್ಯಾಮೆರಾ ಹಿಡಿದು ಒಳ್ಳೆಯ frame/Snap s ಎಲ್ಲೆಲ್ಲಿ ಸಿಗಬಹುದಾದ ಸಾಧ್ಯತೆ ಇದೆಯೋ ಅಲ್ಲೆಲ್ಲಾ ಪೋಟೋಗಳನ್ನು ಕ್ಲಿಕ್ ಮಾಡಲು ಹೋಗುತ್ತಿರುತ್ತಾನೆ.ಅದೊಂದು ಸುಂದರ ಮತ್ತು ದಟ್ಟಾರಣ್ಯ.ಸುತ್ತಲೂ ನೇರವಾಗಿ ಎತ್ತರಕ್ಕೆ ಬೆಳೆದಿರುವ ತೇಗ ಮತ್ತು ಇತರ ಮರಗಳು. ಮಾಗಿಯ ಚಳಿಯ ಇಬ್ಬನಿ ಕಾಡನ್ನು ಅಪ್ಪಿತ್ತು. ಎತ್ತರಕ್ಕೆ ಬೆಳೆದು ನಿಂತ ಮರದ ಸಂದುಗಳಿಂದ ಬೆಳಕು ಹಾದು ಅಟವಿಯ ನೆಲಕ್ಕೆ ಬೀಳುವ ಅರುಣನ ಸ್ಪಟಿಕದ ಕ್ಷಣಗಳಲ್ಲಿ ಪೋಟೋ ಸೆರೆ ಹಿಡಿಯುವುದೆಂದರೇ ಪೋಟೋ ಗ್ರಾಫರ್ಗಳಿಗೆ ಗೋಲ್ಡನ್ ಟೈಂ... ಸಿಗುವ ನಾಲ್ಕಾರು ನಿಮಿಷದ ಅವಧಿಯಲ್ಲಿ ಒಂದೆರಡಾದರೂ ಒಳ್ಳೆಯ ಪೊಟೋಗಳು ಸೆರೆ ಹಿಡಿಯುವ ತವಕ. ದೂರದಲ್ಲಿ ಕಾಣುವ ಹೊಂಬಣ್ಣದ ಮುತ್ತುಗದ ಹೂಗಳನ್ನು ಸುಂದರವಾಗಿ ತೆಗೆಯುವ ಹಂಬಲ. ಮೂಡಣದಿ ಮೂಡಿದ ಸೂರ್ಯನು ಮುತ್ತುಗದ ಪೋಟೋ ತೆಗೆಯಲು ಒಳ್ಳೆಯ ಲೈಟಿಂಗ್ ಕೊಡುತ್ತಿದ್ದ.ಆ ಲೈಟಿಂಗ್ ಗೆ ಪೋಟೊಗಳು ಕಾಡಿಗೆ ಬೆಂಕಿಯೇ ಹೊತ್ತಿ ಉರಿಯುತ್ತಿದೆಯೆಂಬಂತಹ ಅದ್ಬುತ ಪೋಟೋಗಳು ಸಿಕ್ಕವು. ಬಗೆ ಬಗೆಯಂತೆ ಹತ್ತಾರು ಪೋಟೋಗಳ ಪ್ರೇಮ್ ಸಿಕ್ಕವು. ಒಂದೊಂದು ಮುತ್ತುಗದ ಹೂವಿನ ಗೊಂಚಲು ಬೆಂಕಿಯ ಕೆನ್ನಾಲಿಗೆಯನ್ನು ಹೊರಸೂಸುವ ಜ್ವಾಲೆಯಂತೆ ಕಂಡವು.ಅದಕ್ಕೆ ಈ ಹೂವನ್ನು 'ಕಾಡಿನ ಬೆಂಕಿ' ಎಂದು ಅನ್ವರ್ಥವಾಗಿ ಕರೆಯುವುದುಂಟು. ಇನ್ನೂ ಪೋಟೋ ಕಲೆ, ತೆಗೆಯುವ ಶೈಲಿ ಪೋಟೋ ತೆಗೆಯುವವರ ಕೌಶಲ್ಯ ಮತ್ತು ಅನುಭವದ ಹಿನ್ನೆಲೆಯಲ್ಲಿ ಅದ್ಭುತವಾಗಿ ಪೋಟೋಗಳು ಮೂಡಿ ಬರುವ ಅವಕಾಶ ಆ ಸ್ಥಳದಲ್ಲಿ ಪ್ರಕೃತಿಯು ಸೃಷ್ಟಿಸಿತ್ತು. ಆ ಮುಂಜಾನೆಯ ಚುಮು ಚುಮು ಚಳಿ, ಹುಲ್ಲಿನ ಮೇಲಿನ ಮಂಜಿನ ಮುತ್ತಿನ ಹನಿಗಳ ಸೊಬಗು ಮನರಂಜಿಸುವಂತಿತ್ತು..
