TRENDING...Begins from HISTORY ಟ್ರೆಂಡಿಂಗ್...
_Begin's from History....._
ಮೊನ್ನೆ ನಮ್ಮ ಏರಿಯಾದಲ್ಲಿ ಯಾರೋ ಸುಸಂಸ್ಕೃತ ಕುಟುಂಬದವರೊಬ್ಬರು Filter water ಪೈಪಿಗೆ 'ಗಂಗಮ್ಮನ ಪೂಜೆ' ಮಾಡಿದ್ದರು. ಈ ಗಂಗಮ್ಮನ ಪೂಜೆ ಮಾಡುವುದು ಹಿಂದೂ ಧರ್ಮದ ಒಂದ ಆಚರಣೆ.ಇದು ಮೊದಲು ನದಿಯಲ್ಲಿ ಮಾಡುತ್ತಿದ್ದುದು ಹಳ್ಳಕ್ಕೆ ಬಂತು,ಹಳ್ಳದಿಂದ ಸೇದುವ ಬಾವಿಗೆ ಪೂಜೆ ಮಾಡಿದರು. ಸೇದುವ ಬಾವಿಯಿಂದ ಜಗ್ಗುವ ಬೋರಿಗೆ ಗಂಗಮ್ಮನ ಪೂಜೆ ಮಾಡಲು ಶುರುಮಾಡಿದ್ದರು.. ಈಗ WATER FILTER ಗೆ ಗಂಗಮ್ಮನ ಪೂಜೆ ಮಾಡಿರುವುದು ನೋಡಿ ಈ 'TRENDING' ಎಲ್ಲಿಂದ ಎಲ್ಲಿಗೆ ಬಂತು ಎಂದು ಚಿಂತೆ ಮತ್ತು ನಗೂ ಎರಡೂ ಬಂತು...ಅದರ ಬೆನ್ನಟ್ಟಿ ಇತಿಹಾಸಕ್ಕೆ ಹೋದಾಗ ನನಗನಿಸಿದ ಅನಿಸಿಕೆ ಇಲ್ಲಿ ವ್ಯಕ್ತಪಡಿಸಿದ್ದೇನೆ.
ವಿಶಾಲವಾದ ಭೂಮಿಯ ಮೇಲೆ ವಾಸವಿದ್ದ ಅನೇಕ ಜೀವ ಜಂತುಗಳಲ್ಲಿ ಮಾನವನು ಒಂದು ಜೀವಿ...ಆರಂಭಿಕ ದಿನಗಳಲ್ಲಿ ಅವನ ಜೀವನ ಪದ್ದತಿಯು ಆಹಾರಕ್ಕಾಗಿ ಅಲೆದಾಟ, ಬಿಡುವಾದಾಗ ವಿನೋದ, ಇತರ ಗುಂಪಿನವರೊಂದಿಗೆ ಕಾದಾಟ ಆಹಾರ ಲಭ್ಯವಿರುವ ಸ್ಥಳಗಳಿಗೆ ವಲಸೆ. ಹೀಗೇಯೇ ದಕ್ಷಿಣ ಆಫ್ರಿಕಾ ದ 'ಲೂಸಿ'ಯ ಸಂತತಿ ಜಗತ್ತಿನಾದ್ಯಾಂತ ಬೆಳೆದು ಬಂದ ಟ್ರೆಂಡಿಂಗ್ ನ ಕತೆಗಳು...
_HiSTORY -1_
ಸೊಂಟಕ್ಕೆ ಸೆಣಬಿನ ನಾರು ಸುತ್ತಿಕೊಂಡಿರುವ ಸಾವಿರಾರು ಜನ...ಮಣ್ಣಿನ ಮಗಿಗಳನ್ನು ಕೈಯಲ್ಲಿ ಹಿಡಿದು ಸರತಿ ಸಾಲಿನಲ್ಲಿ ಹೋಗುತ್ತಿದ್ದಾರೆ.ಕಲ್ಲಿನ ದೋಣಿಗಳಲ್ಲಿ ಸುರುವಿಕೊಂಡ ಯಾವುದೋ ದ್ರವವನ್ನು ಕಲ್ಲಿನಿಂದಲೇ ಮಾಡಿದ ಸೇರಿನಲ್ಲಿ ಎಲ್ಲರಿಗೂ ಮುಕ್ಕಾಲು ಸೇರಿನಷ್ಟು ತುಂಬಿ ಮಗಿಗೆ (ಮಣ್ಣಿನ ಚೆಂಬು) ಹಾಕುತ್ತಿದ್ದರು. ಮಗಿ ಹಿಡಿದು ಮುಂದೆ ಹೋಗುತ್ತಾ ಆಗತಾನೇ ಕೆಂಡದಲ್ಲಿ ಬೇಯಿಸಿದ ದುಂಡನೆಯ ಬಿಸಿ ಬಿಸಿ ಬ್ರೆಡ್ ಒಂದನ್ನು ಕೊಡುತ್ತಿದ್ದಾರೆ. ಬಲಗೈಯಲ್ಲಿ ಬಿಸಿ ಬ್ರೆಡ್ .. ಎಡಗೈಯಲ್ಲಿ ಬೀಯರ್...!ಬಾಯಲ್ಲಿ ಒಂದು ಸಿಪ್ ಬಿಯರ್... ಚಾಕಣಕ್ಕೆ ಒಂಚೂರು ಬ್ರೆಡ್ ... ಇಂತಹ ಹತ್ತಾರು ಕೌಂಟರ್ ಗಳು...ಸಾವಿರಾರು ಜನ ಬಿಯರ್ ಕುಡಿದು ಬ್ರೆಡ್ ತಿನ್ನುತ್ತಾ ಸಾವಿರಾರು ಎಕರೆಯ ದೊಡ್ಡ ಕ್ವಾರಿಯಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹಾಕಿ ಸುಡುತ್ತಿದ್ದರು.ಹಲವು ಗಂಟೆ ದಿನಗಳ ಕಾಲ ಸುಡುತ್ತಾ ಸುಡುತ್ತಾ ಎಂಟತ್ತು ಅಡಿ ಗಾತ್ರದ ಬೃಹತ್ ಬಂಡೆಗಳನ್ನು ಎಬ್ಬಿಸಿ ಅದರಲ್ಲಿ ಬರುವ ನಾನಾ ಗಾತ್ರದ 2-18ಟನ್ ಗಳಂತಹ ಕಲ್ಲನ್ನು ಕತ್ತರಿಸುತ್ತಿದ್ದರು. ಬಂಡೆಗಳನ್ನು ಕತ್ತರಿಸಲು ತಾಮ್ರ ಮತ್ತು ಕಂಚಿನ ಉಳಿಗಳನ್ನು ಬಳಸಿ ಕಲ್ಲನ್ನು ಕತ್ತರಿಸಿ ಪಕ್ಕಕ್ಕೆ ಸರಿಸುತ್ತಿರುವರು.ಹತ್ತು ಟನ್ ಗಿಂತ ಅಧಿಕ ಭಾರದ ಕಲ್ಲು ಕತ್ತರಿಸಿಕೊಟ್ಟ ತಂಡಕ್ಕೆ ಅಲ್ಲಿನ ಉಸ್ತುವಾರಿಗಳಿಂದ ಅವರಿಗೆ ಬೋನಸ್ ಆಗಿ ಬೀಯರ್ ಮತ್ತು ಬ್ರೆಡ್ ಸಿಗುವಂತೆ ಮಾಡುತ್ತಿದ್ದರು.
