ಇನ್ಮೇಲೆ ನೀನು ನನ್ನನ್ನು ಎಲ್ಲಿ ಕರೆಯಬೇಡಯ್ಯ....

*#ನೀನ್ ನನ್ನ ಇನ್ಮೇಲೆ ಎಲ್ಲೂ ಕರೀಬೇಡಯ್ಯ ನಾನು ನಿನ್ನ ಜೊತೆಗೆ ಬರಲ್ಲ...*

*ಆರುಷಿ  ಕೋಟೆನಾಡು ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ ಶಿಕ್ಷಕನಾಗಲು ಡಿ .ಇಡಿ ಮಾಡಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದ. ಯಾವಾಗಲೋ ಊರಿಗೆ ಹೋಗುವಾಗ ಬಸ್ಸಲ್ಲಿ ಆಕಸ್ಮಿಕವಾಗಿ ಕಂಡ ಕ್ಲಾಸ್ ಮೇಟ್ ಅಕ್ಷತಾಳೊಂದಿಗೆ ಮಾತಾಡಿ ದ.ಆರುಷಿ ಮತ್ತು ಅಕ್ಷತಾ ಪ್ರೈಮರಿ ಸ್ಕೂಲ್ ಕ್ಲಾಸ್ಮೇಟ್ಸ್ ಆದರೂ ಹೈಸ್ಕೂಲ್ ಪಿಯೂ ಬೇರೆ ಬೇರೆ ಕಡೆ ಮುಗಿಸಿದ್ದರು. ಪ್ರೈಮರಿ ನಂತರ  ಅವರಿಬ್ಬರೂ ಎಂದು ಬೇಟಿಯಾಗಲೇ ಇಲ್ಲ.. ಅಂದು ಬಸ್ಸಿನಲ್ಲಿ ಬೇಟಿಯಾಗಿದ್ದೇ ಪಸ್ಟ್ ಟೈಂ.. ಬಹಳದಿನಗಳ ನಂತರ ಪರಸ್ಪರ ಕುಶಲೋಪರಿ ಮಾತನಾಡಿದ ಇಬ್ಬರೂ ನೆಕ್ಸ್ಟ್ ಏನು ಮಾಡಬೇಕು ಅಕ್ಷತಾ ಎಂಬ ಪ್ರಶ್ನೆಗೆ ಡಿ ಇಡಿ ಮಾಡಬೇಕು ಅಂತ ಇದ್ದೀನಿ ಅಪ್ಲಿಕೇಶನ್ ಹಾಕಿದ್ದೇನೆ ಎಂದಳು.ನಾನು ಡಿ ಇಡಿ ಗೆ ಹಾಕಿದ್ದೇನೆ ಸೆಲೆಕ್ಷನ್ ಲಿಸ್ಟ್ ಯಾವಾಗ ಬಿಡುತ್ತಾರೋ ನೋಡಬೇಕು ಎಂದು ಮಾತನಾಡುತ್ತಾ ಬಂದೆವು. ಇದಾಗಿ ಒಂದು ತಿಂಗಳಾಗಿರಬಹುದು. ಅಕ್ಷತಾ ಚಳ್ಳಕೆರೆ ನಗರದ ಡಿ ಇಡಿ ಕಾಲೇಜಿಗೆ ಅಡ್ಮೀಷನ್ ಆಗಿ ಕಾಲೇಜಿಗೆ ಹೋಗುತ್ತಿದ್ದಾಳೆ ಎಂದು ತಿಳಿಯಿತು. First ಲಿಸ್ಟಲ್ಲಿ ನನ್ನದು ಸೆಲೆಕ್ಷನ್ ಆಗಿರಲಿಲ್ಲ. ಆದರೆ ಅಕ್ಷತಾ ಪೇಮೆಂಟ್ ಕಟ್ಟಿ ಕಾಲೇಜಿಗೆ ಅಡ್ಮಿಷನ್ ಪಡೆದಿದ್ದಳು. ಎರಡು ಮೂರನೇ ಲಿಸ್ಟ್ ಗೆ ಕಾಯುತ್ತಿದ್ದ ನಾನು ಡಿ ಇಡಿ ಹೇಗಿರುತ್ತದೆಂಬ ಕುತೂಹಲದಿಂದ ಮತ್ತು ಎರಡನೇ ಲಿಸ್ಟ್ ನ ಮಾಹಿತಿಗಾಗಿ  ಅಕ್ಷತಾ ರೂಂ ಮಾಡಿದ ವಿಳಾಸಕ್ಕೆ ಆರುಷಿ ಮತ್ತು ಗೆಳೆಯ ಮಹಾಸ್ವಾಮಿ ಇಬ್ಬರೂ ಹೋದರು..*