ನಿರ್ಜನ ಸ್ವಚ್ಚಂದವಾದ ಪರಿಸರದಲ್ಲಿ ಪ್ರಕೃತಿಯ ಸೊಬಗು ಸವಿಯಲು ಚಂದವೇ...ಅದೂ ಹಿಂದೆ ಮುಂದೆ ಎಲ್ಲಾ ಕಡೆ ತಿರುಗಿ ತಿರುಗಿ ನೋಡುತ್ತಾ ಬರುತ್ತಿದ್ದೆ. ಸೂರ್ಯ ನೆತ್ತಿಯ ಮೇಲೆ ಬಂದಂತೆ ನಾನು ರಸ್ತೆ ಕಡೆ ಹಿಂದಿರುಗುತ್ತಾ ಬರುತಿದ್ದೆ. ಹೋಗುವ ಹಾದಿ ಮತ್ತು ಬರುವ ಹಾದಿಯು ಒಂದೇ.. ಹೋಗುವಾಗ ನನಗೆ ಗಮ್ಯವಷ್ಟೇ ಮುಖ್ಯವಾದ್ದರಿಂದ ಮತ್ತು ಸ್ವಲ್ಪ ಮಟ್ಟಿಗೆ ಕತ್ತಲೂ ಇದ್ದುದರಿಂದ ಆಚೆ ಈಚೆ ನೋಡಲು ಹೋಗಲಿಲ್ಲ. ಹಾಗೆ ಬರುತ್ತಿರುವಾಗ ಕಂಡಿದ್ದು ಒಂದು Apple ಲ್ಯಾಪ್ ಟಾಪ್,10-12 ಲೀಟರ್ ಸಾಮರ್ಥ್ಯದ ಒಂದು Steel ಬಾಕ್ಸ್... ಒಂದು ಬ್ಯಾಗ್...ವಜ್ರದ ಹರಳುಗಳಂತೆ ಇರುವ ವಿದೇಶಿ ಮದ್ಯದ ಖಾಲಿ ಬಾಟಲ್ ಗಳು. ನಾನು ಇದುವರೆಗೂ ನೋಡದೇ ಇರುವ ಖಾಲಿ ಸೀಗರೇಟ್ ಪ್ಯಾಕ್ಗಳು...laptop sreen sleep ಆಗಿದೆ. ಬಟ್ still its running....! ಇಲ್ಲಿರುವ ವಸ್ತುಗಳು ಯಾರದ್ದು???
ಬೇರೆ ಯಾರೂ ಕಾಣಿಸುತ್ತಿರಲಿಲ್ಲ...
ಹಲೋ...ಯಾರಾದರೂ ಇದ್ದೀರಾ???
ಶಬ್ದ ಇಲ್ಲ..
ಜೇಬಲ್ಲಿದ್ದ ವಿಷಲ್ ತೆಗೆದು ಒಮ್ಮೆ ಊದಿದೆ. ಯಾರ ಪ್ರತಿಕ್ರಿಯೆಯೂ ಇಲ್ಲ...
ಏನಿವೆಲ್ಲಾ???
ಯಾವ ಯಾವುದೋ ತೆರನಾದ ಸೀಲ್ಗಳು..