ಇತ್ತ ಇನ್ನೊಂದು ಕಡೆ ಕತ್ತರಿಸಿಟ್ಟ ಕಲ್ಲನ್ನು ಹತ್ತಾರು ಜನ ದಾಂಡಿಗರು ಸೇರಿ ಒಂದಷ್ಟು ದೂರಕ್ಕೆ ಉರುಳಿಬಿಡುತ್ತಿದ್ದರು. ತದ ನಂತರ ಕಂಚಿನ ಪೈಪ್ಗಳನ್ನು,ಮರದ ತುಂಡುಗಳನ್ನು ಆ ಕಲ್ಲಿನ ಅಡಿ ಹಾಕಿ ಸುತ್ತಲೂ ಹಗ್ಗ ಕಟ್ಟಿ ಒಂದು ದಿಕ್ಕಿಗೆ ಎಳೆಯುತ್ತಾ,ಹಿಂಬದಿಯಿಂದ ಕಾರ್ಮಿಕರ ಮಕ್ಕಳು ಇತರರು ತಳ್ಳುತ್ತಾ ಕಲ್ಲಿನ ಗಣಿಯಿಂದ ಪಿರಾಮಿಡ್ ಕಟ್ಟುತ್ತಿದ್ದ 15-20 ಕಿಲೋಮೀಟರ್ ತಂದು ಹಾಕುತ್ತಿದ್ದರು.ಇತ್ತ ಪಿರಾಮಿಡ್ ಕಟ್ಟುತ್ತಿದ್ದ ಜಾಗದಲ್ಲಿ ಆ ಕಲ್ಲು ಇಡಬೇಕಾಗಿದ್ದ position ಆದರಿಸಿ ಏನಾದರೂ ಬದಲಾಯಿಸಿಕೊಳ್ಳುವುದಿದ್ದರೆ ಬದಲಾಯಿಸಿಕೊಂಡು ಅಂಚುಗಳನ್ನು ಮರಳಿನಲ್ಲಿ ಉಜ್ಜಿ ಮೊಂಡು ಮಾಡುತ್ತಾ,ಇಳಿಜಾರು ಮತ್ತು ಹಗ್ಗದ ಸಹಾಯದಿಂದ ಎತ್ತಿ ಅದನ್ನು ಇಡಬೇಕಾದ ಸ್ಥಳಕ್ಕೆ ಇಡುತ್ತಿದ್ದರು.
ಇಲ್ಲೂ ಕೂಡ ದೊಡ್ಡ ದೊಡ್ಡ ಕಲ್ಲನ್ನು ಎತ್ತಿಕೊಟ್ಟ ತಂಡಕ್ಕೆ additional incentive ಆಗಿ ಬ್ರೆಡ್ ಬಿಯರ್ ವ್ಯವಸ್ಥೆ ಮಾಡುತ್ತಿದ್ದರು.ಇದಕ್ಕಾಗಿ ಕಾರ್ಮಿಕರಲ್ಲೇ ಉತ್ಸಹ ಹೆಚ್ಚಾಗಿ ಲಕ್ಷಾಂತರ ಬೃಹತ್ ಕಲ್ಲುಗಳು ಪಿರಾಮಿಡ್ ಗೆ ಹತ್ತಾರು ವರ್ಷದಲ್ಲಿ ಬಂದು ಸೇರಿ ಸಾವಿರಾರು ವರ್ಷಗಳು ಕಳೆದರೂ ಅಚ್ಚಳಿಯದೇ ಜಗತ್ತಿನಲ್ಲೇ ಅದ್ಬುತವಾಯಿತು. ಅದೇ ಸಮಯದಲ್ಲಿ ಮಹಿಳೆಯರು ಅಂದು ಪಿರಾಮಿಡ್ ಕೆಲಸಕ್ಕೆ ಅವರ ಗಂಡ ಮತ್ತು ಕುಟುಂಬದ ಇತರೆ ಪುರುಷರಿಗೆ ಕೊಡುತ್ತಿದ್ದ ಆಹಾರ ಭತ್ಯೆಯನ್ನು ಪಡೆಯುತ್ತಾ ಮಕ್ಕಳನ್ನು ಪೊರೆಯುತ್ತಾ, ಪುರುಷರ ಅವಶ್ಯಕತೆಗಳನ್ನು ಪೂರೈಸುತ್ತಾ ಇದ್ದರು. ಹುಡುಗರಿಗೆ ವಯಸ್ಸಾದಂತೆ ಅವರ ತಂದೆ ಮತ್ತು ಇತರ ಸಂಬಂಧಿಗಳ ಜೊತೆಗೆ ರಾಜಾಶ್ರಯದಲ್ಲಿ ನಡೆಯುತ್ತಿದ್ದ ಈ ಪಿರಮಿಡ್ ನಿರ್ಮಾಣದ ಹತ್ತಾರು ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು.ಕ್ರಮೇಣ ಕೌಶಲಗಳ ಗಳಿಸಿ ಮುಖ್ಯ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಯಥಾ ಪ್ರಕಾರ ಇವರಿಗೂ ವಯಸ್ಸಿನ ಬೇಧ ಇಲ್ಲದೇ ರಾಜಾಶ್ರಯದಿಂದ ನೀಡಲಾಗುತ್ತಿದ್ದ ಬಿಯರ್ ಮತ್ತು ಬ್ರೆಡ್ ಸಿಗುತ್ತಿತ್ತು.. ಬಿಯರ್ ಬ್ರೆಡ್ ಪಿರಾಮಿಡ್ ಕೆಲಸ ಇನ್ನೂ ಯಾರೋ ಕೆಲವರು ರಾಜಸೇವೆಯಲ್ಲೇ ಆಹಾರ ಧಾನ್ಯಗಳನ್ನು ಬೆಳೆದು ರಾಜನಿಗೆ ಒಪ್ಪಿಸುತ್ತಿದ್ದರು. ಮಹಿಳೆಯರಿಗೂ ಮಕ್ಕಳಿಗೂ ಸೆಣಬಿನಿಂದಲೇ ಮಾಡಿದ ಮತ್ತು ಚೌಕಾಕಾರ ಆಯತಾಕಾರವಾಗಿ ನೇಯ್ದ ಉಡುಪುಗಳಿದ್ದು ಕಂಚು ಬೆಳ್ಳಿಯ ಮಿಶ್ರಲೋಹಗಳನ್ನು ವಿವಿಧ ಹೊಳೆಯುವ ಕಲ್ಲುಗಳಿಂದ ಮತ್ತು ಮೂಳೆಗಳಿಂದ ಮಾಡಿದ ಆಭರಣಗಳನ್ನು ಧರಿಸುತ್ತಾ ಇಡೀ ಸಾಮ್ರಾಜ್ಯದಲ್ಲಿ ಇಷ್ಟೇ ಕೆಲಸ... ಇದು ಶತಮಾನಗಳ ಕಾಲ ನಡೆದ ಜನಜೀವನದ ಕಥೆ...ಇದೇ ಜೀವನ..ಆಗಿತ್ತು.
ಅದು ನೈಲ್ ನದಿಯ ತಟ... ಭೂಮಿಯ ಪ್ರಾಚೀನ ನದಿಯಾದ ನೈಲ್ ನದಿಯ ಒಡಲು...ಆ ನದಿಯ ವರ ದಾನವೇ ಈಜಿಪ್ಟ್ ನಾಗರಿಕತೆಯ ಉಗಮ.ಎರಡು ಮೂರು ಸಾವಿರ ವರ್ಷಗಳಷ್ಟು ಹಿಂದೆ ಈಜಿಪ್ಟ್ ನ 'ಗಿಜೆ' ಮತ್ತು ಇತರ ಪ್ರದೇಶಗಳಲ್ಲಿ ವಿವಿಧ ಎತ್ತರ ಗಾತ್ರದ ಪಿರಾಮಿಡ್ ಗಳು.ಕಟ್ಟಿಸಿದ್ದು ಕಟ್ಟಿದ್ದು ಇದೇ ಟ್ರಿಕ್ಕಿನಿಂದ...ಅಂದಿನ ದಿನಗಳಲ್ಲಿ ಜೀವಿಸಿದ್ದ ಅಲ್ಪ ಜನಸಂಖ್ಯೆಯಲ್ಲಿ ಇಂದಿನ ಯಂತ್ರಗಳು ಮತ್ತು ವೈಜ್ಞಾನಿಕ ಜಗತ್ತಿಗೆ ಸವಾಲಾಗಿರುವ ನಿರ್ಮಾಣಗಳನ್ನು ಅಂದಾಜು ಒಂದು ಲಕ್ಷ ಕಾರ್ಮಿಕರು ಸುಮಾರು 20-30 ವರ್ಷಗಳ ಕಾಲ ನಿರ್ಮಾಣ ಮಾಡಿದ್ದರು.ಅದಕ್ಕೇ ಇವತ್ತೂ ಕೂಡ ಯಾರಾದ್ರೂ ಲೇಬರ್ಸ್ಗಳನ್ನು ಕೆಲಸಕ್ಕೆ ಕರೆದರೆ ಪಸ್ಟ್ ಅಡ್ವಾನ್ಸ್ ಕೊಡಿ... ಇಲ್ಲಾ ಎಣ್ಣೆ ಕೊಡ್ಸಿ ಎಂದು ಕೇಳುವುದು...