*ಅಕ್ಷತಾ ರೂಂ ಇದ್ದದ್ದು  ಚಳ್ಳಕೆರೆಯ BSNL ಆಫೀಸ್‌  ಬಳಿಯ ಟವರ್ ಪಕ್ಕದಲ್ಲಿ.ನಗರದಲ್ಲೇ  ಎತ್ತರದ  ಜೋಡಿ ಟವರ್ ಅವು..ಅವುಗಳ  ಮೇಲೆ ಅಳವಡಿಸಿದ ಸಿಗ್ನಲ್ ರಿಸೀವರ್ ಗಳು ದೊಡ್ಡ ಡ್ರಮ್ ಕಂಡ ಹಾಗೆ ಕಾಣುತ್ತಿದ್ದವು.ಯಾವಾಗಲಾದರೂ ಅವುಗಳನ್ನು ಹತ್ತಿ ದೊಡ್ಡಕೋಲು ತೆಗೆದುಕೊಂಡು ಡ್ರಮ್ ಬಾರಿಸುವ ಹಾಗೆ ಡಮ್ ಡಮ್ ಎಂದು ಬಾರಿಸಬೇಕು ಅಂತ ಹೈಸ್ಕೂಲ್ ದಿನಗಳಲ್ಲಿ  ಹಾಸ್ಟೆಲ್ ನಲ್ಲಿ ಇದ್ದಾಗ ಊರೆಲ್ಲ ಅಲೆದಾಡಿ ಜೇನು ಹುಡುಕುವ ದಿನಗಳಲ್ಲಿ  ಬಹಳ ಆಸೆ ಇತ್ತು . ಅದಕ್ಕಾಗಿ ಒಮ್ಮೆ  ಅವುಗಳ ಮೇಲೆ ಹತ್ತುವ ಅವಕಾಶ  ಇದ್ದರೆ ಹತ್ತಬೇಕು ಅಂತ ಹೋಗಿದ್ದೆವು. ಆ ಟವರ್ ಗಳು ದೊಡ್ಡ ಕಾಂಪೌಂಡ್ ಒಳಗೆ ಇದ್ದವು ಮತ್ತು ಅದಕ್ಕಾಗಿ ಸೆಕ್ಯೂರಿಟಿ ಇದ್ದದ್ದು ನೋಡಿ ಟವರ್ ಹತ್ತಲು ವಿಫಲವಾಗಿ ವಾಪಾಸಾಗಿದ್ದು ನೆನಪಾಯಿತು.  ಅಕ್ಷತಾ ರೂಂ ನ  ಒಳಗಡೆ ಹೋಗಿ ಕೂತೆವು. ಆಗ ತಾನೇ  ಸೀಮೆಎಣ್ಣೆ ಬತ್ತಿ ಸ್ಟೌವ್ ಲ್ಲಿ  ಅನ್ನಕ್ಕೆ ಇಟ್ಟಿದ್ದ ಅಕ್ಷತಾ  ಗೆಳೆಯರ ಆಗಮನಕ್ಕೆ ಅನ್ನ ಇಳಿಸಿ ಒಂದೆರಡು ಲೋಟ ಕಾಫಿಯನ್ನು ಮಾಡಿದಳು. ಅಗಲವಾದ ಒಂದು ಗುಂಡುಲೋಟಕ್ಕೆ ಹಾಕಿದಳು. ಸೋಸುವಾಗ ಲೋಟ ತುಂಬಿಹೋಗಿ ಚೆಲ್ಲಬಹುದಾದ ಸಾಧ್ಯತೆ  ಇದ್ದುದರಿಂದ ಇನ್ನೊಂದು ಸಣ್ಣ ಲೋಟವನ್ನು ಪಕ್ಕದಲ್ಲಿ ಇಟ್ಟಿದ್ದಳು. ಅದಕ್ಕೂ ಸ್ವಲ್ಪ ಹಾಕಿ ಅಕ್ಷತಾ ಕಾಫಿ ಕುಡಿಯದೇ ಎರಡೂ ನಮಗೆ ಕೊಟ್ಟು ಮತ್ತೆ ಏನಪ್ಪಾ ಸಮಾಚಾರ??? ಎಂದು ಕೇಳಿದಳು...ಒಂದೆರಡು ಬಾರಿ  ದೊಡ್ಡ ಗುಂಡು ಲೋಟದಿಂದ ಸಣ್ಣ ಲೋಟಕ್ಕೆ  ಕಾಫಿಯನ್ನು ಎತ್ತಿಹಾಕಿದ ಆರುಷಿ ಸಣ್ಣಲೋಟವನ್ನು ಮಹಾಸ್ವಾಮಿಗೆ ಕೊಟ್ಟು ದೊಡ್ಡ ಲೋಟವನ್ನು ಆರುಷಿ ಹಿಡಿದುಕೊಂಡು ಕಾಫಿ ಕುಡಿಯಲು ಆರಂಭಿಸಿದರು.ಮಹಾಸ್ವಾಮಿ ಆರುಷಿ ಇಬ್ಬರೂ ಏಕಕಾಲದಲ್ಲಿ ಕಾಫಿ ಕುಡಿಯುವುದನ್ನು ಮುಗಿಸಿ ಡಿ ಎಡ್ ನಲ್ಲಿ ಅಕ್ಷತಾಳ ಕೆಲವು ದಿನಗಳ ಅನುಭವದ ಮಾತುಗಳನ್ನು ಪಡೆದು 'ಸರಿಯಮ್ಮ ನಾವು ಬರುವೆವು' ಎಂದು ರೂಂ ನಿಂದ ಹೊರಬಂದೆವು.*

*ಹೊರಬಂದ ಇಬ್ಬರೂ ಅವರ ರೂಂ ಕಡೆ ಹೋಗಲು ಹೆಜ್ಜೆ ಹಾಕುತ್ತಿದ್ದಾರೆ.*

*ಹತ್ತಿಪ್ಪತ್ತು ಹೆಜ್ಜೆ ಹಾಕಿರಬಹುದು*

*ಮಹಾಸ್ವಾಮಿ: ಅಲ್ಲಲೇ  ಆರುಷಿ ಕಾಫಿ ಚೆನ್ನಾಗಿತ್ತಾ?? ಯಾಕೋ ಸುರ್ ಸುರ್ ಎಂದು ಕೋಪದಿಂದ ಕೇಳಿದಂತಿತ್ತು...*

*ಆರುಷಿ :  ಹ್ಞೂಂ ಮಹಾಸ್ವಾಮಿ ಚೆನ್ನಾಗಿಯೇ ಇತ್ತಲ್ಲ? ನೀನು ಕುಡಿದೆಯಲ್ಲಾ??ನಿಮ್ ಕಡೆ ಹಿಂಗೆ ಮಾಡಲ್ಲವಾ??*

*ಮಹಾಸ್ವಾಮಿ:ಲೇ ಆರುಷಿ ಕಾಪೀ ಮಾಡುವುದು ಎಲ್ಲಾ ಕಡೆ ಒಂದೇ.. ನಮ್ ಹಳ್ಳಿ ಕಡೆ ಬೆಲ್ಲ ಹಾಕ್ತಾರೆ. ಇದ್ದಂತಹವರು ಸಕ್ಕರೆ ಹಾಕ್ತಾರೆ ಅಷ್ಟೇ.. ನಾನು ಹೇಳಿದ್ದು ಅದಕ್ಕಲ್ಲ... ಬಿಡು ಬಿಡು... ನೆಡಿ ಸುಮ್ಮನೆ ಎಂದು ಸಿಟ್ಟು ಮತ್ತು ಬೇಜಾರಿನಿಂದ ಹೋಗ್ಲಿ ಬಿಡಯ್ಯ ಸುಮ್ಮನೆ ಯಾಕೆ ಎಂದು  ನುಡಿದ..*

*ಆರುಷಿ :ಏನಾಯಿತೋ ಯಾಕ ಮಹಾಸ್ವಾಮಿ ಏನಾದರೂ ತಪ್ಪಾಯಿತೇನೋ??ಯಾಕೋ ಬೇಜಾರು ಆಗಿಯಾ ??*

*ಮಹಾಸ್ವಾಮಿ:ಬೇಜಾರಿಲ್ಲ... ಗೀಜರ್ ಇಲ್ಲ "ಇನ್ಮೇಲೆ  ನಿನ್ನ ಜೊತೆಗೆ ನನ್ನ ಎಲ್ಲಿಯೂ ಕರೀಬೇಡಯ್ಯ ನಾನು ಬರಲ್ಲ" ಸರಿನಾ..?? ನಿನ್ ಹೆಂಗಾದ್ರೂ ಇರು... ನಿನ್ ಸುದ್ದಿಗೆ ನಾನು ಬರಲ್ಲ ನಾನು ಸುದ್ದಿಗೆ ನೀನು ಬರಬೇಡ ಅಂದ..ಹಂಗೆ ಹೇಳಿದವನೇ ನನ್ನ ಜೊತೆ ಬರುವುದು ಬಿಟ್ಟು ಜೋರಾಗಿ ಮುಂದೆ ಹೋದ...*

*ಆರುಷಿ : ಮಹಾಸ್ವಾಮಿ  ಹಂಗೆ ಮಾಡಬೇಡ ನನ್ನಿಂದ ಏನು ತಪ್ಪಾಯಿತು ಅಂತಾ ಗೊತ್ತಾಗುತ್ತಿಲ್ಲ..ಯಾಕಿಂಗ್ ಮಾತಾಡ್ತಿದ್ದೀಯಾ?? ಏನಾಯಿತು ಅಂತ ಹೇಳ್ಲೇ  ಎಂದು ಕೈ ಹಿಡಿಯುಲು ಹೋದರೆ ಕೈಗೂ ಸಿಗುತ್ತಿಲ್ಲ..ಸುಮಾರು ನೂರು ಮೀಟರ್ ದೂರದಿಂದ ಜಗ್ಗಾಡಿ ಪ್ಲೀಸ್ ಪ್ಲೀಸ್ ಎಂದು ಅಂಗಲಾಚಿದಾಗ ಕೊನೆಗೆ ನಿಂತನು .*