ಮೂರ್ನಾಲ್ಕು ಜನ ಕೂತು ಏನೋ ಮಾಡುತ್ತಿರಬೇಕು. ಇರಲಿ ಆದರೆ ಈ ಪ್ರದೇಶದಲ್ಲಿ ಬಂದು ಮಾಡುವ ಅನಿವಾರ್ಯತೆ ಏನಿತ್ತು ?ಮನೆಯಲ್ಲೂ ಎಲ್ಲಿಯಾದರೂ ಆಫೀಸ್ನಲ್ಲು ಮಾಡಬಹುದಿತ್ತು. ಇಲ್ಲಿ ಏಕೆ LAPTOP ತಂದು ಏನು ಮಾಡಿರಬಹುದು ??ಕೆಲವು ಹುಡುಗರು ಲ್ಯಾಪ್ಟಾಪ್ ನಲ್ಲಿ ಯಾವ ಯಾವುದೋ ಸಿನಿಮಾಗಳನ್ನು ನೋಡಲು ತಂದಿರಬಹುದು ಎನ್ನುಸಿತು. ಆದರೆ ಈ ಸೀಲುಗಳು?? ಅಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು... ಗೊತ್ತಾಗ್ತಿಲ್ಲ. ಬಹುಶಃ ಯಾರೋ ರಾತ್ರಿ 'ಪಾರ್ಟಿ' ಮಾಡಿರಬಹುದು ಎನಿಸಿತು. ಆದರೆ ಇವೆಲ್ಲಾ ಇಲ್ಲೇಕೆ ಬಿಟ್ಟು ಹೋಗಿರಬಹುದು??? ಆ ಸೀಲ್ಗಳಾದ್ರೂ ಏನಿರಬಹುದು ಎಂದು ನೋಡೋಣ ಎನಿಸಿತು. ಅಲ್ಲೇ ಇದ್ದ ಸ್ಟಾಂಪ್ ಪ್ಯಾಡ್ ಮೇಲೆ ಒತ್ತಿ ನೋಡಿದರೆ Cash paid,ಇನ್ನೊಂದು partial cash paid ಅಂತ ಇತ್ತು. ಹಾಗಾದರೆ ಇದರಲ್ಲೇ ಎಲ್ಲೋ ಇವರ ವಿಳಾಸ ಆಫೀಸಿನ address ಸೀಲ್ ಇರಬೇಕು ಎಂದು ನೋಡಿದ.ಯಾವ ಸೀಲುಗಳಲ್ಲೂ ಕೂಡ ಆಫೀಸು, ಅಡ್ರೆಸ್ ಯಾವ ಮಾಹಿತಿ ಸಿಗ್ಲಿಲ್ಲ. ಹಾಗಾದ್ರೆ ಇಲ್ಲಿ ಯಾರೋ ಏನನ್ನೋ ಮಾಡುತ್ತಿದ್ದಾರೆ. ಅದು ಕಾನೂನು ವಿರುದ್ಧವಂತೂ ಸ್ಪಷ್ಟ ಎನಿಸುತ್ತಿದೆ. ಹಾಗಾದ್ರೆ ಹಣಕಾಸಿನ ವ್ಯವಹಾರ ಆಗಿದ್ದರೆ ಇದಕ್ಕೆ ಸಂಬಂಧಿಸಿದ ಸ್ವಲ್ಪವಾದರೂ ಹಣವೋ,ಅಥವಾ ಬೇರೆ ದಾಖಲೆಗಳು ಇಲ್ಲಿ ಎಲ್ಲಾದರೂ ಇರಬಹುದು...ಆ ಬ್ಯಾಗಲ್ಲಿ ಏನಾದರೂ ಇರಬೇಕು.. ಎತ್ತಿ ನೋಡಿದ.. ಆ ಬ್ಯಾಗಲ್ಲಿ ಒಂದೆರಡು ಪೇಪರ್, ಯಾವುದೋ ಬಟ್ಟೆ ಬರೆ ಬಿಟ್ಟರೆ ಏನು ಇರಲಿಲ್ಲ.ಪಕ್ಕದಲ್ಲಿ 'Handle with care ' ಎಂದು ಸ್ಟಿಕ್ಕರ್ ಅಂಟಿಸಿದ ಬರೆದಿರುವ steel ಪೆಟ್ಟಿಗೆ.