ಸಮಾಜದಲ್ಲಿ ಬದಲಾಗುತ್ತಿರುವ ಅಧಿಕಾರ ಚಲನಶೀಲತೆ...

*_ಸಮಾಜದಲ್ಲಿ ಬದಲಾಗುತ್ತಿರುವ ಅಧಿಕಾರ ಚಲನಶೀಲತೆ..._*

✍️ ನಾಗೇಂದ್ರ ಬಂಜಗೆರೆ


 ಅವರೊಬ್ಬ 65 ವರ್ಷದ ನಿವೃತ್ತ ಅಧಿಕಾರಿ. ವಯಸ್ಸಾದ ಮೇಲೆ ಬಿಪಿ, ಶುಗರ್, ಕೋಪ, ಕೊಬ್ಬು, ದುಡ್ಡು, ಆಸ್ತಿ ಪಾಸ್ತಿ ಎಲ್ಲವೂ ಕೂಡ ಅಧಿಕವಾಗಿಯೇ ಇದ್ದವು. ಅದರೊಟ್ಟಿಗೆ ತಿನ್ನುವ ಚಪಲವು ಕೂಡ ಇತ್ತು. ಅಂದು ಭಾನುವಾರ ಆಗಿದ್ದರಿಂದ ಒಂದುವರೆ-ಒಂದುವರೆ ಕೆಜಿಯ 3 ಕೆಜಿ ಮೀನನ್ನು ತರಿಸಿದ್ದರು. ಮಧ್ಯಾಹ್ನ 2 ಗಂಟೆ ಸಮಯ.ತನ್ನ ಹೆಂಡತಿ ಪಲ್ಲವಿ ಫಿಶ್ ಫ್ರೈಯನ್ನ ಮಾಡುತ್ತಿದ್ದಾರೆ. ಆ ಅಸ್ಸಾಮಿ ಸಂಡೇ ಆದ್ದರಿಂದ ಮತ್ತು nonveg ಇದ್ದುದರಿಂದ ಸ್ವಲ್ಪ ಮದ್ಯಸೇವನೆಯನ್ನೂ ಮಾಡಿ ಬಾಟಲ್ ಕೂಡ ಟೇಬಲ್ ಮೇಲೆ ಇಟ್ಟುಕೊಂಡಿದ್ದರು.ಕರಿದ ಮೀನಿನ ವಾಸನೆಯ ಟೆಂಪ್ಟ್ ತಾಳಲಾರದೆ ಡೈನಿಂಗ್ ಟೇಬಲ್ ಬಳಿ ಬಂದ ಅವರು ಅಡುಗೆ ಮನೆ ಕಡೆ ನೋಡಿದರು. 

ಪಲ್ಲವಿ :ಏನು ತಿಂತಿರಾ??

ನಿವೃತ್ತ ವ್ಯಕ್ತಿ :ಬಾಯಿ ಚಪ್ಪರಿಸುತ್ತಾ 'ಹುಂ...'

ಒಂದು ಪ್ಲೇಟ್ ಗೆ ಎರಡು ಮೀನು ಫ್ರೈ ಹಾಕಿ 'ತಗ' ಎಂದಳು...

 ಆ ವ್ಯಕ್ತಿ ತಾನೇ ಹೋಗಿ ಆ ಮೀನಿನ ಪ್ಲೇಟ್ ನ್ನು ತೆಗೆದುಕೊಂಡು dainning ಟೇಬಲ್ ಕುರ್ಚಿಗೆ ಕೂತನು..

ಮೀನನ್ನು ಬಾಯಿಗೆ ಹಾಕುತ್ತಾ... 'ಲೇ ಮೀನ್ ಫ್ರೈಗೆ ಇನ್ನೂ ಸ್ವಲ್ಪ ಖಾರ ಹಾಕಬೇಕಿತ್ತು... ನಿಂಗ್ ಗೊತ್ತಾಗಲ್ಲ ಯಾವಳ್......  ......'ಎಂದು ಗೊಣಗುತ್ತಿದ್ದರು. 

ಹಾಂ... ಖಾರನ ???

