ಮಹಿಳೆಯರೂ ಮತ್ತು ಮರೆಯದ ಸೇಡುಗಳು...
"ನಾವ್ ಮನೆಗೆ ಹೋಗೋ ದಿಲ್ಲ....
ನಾವ್ ಮನೆಗೆ ಹೋಗೋ ದಿಲ್ಲ....
ನಮ್ಗೆ ಬಾಗಲು ತೇಗೆಯೊರೀಲ್ಲಾ
ನಾವ್ ಮನೆಗೆ ಹೋಗೂದಿಲ್ಲ
ನಮ್ಗೆ ಬಾಗಲು ತೆಗೆಯೊರೀಲ್ಲಾ
ಇಲ್ಲಾ..ಇಲ್ಲಾ.. ಇಲ್ಲಾ......ಇಲ್ಲಾ.."
ಕಳೆದ ಐದಾರು ವರ್ಷಗಳ ಹಿಂದೆ ಟ್ರೆಂಡ್ ಆಗಿದ್ದ ಈ ಹಾಡು ಯಾರು ತಾನೇ ಕೇಳಿಲ್ಲ??ವಿಶೇಷವಾಗಿ ಮದುವೆ ಆದವರೇ ಹತ್ತಾರು ಬಾರಿ rewind -rewind ಮಾಡಿಕೊಂಡು ಈ ಹಾಡನ್ನು ಕೇಳಿದವರು ಬಹಳ ಜನ ಇದ್ದಾರೆ ...ರೆಸ್ಟೋರೆಂಟ್ ಗಳಿಗೆ ಮಜಾ ಮಾಡಲು ಹೋದವರು, ಆಟೋ, ಕ್ಯಾಬ್ ಡ್ರೈವರಗಳು, ರಿಯಾಲಿಟಿ ಶೋ ಗಳಲ್ಲಿ ಮೆಟ್ಲಿಗಳಾಗಿ ಹಾಡುತ್ತಾ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಈ ಹಾಡು ತಲುಪಿ ಜನರ ಬಾಯಿಯಲ್ಲಿ ಆಲಾಪಿಸಿದ್ದು ಎಲ್ಲರಿಗೂ ಗೊತ್ತಿದೆ. ಯಾಕೆ ಈ ಹಾಡು ಇಷ್ಟ ಆಗಿರಬಹುದೆಂದರೇ ಆ ಹಾಡಿನ lyrics, ಅಲ್ಲಿ ಇರುವ ಮಾತುಗಳು ಪ್ರತಿ ಗಂಡOದಿರಿಗೆ ಪ್ರತಿದಿನ ಅವರ ಹೆಂಡತಿಯರು ಹೇಳಿದಂತೆ ಅನಿಸಿದುದ್ದುದು ! ಅವರ ಹೆಂಡತಿಯರು ಮಾತಾಡಿದಾಗ ಬಾಯಿ ಮುಚ್ಚಿಕೊಂಡೋ ಬಯ್ಯಿಸಿಕೊಂಡೋ,ಅಥವಾ ಸಿಟ್ಟಿನಿಂದ ಹಿಂತಿರುಗಿ ಬೈದೊ,ಹೇಗೂ ದಿನಗಳು ತಳ್ಳುತಿದ್ದ ದಿನಗಳಲ್ಲಿ ಇಂಥಾ 'ಗಂಡಂದಿರ ಆಕ್ರೋಶ ' ಹಾಡಾಗಿ ಬಂದದ್ದು,ಇದರ ಸಾಲುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಾದಂತೆನಿಸಿದ್ದರಿಂದ ಸಹಜವಾಗಿ ಹೆಂಡತಿಯರಿಂದ ಕಿರಿ ಕಿರಿ ಅನುಭವಿಸಿರುವವರನ್ನು ಈ ಸಾಲುಗಳು ಮುಟ್ಟಿದವು ಅನ್ಸತ್ತೆ... ಇನ್ನೂ ಈ ಸಾಲುಗಳಿಗೆ ಕಾರಣವಾದ 'ನೋವು' ಏನಿರಬಹುದು ಎಂಬುದು ನಿಮಗೆ ಗೊತ್ತಿರಬಹುದು. ನಿಮ್ಮ ತರಾನೇ ನಾನು ಸ್ವಲ್ಪ ಜಾಸ್ತಿ ವಿಸ್ತರಿಸಿದ್ದೇನೆ ಅಷ್ಟೇ .