ಹಾಗಾದರೆ ಅದರಲ್ಲಿ ಏನೋ ಇಂಪಾರ್ಟೆಂಟ್ ಇರಬಹುದು ಎಂದೆನಿಸಿತು. ನೋಡಿದರೆ ಹೊಸ ಮತ್ತು ಹಳೆಯ ಚಿಂದಿಯಾದ ಟಿಶ್ಯೂ ಪೇಪರ್ ಮೇಲೆ ಕಾಣಿಸಿದವು.ಆದರೆ ಆ ಬಾಕ್ಸ್ ಲ್ಲಿ ಪೇಪರ್ ಅಷ್ಟೇ ಅದರಲ್ಲಿಲ್ಲ ಎಂಬುದು ಅಷ್ಟೇ ಸತ್ಯ ಆಗಿತ್ತು. ಆ ಟಿಶ್ಯೂ ಪೇಪರ್ ಸರಿಸಿ ನೋಡಿದರೆ ಅತ್ಯುತ್ತಮ ಗುಣಮಟ್ಟದ ಪ್ಲಾಸ್ಟಿಕ್ ಲ್ಯಾಮಿನೇಷನ್ ಪೇಪರ್ ಕವರ್ ಮಾಡಿದ ಏನೋ ಕಾಣಿಸಿತು. ನೋಡಿದರೆ ಏನೋ ಬಾಕ್ಸ್ ಗಳು ಕಂಡು ಆ ಬಾಕ್ಸ್ ಕೂಡ ಲ್ಯಾಮಿನೇಟೆಡ್ ಅದು ಬರಿ ಕೈಯಲ್ಲಿ ಓಪನ್ ಮಾಡಲು ಸಾಧ್ಯವಾಗದ ಗುಣಮಟ್ಟದ ಲ್ಯಾಮಿನೇಷನ್. ಕೈಯಲ್ಲಿ ಓಪನ್ ಆಗ್ತಾ ಇಲ್ಲ. ನನ್ನ ಕ್ಯಾಮೆರಾ ಬ್ಯಾಗಲ್ಲಿ ಒಂದು cutter ಇತ್ತಾದರೂ ನಾನು ತೆಗೆಯುವುದು ಈ ವಸ್ತುಗಳನ್ನ ಇಟ್ಟವರು ನೋಡಿದರೆ ನನ್ನನ್ನೇ ತಪ್ಪಾಗಿ ಕಾಣಬಹುದು ಎಂದು ಸುಮ್ಮನಾದೆ. ಓಂದೈದು ನಿಮಿಷ ನೋಡೋಣ ಎನಿಸಿತು.ಯಾವ ನರ ಪಿಳ್ಳೆಯ ಸುಳಿವಿಲ್ಲ. ಏನಾದರೂ ಆಗಲಿ ಏನಿದೆ ಎಂದು ನೋಡಿ ಬಿಡೋಣ ಎಂದು ಜೇಬಲ್ಲಿ ಇದ್ದ ಬೈಕ್ ಕೀ ತೆಗೆದು ಆ ಲ್ಯಾಮಿನೇಟೆಡ್ ಕವರ್ ಕಿತ್ತೆ. '50000' ಎಂದು ಒಂದು ಮೂಲೆಯಲ್ಲಿ ಕಾಣಿಸಿತು. ಹಾಗೆ ಲ್ಯಾಮಿನೇಷನ್ ಪ್ಲಾಸ್ಟಿಕ್ ಮೇಲೆತ್ತುತ್ತಾ ಬಂದರೆ ಕರ್ಜೂರದ ಚಿತ್ರ ಇರುವುದು ಕಾಣುತ್ತಿದೆ. ಮೇಲ್ನೋಟಕ್ಕೆ ಹಣದ ನೋಟು ಎನಿಸಿತು. ನಮ್ಮ ಹಳೆಯನ 90 s ಕಾಲದ ನೂರರ ನೋಟಿನಂತೆ ಕಾಣುತ್ತಿದೆ. ಒಂದೇ ಬಾರಿಗೆ ಜೋರಾಗಿ ಸರಿಸಿ ನೋಡಿದರೆ ಅದು currency ನೋಟೇ... ಆದರೆ ನಮ್ಮ ದೇಶದಲ್ಲ.! ಸೆಂಟ್ರಲ್ ಬ್ಯಾಂಕ್ ಆಫ್ ಕುವೈತ್ ನ '2000 ಮುಖಬೆಲೆಯ ನೋಟುಗಳು.ಒಂದೊಂದು ಪ್ಯಾಕ್ ಲ್ಲಿ ಹತ್ತು ನೋಟುಗಳು ಇವೆ. ಸದ್ಯ ನಮ್ಮ ದೇಶದಲ್ಲಿ 500 ನೋಟೇ ಗರಿಷ್ಠ.2000 ಇತ್ತು. ಈಗ ಅದೂ ಇಲ್ಲ. ..