'ತಗ' ಎಂದು ಮುಚ್ಚಳ ತೆಗೆದೇ ಇರಿಸಿದ್ದ ಸುಮಾರು ಅರ್ಧ ಕೆಜಿ ಕಾರದ ಪುಡಿ ಡಬ್ಬ ತೆಗೆದು ಮುಖಕ್ಕೆ ಎರಚಿದಳು.. ಬರೀ ಕಾರದ ಪುಡಿ ಯಾಕೆ ಎಣ್ಣೆಯನ್ನೂ ತಗ ಎಂದು ಕಾವಲಿಯಲ್ಲಿ ಕಾದ ಬಿಸಿಎಣ್ಣೆಯನ್ನು ಸೌಟಿನಿಂದ ಎರಡಮೂರು ಬಾರಿ ಆ ವ್ಯಕ್ತಿ ಕೂತಿದ್ದ ಸ್ಥಳಕ್ಕೆ ಎರಚಿದಳು.!ಇತ್ತ ಎರಡೂ ಕಣ್ಣಿಗೆ ಖಾರದ ಪುಡಿ ಬಿದ್ದು ಕಣ್ಣು ಬಿಡಲಾಗುತ್ತಿಲ್ಲ... ಬಿಸಿ ಎಣ್ಣೆ ಮುಖಕ್ಕೆ ತಲೆಗೆ  ಎದೆಗೆ ಬಿದ್ದು ಸಿಕ್ಕಾಪಟ್ಟೆ ಉರಿತಾ ಇದೆ.. ಕೋಪದಲ್ಲಿ ಹೆಂಡತಿಯನ್ನು ಹೊಡೆಯಲು ಮುನ್ನುಗ್ಗಿ ಎದ್ದು ಬರುವಾಗ ಟೈಲ್ಸ್ ಮೇಲೆ ಬಿದ್ದಿದ್ದ ಎಣ್ಣೆ ಕಾಲುಜಾರಿ ಹೊತ್ತುಕೊಂಡು ಬಿದ್ದನು. ಮರು ಸೆಕೆಂಡ್ ನಲ್ಲಿ ರಾಕ್ಷಸಿಯಾದ ಪಲ್ಲವಿ ಆಗತಾನೆ ಫಿಶ್ ಕಟ್ ಮಾಡಿ ಸಿಂಕ್ ಪಕ್ಕ ಇಟ್ಟಿದ್ದ ಕತ್ತಿಯನ್ನು ತೆಗೆದು ಹೊಟ್ಟೆಗೆ, ಸೊಂಟಕ್ಕೆ ಕತ್ತಿನ ಸುತ್ತಲೂ ಹೀಗೆ ಎಲ್ಲೆಂದರಲ್ಲೇ ಮನಸೊ ಇಚ್ಛೆ ಚುಚ್ಚಿಬಿಟ್ಟಳು. 'ಕೃತಿ ಅಲ್ಲಿ ಇನ್ನೊಂದು ಚಾಕು ಇದೆ ಕೊಡು ಬಾ'.. ಎಂದು ಮಗಳಿಂದ ಮತ್ತೊಂದು ಚಾಕು ತರಿಸಿ ಮತ್ತೆ ಚುಚ್ಚಿದಳು. ಫಿಶ್ ಫ್ರೈ ಮಸಾಲೆ ಕುಟ್ಟಿ ಇಟ್ಟಿದ್ದ 'ಕುಟ್ಟಾಣಿ'ಯನ್ನು ತೆಗೆದು ಬಾಯಿ ಹಣೆ ಮೂಗು ಎಲ್ಲೆಂದರಲ್ಲಿ ಜಜ್ಜಿದಳು.  ಆ ಚುಚ್ಚಿಸಿಕೊಂಡವ ಸಿಟ್ಟು ಮತ್ತು ನೋವಿನಿಂದ "ಎ... ಎಯ್... ನಿನ್ನ..." ಎಂದು ಎದ್ದೇಳಲು ಪ್ರಯತ್ನಿಸುತ್ತಿದ್ದಾನೆ. ಎದ್ದೆಳಲಾಗುತ್ತಿಲ್ಲ.ಹರಿತವಾದ ಮಾರಕಾಸ್ತ್ರಗಳ ಧಾಳಿಗೆ ರಕ್ತದ ಕೊಡಿ ಹರಿದು ವಿಲವಿಲ ಒದ್ದಾಡುವಂತಾಗಿ 10-20 ನಿಮಿಷದ ನಂತರ ಆ ವ್ಯಕ್ತಿ ಒದ್ದಾಟ ನಿಲ್ಲಿಸಿದ.ಇತ್ತ ಮಗಳು ನಡುಗುತ್ತಾ ಉಸಿರು ಬಿಗಿ ಹಿಡಿದು ಅಪ್ಪನನ್ನೇ ನೋಡುತಿದ್ದರೆ ಇತ್ತ ಪಲ್ಲವಿ ಎಲ್ಲಿ  ನನ್ ಮೊಬೈಲ್??? ಎಂದು ಹುಡುಕಿ ಮೊಬೈಲ್ ತೆಗೆದುಕೊಂಡು