ಬರಹದ ಒಡಲಿಗೆ ಕಾಲಿಡುವ ಮುನ್ನ 'ನಾನು ಖಂಡಿತಾ ಮಹಿಳಾ ವಿರೋಧಿಯಲ್ಲಾ' ಎಂದು ಘಂಟಾ ಘೋಷವಾಗಿ ತಿಳಿಸುತ್ತಾ, ನೀವು ತೀವ್ರಗಾಮಿ, ಉಗ್ರಮಿಗಳಂತೆ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬಿಟ್ಟು ಗಾಂಧೀಜಿ ಗಿಂತಲೂ ಎರಡೂ ಪಟ್ಟು 'ಶಾಂತಿ'ಯಿಂದ ತೆಗೆದುಕೊಂಡರೆ ನಾನೂ ನೀವೂ ಸಂಘರ್ಷ ಇಲ್ಲದೇ ಶಾಂತವಾಗಿ ಮುಂದುವರೆಯಬಹುದು.
ಒಂದು ದಿನ ಬೆಳ್ಳಮ್ ಬೆಳ್ಳಿಗ್ಗೆ ವಾಕಿಂಗ್ ಹೋಗಿದ್ದೆ... ವಾಕಿಂಗ್ ಗಾಗಿ ನಾನೇನು ಮೈದಾನಕ್ಕೆ ಹೋಗಿರಲಿಲ್ಲ ಬದಲಾಗಿ ರಾಜಬೀದೀಯಲ್ಲೇ ಹೋಗ್ತೀದ್ದೆ.ಅಂದು ಸಾಧಾರಣವಾಗಿ ಚಳಿಯೂ ಇತ್ತು.ಹಾಗೆ ನಡೆದು ಹೋಗುತ್ತಿದ್ದಾಗ ಅಲ್ಲೊಂದು Bakery ಕಮ್ ಹೋಟೆಲ್ ಒಂದರ ಮುಂದೆ ಚಾಳೀಸು ಹಾಕಿಕೊಂಡು ಲುಂಗಿಯನ್ನು ಮೊಣಕಾಲು ತನಕ ಎತ್ತಿ ಕಟ್ಟಿದ್ದ ವ್ಯಕ್ತಿಯೊಬ್ಬ "ನಾನು ಬಂದು ಹದಿನೈದು ನಿಮಿಷ ಆತು ಇನ್ನೂ ಟೀ ಕೊಟ್ಟಿಲ್ಲ; ಕೊಡ್ರೋ ಎಷ್ಟೋತ್ತು ಕಾಯಬೇಕು??" ಎಂದು ಗದ್ದಲ ಮಾಡುತಿದ್ದರು. ಆ ಚಾಳಿಸು ಹಾಕಿಕೊಂಡವರು ಹಾಗಂದ ತಕ್ಷಣ ಬೇಕರಿಯ ಮಾಲೀಕ ತಕ್ಷಣವೇ "ತಡ್ರಿ ಸಾರ್...ಆಗಬೇಕು;ಲೇಟ್ ಆಗತ್ತೆ ಅಂತಾ ಮೊದಲೇ ಹೇಳೀನಿ... ಬೆಳಬೆಳಗ್ಗೆ ಅವಸರ ಮಾಡ್ ಬೇಡ್ರಿ...ಅಷ್ಟು ಅವಸರ ಇದ್ದರೆ ಮನೆಯಲ್ಲೇ ಮಾಡಿಸಿಕೊಂಡು ಕುಡಿಯಬೇಕಿತ್ತು..." ಎಂದು ಏರು ಧ್ವನಿಯಲ್ಲೇ ಮಾರುತ್ತರ ನೀಡಿದ.