ಆ ಎರಡು ಸಾವಿರ Single ನೋಟಿನ ಮುಖ ಬೆಲೆ 2000. ಒಂದು ದಿನಾರ್ ಗೆ ಇಂಡಿಯಾ ರುಪಾಯಿಯು 275 ರುಪಾಯಿ ಆಗುತ್ತದೆ. ಆದರೆ ನಮ್ಮ ಭಾರತೀಯ ರೂಪಾಯಿಯಲ್ಲಿ ಒಂದು ನೋಟಿನ ಮೌಲ್ಯ 5.50.000 INR...! ಅಂದರೆ ನಾನು ತೆಗೆದುಕೊಂಡು ಬಂದ ಹತ್ತು ನೋಟಿನ ಒಟ್ಟು ಮೌಲ್ಯ ಒಂದು ಕೋಟಿ ಹತ್ತು ಲಕ್ಷ...! ಹಣದ ಬಾಕ್ಸ್ ನ್ನೇ ಹಿಡಿದು ತರೋಣ ಎಂದರೇ ಮುಂದಿನ ಎಲ್ಲಾ ಹಂತದಲ್ಲಿ ಆ ಹಣದ ಚಲಾವಣೆಯ ಪ್ರಯತ್ನದಲ್ಲಿ ಕಾನೂನಿನ ಕುಣಿಕೆಗೆ ಸಿಕ್ಕರೆ???ಆದರೂ ಈ ಹಣವಾದರೂ 8Original / fake ಅಂತನೂ ಗೊತ್ತಾಗ್ತಾ ಇಲ್ಲ ...ಆದರೆ ಬೇರೊಂದು ದೇಶದಲ್ಲಿ ಸಿಗುತ್ತಿದೆ ಅಂತ ಅಂದರೆ ಅದು ಬಹುಶಃ ನಕಲಿ ಇರಬಹುದು..ಅಥವಾ ಅಸಲಿಯೂ ಇರಬಹುದು.ಈ ನೋಟುಗಳು ಹಾಗೆ ಇರಲಿ ಎಂದು ಒಂದು ಪ್ಯಾಕ್ ನ ನೋಟುಗಳನ್ನು ಮಾತ್ರ ಎಳೆದುಕೊಂಡೆ. ಇವುಗಳನ್ನು ಚಲಾವಣೆ ಮಾಡುವುದು ಬೇಡ ಆದರೆ ಇದು ನನ್ನ ನಾಣ್ಯ ಮತ್ತು ನೋಟುಗಳ ಸಂಗ್ರಹಕ್ಕೆ ಸೇರಿಸಿಕೊಳ್ಳೋಣ ಎಂದು. ಆದರೆ ಇಲ್ಲಿರುವ ವಸ್ತುಗಳು ಹಣದ ಬಗ್ಗೆ ಯಾರಿಗಾದರೂ ತಿಳಿಸಬೇಕಲ್ಲ...ನನ್ನ ಸ್ನೇಹಿತರು ಅಥವಾ ಬೇರೆ ಯಾರಿಗೆ ಹೇಳಿದರೂ ಅದು ಇದು ಹೇಳಿ ನನ್ನ ತಲೆ ಕೆಡಿಸುವರು. ಕೊನೆಗೆ ನಾನಿಷ್ಟು ನೀನಿಷ್ಟು ಹಂಚಿಕೊಳ್ಳೋಣ ಎನ್ನುವರು. ಹಚ್ಚಿಕೊಂಡದ್ದನ್ನು ನಗದು ಮಾಡುವ ಪ್ರಯತ್ನದಲ್ಲಿ ಸಿಕ್ಕಿಬೀಳುವ ಅಪಾಯ ಇದ್ದೇ ಇತ್ತು. ಅದಕ್ಕೆ ಸುಮ್ಮನೇ ಪೊಲೀಸ್ ಗೆ ತಿಳಿಸಲು ನಿರ್ಧರಿಸಿದ. ಅವರೂ ಇದರ ದುರುಪಯೋಗ ಮಾಡಿಕೊಂಡರೆ?? ಏನು ಮಾಡ್ಲಿಕ್ಕೆ ಆಗುವುದಿಲ್ಲ ಸದ್ಯಕ್ಕೆ ಇದನ್ನು ನಾನು ಏನೂ ಮಾಡಲಾಗುವುದಿಲ್ಲ. ಆದರೆ ಇದಕ್ಕೆ ಸರಿಯಾದ ಕಾನೂನಾತ್ಮಕ ವಿಧಾನವೆಂದರೆ ಪೊಲೀಸರಿಗೆ ತಿಳಿಸುವುದು.