"I  Finished  Monster..."

ಎಂದು ಒಂದು whats app ಗ್ರೂಪ್ ಗೆ ಮೆಸೇಜ್ ಹಾಕಿದಳು.!

ಎಷ್ಟು ಭಯಾನಕ ಇದೆ ಅಲ್ವಾ?? ಇದು ಒI
ಪೊಲೀಸ್ ಆಫೀಸರ್. ಡಿವೈಎಸ್ಪಿ,ಎಸ್ ಪಿ,ಕಮಿಷನರ್,DIG (ರಾಜ್ಯ ಪೊಲೀಸ್ ಮಹಾ ನಿರ್ದೇಶಕರು)ಆಗಿದ್ದ ಓಂ ಪ್ರಕಾಶ್ ಕಳೆದ ಕೆಲ ದಿನಗಳ ಹಿಂದೆ ನಡೆದ ಕ್ರೈಂ...5-6 ಕೋಟಿ ಜನ ಸಂಖ್ಯೆಯ ರಾಜ್ಯವನ್ನು ಲಾ ಅಂಡ್ ಆರ್ಡರ್ ಮೂಲಕ ನಿಯಂತ್ರಿಸಿದ, ಸಾವಿರಾರು ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದ  ಹೆಂಡತಿಯಿಂದಲೇ ಮನೆಯಲ್ಲೇ ಬರ್ಬರವಾಗಿ ಕೊಲೆಯದ ಪರಿ..


 ಲಂಡನ್ ನ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಸೌರಬ್ ರಜಪೂತ್ ತನ್ನ ಹೆಂಡತಿ ಮುಸ್ಕಾನಳ ಹುಟ್ಟು ಹಬ್ಬವನ್ನು ಆಚರಿಸಲು ಮತ್ತು ಮಗಳನ್ನು ನೋಡಲು ತನ್ನ ಸ್ವದೇಶ ಭಾರತದ ಉತ್ತರಪರದೇಶದ ಮೀರತ್ ಗೆ ಆಗಮಿಸಿದ. ಆದರೆ ಹೆಂಡತಿಯ ಹುಟ್ಟುಹಬ್ಬದ ಸಂತಸ ಕಾಣಬೇಕಾಗಿದ್ದ ಸೌರಭ್ ಕಂಡಿದ್ದು ತನ್ನ ಹೆಂಡತಿ ಮತ್ತು ಅವಳ ಪ್ರಿಯಕರನಿಂದ  ಕ್ರೂರ ಸಾವು..! ಮತ್ತು ಬರುವ ಔಷದಿ ನೀಡಿ ಅವನನ್ನು ಕೊಂದು ಮನೆಯಲ್ಲೇ ನೀರನ್ನು ಶೇಖರಿಸಲು ಉಪಯೋಗಿಸುವ ಒಂದು  'ನೀಲಿ ಡ್ರಮ್' ನಲ್ಲಿ ತುಂಡು ತುಂಡಾಗಿ ಕತ್ತರಿಸಿ ಡ್ರಮ್ಮ್ ಒಳಗೆ ಹಾಕಿ ಸಿಮೆಂಟ್ ಉಪ್ಪು ಹಾಕಿ   ಒಳಗೆ ಬಾಡಿ decompose ಆಗುವಂತೆ ಮಾಡಿ  ಇತ್ತ ಇವಳು ಜಾಲಿಯಾಗಿ ತನ್ನ ಪ್ರಿಯಕರನೊಂದಿಗೆ ಶಿಮ್ಲ ಕ್ಕೆ ಹೋಗಿದ್ದಳು.! ಇದು ಉತ್ತರಪ್ರದೇಶದ
 ಮೀರತ್ ನಲ್ಲಿ ನಡೆದ ಕೊಲೆಯ ದೃಶ್ಯ..!