_Hi STORY -2_
ಎಲ್ಲರೂ ಸಪೂರ ದೇಹದ ಗೋದಿ ಬಣ್ಣದವರು .ಕಪ್ಪು ಬಣ್ಣಗಳ ವಿವಿಧ ಪದರಗಳನ್ನು ಹೊಂದಿದ ಪ್ಯಾಪಿರಸ್ ಮತ್ತು ಕಾಡಿನಲ್ಲಿ ಸಿಗುತ್ತಿದ್ದ ಬಿಳಿಯ ಹೂವಿನಲ್ಲಿ ದಾರ ತೆಗೆದು ಮಾಡಿದ ಉಡುಪುಗಳನ್ನು ಧರಿಸಿ ರಾಜರು ಕೊಡುತ್ತಿದ್ದ ಒಂದು ಮೀನು ಮತ್ತು ಮರದ ಬಟ್ಟಲಿನಲ್ಲಿ ಕೊಡುತ್ತಿದ್ದ ಸೂಪನ್ನು ಕುಡಿದು ಗೋಡೆ ಕಟ್ಟುವ ಕೆಲಸಕ್ಕೆ ಓಡುವುದು. ... ಒಂದು ಗುಂಪು ಕಲ್ಲುಗಳನ್ನು ಹೊತ್ತು ತರುವುದು. ಇನ್ನೊಂದು ಗುಂಪು ಆ ಕಲ್ಲುಗಳನ್ನು 25-30 ಅಡಿ ಎತ್ತರ ಮತ್ತು 12-16 ಅಡಿ ಅಗಲದಷ್ಟು ಕಟ್ಟುವುದು. ಹಳದಿ ಬಣ್ಣದ ಉಡುಪುಗಳನ್ನು ಧರಿಸಿದ ಜನರಗುಂಪು ಈ ಕೆಲಸಗಾರರ ಉಸ್ತುವಾರಿ ಮಾಡಿ, ಮಾಡಿದ ಕೆಲಸಕ್ಕೆ, ಕೆಲಸಗಾರರ ಅವಲಂಬಿತರಿಗೆ ಆಹಾರ ಭತ್ಯೆಯನ್ನು ಕೊಡುತ್ತಿದ್ದರು.ಒಂದೊಂದು ವರ್ಗದ ಜನರಿಗೆ ಒಂದೊಂದು ಕೆಲಸಗಳನ್ನು ಗುರುತು ಮಾಡಿದ್ದು,ಕೆಲಸಗಾರರಿಗೆ ನವಣೆ, ಬಾರ್ಲಿ,ಬೀನ್ಸ್ ಮತ್ತು ಕಾಡಿನಲ್ಲಿ ಸಿಗುವ ಇತರ ಸೊಪ್ಪುಗಳು-ತರಕಾರಿಗಳನ್ನು ಹಾಕಿ ಸೂಪ್ ಮಾಡಿಕುಡಿಯುತ್ತಿದ್ದರು.ಇವರಿಗೆ ರಾಜರ ಆಶ್ರಯದಲ್ಲಿ ಜೀತದಾಳುಗಳಂತೆ ಇದ್ದುದರಿಂದ ಮಾಂಸ ಬಾಡೂಟಗಳು ವಿರಳವೇ ಆಗಿದ್ದರೂ ಹಳದಿ ಬಟ್ಟೆ ಮತ್ತು ಕೆಂಪು ಬಟ್ಟೆ ಧರಿಸುವಂತಹವರು(ರಾಜರ ಮತ್ತು ರಾಜವಂಶದ ನಿಕಟವರ್ತಿಗಳು) ಅವರ ಇಚ್ಚಾನುಸಾರ ಮಾಂಸ ತಿನ್ನುತ್ತಾ, ಮದ್ಯ ಹೀರುತ್ತಾ ಮೋಜಿನಲ್ಲಿ ಭಾಗವಹಿಸುತ್ತಿದ್ದರು.ಇಲ್ಲಿಯೂ ಕೂಡ ಮಹಿಳೆಯು ವಿವಿಧ ಶೈಲಿಯ ಉಡುಪುಗಳನ್ನು ಧರಿಸುತ್ತಾ ಕಾಡಿನ ಬಳ್ಳಿಗಳನ್ನು ಕೇಶಲಂಕಾರಕ್ಕೆ ಬಳಸುತ್ತಾ,ಕಂಚು,ಕಬ್ಬಿಣ ಮತ್ತು ಉಕ್ಕಿನ ವಸ್ತುಗಳನ್ನು ಬಳಸಿಕೊಳ್ಳುತ್ತಾ ಅಲಂಕಾರಕ್ಕೂ ಮತ್ತು ನಿತ್ಯಜೀವನದ ಉಪಯೋಗಕ್ಕೂ ಬಳಸಿಕೊಳ್ಳುತ್ತಿದ್ದರು. ಗೋಡೆ ಕಟ್ಟುವಾಗ ಬಿಸಿಲ ದಗೆಗೆ ತಾಳಿಕೊಳ್ಳಲು ಕಾಡಿನಲ್ಲಿ ಸಿಗುವ ಬಿದಿರು,ಈಚಲು ಗರಿಗಳಿಂದ ಪುಟ್ಟಿಯ ಆಕಾರವನ್ನು ಮಾಡಿ ಅದನ್ನು ತಲೆಗೆ ಹಾಕಿಕೊಳ್ಳುತ್ತಿದ್ದರು.ಸುಮಾರು 2300 ಸುದೀರ್ಘ ವರ್ಷಗಳಲ್ಲಿ ಬಾಳಿ ಬದುಕಿದ ಎಲ್ಲಾ ತಲೆಮಾರುಗಳ ಜನರು ಹೀಗೆ ಗೋಡೆ ಕಟ್ಟುವ ಕೆಲಸದಲ್ಲಿಯೇ ಅವರ ಜೀವನವನ್ನು ಕಳೆದರು. ಕಿರಿಯ ತಲೆಮಾರಿನವರೂ ಕೂಡ ಗೋಡೆ ಕಟ್ಟುವ ಕೆಲಸದಲ್ಲಿ ಭಾಗಿಯಾಗುತ್ತಾ ಕಲ್ಲುಗಳನ್ನು catch ಹಿಡಿಯುವುದು ,ಗೊಡೆಗಳನ್ನು ಜಂಪ್ ಮಾಡುವುದು ಅವರ ನಿತ್ಯಜೀವನದ ಭಾಗವಾಗಿ ಹೋಗಿತ್ತು. ಆ ಕೌಶಲ ಜೀನ್ ಗೆ ಸೇರಿ Kung fu,ಜಿಮ್ನಸ್ಟಿಕ್ ನಂತಹ ಕೌಶಲಗಳನ್ನು ಕಟ್ಟಿಬೆಳೆಸಿದರು. ಈ ಕೌಶಲಗಳು ಬೆಟ್ಟದಲ್ಲಿ ಕುರಿಕಾಯುವವನಿಗೆ TREKKING ಎಷ್ಟು ಸುಲಭವಾಗುವುದೋ ಹಾಗೆ ಸಾವಿರಾರು ವರ್ಷ ಇಡೀ ವಂಶವೇ ಗೋಡೆ ಕಟ್ಟುತ್ತಾ ದಾಳಿಕೋರರನ್ನು ಎದುರಿಸಲು ವಿಶೇಷವಾದ ಅಂಗ ಕೌಶಲ್ಯ ವಿದ್ಯೆಗಳನ್ನು ಕಲಿತರು. ಹಾಗೂ ವಿವಿಧ ರೀತಿಯ ಕೇಶ ವಿನ್ಯಾಸದ ಕಲೆ ಮತ್ತು ಅಲಂಕಾರಿಕ ಆವಿಷ್ಕಾರಗಳು ನಡೆದದ್ದು ಇಲ್ಲಿಯೇ...