*ಮಹಾಸ್ವಾಮಿ:ಅಲ್ಲಲೇ ನಿನ್ ನನಗೆ ಸ್ವಲ್ಪನಾದ್ರೂ ಕಾಫಿ ಕೊಟ್ಟೇನ್ಲೇ??*

*ಆರುಷಿ : ಕೊಡ್ಲಿಲ್ಲ??ನೀನು ನನ್ನ ಜೊತೆಗೆ ಸುರ್..ಸುರ್.. ಅಂತ ಕುಡಿದೆಯಲ್ಲೋ...??*

*ಮಹಾಸ್ವಾಮಿ: ಎಲ್ಲ್ ಕುಡಿದೆ...?ಸುಮ್ಮನೇ ಸುರ್ ಸುರ್ ಅಂದೀನಿ ಕಾಫಿ ಇಲ್ಲ ಗೀಪಿ ಗೊತ್ತಾ??*
*ಅವತ್ತು ನನ್ನದೇ ದುಡ್ಡಲ್ಲಿ ಬಾಳೆಹಣ್ಣು ತಗೊಂಡ್ ರವಸ್ಟು ಕೊಡ್ಲಿಲ್ಲ..ಅದಕ್ಕೂ ಬೇಜಾರ್ ಆಗಿಲ್ಲ. ಇವತ್ತು ಹಂಗೆ ಮಾಡಿದೆ... ಹೆಣ್ಮಗಳ ರೂಂ ನಲ್ಲಿ ಮರ್ಯಾದೆ ತೆಗಿಬಾರದು ಅಂತ ಸುಮ್ಮನಾದೆ. ಸುಮ್ಮನೇ ಯಾಕಯ್ಯ ನನಗೂ ನಿನಗೂ... 'ಇನ್ಮೇಲೆ ನಿನ್ ಜೊತೆಗೆ ನಾನು ಬರಲ್ಲ' ಎಂದು ಜೊತೆಗೆ ನಡೆದು ಬರುತ್ತಿದ್ದ ಮಹಾಸ್ವಾಮಿ ದಡದಡ ನಡೆದು ಮುಂದೆ ಹೋಗಿಬಿಟ್ಟ...*

*ಆರುಷಿ : ಮಹಾ ಸ್ವಾಮಿ ನಿಲ್ಲು ನಿಲ್ಲು..  ಸ್ವಲ್ಪ ಹೇಳೋವರೆಗೆ ಕೇಳಲೇ...*

*ಮಹಾಸ್ವಾಮಿ:ಏ ಹೋಗಯ್್ಯ..*

*ಆರುಷಿ :ಏ ಮಹಾಸ್ವಾಮಿ ಹೇಳದು ಕೇಳು.. ಏನೋ ತಪ್ಪಾಯಿತು.. Sorry   ಬೇಕು ಅಂತ ಮಾಡ್ಲಿಲ್ಲ..ಕಣೋ ಆ ಲೋಟದಲ್ಲಿ ಕಾಫಿ ಹಾಕಿನಿ ಅಂತ ಅನ್ಕೊಂಡ್ ಕೊಟ್ಟಿದ್ದೆ ಆದರೆ ಅದರಲ್ಲಿ ಇಲ್ಲದೇ ಇರುವುದು ನಾನು ನೋಡಿರಲಿಲ್ಲ.. ಸಾರೀ ಕಣಪ್ಪ ಇನ್ಮೇಲೆ ಹಂಗಾಗಲ್ಲ.. Pls pls ಲೇ..*

*ಮಹಾ ಸ್ವಾಮಿ ಗೆ ಎರಡೆರಡು ಬಾರಿ ಆದ ಅವಮಾನ ತಡೆದುಕೊಳ್ಳಲು ಆಗುತ್ತಿಲ್ಲ .  ಆ ಅಸಮಾಧಾನ  ಸರಿಹೋಗಲು ಒಂದೆರಡು ದಿನಗಳೇ ಬೇಕಾದವು.*