ಇಂಥಾ ನೂರಾರು ಕ್ರೈಂ ಸ್ಟೋರಿಗಳು ನೀವು ಕೇಳಿರುತ್ತಿರಿ, ನೋಡಿರುತ್ತಿರಿ. ಅಥವಾ ಓದಿರುತ್ತಿರಿ. ಸಾವಿರಾರು ವರ್ಷಗಳಿಂದ ಸ್ತ್ರೀಯರ ಮೇಲೆಯೇ ಹೆಚ್ಚಿದ್ದ ದೌರ್ಜನ್ಯಗಳ ಕಾಲಚಕ್ರ ಬದಲಾಗಿದೆ. ಘಟನೆಯ ಉದ್ದೇಶ ನೈತಿಕತೆಯೋ ಅನೈತಿಕತೆಯೋ ಅಥವಾ ಇನ್ಯಾವುದೋ ಹಣಕಾಸಿಗೆ ಸಂಬಂಧಿಸಿದ್ದೋ... ಆದರೆ ಇಲ್ಲಿ ಸ್ತ್ರೀಯರಿಂದ ಪುರುಷರ ಮೇಲೆ ನಡೆಯುತ್ತಿರುವ ಆಫರಾಧಗಳ ಬಗ್ಗೆ. ಹಾಗಂತ ಯಾರ ಪರ ವಿರೋಧಿಯೂ ಅಲ್ಲದೇ ಈ ಬರಹದ ಉದ್ದೇಶ  ಸಮಾಜದಲ್ಲಾಗುತ್ತಿರುವ 'ಚಲನಶೀಲ ಬದಲಾವಣೆಯ' ಪ್ರವಾಹದ ಹರಿವಿನ ಗತಿ ಮತ್ತು ಕಾರಣ ಹಾಗೂ ಪರಿಣಾಮಗಳ ಬಗ್ಗೆ ಸುತ್ತಾಟ ಅಷ್ಟೇ...