ಅತಿ ದೊಡ್ಡ ಮಾನವ ನಿರ್ಮಿತ ಕಾಮಗಾರಿಗಳಲ್ಲೊಂದಾದ ಚೀನಾದ ಮಹಾ ಗೋಡೆಯನ್ನು ಮಂಗೂಲಿಯನ್ನರ ದಾಳಿಗೆ ಹೆದರಿ ಸುಮಾರು 21196 ಕಿಲೋಮೀಟರ್ ನಷ್ಟು ಉದ್ದದ ಮಹಾಗೋಡೆಯನ್ನು ನಿರ್ಮಿಸಿದ್ದಾರೆ. ಸುಮಾರು ಹತ್ತು ಶತಮಾನಗಳ ಕಾಲ,ಹತ್ತೊಂಭತ್ತು ಸಾಮ್ರಾಜ್ಯದ ಅರಸರುಗಳು ಈ ಗೋಡೆಯನ್ನು ಶತ್ರುಗಳ ದಾಳಿಯನ್ನು ತಡೆಯಲು ನಿರ್ಮಿಸಿದ್ದು 25 ರಿಂದ 30 ಅಡಿ ಎತ್ತರ ಹಾಗೂ ಸುಮಾರು 12-16 ಅಡಿ ಅಗಲ ಗೋಡೆಯನ್ನು ನಿರ್ಮಿಸಿದ್ದಾರೆ. ಈ ರಕ್ಷಣಾ ಗೋಡೆಯ ಮೇಲೆ 6-8 ಕುದುರೆಗಳು ಮತ್ತು ಸೈನಿಕರು ಏಕಕಾಲದಲ್ಲಿ ಹಾದು ಹೋಗಬಹುದಾದಷ್ಟು ವಿಶಾಲವಾಗಿ ರಕ್ಷಣಾ ಗೋಡೆಯನ್ನು ನಿರ್ಮಿಸಿದ್ದಾರೆ.ಸುಮಾರು ಸಾವಿರದಷ್ಟು ಹಳೆಯದಾದ ಈ ಗೋಡೆಯನ್ನು ಹತ್ತು ಶತಮಾನಗಳ ಕಾಲ ಮಿಲಿಯಗಟ್ಟಲೇ ಕಾರ್ಮಿಕರು ಶ್ರಮಿಸಿ ಮಡಿದಿದ್ದಾರೆ. ಆದರೆ ಅಂದು ಗೋಡೆ ಕಟ್ಟುತ್ತಿದ್ದ ಕಾಲದ ಜೀವನ ಪದ್ದತಿಯೇ ಇಂದು ಚೀನಾದಲ್ಲಿ ವಸ್ತ್ರ, ಆಭರಣ,fashion, passion,life style ಆಗಿ ಆ ತೆರನಾದ ಎಲ್ಲಾ ಅಗ್ಗದ ವಸ್ತುಗಳನ್ನು ಜಗತ್ತಿಗೆ ಚೈನಾ ಐಟಂ ಗಳನ್ನು ಮಾರುತ್ತಿರುವುದು.
_Hi STORY-3_
ವಿಶ್ವ ವಿಖ್ಯಾತ ಕರ್ನಾಟಕದ ಬೇಲೂರಿನ ಶಿಲಾ ಬಾಲಿಕೆ ಯಾರಿಗೆ ಗೊತ್ತಿಲ್ಲ??? ಹೊಯ್ಸಳ ದೊರೆ ವಿಷ್ಣುವರ್ಧನನ ಕಾಲದಲ್ಲಿ ಆರಂಭಗೊಂಡ ಚನ್ನಕೇಶವ ದೇವಾಲಯದ ನಿರ್ಮಾಣ ಅವನ ಮೊಮ್ಮಗ 2ನೇ ಬಲ್ಲಾಳನ ಕಾಲದಲ್ಲಿ ಅಂತ್ಯವಾಗುತ್ತದೆ. ಅಂದರೆ ಇದು ಸುಮಾರು 103 ವರ್ಷಗಳ ಕಾಲ ಈ ದೇವಸ್ಥಾನ, ಇಲ್ಲಿನ ಶಿಲ್ಪಗಳ ಕೆತ್ತನೆ, ಅಲಂಕಾರ,ಜೋಡಣೆ ಹೀಗೆ ಎಲ್ಲದೂ ಕೂಡ ಶತಮಾನಗಳ ಕಾಲ ನಡೆಯುತ್ತದೆ. ಆ ನೂರಾರು ವರ್ಷಗಳ ಅವಧಿಯಲ್ಲಿ ನಿರಂತರವಾಗಿ ಸೈನಿಕರು, ಕಾರ್ಮಿಕರು ಇತರ ಸಾಮಾಜಿಕ ಎಲ್ಲ ವರ್ಗದವರು ಕೂಡ ಈ ದೇವಸ್ಥಾನದ ಆವರಣ ಮತ್ತು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲರೂ ಕೂಡ ಕ್ರಿಯಾಶೀಲರಾಗಿದ್ದರು. ಆ ಬೇಲೂರು ವಾಸ್ತು ಶಿಲ್ಪದ ಮುಖ್ಯ ಶಿಲ್ಪಕಾರರು ಮತ್ತು ಕಾರ್ಮಿಕರ ಮಕ್ಕಳು ಅಲ್ಲೇ ಬೆಳೆ ಬೆಳೆಯುತ್ತಾ ಅವರಿಗೆ ಗೊತ್ತಿಲ್ಲದೇ ಶಿಲ್ಪ ನಿರ್ಮಾಣ ಮತ್ತು ಕೆತ್ತನೆಯಲ್ಲಿ ತೊಡಗಿದ ಪರಿಣಾಮ ಮುಂದುವರೆದು ಸೋಮನಾಥಪುರ ದ ದೇವಸ್ಥಾನಗಳು, ಹರಿಹರದ ಹರಿಹರೇಶ್ವರ, ಅಮೃತಾಪುರದ ಅಮೃತೇಶ್ವರ ಮುಂತಾದ ದೇವಾಲಯಗಳು ನಿರ್ಮಾಣಗೊಂಡವು.ಪ್ರವೃತ್ತಿ ಶತಮಾನಗಳ ಕಾಲ ಸಾಗಿ ಬಂದರೂ ಬೇಲೂರು ಮತ್ತು ಸೋಮನಾಥಪುರದ ಶಿಲ್ಪಗಳು ಮೇರು ಕಲೆಯ ಪ್ರತಿಬಿಂಬವಾಗಿ ಹೊರಹೊಮ್ಮಿವೆ. ಆದರೆ ಇನ್ನುಳಿದ ದೇವಸ್ಥಾನಗಳಲ್ಲಿ ಬೇಲೂರು ಸೋಮನಾಥಪುರದಂತಹ ಉತ್ಕೃಷ್ಟವಾದ ಕಲೆಯ ಹೊರಹೊಮ್ಮುವಿಕೆಯಲ್ಲಿ ಕಡಿಮೆ ಆಯಿತೆನ್ನಬಹುದು.ಅಂದು ಶಿಲಾ ಬಾಲಕಿಯರಿಗೆ ಆಕರ್ಷಿತರಾದ ಜನಮನ ಇಂದಿಗೂ ಶಿಲಾ ಬಾಲಿಕೆಯರನ್ನು ಹೋಲುವ ಮತ್ತು ಕೆಲವು ರತಿಚಿತ್ರಗಳು ಹೊಸ ತೇರುಗಳಲ್ಲಿ ಇಂದಿಗೂ ನೋಡಬಹುದು.ಕಳೆದ ದಶಕದಿಂದ ಮೊಬೈಲ್ ಬಂದ ಮೇಲೆ ದೇಶ ವಿದೇಶದ ಮನ್ಮಥ ಚಿತ್ರಗಳ 'ವಿಶ್ವರೂಪ' ದರ್ಶನ ಆಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನೂ ವಿಷ್ಣುವರ್ಧನನ ಹೆಂಡತಿ ಶಾಂತಲಾದೇವಿ ಜೈನಳಾಗಿದ್ದು ಸರ್ವಧರ್ಮಗಳ ಸಮತಾ ಭಾವದೊಂದಿಗೆ ಅನ್ಯದರ್ಮಿಯರನ್ನು ಮದುವೆಯೂ ಆಗಬಹುದೆಂಬ ಸಂದೇಶ ಅರಿತು ಅವು ಇಂದು ನಡೆಯುತ್ತಲಿವೆ.