 *ಅದಕ್ಕೂ ಮುನ್ನ ಎಸ್ ಎಸ್ ಎಲ್ ಸಿ ಇದ್ದಾಗ ಗೆಳೆಯರಾದ ದೇವರಾಜ ಮತ್ತು ಗೋವಿಂದ ಅವರ ಊರಿಗೆ ಹೋಗಿದ್ದೇವು.. ಅಂದು ನಾನು ಮಾತ್ರ ಊರಿಗೆ ಹೊರಡುವುದು ಎಂದು ನಿರ್ಧರಿಸಿ ಅವರು ಅಲ್ಲೇ ಉಳಿಯಲು ತೀರ್ಮಾನಿಸಿದರು. ಊರಿಗೆ ಹೊರಡಲು ಹಣ ಬೇಕಲ್ಲ?? ನಮ್ಮ ಬಳಿ ಯಾರತ್ರವು ಇರಲಿಲ್ಲ... ದೇವರಾಜನ ತಂದೆ ಹತ್ತಿರ ರೂ. 20 ನೋಟು ತೆಗೆದುಕೊಂಡು ಬಂದ.. ಆದರೆ ಬಸ್ ಚಾರ್ಜು 7- 8 ರೂಪಾಯಿ ಇದ್ದಿದ್ರಿಂದ ರೂ.20 ಅವಶ್ಯಕತೆ ಇರಲಿಲ್ಲ ಹತ್ತು ರೂಪಾಯಿ ತೆಗೆದುಕೊಂಡು 10 ರೂಪಾಯಿ ವಾಪಸ್ ಕೊಡಬೇಕಾಗಿತ್ತು. ಅಲ್ಲೊಂದು ಅಂಗಡಿಗಳಲ್ಲಿ ಕೇಳಿದರೆ ಏನಾದರೂ ತೆಗೆದುಕೊಂಡರೆ ಕೊಡುತ್ತೇನೆ ಎಂದರು. ಬಾಳೆಹಣ್ಣು ಕೊನೆ ಗಮಗಮಿಸುತ್ತಾ ಇದ್ದದ್ದು ಕಣ್ಣಿಗೂ ಮುಗಿಗೂ ಬಿತ್ತು. ಸರಿ ಬಾಳೆಹಣ್ಣು ತೆಗೆದುಕೊಳ್ಳೋಣ ಎಂದು ಒಂದು ದೊಡ್ಡ ಬಾಳೆಹಣ್ಣು ಕಿತ್ತುಕೊಂಡು ಕೈಯಲ್ಲಿ ಹಿಡಿದ ನಾನು ಅದನ್ನ ಗೋವಿಂದ ಹಣ ಕೊಡುವುದರ ಒಳಗೆ ಸುಲಿದು ಗಬ ಗಬನೆ ತಿಂದುಬಿಟ್ಟೆ. ಅಂಗಡಿಯವನು 20 ರೂಪಾಯಿಯ ಚೇಂಜ್ ಗಾಗಿ ಅವನ ಗಲ್ಲ ಪೆಟ್ಟಿಗೆಯನ್ನು ತಡಕಾಡಿ ಹುಡುಕಾಡುತ್ತಿದ್ದಾನೆ ಆದರೆ ಆ 20 ರೂಪಾಯಿಗೆ ಚಿಲ್ಲರೆ ಅವನ ಬಳಿ ಸಿಗುತ್ತಿಲ್ಲ.ಇತ್ತ ಹಣ್ಣನ್ನಾದರೂ ವಾಪಾಸ್ ಕೊಟ್ಟು ಇಪ್ಪತ್ತು ರೂಪಾಯಿ ತೆಗೆದುಕೊಳ್ಳೋಣ ಎಂದರೆ ಹಣ್ಣು ಇಲ್ಲ. ಹಣ್ಣಿನ ದುಡ್ಡನ್ನು ಮಾತ್ರ ಕೊಡಲಿಕ್ಕೆ ನಮ್ಮ ಬಳಿ ಯಾರತ್ರವು ಚಿಲ್ಲರೆ ಕಾಸು ಇರಲಿಲ್ಲ. ಹಾಗೂ ಹೀಗೂ ಮಾಡಿ ಬೇಜಾರಿದ ನಂತರ 10 -15 ನಿಮಿಷಕ್ಕೆ ಅಂಗಡಿಯವನೇ ಧಾರಾಳತನ ತೋರಿ  ನೋಡಪ್ಪ ನೀವು ನೋಡಿರೋರೆ ಇರೋದ್ರಿಂದ ಯಾವಾಗಾದ್ರೂ ಕೊಡ್ರಿ ಎಂದು ಕಳಿಸಿಬಿಟ್ಟ... ಆದರೆ ಆ ಕ್ಷಣ ದೇವರಾಜ ಮತ್ತು ಗೋವಿಂದ ಇಬ್ಬರೂ ನನ್ನನ್ನೇ ದುರುದುರು ನೋಡುತ್ತಿದ್ದರು...  ಚಿಲ್ಲರೆಗಾಗಿ ಪೆಚಾಡಿದ್ದಕ್ಕೆ  ಎಂದು ನಾನೆಂದುಕೊಂಡರೆ ಅಸಲಿ ಮುನಸಿಗೆ  ಕಾರಣ ನಾನು ಬಾಳೆಹಣ್ಣು ಅವರಿಗೆ ಕೊಡದೇ ಇದ್ದದುದ್ದು ಕಾರಣವಾಗಿತ್ತು. ಅದು ನೆನಪಾಗಿ ಹೀಗೆ ನನಗೆ ಆಗಾಗ ಆಗುತ್ತಿರುತ್ತದೆ ಎಂದು ಈ ಹಳೇ ಕಥೆಯನ್ನ ಹೇಳಿ ಮಹಾಸ್ವಾಮಿಗೆ ಸಮಾಧಾನ ಮಾಡಿದ...*