"ಅವರನ್ನು ಎಬ್ಬಿಸಿ ಟೀ ಮಾಡು ಅಂತ ಹೇಳಾಕ್ ತಲೆ ಬ್ಯಾನಿ ಆಗಿ ನೇ ಇಲ್ಲಿಗೆ ಬಂದಿದ್ದು ನೀವೂ ಹಂಗೇ ಮಾಡ್ತೀರಿ. ಥುuu... ಈ ಹಾಳಾದ್ ಟೀ ಕುಡಿಯದೇ ಬಿಟ್ಟುಬಿಡಬೇಕು ಅತ್ಲಾಗೆ..."ಎಂದು ಶಪಿಸುತ್ತಾ ಸಿಡಿಮಿಡಿಗೊಂಡು ಟೀ ಕೇಳುತ್ತಿದ್ದರು. ಅಲ್ಲಿ ಟೀ ಕೇಳುತಿದ್ದ ಆ ವ್ಯಕ್ತಿ ಬೇರೆ ಯಾರೂ ಅಲ್ಲ.. ನಮ್ಮ ಇಲಾಖೆಯ B ಗ್ರೇಡ್ ನ ನಮ್ಮ ಮೇಲಾಧಿಕಾರಿ.ನನಗೂ ಪರಿಚಯದವರೇ... ಅವರ ಗಮನ ಟೀ ಮೇಲಿದ್ದದ್ದರಿಂದ ಅವರು ನನ್ನನ್ನೂ ನೋಡಲಿಲ್ಲ.ನಾನು ನಮಸ್ಕಾರ ಎಂದು ಹೇಳಲು ಕೈ ಮೇಲೆ ಎತ್ತಿದವ ಯಾಕೋ ಬೇಡ ಎಂದೇನಿಸಿ ಸುಮ್ಮನೆ ಮುಂದೆ ಹೋದೆ. ಆಗ ನನಗೆ ಅನಿಸಿದ್ದು 'ಆಯಮ್ಮ ಒಂದು ಲೋಟ ಟೀ ಮಾಡಿಕೊಡದೆ ಈ ಸಾರ್ ರನ್ನೇ ಹೆದರಿಸಿ ಹೊರಗೆ ಟೀ ಕುಡಿಯಂಗ್ ಮಾಡಿದರಲ್ಲ..' ಬಾರಿ ಇದಾರೆ ಬಿಡಪ್ಪ ಹೆಣ್ಮಕ್ಳು... ಅಂತ. ಈ ನನ್ನ ಅಭಿಪ್ರಾಯವನ್ನು ಬೆಂಬಲಿಸುವಂತೆ ಇತ್ತೀಚಿನ ದಿನ ಪತ್ರಿಕೆಗಳು, ಟಿವಿ ನ್ಯೂಸ್ ಗಳಲ್ಲಿ ಹಿಂಸೆ ಮತ್ತು ಕ್ರೂರತೆಯಲ್ಲಿ ಈ ಮಹಿಳೆಯರು 'ನಾವೂ ಯಾರಿಗೂ ಕಡಿಮೆ ಇಲ್ಲಾ' ಎಂದೂ ಸಾಬೀತು ಮಾಡಲು ಹೋರಟಂತೆ ಇದೆ. ಹಾಗೆ ಯಾವತ್ತಾದರೂ ಯಾರಿಂದಲಾದರೂ ಅವಮಾನ, ಮೋಸ,ಅನ್ಯಾಯ ಅಥವಾ ಕಾರಣವೋ ವಿನಾ ಕಾರಣವೋ ಬಯ್ಯಿಸಿಕೊಂಡರೆ ಅದನ್ನು ಅವರಿಗೆ ಮುಯ್ಯಿಗೆ ಡಬಲ್ ಮುಯ್ಯಿ ಎಂಬಂತೆ ಯಾವ್ಯಾವಾಗ ಸಾಧ್ಯ ಆಗತ್ತೋ ಅವಾಗಲೆಲ್ಲಾ ಹತ್ತು-ಹತ್ತು ಪಟ್ಟು ಹೆಚ್ಚು ಕೊಡುತ್ತಾರಂತೆ...! (ಎಲ್ಲರೂ ಅಲ್ಲ )ಆ ಎದುರಾಳಿಗಳು ಅಕ್ಕಪಕ್ಕದ ಮನೆಯವರಿರಲಿ, ಮಾರುಕಟ್ಟೆ,ಬಜಾರಿನಲ್ಲಿರಲಿ, ಕಚೇರಿಯಲ್ಲಿರಲಿ, ಅದು ಅವರ ಗಂಡನಾಗಿದ್ದರೂ ಸರಿಯೇ ಎಷ್ಟು ದಿನಗಳಾದರೂ ಮರೆಯದೇ ವಾಪಾಸು ಕೊಡುವ ಅವಕಾಶ ಇರುವ ಪ್ರತಿ ಸಂದರ್ಭದಲ್ಲೂ ಅದನ್ನು ಖಂಡಿತಾ ವಾಪಾಸು ಮಾ ಡುತ್ತಾರಂತೆ! ನಾನು ಹೇಳುತ್ತಿರುವುದು 'ಹಿಂಸೆ'ಅಲ್ಲ. ಬದಲಾಗಿ ನಯವಾಗಿಯೇ ಹಿಂದೆ ತಾವು ತೆಗೆದುಕೊಂಡ ಬೈಗುಳ,ವಂಗ್ಯ, ಹೀಯಾಳಿಸುವುದು, ಕೋಪಗೊಂಡವರ ನಡುವೆ ತಮಗಾದ ಆ ಕ್ಷಣದ ನೋವನ್ನು ಮರೆಯದೇ ಅದೆಲ್ಲದನ್ನು ಸೂಕ್ತ ಸಮಯದಲ್ಲಿ ಎದುರಿಸಲು ಸನ್ನದ್ದ ರಾಗಿರುತ್ತಾರೆ.ಬಹಳಷ್ಟು ಜನ ಅಂಥಾ ಸಮಯಕ್ಕಾಗಿಯೇ ಕಾಯುತ್ತಿರುತ್ತಾರೆ . ಇವತ್ತು ಅವರಿಗೆ ಸರಿಯಾಗಿ ಟಾಂಗ್ ಕೊಟ್ಟೆ ಅಂತಾರೆ ನೋಡಿ ಹಾಗೇ... ಈ ತರ ನನ್ನ ಅನುಭವಕ್ಕೂ ಹತ್ತಾರು ಸಂದರ್ಭಗಳು ಬಂದಿವೆ.ಅದರಲ್ಲೂ ಇನ್ನೂ ಕೆಲವರು ಮಹಿಳೆಯರು ಸಾಮಾಜಿಕ ವ್ಯವಸ್ಥೆಯಲ್ಲಿ ತಾವು ಅನುಭವಿಸಿದ ಎಲ್ಲಾ ಒತ್ತಡಗಳನ್ನು ಅವರಿಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಸಾಮಾನ್ಯವಾಗಿ ಅವರ ಗಂಡಂದಿರ ಮೇಲೆ ಸಣ್ಣ ಕಾರಣಕ್ಕೂ ಸಿಡಿಮಿಡಿಗೊಂಡು ರೇಗಾಡಿ, ಬೈದು ತಮ್ಮನ್ನು ತಾವು ಸಮಾಧಾನ ಮಾಡಿಕೊಳ್ಳುತ್ತಿರುತ್ತಾರೆ. ವಾಪಸು ಬೈದರೆ ಅದರ ಸೈಡ್ ಎಫೆಕ್ಟ್ ಹೆಚ್ಚಿ ಲೈಟ್ effect-ಮೀಡಿಯಂ effect ಆಗಿ ಕೆಲವೊಮ್ಮೆ ಹೇಳಲಿಕ್ಕಾಗದ ಸೂಕ್ಷ್ಮ ವಿಷಯಗಳಲ್ಲೂ 'ಸೀರಿಯಸ್'ಎಫೆಕ್ಟ್ ಆಗಬಹುದಾದ ಸಾಧ್ಯತೆಗಳು ತೀವ್ರವಾಗಿ ಇರುವುದರಿಂದ ಈಗ ಇರುವ ಹೆಂಗಸರ ಅಸಲಿನ ಕೋಪಕ್ಕೆ ಇನ್ನಷ್ಟು ಅಸಲು ಸೇರಿಕೊಂಡು ಸೇಡಿನ ಅಸಲಿನ ಗಂಟೇ ಜಾಸ್ತಿ ಆಗಿ, ಅದೆಲ್ಲಾ ಬಡ್ಡಿ ಸಮೇತ ಅಪ್ಪಳಿಸಿದರೆ ಪರಿಣಾಮ 'ಗಂಭೀರ ಸ್ವರೂಪ'ತಾಳಬಹುದು