ವೇದ ಉಪನಿಷತ್ ಕಾಲದಲ್ಲಿ ಮನು ನಿಯಮನುಸಾರ ಧರ್ಮ, ಗಂಡು ಹೆಣ್ಣುಗಳ ಸಂಬಂಧ,ವರ್ಣಶ್ರಮ ವ್ಯವಸ್ಥೆಗಳ ಬಗ್ಗೆ,ವೃತ್ತಿ ಆಚರಣೆಗಳ ಬಗ್ಗೆ,ಇವೆಲ್ಲದರ ಬಗ್ಗೆ ಮನುಸ್ಮೃತಿಗಳನುಸಾರ ನಡೆದು ಬಂದ ಸಮಾಜ   ಬುದ್ಧ,ಬಸವ ಅಂಬೇಡ್ಕರ್, ಗಾಂಧಿಯಂತಹ ಹತ್ತಾರು ಸಮಾಜಸುಧಾರಕರುಗಳ  ನಿರಂತರ ಹೋರಾಟದ ಫಲವಾಗಿ ಮನುಸ್ಮೃತಿ ಯ ಪುರುಷವಾದಿ ಧೋರಣೆಗಳು ಸುಧಾರಿಸಿ ' ಸಮಾನತೆಯ' ತತ್ವದಲ್ಲಿ ಅಂಬೇಡ್ಕರರ  ಸಂವಿಧಾನ  ಮನುಸ್ಮೃತಿಯ ಆಚರಣೆಯಲ್ಲಿದ್ದ ಜನಸಾಮನ್ಯರಲ್ಲಿ ಅಸಾಮಾನ್ಯ ಕ್ರಾಂತಿ ಉಂಟಾಯಿತು. ಸಂವಿಧಾನ ಜಾರಿಯಾಗಿ 75 ವರ್ಷಗಳ ಸುದೀರ್ಘ ಸಮಾಜದ ಬದಲಾವಣೆಯ ಪಯಣದಲ್ಲಿ ನಂಬಿಕೆ, ತತ್ವ ಸಿದ್ಧಾಂತಗಳು,ವಿವಾಹ ನಿಯಮ ನಂಬಿಕೆಗಳು, ವಿದ್ಯಾಭ್ಯಾಸ, ಕೆಲಸದ ಸ್ಥಳಗಳು,ಕೈಗಾರಿಕೀಕರಣ, ನಗರಿಕರಣ   ಹೀಗೆ ಅನೇಕ ವಿದ್ಯಾಮಾನಗಳು ಬದಲಾಗಿವೆ.ಅದರಲ್ಲೂ 2010 ನೇ ದಶಕದಿಂದ ಏಕಾಏಕಿ  ಸಮಾಜದಲ್ಲಿ ಧಿಡೀರ್ ಬದಲಾವಣೆಗಳು ಆದವು. ವಿಶೇಷವಾಗಿ ಹೆಣ್ಣುಗಂಡು ಮದುವೆ, ಆಯ್ಕೆಗಳಲ್ಲಿ,ವಿವಾಹ ವಿಚ್ಚೇಧನಗಳಲ್ಲಿ ತೀವ್ರಸ್ವರೂಪದ ತಿರುವುಗಳನ್ನು ಪಡೆದು 'ಹೀಗೂ ಉಂಟಾ?'ಎಂದು ಉಬ್ಬೇರುವ ಮಟ್ಟಿಗೆ ಬದಲಾವಣೆಗಳು ಆದವು. 2020 ರ ದಶಕದಲ್ಲಿ ಕರೋನ ಲಾಕ್ಡೌನ್ ಕಾಲದಲ್ಲಿ ಇವೆಲ್ಲಾ ಬದಲಾವಣೆಗಳು ಚೂಪು ಪಡೆಯುತ್ತಾ ತೀವ್ರ ಸ್ವರೂಪದ ಅಪರಾಧ ಹಿನ್ನೆಲೆಯ ಚಟುವಟಿಕೆಗಳು ಮುನ್ನೆಲೆಗೆ ಬಂದವು.