ಸಲಹು ಸಲುಹಿದ ಭೂ ತಾಯ.‌‌..

#ಸಲುಹಿದ_ಭೂ_ತಾಯಿಯ...


ಧರೆಗಾಗಿ ಮಹಾಭಾರತ ಗತಿಸಿತು..

ಈ ಧರೆಗಾಗಿ ದೊರೆಗಳು ಆಳಿದರು ರಾಜ್ಯವ.. ಸೀಮೆಯ ವಿಸ್ತರಿಸಿದರು ಕಾಶ್ಮೀರದಿಂ ಕನ್ಯಾಕುಮಾರಿವರೆಗೆ

ಆದರೂ ಧರೆಯ ಮಣ್ಣು ಈ ದೊರೆಗಳಿಗೆ ಸೇರದೆ  ದೊರೆಗಳೇ ಮಣ್ಣಿಗೆ ಸೇರಿದರು ಕೊನೆಗೆ..


ಭೂಮಿಗಾಗಿ ನಡೆದಿದೆ ದೇಶ ದೇಶಗಳ ಮಧ್ಯೆ ಕದನ

ಭೂಮಿಗಾಗಿ ಕೊಂದಿಹರು ಹೆತ್ತವರ ಪ್ರೀತಿಸಿದ ಬಂಧುಗಳ ಮರೆತು ಮೂರು ದಿನದ ಬದುಕಿಗೆ..


ಬೇಟೆಯಾಡಿ ಬಡಿದು ತಿಂದರು ಕಾಡು ಮೃಗಗಳ..ಭಸ್ಮ ಮಾಡಿದರು  ಅರಣ್ಯವ

ಖನಿಜ ಬಗೆಯಲು ಭೂಮಿಗೆ ಹಾಕಿದರು ಕನ್ನ..

ತೆಗೆದರು ಗ್ಯಾಸ್ ಪೆಟ್ರೋಲ್ ಚಿನ್ನ. ಅದೆಷ್ಟು ದಿನ ಬರಬಹುದು ಇನ್ನಾ.??


ಬೀಜ ಬಿತ್ತಿ ಹೊನ್ನಬೆಳೆ ಬೆಳೆದರು ನಮ್ಮ ಅಜ್ಜ ಮುತ್ತಾತ..ಅನ್ನವ ನೀಡಿದ ಭೂಮಿಗೆ ದೇವರಭಕ್ತಿಯ ಮೆರೆದರು..

ಈಗಿನವರು ಅನ್ನವ ಬೆಳೆವ ಮಣ್ಣಿನಲಿ ಯೋಜಿಸಿಹರು ಪ್ರಿಂಟ್ ಹಾಕಲು ನೋಟು.!

ಆದರೆ ಹೊಟ್ಟೆಗೆ ತಿನ್ನಬೇಕಾಗುವುದೇನೋ ??


ಜೀವ ಜಲ ಇರುವುದು ಇಲ್ಲೆ ಮಂಗಳ ಚಂದಿರನಂತೆ ಬರಡುಗಲ್ಲಲ್ಲ ಈ ಭೂಮಿ

ನಿನ್ನ ಚಟ-ವಟಿಕೆಗೆ  ಕಾವಲಿ  

ಕಾದಂತೆ ಕಾದಿಹುದು ಈ ಭೂಮಿ

ತಾಪಕ್ಕೆ ನಿರ್ಗಲ್ಲು ಜಾರುತಿಹದು

ಸಾಗರ ಸರಿಯುತಿಹುದು ಕಾಪಾಡು ಓ ಮನುಜ ನಮ್ಮ ಮಕ್ಕಳೂ ಮೊಮ್ಮಕ್ಕಳು ನೋಡಲಿ ಓಡಾಡಲಿ ಒಂದು ದಿನ ಇರುವುದೊಂದು ಈ ಭೂಮಿಯಲಿ..


ನೋಡು ಬಾ ಭೂರಮೆಯ ಸಿಂಗಾರ..

ಹಾಸಿಹಳು ಹಸಿರ ಹಾಸಿಗೆ

ಮುಡಿದಿಹಳು ಸಪ್ತರಂಗಿನ ಸುಮಗಳ ಬಂದು ನೋಡು

ಭೂತಾಯ ಮಡಿಲು ಬರಿದಲ್ಲ  ಸಲುಹುತಿಹಳು ಸಕಲಜೀವರಾಶಿಗಳ ..


✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..