ನೋಟು-ವೋಟು...

*ನೋಟು-ವೋಟು....*

ಆರುಷಿ Krish ಗೆ ಕಾಲ್ ಮಾಡಲು ಮೊಬೈಲ್ ತೆಗೆದು ಡಯಲ್ ಮಾಡಿದ...

ಮೊಬೈಲ್ ರಿಂಗಾಯಿತು...

Krish :ನಮಸ್ತೆ ಬಾಸ್...

ಆರುಷಿ:ನಮಸ್ತೆ... ದೇವ್ರು...ಅರಾಮಿದ್ದೀರಾ ದೇವ್ರೂ??

Krish:ಅರಾಮಿದ್ದೀನಿ ಬಾಸ್... ಏನ್ ಬಾಸ್ ತುಂಬಾ ದಿನ ಆದಮೇಲೆ  ಕಾಲ್ ಮಾಡಿದ್ರಿ.... 

ಆರುಷಿ:ನಾಳೆ ನಾನು ನಿಮ್ಮ ಊರಿಗೆ ಬರುತ್ತೇನೆ... ಹೌದಾ ಏನ್ ಬಾಸ್ ಸಮಾಚಾರ ??

ಆರುಷಿ:ಎಲೆಕ್ಷನ್ನು.... ವೋಟ್ ಹಾಕಬೇಕಿತ್ತು ದೇವ್ರೂ...

Krish:ಹೊಡೆದ್ರಲ್ಲಾ ಬಾಸ್ ಲಾಟರಿ...
ಅವರು 1500,ಇವರೂ 2000 ... ಭರ್ಜರಿ ಆಪರ್ ನಮ್ಮು ಹುಡುಗ್ರೆ ಹಂಚುತಿರುವವರು... ಬನ್ನಿ ಬನ್ನಿ....

ಆರುಷಿ:ವಗ್ಗಣ್ಣೆ..‌ ಮಿರ್ಚಿ...90-180 ಎಲ್ಲಾ ಬಿಟ್ಟು ಬಿಟ್ರಾ???ಈಗ ಪುಲ್ ಕ್ಯಾಷ್.... ಈಗ...

ಹ್ಞೂ ಬಾಸ್... ಬನ್ನಿ ನೀವು ತಗೊಳ್ಳರಂತೆ...

ಆರುಷಿ:ನಾನು ಯಾವತ್ತೂ ತಗಂಡಿಲ್ಲ ದೇವ್ರೂ....

Krish:ಏನಾಗಲ್ಲ ಬರ್ರಿ ಸ್ವಾಮಿ.... ಊರಲ್ಲಿ ಎಷ್ಟು Vote ಇದಾವೋ ಅಷ್ಟು vote ಗೆ fund ಬಂದಿದೆ.. ನೀವು ತಗೊಳ್ಳಲಿಲ್ಲ ಅಂದ್ರೆ ಇವರೇ ಯಾವಾನೋ ತಗೊಳ್ಳುತ್ತಾನೆ..‌ ತಗೊಳ್ಳಿ... ತಗೊಳ್ಳಿ...

ಆರುಷಿ:ತಗೋಳಣಾ???

Krish:ನೀವ್  ತಗಳೋಣ ಅಂದ್ರೆ ... ಒಂದೇ ನಿಮಿಷ ... 

ಆರುಷಿ:ನೋಡೋಣ ತಗಳಪ್ಪ ನಾಳೆ ಹನ್ನೆರಡರ ನಂತರ ಬರುವೆ...
ಮರುದಿನ ಕಾಲ್ ಮಾಡಿ  ಏನಪ್ಪ krish ಇದ್ದೀರಾ ??ನಾನು ಹೊರಡುತ್ತಿದ್ದೇನೆ... ಎಂದೆ..‌ ಹ್ಞಂ... ಸಿಟಿಗೆ ಹೋಗಿದ್ದೆ ಬರುತ್ತಿದ್ದೇನೆ. ಬನ್ನಿ ನಾನೂ ಅಷ್ಟೊತ್ತಿಗೆ ಬರುವೆ...