ನನಗೆ ಪರಿಚಯ ಇರುವ SP ಕಚೇರಿಯ ನನ್ನ ಹಿತೈಷಿಯೊಬ್ಬರಿಗೆ ಕರೆ ಮಾಡಿದೆ. ಇರುವ ವಾಸ್ತವಾಂಶವನ್ನು ಹೇಳಿದೆ. ಇದು ಹಣ ಅಸಲೋ ನಕಲಿಯೋ ಗೊತ್ತಿಲ್ಲ. ಅಸಲಿಯಾದರೆ ದುರ್ಬಳಕೆ ಅಂತೂ ಆಗಬಾರದು ಎಂದಿದ್ದಕ್ಕೆ ಅವರು ನಾನು SP ಅವರ ಜೊತೆಗೆ ಮಾತಾಡುವೆ. ಆಮೇಲೆ ಅವರು ನಿಮ್ಮೊಂದಿಗೆ ಬರುವರು. ಅವರಿಗೆ body ವೋರ್ನ್ ಕ್ಯಾಮೆರಾ ಇರುತ್ತದೆ. Online ವಿಡಿಯೋ ರೆಕಾರ್ಡಿಂಗ್ ಇರುತ್ತದೆ. ಅವರು ಏನೆಲ್ಲಾ ಮಾಡ್ತಾರೋ ಅದು ರೆಕಾರ್ಡ್ ಆಗ್ತದೆ ..ಏಕಕಾಲದಲ್ಲಿ ನಮ್ಮ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೂ ಕೂಡ ಶೇರ್ ಆಗುತ್ತೆ ಇದರಲ್ಲಿ ಮೋಸ ಆಗೋದಿಲ್ಲ. ನನ್ನನ್ನೂ ನಂಬಿ ಎಂದರು. ಅವರ ವಿಶ್ವಾಸಕ್ಕೆ ನಂಬಿ ಬಂದಿದ್ದೇನೆ ಬರುವಾಗ ಆ box ತರಬೇಕಿತ್ತು ನಮ್ಮ ದೇಶದ ಕರೆನ್ಸಿ ಅಲ್ಲದೆ ಇರುವಾಗ ಏನು ಮಾಡುವುದು ಹೋಗ್ಲಿ ಬಿಡು ಎಂದು ನಡೆದ ವಿಷಯ ಕುಮದಾಗೆ ಹೇಳುತ್ತಾ ಮೊಬೈಲ್ ತೆಗೆದು ಕೈಯಲ್ಲಿ ಇದ್ದ ನೋಟನ್ನು ಗೂಗಲ್ Lens ನಲ್ಲಿ scan ಮಾಡಿದೆ. ಅದೇ ಐವತ್ತು ಸಾವಿರ ಮುಖಬೆಲೆಯ ಬೇರೆ ಬೇರೆ ನೋಟು ಕಾಣಿಸಿತು. ಆ ಕುವೈತ್ ನೋಟಿನ ಇಂಡಿಯಾ ಕರೆನ್ಸಿಯ ಬೆಲೆ ಏನು ಎಂದು ಸರ್ಚ್ ಮಾಡಿದೆ. ಆ ಒಂದು ದಿನಾರ್ 275 ಭಾರತೀಯ ರುಪಾಯಿ ( ) ಹಾಗಾದರೆ ಕೋಟ್ಯಾಂತರ ಹಣವನ್ನು ನಾನು ಇಂದು ಪೋಲಿಸರಿಗೆ ಒಪ್ಪಿಸಿದ್ದೇನೆ ಎಂದೆನಿಸಿತು. ನನ್ನ ಬಳಿಯೂ ಒಂದು ಕೋಟಿ 10% ಇದೆ ಎಂದು ನೋಡು ಕುಮುದಾ ನಾನು ಹೇಳುತ್ತಿದ್ದೆನಲ್ಲಾ?? ನನ್ನದೂ ದುಡ್ಡಿದೆ ದುಡ್ಡಿದೆ ಎಂದು... ಅದೇ ಇದು...ಪಕ್ಕದಲ್ಲಿ ಮೊಬೈಲ್ ತೆಗೆದು ಆ ನೋಟುಗಳನ್ನು whats app status ಇಡೋಣ ಎಂದು ಮೊಬೈಲ್ ತೆಗೆದರೆ ಮೊಬೈಲ್ ಏನೋ ಸೌಂಡ್ ... ನೋಡಿದರೆ Alarm....!!!
✍️ ನಾಗೇಂದ್ರ ಬಂಜಗೆರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