_Hi STORY -4_
ಸುಮಾರು ಎಂಟು ಕಿಲೋಮೀಟರ್ ಸುತ್ತಳತೆಯ ಏಳು ಸುತ್ತಿನ ಕೋಟೆ ಚಿತ್ರದುರ್ಗದ ಕಲ್ಲಿನಕೋಟೆ 670 ಹೆಕ್ಟರ್ ವಿಸ್ತೀರ್ಣದಲ್ಲಿ ಅಪಾರ ಪ್ರಮಾಣದ ಶಿಲೆಗಳು ಮತ್ತೆ ಬೃಹತ್ ಕಲ್ಲುಗಳಿಂದ ನಿರ್ಮಾಣಗೊಂಡಂತಹ ಈ ಕೋಟೆ ಚಿತ್ರದುರ್ಗದ ಕೋಟೆ.ಏಷ್ಯಾ ಖಂಡದಲ್ಲಿ ಅತ್ಯಂತ ದೊಡ್ಡ ಕೋಟೆ ಎಂದು ಕರೆದಿರುವ ನಮ್ಮ ಬೀದರ್ ನ ಬೃಹತ್ಕೋಟೆ....ನಗರ ಕೋಟೆ,ಬಳ್ಳಾರಿ ಕೋಟೆ,ಪಾವಗಡ,ದಿಂಡಿಗಲ್ ಕೋಟೆ,ರಾಯಗಡ ಕೋಟೆ,ಚಿತ್ತೂರು ಕೊಟೆ,ಜೈ ಸಲ್ಮೇರ್ ,ಆಲಿಗಡ ಹೀಗೆ ಯಾವ ಕೋಟೆಯಾದರೂ ಅವುಗಳನ್ನೂ ಬೆಟ್ಟ ಗುಡ್ಡಗಳಲ್ಲಿ ಕಟ್ಟಿದ್ದಾರೆ ಯಾಕೆ ಹೇಳಿ?? ಆ ಬೆಟ್ಟ ಗುಡ್ಡಗಳು ನಮ್ಮ ಅಜ್ಜಿ ತಾತನ(ಆದಿ ಮಾನವನ ವಾಸ ಸ್ಥಳ) ಆಸ್ತಿಗಳಾಗಿದ್ದುದರಿಂದ...!
Hi STORY-5
16 ನೇ ಶತಮಾನದ ಹಿಂದೆ-ಮುಂದೆ..
ಕೆಲವು ರಾಜರು,ಸಾಮಂತರು,ಮಾಂಡಲಿಕರು ಅಥವಾ ಇದ್ದಂತವರು ದಾನ ಧರ್ಮದ ಹೆಸರಿನಲ್ಲಿ ಧರ್ಮಛತ್ರ ವನ್ನು ಸ್ಥಾಪಿಸಿದರು.ಇವುಗಳಲ್ಲಿ ಭಾಗಶಃ ಸಾಮಾಜಿಕ ಎಲ್ಲಾ ವರ್ಗದವರಿಗೆ ಮುಕ್ತವಾಗಿದ್ದವಾದರೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರಿಗೆ ಅಥವಾ ಇತರೆ ಮೇಲ್ವರ್ಗದ ಜನರಿಗೆ ವಿಶೇಷ ಪ್ರಾಧಾನ್ಯತೆ ಕೊಡುತ್ತಿದ್ದರು. ಈಗ ನಾವೆಲ್ಲ ಕೇಳುವ ವಚನಕಾರರು ಹರಿದಾಸರು ಇವರೆಲ್ಲರೂ ಕೂಡ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಿಕ್ಷಾಪಾತ್ರೆ ಹಿಡಿದು ತಿರುಗಾಡುತ್ತಾ,ಧರ್ಮಛತ್ರಗಳಲ್ಲಿ ಊಟ ಮಾಡುತ್ತಾ ಸಮಾಜದಲ್ಲಿ ಅಂಕು ಡೊಂಕುಗಳನ್ನು ಸರಿ ತಪ್ಪುಗಳನ್ನು ತಿಳಿ ಹೇಳಿದವರು.
Hi STORY-6
ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಕ್ರಾಂತಿ:
ಸಂಘರ್ಷ ಅಸಮಾನತೆಗಳ ವಿರುದ್ಧ ಜಾಗತಿಕ ಮಟ್ಟದಲ್ಲಿ ಎಲ್ಲಾ ಕಡೆಯಲ್ಲೂ ವಿರೋಧದ ಚಿಂತನೆಗಳು ಜಗತ್ತಿನ ಎಲ್ಲಾ ಭಾಗದಲ್ಲೂ ನಡೆದುವು. ರೂಸೋ,ಅರಸ್ಟಾಟಲ್,ಬುದ್ಧ,ಬಸವ,ಅಂಬೇಡ್ಕರ್ ರಂತಹವರು ಯೂರೋಪೆ್ ನಂತಹ ರಾಷ್ಟ್ರಗಳಲ್ಲೂ ಅಸಮಾನತೆ,ವಿವಿಧ ವರ್ಗಗಳ ನಡುವೆ ಇದ್ದ ಅಸಮಾನತೆ ಅತೃಪ್ತಿಯನ್ನು ಹೊರಹಾಕುವಂತಾಗಿ ಸಾಮಾನ್ಯ ಜನರು ವಿಚಾರವಂತರ ವಿಚಾರಧಾರೆಗಳನ್ನು ತಿಳಿಯುವಂತಾದರು.ಅವುಗಳನ್ನು ಅವರವರ ಆಡಳಿತಗಾರರನ್ನು ಹೋಲಿಕೆ ಮಾಡಿಕೊಂಡು ಸರಿ ತಪ್ಪುಗಳನ್ನು,ನ್ಯಾಯ ಅನ್ಯಾಯಗಳನ್ನು ಗುರುತಿಸಿ ಅವುಗಳನ್ನು ಇತರ ಸಾರ್ವಜನಿಕರಿಗೆ ಎತ್ತಿ ಹಿಡಿದು ತೋರಿಸುವಂತಾಯಿತು.ಅದಕ್ಕೇ ಈಗಲೂ ಎಲ್ಲಾ ಭಾಷೆ ದೇಶವಾರು ಪ್ರಸ್ತುತ ಇರುವ ಸಂಘರ್ಷ ಮತ್ತು ಅಸಮಾನತೆಗಳು ಈಗಲೂ ಜೀವಾಂತ ಇಟ್ಟು ರಾಜಕೀಯ ಮಾಡುತ್ತಿರುವುದು..