ಅದರಲ್ಲೂ  ಕೆಲವರು ಕಷ್ಟ ಪಟ್ಟು ದುಡಿಯದೇ ಸದಾ ವಿಲಾಸಿಜೀವನ ಮಾಡಲು ಬಯಸಿ ನೈತಿಕತೆ ದಾಟಿ ಸಾಮಾಜಿಕ, ನೈತಿಕ ಭ್ರಷ್ಟರಾಗಲು ತಮ್ಮನ್ನು ತಾವು ತೆರೆದುಕೊಂಡರು. ಅದರ ಪರಿಣಾಮವೇ ಭ್ರಷ್ಟಾಚಾರ,living together, ಹನಿಟ್ರ್ಯಾಪ್, online ವಂಚನೆಗಳು, ಅಶ್ಲೀಲ ಜಾಲತಾಣಗಳು, ಬೆಟ್ಟಿಂಗ್ ದಂದೆಗಳು, ಓಯೋ ಲಾಡ್ಜ್ಯಿಂಗ್, ಹೈಟೆಕ್ ವೇಶ್ಯವಾಟಿಕೆಗಳು, ಮಾದಕ ವಸ್ತುಗಳ ಅಕ್ರಮ ಮಾರಾಟ ಮತ್ತು ಬಳಕೆ ಇತ್ಯಾದಿಗಳು. ಇದೆಲ್ಲದರ ಪರೋಕ್ಷ   ಆಯಾಮ ಎಂದರೇ 'ದುಡ್ಡು/ಸಂಪತ್ತು'...ಈ ಮೇಲಿನ ಚಟುವಟಿಕೆಗಳಲ್ಲಿ ಎಲ್ಲಿಯಾದರೂ ಹೆಚ್ಚು ಕಡಿಮೆ, ಅಸಮಾಧಾನ, ಸಂಘರ್ಷಕ್ಕೆ ಅವಕಾಶ ಸಿಕ್ಕರೆ ಮುಂದೆ ಆಗುವ ಅನಾಹುತವೇ ಕೊಲೆ.! ಸಂಬಂಧಗಳ ಮಿತಿ ಇಲ್ಲದೇ  ಯಾರನ್ನು ಯಾರು ಬೇಕಾದರೂ ಹಿಂಸಿಸಲು ಎಡೆಮಾಡಿದೆ. ಹಿಂಸೆಯ ಭರಾಟೆಯಲ್ಲಿ ಒಬ್ಬೊಬ್ಬರದು ಒಂದೊಂದು ತೆರನಾದುದರಿಂದ ಅದು ಇತರರ ಹಿಂಸೆಯ ದಾಖಲೆಗಳನ್ನು ಮುರಿಯುವುದೇ 'ರೆಕಾರ್ಡ್' ಆಗಿ ಮಾರ್ಪಟ್ಟಿದೆ. ಹಿಂಸೆ, ದೌರ್ಜನ್ಯ ಅದರಲ್ಲೂ ಆದಿಯಿಂದಲೂ ಇದೆಯಾದರೂ ಅದರ ಸ್ವರೂಪದಲ್ಲಿ attraction ನ್ನು ಉಳಿಸಿಕೊಂಡು ಬಂದಿದೆ. ಈ ಹಿಂದೆ ಪುರುಷರಿಂದಲೇ ಹಿಂಸೆಗಳು ಕ್ರೂರ,ಮೃಗೀಯತೆ, ಕ್ರೌರ್ಯಗಳು   ನಡೆಯುವುದು ಎಂದು ನಂಬಿದ್ದ ಸಮಾಜಕ್ಕೆ ಪುರುಷರ ಕ್ರೌರ್ಯ  ಸುಳ್ಳು;ಅದಕ್ಕಿಂತ ಬರ್ಬರ, ಕ್ರೌರ್ಯವಾಗಿ ಮಾಡುವುದು ಹೀಗೆ ಎಂದು ಮಹಿಳೆಯರು ತೋರಿಸುತ್ತಿದ್ದಾರೆ.ಇದಕ್ಕೆ ಉದಾಹರಣೆಗಳು ಸಾವಿರ ಕೊಡಬಹುದಾದರೂ ಮೇಲಿನವು ಸಾಕೆನಿಸುವಾವೇನೋ ಎಂದೇನಿಸುತ್ತಿದೆ. ಅಂದರೆ ಇಂತಹ ಚಲನಶೀಲ ಬದಲಾವಣೆ  ಸಮಾಜಕ್ಕೆ ಅಂಟಿದೆ.ಇಂತಹ ತತಕ್ಷಣದ ಸಾಮಾಜಿಕ ಬದಲಾವಣೆ ಮತ್ತು ಮಹಿಳಾ ದೌರ್ಜನ್ಯಕ್ಕೆ   ಈ ಕೆಳಗಿನ ಕಾರಣಗಳು ಇವೆ.