ಹೋಗುವಾಗ  ಬೆಟ್ಟಗಳ ಅಂಚಿನಲ್ಲಿ ಅಲ್ಲೋಂದು ಕೈಮರ  (ಮೂರು ಊರಿನ ರಸ್ತೆ ಸೇರುವ ಸ್ಥಳ) ಸಿಗುತ್ತದೆ. ಅಲ್ಲಿ ಎರಡ್ಮೂರು ಜನ ತೃತೀಯ ಲಿಂಗದವರು  ಹೋಗಿ ಬರುವವರಿಂದ ಮಾಮೂಲಿ ವಸೂಲಿ ಮಾಡಲು ಕೈ ಅಡ್ಡ ಹಾಕುತ್ತಿದ್ದರು.ಆಗ ನಾನು ದಿನಾಲು ಓಡಾಡುತ್ತಿದ್ದುರಿಂದಲೂ ಮತ್ತು ನನ್ನ ಒಬ್ಬ ಶಿಷ್ಯನು ಈಗ transgender ಆಗಿಯೂ ಬದಲಾಗಿದ್ದ. ಅವರೆಲ್ಲರೂ ಪರಿಚಯ ಇದುದ್ದರಿಂದ ನನ್ನನ್ನು ಕಂಡ ತಕ್ಷಣ ಕೈ ಅಡ್ಡ ಹಾಕುವುದು ಹಿಂತೆಗೆದರು. ನಾನೇ ಬೈಕ್ ಸ್ಲೋ ಮಾಡಿ ಅವರ ಯೋಗಕ್ಷೇಮ ವಿಚಾರಿಸುತ್ತಿರಲು ಅಲ್ಲೇ ಅಮ್ಮನ ಪಕ್ಕ ನಿಂತಿದ್ದ ಒಂಭತ್ತು ಹತ್ತು ವರ್ಷದ ಹುಡುಗಿಯೊಬ್ಬಳು ಓಡಿ ಬಂದು ನಮಸ್ತೆ ಹೇಳಿದಳು.. ಹೇಯ್ ಸಹನಾ ಚೆನ್ನಾಗಿದ್ದೀಯಾ???ಎಲ್ಲಿಗವ್ವ ಎಂದು ನಾನು ಕೇಳಲು ಪಕ್ಕದಲ್ಲಿದ್ದ ಅವರಮ್ಮ 'ಸಾ.. ನಾವು ಬರಲೇನು ಸಾ...?' ಎಂದಳು... ಹತ್ರಮ್ಮ...ಎಂದೆ..  ಬೈಕ್ ಹತ್ತಿದ ಮೇಲೆ ಮುಂದೆ ಹೋಗುತ್ತಾ ...ಏನಮ್ಮ ಹುಡುಗರು ದಿನಾಲು ಶಾಲೆಗೆ ಹೊಗತ್ತಿದ್ದಾರ??

ಹ್ಞು.. ಸಾರು ಹೋಗುತ್ತಿದ್ದಾರೆ...

ನಾವೀಗ ಊರಲ್ಲಿ ಇಲ್ಲ ಸಾ... ನಮ್ಮ ತವರು ಮನೆಯಲ್ಲಿ ಇದ್ದೀವಿ... ಯಜಮಾನ್ರೂ ಹೋಗ್ಬಿಟ್ರೂ... ನಾನು ಹೆಣ್ಮಗಳು ಒಬ್ಬಳೇ ಹೇಗಿರಲಿ ಅಂತ ತವರು ಮನೆಯಲ್ಲಿ ಇದ್ದೀನಿ ಎಂದಳು...ಆಗಲಿ ಅಲ್ಲೇ ದಿನಾಲು ಶಾಲೆಗೆ ಕಳಿಸಮ್ಮ... ಹಂಗಾದರೆ ವೋಟ್ ಹಾಕಲು ಬಂದಿದ್ರ??

ಹ್ಞು ಸಾ...

ಏನಾದರೂ ಕೊಟ್ರೆನಮ್ಮ ಎಲೆಕ್ಷನ್ನಿಂದು ??