Hi STORY-7
_ಸ್ವಾತಂತ್ಯ ನಂತರದ ಆಧುನಿಕ ಭಾರತದಲ್ಲಿ:_
ಮನುಸ್ಮೃತಿಯಂತೆ ಇದ್ದ ಸಾಮಾಜಿಕ ಸ್ಥಿತಿಗತಿ, ಸಾಮಾಜಿಕ ವ್ಯವಹಾರಗಳೆಲ್ಲವೂ ಸ್ವಾತಂತ್ರ್ಯದ ನಂತರ ಏರುಪೇರಾದವು. ಮನಸ್ಮೃತಿಯನ್ನು ಸಾರಸಗಟಾಗಿ ತಿರಸ್ಕರಿಸಿದ ಅಂಬೇಡ್ಕರ್ ಸರ್ವ ಜನರ ಏಳಿಗೆಗಾಗಿ ಸಮಾನತೆಯ 'ಸಂವಿಧಾನ'ವನ್ನು ನೀಡಿದರು.ಸಂವಿಧಾನದ ಆಧಾರಿತ ಮತ್ತು ಆಶಯದಂತೆ ದೇಶಾದ್ಯಂತ ನಿತ್ಯ ಜೀವನದ ಎಲ್ಲಾ ವ್ಯವಹಾರಗಳು, ಸಾಮಾಜಿಕ,ರಾಜಕೀಯ ಬದುಕು ನಡೆಯುವಂತಾಯ್ತು. ಅಶಕ್ತರು, ದುರ್ಬಲರು, ಸಾಮಾಜಿಕವಾಗಿ ಹಿಂದುಳಿದವರು ಎಲ್ಲರೂ ಕೂಡ ಸಂವಿಧಾನದ ಎಲ್ಲಾ ಹಕ್ಕು ಕರ್ತವ್ಯಗಳನ್ನು ಸಂವಿಧಾನಾತ್ಮಕ ವಾಗಿ ಸರಿಸಮಾನವಾಗಿ ಅನುಭವಿಸುವಂತಾಯ್ತು.ದಮನಿತರಿಗೆ ಆನೆ ಬಲ ಬಂದು ಎಲ್ಲರೂ ಯಾವ ಸ್ಥಾನಕ್ಕಾದರೂ ಬೆಳೆಯಬಹುದು ಎಂದು ಆ ನಿಟ್ಟಿನಲ್ಲಿ ಪ್ರಯತ್ನ ಮತ್ತು ಸಫಲತೆಯನ್ನು ಕಂಡರು.ಸಂವಿಧಾನವು ಸಹಸ್ರ ಆನೆಗಳ ಬಲಕ್ಕಿಂತಲೂ ಬಲಶಾಲಿ ಎಂಬ ನಂಬಿಕೆ ಮತ್ತು ವಿಶ್ವಾಸವನ್ನು ಜನಸಾಮಾನ್ಯರಿಗೆ ಮೂಡಿತು.ಅದನ್ನು ಪುಷ್ಟೀಕರಿಸುವಂತೆ ಆಗಾಗ ಕೆಲವರಿಗೆ ಶಿಕ್ಷೆ ಆಗುತ್ತಿರುವುದು..
Story-8
ದನಕರುಗಳು ಕುರಿ ಮೇಕೆ ಗಳನ್ನು ಸಾಕಿಕೊಂಡು ಅವುಗಳ ಉತ್ಪನ್ನದಲ್ಲೇ ಕೆಲವರು ಬದುಕು ಕಟ್ಟಿಕೊಂಡರು.ಅದಕ್ಕಾಗಿ ಶಾಶ್ವತ ಹಿಡುವಳಿಗಳನ್ನು ಮಾಡಿಕೊಂಡು ವ್ಯವಸಾಯ ಎಂಬ ಶಾಶ್ವತ ಕಸುಬನ್ನು ನಂಬಿಕೊಂಡು ಒಂದು ಕಡೆ ನೆಲೆಸಿದರು.ಅವೇ ಇಂದಿನ ಗ್ರಾಮಗಳು.ಯಾರೋ ಒಬ್ಬರು ಕುಡಿಯುವ ನೀರು ಮತ್ತು ಕೃಷಿಗೆ ಬಾವಿಯನ್ನು ತೋಡಿಸಿದ್ದನ್ನು ನೋಡಿದ ಇತರರು ನಾವು ಅವರಂತೆ ಬಾವಿ ತೋಡಿಸಿ ಕೃಷಿ ಮಾಡಲು ನಿರ್ಧರಿಸಿ ಅದರತ್ತ ಕಾರ್ಯ ಪ್ರವೃತ್ತರಾದರು.ಅತ್ತ ಮಳೆನಾಡಿನ ಪ್ರದೇಶಗಳಲ್ಲಿ ಅಲ್ಲಿನ ವಾಯುಗುಣ ಮತ್ತು ಆಹಾರಕ್ಕೆ ಅನುಗುಣವಾಗಿ ಅಲ್ಲಿಯೂ ಅಡಿಕೆ ತೆಂಗು ಮಾವು ಇತರೆ ತೋಟದ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದರು.ಬದಲಾದ ಹವಾಮಾನ ವೈಪರೀತ್ಯದಿಂದ ಮಳೆಯ ಪ್ರಮಾಣ ಕಡಿಮೆಯಾಗಿ ಬಾವಿಗಳು ಬತ್ತಿ ಹೋಗಿದ್ದರಿಂದ ಭೂಮಿಯ ಒಡಲನ್ನು ಕೊರೆದು ನೀರು ತೆಗೆಯುವ ಅಬ್ಯಾಸ ವ್ಯಾಪಕವಾಗಿ ಬಂತು.ಇದರಲ್ಲಿಯೂ ಕಾಲ ಕ್ರಮೇಣವಾಗಿ ಅನೇಕ ಸಾಮಾಜಿಕ ಕಾರಣದಿಂದ ಮೇಲು ಕೀಳು ಸ್ತರಗಳ ಪಾಲಿಸುತ್ತಾ ಉಳ್ಳವನು ಇಲ್ಲದವನ ಮೇಲೆ ದೌರ್ಜನ್ಯ ಎಸೆಯುತ್ತಾ ಬಂದಿದ್ದಾನೆ. ಈ ಮದ್ಯೆ ಜನಗಳ ಸಂಖ್ಯೆ ಜಾಸ್ತಿ ಇರುವ ಜನವಸತಿಯೊಂದು ಎಲ್ಲಾ ಸೌಕರ್ಯಗಳು ದೊರೆಯುವ ನಗರಗಳಾಗಿ ನಗರೀಕರಣ ಹೆಚ್ಚಾಗುತ್ತಾ ಹೋಯಿತು. ಯಾರೋ ಕೆಲವರು ಓದಿ ಅತ್ಯುತ್ತಮ ವಿದ್ಯಾಭ್ಯಾಸ ಮಾಡಿದುದನ್ನು ಮಾದರಿಯಾಗಿಸಿಕೊಂಡು ಇವರು ಉತ್ತಮ ವಿದ್ಯಾಭ್ಯಾಸವನ್ನು ಪಡೆದರು.ಶಿಕ್ಷಣ ಪಡೆದ ವಿದ್ಯಾವಂತರ ಪ್ರಮಾಣ ಕಡಿಮೆ ಇದ್ದರೂ ಉದಾತ್ತವಾದ ಆದರ್ಶ ಮೌಲ್ಯಗಳನ್ನು ಪಾಲಿಸುತ್ತಿದ್ದರು.ಧರ್ಮ,ಕಾನೂನು,ನ್ಯಾಯ,ನಿಷ್ಠೆ ಪ್ರಾಮಾಣಿಕತೆ ರಕ್ತಗತವಾಗಿದ್ದವು.
STORY-09
ಮಾಡ್ರನ್ Trending...:
👉 ನಾನು ಓಡಾಡುವ ಸರ್ಕಲ್ ನಲ್ಲಿ ಯಾರೋ ಒಬ್ಬ ಬಹಳದಿನಕ್ಕೆ ಒಂದು ಎಗ್ ರೈಸ್ ಅಂಗಡಿ ಇಟ್ಟಿದ್ದ... ಅಬ್ಬಾ ಇಲ್ಲಿನ ಜನ ಬದುಕಿಕೊಂಡ್ರು...ತಿನ್ನಲು ಏನೂ ಸಿಗುತ್ತಿರಲಿಲ್ಲ ಅಂತ ಜನ ಮೆಚ್ಚಿ ಸಾಧಾರಣವಾಗಿ ವ್ಯಾಪಾರವೂ ಆಗುತ್ತಿತ್ತಿ... ಈಗ ಎರಡೇ ವಾರದಲ್ಲಿ ನಾಲ್ಕು ಅಂಗಡಿ ಆಗಿದಾವೆ....
👉 ಅವನ್ಯಾರೋ ಒಬ್ಬ ಉತ್ತರ ಭಾರತದವನು ಗಾರೆ ಕೆಲಸ ಮಾಡಲು ಬಂದಿದ್ದ... ಸೀಮೆಂಟ್ ಕಲೆಸುವಾಗ ಕಾಲು ಒಡೆಯುತ್ತದೆ ಎಂದು ಇಮ್ಮಡಿ ಮುಚ್ಚುವ ಕಪ್ಪೆಯಂತ ಚಪ್ಪಲಿ ಹಾಕಿದ್ದ... ಈಗ ಅದೇ ಒಂದು ಬ್ರಾಂಡ್ ಆಗಿ ಸಿಟಿ ಹುಡುಗ್ರೂ -ಹುಡುಗಿರೂ ಅವುಗಳನ್ನೇ ಹಾಕುತ್ತಿದ್ದಾರೆ.. ಅವು Frog ತರನೇ ಇದಾವೆ...
👉 ಯಾರೋ important ವಿಷಯದ ತರಗತಿಯನ್ನು ವೀಡಿಯೋ ಮಾಡಿಕೊಳ್ಳುತ್ತಿದ್ದರು... ಅದನ್ನು ನೋಡಿದ ಇತರರು ಏನು ನಡೆಯುತ್ತಿದ್ದರೂ ಅದನ್ನು ವೀಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಾರೆ.
👉 ಯಾರೋ ಕಾಲೇಜಿಗೆ ಓಡಾಡಲು ದೂರ ಎಂದು ಬೈಕ್ ತೆಗೆದುಕೊಂಡು ಬಂದಿದ್ದ... ಅದಕ್ಕೆ ಕಾಲೇಜುಗೆ ಹೋದ್ರೆ ಬೈಕಲ್ಲೇ ಹೋಗಬೇಕು ಅಂತ ಡಿಸೈಡ್ ಮಾಡಿ... ಕೆಟ್ ಕೆಟ್ ಡಿಸೈನ್ ಬೈಕೆಲ್ಲಾ ತೆಗೆದುಕೊಂಡು ಕಾಲೇಜಿಗೆ ಬರುತ್ತಾರೆ.
👉 ಡ್ರಿಂಕ್ಸ್ ,ಸಿಗರೇಟ್ ಯಾರೋ ಸೀನಿಯರ್ಸ್... ದುಡ್ಡಿದ್ದ ದೊಡ್ಡವರು ಮಾಡುತ್ತಿದ್ದರು... ಈಗ ಹೈ ಸ್ಕೂಲ್ ಮಕ್ಕಳು, ಕಾಲೇಜ್ ಹುಡುಗರು ನೋಡದೇ ಇರ ಬ್ರಾಂಡ್ ಗಳೇ ಇಲ್ಲ....
👉 ಮೈ ಮೇಲಿನ ಬಟ್ಟೆ ಹರಿದಿದ್ರೆ ಮರ್ಯಾದೆ ಹೋಗತ್ತೆ ಎನ್ನುತ್ತಿದ್ದವರು ಹರಿದ ಬಟ್ಟೆಗಳನ್ನೇ ಕಾಸ್ಟ್ಲೀ ದುಡ್ಡಿಗೆ ಕೊಂಡು, ಹಾಕಿಕೊಂಡು ಮರ್ಯಾದೆ ಹೆಚ್ಚಿಸಿ ಕೊಳ್ಳುತ್ತಿದ್ದಾರೆ.
👉 ಓದಲು ಬರೆಯಲು ಅಪ್ಪ ಅಮ್ಮ ನತ್ರ ,ಹೆಂಡತಿ ಮಕ್ಕಳತ್ರ ಒಂದು ನಿಮಿಷ ಮಾತಾಡಲು ಸಮಯ ಇಲ್ಲದವರು ದಿನದ ಹತ್ತು ಹನ್ನೆರಡು ಗಂಟೆಗಳ ಕಾಲ ಮೊಬೈಲ್ ಲ್ಲಿ ರೀಲ್ಸ್ ನೋಡುವುದು...
👉 ವಾಸ್ತವದ ಸ್ಥಿತಿಗತಿ ಇರುವುದು ನೋಡದೇ ಮೊಬೈಲ್ ಲ್ಲಿ status ಇಡೋದೇ ಇವರ Status mentainence final ಆಗಿದೆ.
👉 ಕೆಲವೇ ದಿನಗಳ ಹಿಂದೆ ಓದದೇ ಅವರ ಜೀವನ ಹಾಳಾಯ್ತು ಎನ್ನುತಿದ್ರು... ಈಗ ಓದಿದವರೆಲ್ಲಾ ಎಕ್ಕುಟ್ಟು ಹೋಗ್ತಾವರ್ರೆ....
👉 ಎಷ್ಟು ದುಡಿದರೂ ಜೀವನಕ್ಕೆ ಸಾಲುತಿರಲಿಲ್ಲ ಎನ್ನುವ ಕಾಲ ಒಂದಿತ್ತು.. ಈಗ ಜೀವನ ಎಲ್ಲಾ ದುಡಿದರೂ ಸಾಲಕ್ಕೇ ಸಾಲದು...
👉 ನೀನೇ ನನ್ನ ಪ್ರಾಣ ಜೀವ ಅಂತ ಅಪ್ಪ ಅಮ್ಮ ಮಾತು ಕೇಳದೇ ಪ್ರೀತಿಸಿ ಮದುವೆ ಆಗೊದು ಮೂರು ತಿಂಗಳಿಗೆ ಡಿವೋರ್ಸ್ ಗೆ application ಹಾಕೋದು....
👉 ಸಾರ್ 10000 ಇದ್ರೆ ಕೊಡಿ ನಾಳೆ ಸಂಜೆಗೆ ವಾಪಾಸು ಕೊಟ್ಬಿಡುತ್ತೇನೆಂದು ಹಣ ಪಡೆದು, ನಲವತ್ತು ದಿನ ಆದರೂ ದುಡ್ಡು ವಾಪಾಸು ಕೊಡದೇ ಇರುವುದು. ನೂರು ಸರಿ ಕಾಲ್ ಮಾಡಿದ್ರೂ ,400 ಮೇಸೆಝ್ ಮಾಡಿದ್ರೂ ಒಂದಕ್ಕೂ ರಿಪ್ಲೈ ಕೊಡದೇ ಇರುವುದು.