ಎಂದು ಅನಿವಾರ್ಯವಾಗಿ ಬಾಯಿ ಮುಚ್ಚಿಕೊಂಡಿರಬೇಕು ಎಂದೇನಿಸಿ ಸುಮ್ಮನಿದ್ದಾರೆ. ನನ್ನನ್ನೂ ಸೇರಿ ಎಲ್ಲಾ ವೀರ್ಯ ಮಹಾ ವೀರ್ಯರಿಗೂ 'ತೆಪ್ಪಗಿರುವುದೇ ತಪ' ಅನ್ನಿಸಿ ಸಮಾಧಾನವಾಗಿ ಇದ್ದರೇನೋ ಎಂದು ನನಗನಿಸುತ್ತಿದೆ.!
ಇತ್ತೀಚಿನ ದಿನಮಾನಗಳಲ್ಲಿ ಮಹಿಳೆಯರ ದೌರ್ಜನ್ಯಗಳ ಕಾರಣವಾಗಿ ಮತ್ತು ಜಾರಿಯಲ್ಲಿರುವ ಇರುವ ಕಾನೂನು ನಿಯಮಗಳ ಅನ್ವಯ ಮಹಿಳೆಯರಿಗಿಂತ 5-6 ಪಟ್ಟು ಪುರುಷರೇ ಹೆಂಡತಿಯ ಕಿರುಕುಳಗಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಒಬ್ಬ ಪುರುಷನು ಒಂದು ಮಹಿಳೆಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಾನೆಂದು ದುರುದ್ದೇಶ ಪೂರ್ವಕವಾಗಿ ಸುಳ್ಳು ದೂರು ನೀಡಿದರೂ ಅವರನ್ನು ಪೊಲೀಸರು ಬಂದಿಸಬಹುದು... ಆದರೆ ಅದೇ ಮಹಿಳೆಯಿಂದ ಮಾನಸಿಕ,ದೈಹಿಕ ಕಿರುಕುಳ ಇದೆ ಎಂದು ಸಾಕ್ಷಿ ಸಮೇತ ಇದ್ದರೂ ಮಹಿಳೆಯನ್ನು ಬಂಧಿಸುವ,ಪ್ರಶ್ನಿಸುವ ಅವಕಾಶ ಸದ್ಯ ಕಾನೂನಿನಲ್ಲಿ ಇಲ್ಲ. ಇವೆಲ್ಲವೂ ಕಾನೂನಿನ ವಿಷಯವಾದರೆ ಹೊಂದಾಣಿಕೆ ಬಹಳ ದೊಡ್ಡದು...ಯಾರದ್ದೋ ಒತ್ತಡಕ್ಕೆ ಏನೇ ಕೆಲಸ ಕಾರ್ಯಗಳನ್ನು ಮಾಡುವುದು ಮನಸ್ಸಿಗೆ ಕಿರಿ ಕಿರಿಯಾಗಿ ಹಿಂಸೆ ಎನಿಸುವುದು.ನಗುವಿರಲಿ, ಕೆಲಸವಿರಲಿ, ಸರಸ ಸಲ್ಲಾಪ ಇರಲಿ ಪರಸ್ಪರ ಆಸಕ್ತಿ ಇದ್ದರೆ ಒಳಿತು. ಆಗ ಮಾತ್ರ ಅದು ಸುಖಮಯ ಎನಿಸುವುದು. ಇಲ್ಲವಾದರೆ ಅದು ಯಾರಿಗಾದರೂ ಹಿಂಸೆಯೇ ಸರಿ.. ಏನೇ ಕಷ್ಟ ಬಂದರೂ ಪರಸ್ಪರ ಗಂಡುಹೆಣ್ಣು ಇಬ್ಬರೂ ಜೊತೆಗೂಡಿ ಬದುಕು ಸಾಗಿಸುವ ತಾಳ್ಮೆ ಮತ್ತು ಜಾಣ್ಮೆ ಇಬ್ಬರಿಗೂ ಇರಬೇಕು.