ಹ್ಞು ಸಾರ್... ಆ ಪಕ್ಷದವರು 2000 ಈ ಪಕ್ಷದವರು 1500 ಕೊಟ್ಟಾರೆ... ಎಂದಳು... ಹ್ಹಾ.. ಹ್ಹಾ ಜನಗಳಿಗೆಲ್ಲಾ ಜಾತ್ರೆ ಹಾಗಾದರೆ...ಎಂದೇಳುವ ಹೊತ್ತಿಗೆ ನನ್ನ ಹೋಗಬೇಕಾಗಿದ್ದ ಸ್ಥಳ ಬಂದದ್ದರಿಂದ ಊರ ಹತ್ತಿರ ಹೋಗುತ್ತಿದ್ದ ಹಾಗೆ ಪುನಃ ಕಾಲ್ ಮಾಡಿದ ನಾನು 'ಬಾರಪ್ಪ ವೋಟ್ ಹಾಕಿ ಬರೋಣ..' ಅಂತ ಹೇಳಲು 

ಹೋಗಿ ಬರ್ರಿ... ವೋಟ್ ಹಾಕಿ ಬನ್ನಿ...ಇರ್ತೀನಿ...ಎಂದರು.. 
ಈಗ ಜನ ಇರಲ್ಲ ಹೋಗಿ ಬನ್ನಿ ಬೇಗ ಎಂದರು...

ಸರಿಯಪ್ಪ... ಹೋಗಿ ಬರುವೆ ಎಂದು ಹೋದೆ...

ಅಲ್ಲಿರುವ ಮೂಲ ರಾಜಕಾರಣಿಗಳು,ಪುಡಿ ರಾಜಕಾರಣಿಗಳು ಚಿರಪರಿಚಿತವೇ... ಅದರಲ್ಲೊಬ್ಬ ಎಲೆಕ್ಷನ್ ಡೇಟ್ announce ಆದ ದಿನ 'ಶುರು'ಮಾಡಿದ್ದ ರಾಜಕಾರಣಿ ನನ್ನ ಎದುರುಗೊಂಡ... ಸಾರ್... ನಮ್ ಪಕ್ಷ ನೇ ಗೆಲ್ಲದೂ ಅಂತ... ಇನ್ನೊಂದು ಗುಂಪು ಏ ಸರಿ ಜನ ಬದಲಾವಣೆ ಬಯಸಿದ್ದಾರೆ... ನಮ್ಮದೇ ಬರುವುದು ಎಂದು ವಾದಕ್ಕಿಳಿದರು... ಇವರ ಮದ್ಯೆ ನಾನು ತಗ್ಲಾಕೊಕೊಂಡೆ ಎಂದು "ವೋಟ್ ಹಾಕಿ ಬತ್ತೀನಿ ತಡೀರಿ ಅಣ್ಣ..." ಸರ್ ನಮ್ಮ್ದುಕ್ಕೆ ನಮ್ಮುದುಕ್ಕೆ ಎಂದು ಹೇಳುತ್ತಿದ್ದರು.ಸರಿ ಸರಿ  ಎಂದು ವೋಟ್ ಹಾಕಿ ಬಂದೆ.

ಸಾರ್ ನಮ್ಮ ಹುಡುಗನಿಗೆ ಹೇಳಿನಿ... ಬೆಂಡೇಕಾಯಿ ಕೊಡೋಕೆ ಬಸ್ಟಾಂಡ್ ನಲ್ಲಿ ಇದ್ದಾನೆ ಹೋಗ್ರಿ ಅಂದ...

ನನ್ನನ್ನೇ ಕಾಯುತ್ತಿದ್ದ ಅವನು ಹೊಲದಲ್ಲಿ ಬೆಂಡೇಕಾಯಿ ಬೆಳೆದಿದ್ದವು  ನಮ್ಮ ಹುಡುಗನಿಗೆ ಹೇಳಿನಿ ತಂದು ಕೊಡುತ್ತಾನೆ ಅಂತ ಹೇಳಿದರು.ನಾನು ಹೋಗುವುದೇ ಕಾಯುತ್ತಿದ್ದ ಅವನು ಬೆಂಡೆಕಾಯಿಯ ಒಂದು ಕವರ್ ಗಾಡಿಯ ಕ್ಯಾರಿಯರ್ ಗೆ ಹಾಕಿದ... ಸರಿಯಪ್ಪ Thank you ಅಂತ ಹೇಳಿ... krish ಅವರನ್ನು ಕಾಣಲು ಮುಂದೆ ಬಂದೆ...