*ಆರುಷಿಗೆ ಗೆ ಕೈಯಲ್ಲಿರುವ  ಏನಾದರೂ  ತಿನ್ನುವ ವಸ್ತು ಬೇರೆಯವರಿಗೆ ಕೊಡಬಾರದು ಅಂತ ಇಲ್ಲ... ಆದರೆ ಕೈಯಲ್ಲಿ ಇರುವುದು ತಿಂದು ಮುಗಿಸುವುದಷ್ಟೇ ಗುರಿಯಾಗಿರುತ್ತದೆ ಹೊರತು ಬೇರೆಯವರಿಗೆ ಕೊಡಬಾರದು ಅಂತೇನೂ ಅಲ್ಲ... ರುಚಿ ಹತ್ತಿದಾಗ ಆಸ್ವಾದನೆಯ ಕಡೆ ಗಮನ ಹೋಗಿ ಪಕ್ಕದಲ್ಲಿರುವರಿಗೂ ಕೊಡಬೇಕಾ ಬೇಡ್ವಾ ಅಂತ ಗೊತ್ತಾಗಲ್ಲ.. ಇವನ ಜೀವನದಲ್ಲಿ ಇಂತಹ ಹತ್ತಾರು ಪ್ರಸಂಗಗಳು ನಡೆದಿವೆ.. ಆರುಷಿ ಮದುವೆಯ ನಂತರವೂ ತನ್ನ ಮಡದಿಯೊಂದಿಗೆ ಇಂತಹ   ಪ್ರಸಂಗಗಳು ಲೆಕ್ಕವಿಲ್ಲದಷ್ಟು ಬಾರಿ ಆಗಿವೆ.ಮೊದಮೊದಲಿಗೆ ಈ ವಿಚಾರದಲ್ಲಿ ತುಂಬಾ ಗಂಭೀರತೆ ಇತ್ತು... ಗತ ಘಟನೆಗಳನ್ನು ಆಗಾಗ ಸಮಾಧಾನವಾಗಿದ್ದಾಗ ಹೇಳಿ ಹೇಳಿ ಸರಿ ಮಾಡಿದ್ದೇನೆ. ಅನೇಕ ಮುನಿಸು ಕ್ಷಮೆಗಳ ನಂತರ ಈಗ ಅಷ್ಟಾಗಿ ಅವಳೂ ತಲೆಕೆಡಿಸಿಕೊಳ್ಳುವುದಿಲ್ಲ.ಅಲ್ಪ ಸ್ವಲ್ಪ ಈಗಲೂ ಇದೆ ಆದ್ರೆ ಆರುಷಿ ಇತ್ತೀಚಿನ ವರ್ಷಗಳಲ್ಲಿ  ಬಹಳ ಸುಧಾರಿಸಿದ್ದಾನೆ. ಸದ್ಯ ಇತ್ತೀಚಿಗೆ ಇಂತಹವುಗಳು ಯಾವೂ ಆಗಿಲ್ಲ..😀😀*

✍️ನಾಗೇಂದ್ರ ಬಂಜಗೆರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..