ನಾ ಕಂಡಂತೆ ಮಹಿಳೆಯರಿಗೆ ಕೋಪದ ಸಮಸ್ಯೆ ಇಲ್ಲ ಆದರೆ ಅವರು ಕೋಪವನ್ನು ವಿಭಿನ್ನವಾಗಿ ನಿರ್ವಹಿಸುತ್ತಾರೆ. ಪುರುಷರು ಅಕ್ರಮಣಕಾರಿಯಾಗಿ ಹ್ಯಾಂಡಲ್ ಮಾಡಿದರೆ ಈ ಮಹಿಳೆಯರು ಸಣ್ಣ ದಾರದ ಎಳೆಯೊಂದನ್ನು ತೆಗೆದು ಸುದೀರ್ಘವಾಗಿ ಎಳೆದರೆ ಸಣ್ಣ ಅಡಚಣೆ ಮತ್ತು ಗುರುತು ಮೂಡುವಂತೆ ಇವರ ಮಾತಿನ ದಾಟಿ ತೋರುತ್ತದೆ.ಮಹಿಳೆಯರಲ್ಲಿ ಕೆಲವು ಜೈವಿಕ ಮತ್ತು ದೈಹಿಕ ಕಾರಣದಿಂದ ದೇಹದಲ್ಲಾಗುವ ಬದಲಾವಣೆಗಳು, ಹಾರ್ಮೋನ್ ಗಳ ಏರಿಳಿತಗಳಂತಹ ಹಲವು ಕಾರಣಗಳಿಂದ ಕೆಲವು ಬಾರಿ ಕೆಲವು ವಿಷಯ, ಪರಿಸ್ಥಿತಿಗಳಲ್ಲಿ ಮಾನಸಿಕ ಸ್ಥಿಮಿತತೆ ಸಮತೋಲನ ಕಾಪಾಡುವುದು ತುಸು ಕಷ್ಟ ಎನಿಸಬಹುದು.ಯಾವುದಾದರೂ ವಿಷಯಕ್ಕೆ ಗಂಡು ಮಕ್ಕಳಿಗೆ ಏನಾದ್ರೂ ಹೇಳಬಹುದು ಈ ಹೆಣ್ಮಕ್ಕಳಿಗೆ ಯಾರ್ ಹೇಳ್ತಾರಪ್ಪ...?? ಯಡವಟ್ಟುಗಳು ... ಇವರಿಗೆ ಹೇಳೋದ್ಕಿಂತ ಸುಮ್ಮನಿರುವುದು ವಾಸಿ ಎಂದು ಜನರಲ್ ಆಗಿ ಹಲವು ಬಾರೀ ಬಹಳ ಜನ ಅನುಭವಿಗಳು ಆಗಾಗ ಹೇಳುತ್ತಿರುತ್ತಾರೆ.