ನಾನು ಹೋದ ತಕ್ಷಣ ಹೊರ ಬಂದ ಕ್ರಿಶ್ ನೆಡ್ರಿ ಹೋಗಾಣ... ಎಂದ... ಎಲ್ಲಿಗೆ ಅಂದಿದ್ದಕ್ಕೆ ಎಂದು ತಗಳೊದೇ ಇರೋರು 'ತಗಳ್ಳೋಣ' ಎಂದ್ರಿ ರೆಡಿ ಮಾಡಿನಿ ಎರಡೂ ಕೈಯಿಂದ ಕೈಮುಗಿದು 'ತಂದೆ ನಾನು ಎಲೆಕ್ಷನ್ನಿನ ದುಡ್ಡು 'ತಗೊಳೊಣವಾ? ಅಂತ ಕೇಳಿದ್ದು... 'ಇದು' ತಗಳೋಣ ಅಂತ ಅಲ್ಲ... 'ನನ್ನ ನೋಡಿದ ಮೇಲೂ ನಿಮಗೆ ಇವರು 'ಅದನ್ನು'ತಗಳ್ಳುತ್ತಾರೆ ಎಂದೆನಿಸಿತಾ?? ಇಲ್ಲ ಆದರೆ ನೀವು ಹೇಳಿದ್ದು ನನಗೆ ಹಾಗೆ ಎನಿಸಿತು ಅದಕ್ಕೆ ರೆಡಿ ಮಾಡಿದೆ..‌ ಬೇಡ ಬೇಡ.. ಎಂದಿದ್ದಕ್ಕೆ ಹಾಗಾದರೆ ಊಟ ಮಾಡೋಣ ಎಂದು ಇಬ್ಬರು ಊಟ ಮಾಡಿದೆವು...