👉 ಅವರ್ಯಾರೋ ಎರಡು ಲಕ್ಷ ಕೊಟ್ಟು ಕತ್ತೆ ತಗಂಡಿದ್ದಾರಂತೆ.. 500 ml ಹಾಲಿಗೆ ಐದುಸಾವಿರ... ಮರುದಿನ ಊರು ತುಂಬಾ ಕತ್ತೆಗಳು ತಂದಿದ್ರಂತೆ... ಆದರೆ ಆ ಕತ್ತೆ ಕೊಟ್ಟವ ಹಾಲು ಕೊಳ್ಳುವವ ಇಬ್ಬರೂ ಜಾಗ ಖಾಲಿ ಮಾಡಿದ್ರಂತೆ...
👉 ಕೆಲವರು ಏನೋ ಮುಖ್ಯ ಮಾಹಿತಿಗಳು whats' app ಲ್ಲಿ ಹಾಕುತಿರುತ್ತಾರೆ... ಅದನ್ನು ನೋಡಿದ ಇತರರು ನನ್ನದೂ ಒಂದು ಇರಲಿ ಎಂದು ದಿನಕ್ಕೆ ಹತ್ತಾರು ಮೆಸೇಜ್,ಪೋಟೋಗಳು ಹಾಕುವುದು..
ಹೇಳ್ತಾ ಹೋದರೆ 10-20 ಅಲ್ಲ... ಸಾವಿರ ಇವೇ..... ಯಾಕೆ ಹೇಳಿ ???ಈಗ ಇದೇ ಎಲ್ಲಾ 'trending' ಅಂತ ನಿಮಗೂ ಅನಿಸುತ್ತಿದೆಯಲ್ಲಾ??ಏನು ಟ್ರೆಂಡಿಂಗೋ ಏನೋ...ಇವೆಲ್ಲಾ ನಮ್ಮಂತವರು ನಿಮ್ಮಂತವರಿಗೆ ಹೇಳುವುದು ಒಂದು trending.....
_ಬರಹ ಮುಗಿಸುವ ಮುನ್ನಾ...._
ಮೇಲ್ಕಾಣಿಸಿದ ಎಲ್ಲಾ ಸಂಗತಿಗಳನ್ನು ನೊಡಿದಾಗ ಈಜಿಪ್ಟ್ ಪಿರಾಮಿಡ್,ಚೀನಾ ಮಹಾಗೋಡೆಯನ್ನು ಕಟ್ಟಿದಾಗ ಅಂದಿನ ಜನಸಂಖ್ಯೆ ಅಂದರೆ ಕ್ರಿ ಪೂ 2500 ರ ಇಸವಿಯಲ್ಲಿ ಇದ್ದ ಅಂದಾಜು ವಿಶ್ವದ ಜನಸಂಖ್ಯೆ ಒಂದೂವರೆ ಕೋಟಿ...ಅದರಲ್ಲಿ ಒಂದು ಲಕ್ಷ ಜನರು ಈ ಪಿರಾಮಿಡ್ ಕಾಮಗಾರಿಯಲ್ಲಿ ಭಾಗಿಯಾಗಿದ್ದಾರೆಂದರೇ ಮಕ್ಕಳು ಮತ್ತು ಅಶಕ್ತರು ಬಿಟ್ಟು ಇಡೀ ಈಜಿಪ್ಟಿನ ವಯಸ್ಕರರು ಇದೇ ಕೆಲಸದಲ್ಲಿ ಭಾಗಿಯಾಗಿದ್ದರು. ಅಂದರೇ ಅಂದು ವಯಸ್ಕರು ಆದ ಮೇಲೆ ಮಾಡಲೇಬೇಕಾಗಿದ್ದ ಟ್ರೆಂಡಿಂಗ್ ಕೆಲಸ ಎಂದರೆ ಅವರವರ ಕೌಶಲಗಳ ಅನುಸಾರ ಆ ಪಿರಾಮಿಡ್ ಕಟ್ಟುವ ಕಾರ್ಯದಲ್ಲಿ ಭಾಗವಹಿಸುವುದು.ಆ ದೇಶದಲ್ಲಿ ಬೆಳೆದದ್ದೋ ಅಥವಾ ಬೇರೆ ದೇಶಗಳಿಂದ ತರಿಸಿಕೊಂಡ ಆಹಾರ ಪದಾರ್ಥಗಳು ಬಳಸಿಕೊಂಡು ಆ ರಾಜನೇ ಆ ಎಲ್ಲಾ ಜನರನ್ನು ಸಾಕಬೇಕಾಗಿತ್ತು. ರಾಜರಲ್ಲಿ ತಲೆಗಳು ಬದಲಾದಂತೆ ಕಾರ್ಮಿಕರಲ್ಲೂ ತಲೆಗಳು & ತಲೆಮಾರುಗಳು ಬದಲಾಗುತ್ತಿದ್ದವು. ಆಗಲೂ ಇದ್ದ ವಿಶ್ವದ ಅಂದಾಜು ಜನಸಂಖ್ಯೆ 2 ಕೋಟಿ 70 ಲಕ್ಷ... ಆದರೆ ಒಟ್ಟಾರೆ ಈ ಚೈನಾ ಗೋಡೆಯ ನಿರ್ಮಾಣದಲ್ಲಿ ಒಂದು ಮಿಲಿಯನ್ ಗಿಂತಲೂ ಅಧಿಕ ಕಾರ್ಮಿಕರು ಪಾಲ್ಗೊಂಡಿದ್ದಾರೆ.ಅಂದ್ರೆ ಇಡೀ ವಿಶ್ವದಲ್ಲಿ ಕ್ರಿಸ್ತಪೂರ್ವದಿಂದ ಕ್ರಿಸ್ತಶಕ ಮೊದಲನೇ ಮಹಾಯುದ್ಧ,ಎರಡನೇ ಮಹಾಯುದ್ಧದ ಕಾಲದವರೆಗೂ ಕೂಡ ಸಾವಿರಾರು ಕಿಲೋಮೀಟರ್ ಉದ್ದ ಈ ಗೋಡೆ ನಿರ್ಮಾಣ ಕಾರ್ಯದಲ್ಲೇ ನೂರಾರು ಮಿಲಿಯಗಟ್ಟಲೆ ಜನಸಂಖ್ಯೆ ಶ್ರಮಿಸಿದ್ದು ಇನ್ನು ಆ ವರ್ಗದವರಿಗೆ ಇತರ ಅವಶ್ಯಕತೆಗಳಾದ ಆಹಾರ ನೀರು ಇತರೆ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲು ಅದೆಷ್ಟು ಜನ ಭಾಗಿಯಾಗಿರಬಹುದು?? ಅಂದರೆ ಎಲ್ಲಾ ಕಾಲದಲ್ಲೂ ಆಯಾ ದಿನಮಾನದ ಟ್ರೆಂಡನ್ನು ಅವಲಂಬಿಸಿದೆ ಅಂದರೆ ಆ ಕಾಲದಲ್ಲಿ ಜೀವನಾವಶ್ಯಕತೆಗಳಿಗೆ ಮತ್ತು ನಿತ್ಯ ಜೀವನ ನಡೆಸಲು ಏನೆಲ್ಲಾ ಅವಶ್ಯಕತೆಗಳಿದ್ದವು ಆ ಕೆಲಸದಲ್ಲಿ ಜನರು ತೊಡಗಿಕೊಳ್ಳುತ್ತಿದ್ದು ಸ್ಪಷ್ಟ. ಅದರಂತೆಯೇ ಚೀನಾ,ಮತ್ತು ಆಯಾ ಪ್ರಾದೇಶಿಕ ಸ್ಥಳಗಳಲ್ಲೂ ಇದೇ ಚಿತ್ರಣ ಇತ್ತು...ಇಂದಿನ ದಿನ ಮಾನಕ್ಕೆ ತಕ್ಕಂತೆ ಮೂಲಗುಣಗಳನ್ನು ಉಳಿಸಿಕೊಂಡು ಆಚರಣೆಗಳು Trending ಆಗಿ ಬದಲಾಗುತ್ತಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