ಮಹಿಳೆಯರು ಹಿಂದಿನದನ್ನು ಮರೆಯೋದಿಲ್ಲ... ಇಂದು ಮಾಡುವ ಕೆಲಸಗಳಿಗೆ ಅವರು ನಿನ್ನೆಯದು ತಳುಕು ಹಾಕುವರು.ಏನಾದರೂ "ಇವತ್ತು ಟೈಮ್ ಸರಿಯಾಗಿ ಆಗಬೇಕು" ಅಂತ ಹೇಳಿದ್ರೆ ನಾನು "ಯಾವಾಗಲೂ ಸರಿಯಾಗಿಯೇ ಮಾಡಿದ್ದೇನೆಂದೂ, ನೀವೇ ಸರಿಯಾಗಿ ಮಾಡಲಿಲ್ಲ ಅಂತಲೋ... ಇವರು ಬಾರೀ... ಗೂತ್ತಿದೆ ನಿಮ್ಮದೆಲ್ಲಾ ಎಂತಲೋ, ಅದು ಇದು,ಹಾಗೆ ಹೀಗೇ ಹೇಗೇಗೋ ಏನಾದರೂ ಒಂದು ತಕರಾರು ತೆಗೆಯುವರು. ಹಾಗಂತ ಇದು ಯಾರೂಬ್ಬ ಹೆಣ್ಣುಮಗಳೂ ಸಿಟ್ಟಿಗೆದ್ದು ಮಾತಾಡುವ ಮಾತುಗಳಲ್ಲ...ಆದರೆ ಇವು ಒಂಥರಾ ಹೇಳಿದವರು- ಕೇಳಿದವರನ್ನು ಅಣಕಿಸಿದಂತೆ! ವ್ಯಂಗ್ಯವಾಗಿ ಮಾತಾಡಿದಂತೆ! ಸಿಟ್ಟಿನಿಂದ ಹೇಳದಿದ್ದರೂ ನಿಧಾನಕ್ಕೆ ರೊಚ್ಚಿಗೇಳುವ ಹಾಗೆ ಮಾಡುವಂತದ್ದು... ಮುಂದಿನ 5-6 ಬಾರಿಗೆ "ಅಯ್ಯೋ ಇದ್ಯಾಕೆ ಹೇಳಿದ್ದಕ್ಕೆಲ್ಲ ಹಿಂಗಂತೀಯ....??"* *ಅಂತ ಕೇಳುವಂತೆ ಟೆಂಪ್ಟ್ ಮಾಡುವ ಮಾತುಗಳು...ಕೇಳುವವರ ಕಿವಿಗೆ ಕಿರಿ ಕಿರಿ ಎನಿಸುವ ಮಾತುಗಳು...ಇಷ್ಟವಾಗದವರ ಮಾತುಗಳನ್ನು ಆತ್ಮೀಯರ ಬಳಿಯೋ,ಒಮ್ಮೊಮ್ಮೆ ಅದು ಬಹಿರಂಗವಾಗಿಯೋ ಹೇಳುವರು. ಅವರಿವರು ಹೇಳಿದ್ದು ಕೇಳಿದ್ದು ಕೇಳುವವರು ಇಲ್ಲದಾಗ ಯಾವಾಗಲೂ ಅಂತರಂಗದ ಗೊಣಗಾಟದಲ್ಲಿ ಇದು ಮುಂದುವರೆಯುತ್ತಲಿರುತ್ತದೆ.ಎಷ್ಟೇ ಸಮಾಧಾನವಾಗಿ ಇದ್ದಾರೆ ಎಂದರೂ ನೆನ್ನೆಯ ಅಸಮಾಧಾನದ ಒಂದು ತೆಳ್ಳನೆಯ ಎಳೆ ಎಳೆದುಕೊಂಡು ಬಂದೇ ಬರುತ್ತಾರೆ .ಇದಕ್ಕೆ ಸಂಬಂಧಗಳ ಮಿತಿ ಇಲ್ಲ.