ಈ ಬರಹದ ಅಸಲೀ ವಿಷಯಕ್ಕೆ ಈಗ ಬರೋಣ...ಈ ರಾಜಕಾರಣಿಗಳು ವಿವಿಧ ಪಕ್ಷದವರು ಒಂದು MLA ಎಲೆಕ್ಷನ್ ಗೆ ಎಷ್ಟು ಖರ್ಚು ಮಾಡಬಹುದು?? ಚುನಾವಣಾ ಆಯೋಗದ ಪ್ರಕಾರ 95 ಲಕ್ಷ.. ವಿಧಾನ ಸಭೆಗೆ 45 ಲಕ್ಷ... ಇದು ಚುನಾವಣೆಯ ಖರ್ಚಿನ ಗರಿಷ್ಠ ಮಿತಿ.. ಆದರೆ ಮತದಾರರಿಗೆ ಕೊಡುವ ಹಣವಲ್ಲ...ಆದರೆ ಸದ್ಯ ಈ ಒಂದು ಕ್ಷೇತ್ರದ ಚುನಾವಣೆಯಲ್ಲಿ ಒಬ್ಬ ಮತದಾರನಿಗೆ ಚುನಾವಣೆಯ ಹಿಂದಿನ ದಿನ ಕೊಟ್ಟ ನಗದು 3500 ಒಟ್ಟು... ಒಂದು ತಿಂಗಳಿನಲ್ಲಿ ಪ್ರಚಾರಕ್ಕೆ,ಜನಗಳ ಸೇರಿಸಲು ಎಲ್ಲಾ ರೀತಿಯ ಖರ್ಚು ಕನಿಷ್ಠ ಒಬ್ಬ ಮತದಾರನಿಗೆ 5000 ಅಂತ ಲೆಕ್ಕ ಹಾಕಿದರೆ 120-150 ಕೋಟಿ ಹಣ ಚುನಾವಣೆಗಾಗಿ ಖರ್ಚು ಮಾಡಿದ್ದಾರೆ. ಇನ್ನೂ ಬೆಂಗಳೂರಿನ ಆಸುಪಾಸಿನಲ್ಲಿರುವ ವಿಧಾನ ಸಭಾ ಉಪಚುನಾವಣೆಗಳಿಗೆ ಇನ್ನೂ ಜಾಸ್ತಿಯೇ ಆಗಿದೆ...ಇದೆಲ್ಲಾ ಹೇಗೆ ಸಾಧ್ಯವಾಗುತ್ತಿದೆ???ಮೂರು ವಿಧಾನ ಸಭಾ ಉಪಚುನಾವಣೆಗೆ ಕನಿಷ್ಠ ಸಾವಿರ ಕೋಟಿ ಖರ್ಚಾಗಿದೆ. ಆದರೆ ಅದೆಷ್ಟೋ ಹಳ್ಳಿಗಳಿಗೆ ಇನ್ನೂ ಮೂಲಭೂತವಾದ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ...ಇದು ಕೊಡುವರ ತಪ್ಪೋ ತೆಗೆದುಕೊಳ್ಳುವವರ ತಪ್ಪೂ ಅಥವಾ ಇಡೀ ವ್ಯವಸ್ಥೆಯೇ ತಪ್ಪು ದಾರಿಗೆ ತಿರುಗಿಬಿಟ್ಟಿದೆಯಾ ಎನ್ನುವ ಸಂಶಯ ಸದಾ ನನ್ನನ್ನು ಕಾಡುತ್ತಿದೆ...ಅಂದ ಹಾಗೆ ಮನೆಗೆ ಬಂದು ಬೆಂಡೆಕಾಯಿ ಕವರ್ ನ್ನು ಮನೆ ಒಳಗೆ ತರುವಾಗ ಒಂದು ವೈಟ್ ಪೇಪರ್ ಮಡಚಿಟ್ಟ ಏನೋ ಕಾಣಿಸಿತು... ಬೆಂಡೆಕಾಯಿಯೊಳಗೇನಿದು ಎಂದು ನೋಡಿದರೆ 500ರ ಎರಡು ನೋಟು ಇದ್ದವು...! ಕವರ್ ಇಟ್ಟವನಿಗೆ ಕರೆ ಮಾಡಿ ಏನಲೇ ಇದು ? ಎಂದು ಕೇಳಿದ್ದಕ್ಕೆ ಅಪ್ಪ ಹೇಳಿದ್ದ್ರು ಸಾರ್ ಅದಕ್ಕೆ ಇಟ್ಟೆ ಕೈಗೆ ಕೊಟ್ರೆ ತಗಳಲ್ಲ ಅಂತ ಹಂಗೆ ಮಾಡಿದೆ ಅಂದ... ಮರುದಿನ ಮಕ್ಕಳ ದಿನಾಚರಣೆ ಇದ್ದುದರಿಂದ ಆ ಎರಡೂ ನೋಟುಗಳನ್ನು ಮಕ್ಕಳ ಸಂಭ್ರಮಕ್ಕೆ ಬೇಕಾಗುವ ವಸ್ತಗಳನ್ನು ಕೊಂಡುಹೋಗಿ ದಿನವೆಲ್ಲಾ ಮಕ್ಕಳು ಆಟ ವಾಡಲು ಅನುಕೂಲ ಮಾಡಿಕೊಟ್ಟೆವು... ನಮ್ಮ ಶಾಲೆಯ ಇತಿಹಾಸದಲ್ಲಿ  ಮಕ್ಕಳು  ಹಿಂದೆಂದೂ ಮಾಡಿರದ, ಮಕ್ಕಳು ಕಂಡಿರದ 500 ಕ್ಕೂ ಅಧಿಕ ಮಕ್ಕಳಿಗೆ ಮರೆಯಲಾಗದ ದಿನವನ್ನಾಗಿ ಮಾಡಲಾಯಿತು.

✍️ ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..