ಮನೆಯಲ್ಲಿ ಗಂಡ ಹೆಂಡಿರ ನಡುವೆ,ಕೆಲಸ ಮಾಡುವ ಸ್ಥಳಗಳಲ್ಲಿ ವೈರುದ್ಯ ಇರುವವರ ನಡುವೆ ಎಂದೂ ಮುಗಿಯದ ಅಸಮಾಧಾನದ ಹೊಗೆ ಸದಾ ಆಡುತ್ತಿರುತ್ತದೆ. ಇವು ದಿನೇ ದಿನೇ ವಿಷಯ ಸರಿ ಇದ್ದರೂ ವ್ಯಕ್ತಿಯ ಮೇಲಿನ ಅಸಮಾಧಾನ ನಾನಾ ಮನಕ್ಲೇಶಗಳಿಗೂ, ಹಾಗೂ ಹೆಚ್ಚು ಒತ್ತಡದ ಜೀವನಕ್ಕೆ ಕಾರಣವಾಗಿ ಒಮ್ಮೆ ಬಂದರೆ ಮತ್ತೆ ಯಾವತ್ತೂ ವಾಪಾಸು ಹೋಗದ ಶಾಶ್ವತ ಕಾಯಿಲೆಗಳಾದ ರಕ್ತದ ಒತ್ತಡ, ಶುಗರ್, ಹೃದಯ ಕಾಯಿಲೆಗಳು ಬಂದು ಸೇರುವವು. ಅದಕ್ಕೇ ಯಾವತ್ತೋ, ಯಾವುದೋ ಕಾರಣಕ್ಕೆ ನಮ್ಮ ಮನೆಯವರೋ, ಸುತ್ತಮುತ್ತಲಿನವರು ಏನೋ ತಪ್ಪುಗಳು ಮಾಡಿರಬಹುದು.ಮಾಡಿದ ತಪ್ಪುಗಳು ಅಂದಿಗೆ ಇಬ್ಬರೂ ಬಿಟ್ಟು ಮುನ್ನಡೆಯಬೇಕು... ಅದು ಬಿಟ್ಟು ಸಮಸ್ಯೆ ಪರಿಹಾರವಾದ ಮೇಲೂ ದಶಕಗಳ ಕಾಲ ಎಳೆದುಕೊಂಡು ಹೋಗುವುದು ಬೇಡ ಎಂಬುದು ಇಬ್ಬರೂ ಮನಗಾಣಬೇಕಿದೆ.
ಸಿಟ್ಟು ಇನ್ನಷ್ಟು ಎಳೆದು ನೀವೆಲ್ಲಾ ಸಿಟ್ಟಾಗುವ ಮುನ್ನಾ ನಾವು ಮನೆಗೆ 'ಹೋಗೋದಿಲ್ಲ...ನಿಮ್ ಕಾಟ ತಡೆಯೋಕೇ ಆಗ್ತಿಲ್ಲ ಎಂದು ಈ ಅಸಮಾಧಾನಿತ ಪುರುಷರು ಹಾಡು ಹಾಡಿದರೆ ಇದಕ್ಕೆ ಎದುರಾಗಿ "ಇಲ್ಲ...ಇಲ್ಲ ನಾವು ಅಂತವರಲ್ಲ...ನಾವೂ ಕಾಯ್ತಿವಿ ನಿಮಗಾಗಿ ನಾವು ಕಾಯ್ತಾಲಿರ್ತೀವಿ... ನೀವ್ ಮಾತ್ರ ನಮ್ಮನ್ನು ಮರೆತು ಹನಿ ನೀರಾವರಿ ಮಾಡಾಕೆ ಹೋಗ್ತೀರಿ...ನಿಮ್ ಕಾಟ ಏನ್ ಕಮ್ಮಿನಾ??? ಇಷ್ಟೋತ್ತಿಗೆ ಬೇರೆ ಯಾವಳಾದ್ರೂ ಆಗಿದ್ರೆ ------ -----" ಎಂದು ಅವರ ಗಂಡನ ಕೊರಗಿಗೆ ಇವರೂ ಹಾಡಾಗಿಸಿ ಹಾಡಿದ್ದಾರೆ....ಇದು ಹಾಡಾಗಿಯೇ ಉಳಿಯದೇ ಎಲ್ಲರಲ್ಲೂ ಸಂತಸದ ಸಮರಸವೇ ನಿತ್ಯ ಜೀವನದಿ ಜಿನುಗಲಿ ...
✍️ _ನಾಗೇಂದ್ರ ಬಂಜಗೆರೆ._
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