1)ದುಡ್ಡಿದ್ದರೆ ಎಲ್ಲವೂ ಇದ್ದ ಹಾಗೆ ಎನ್ನುವ ನಂಬಿಕೆ: 

ಆಧುನಿಕ ಪ್ರಪಂಚ  ಲಿಂಗಬೇಧ ಇಲ್ಲದೇ ಹಣದ ಹಿಂದೆ ಓಡುತ್ತಿದೆ. ಹಣ ಮಾಡಲು, ಹಣ ಸಿಗುತ್ತದೆ ಎಂದರೇ ನೈತಿಕ-ಅನೈತಿಕ ಎನ್ನದೆ ಏನು ಮಾಡಲು ಬೇಕಾದರೂ ಸಿದ್ದರಿದ್ದಾರೆ. ಹಣವೇ ಸರ್ವ ಸಿದ್ಧಿ ಎಂಬ ನಂಬಿಕೆಯಿಂದ ಇಂದು ಸಂಬಂಧಗಳಿಗೆ ಬೆಲೆ ಇಲ್ಲದೇ ಮೌಲ್ಯ ರಹಿತ ಅಮಾನವೀಯ ವರ್ತನೆಗಳು ವಿದ್ಯಾವಂತ ಸಮಾಜದ ಸದಸ್ಯರಿಂದಲೂ ನಾವು ಇಂದು ಕಾಣುತ್ತಿದ್ದೇವೆ.ಅದಕ್ಕೇ ಈ ಕೊಲೆ ಮೋಸ ವಂಚನೆ ಎಲ್ಲಾ ರೀತಿಯ ಕ್ರೌರ್ಯಗಳು  ನೆಡೆಯುತ್ತಿರುವುದು ಹಣದ ಕಾರಣಕ್ಕೆ... ಇದು ವ್ಯಕ್ತಿಗತದಿಂದ ದೇಶ ದೇಶಗಳು ಜಾಗತಿಕ ಮಟ್ಟದಲ್ಲೂ ಸಣ್ಣತನಕ್ಕೆ ಇಳಿದು ಹಣ ಮಾಡಲು ಸಂಚು ಮಾಡುತ್ತಿವೆ.

2) ಮೊಬೈಲ್ ಮತ್ತು ಮಾಧ್ಯಮ:

 ಮೊಬೈಲ್ :ನೂರಾರು ವರ್ಷಗಳಲ್ಲಿ ಆಗಬಹುದಾದ ಸಾಮಾಜಿಕ ಬದಲಾವಣೆಗಳು ಕೇವಲ ದಶಕಗಳ ಅಂತರದಲ್ಲಿ ಆಗಿವೆ ಎಂದರೇ ಅದಕ್ಕೇ ಕಾರಣ ಮೊಬೈಲ್ ಮತ್ತು ಮಾಧ್ಯಮ. 2010 ರ ಇಸ್ವಿಯನಂತರ ಸಮಾಜ ಪರಿವರ್ತನೆಯ ಅತ್ಯಂತ ಕ್ರಿಯಾಶೀಲ  ಪರಿವರ್ತನಾ ಸಾಧನ ಎಂದರೆ ಅದು ಮೊಬೈಲ್. ಇದರಿಂದ ನೈತಿಕ ಅನೈತಿಕ ಎಲ್ಲಾ ಒಳ್ಳೆಯ ಕೆಟ್ಟವು ಕೂಡ ಇದರಿಂದಲೇ ನಡೆಯಲ್ಪಡುವವು. ಈಗಲೂ ಮೊಬೈಲ್ ಪರಿಣಾಮಕಾರಿ ಸಮಾಜ ಪರಿವರ್ತನಾ ಸಾಧನ.

ಮಾಧ್ಯಮ: ಸುದ್ದಿವಾಹಿನಿಗಳಲ್ಲಿ ಬರುವ ಧಾರವಾಹಿ, ಇತರ ಕಾರ್ಯಕ್ರಮಗಳು ಹಿಂಸಾ ಪ್ರಧಾನ ಆಧಾರಿತ ವಿಷಯ-ವಸ್ತು ಇರುವ ಚಿತ್ರಗಳು. ಮನೋರಂಜನೆಯ ಹೆಸರಿನಲ್ಲಿ ಹಿಂಸೆಯಾಧಾರಿತ ಕಥಾ ವಸ್ತುವಿನಿಂದಲೇ  ವೀಕ್ಷಕರು ಮನೋರಂಜನೆ ಪಡೆಯುವುದರಿಂದ ಸಹಜವಾಗಿ ಅದು ವ್ಯಕ್ತಿಗಳ ಗುಣ ಆಗುವುದರಲ್ಲಿ ಸಂದೇಹ ಇಲ್ಲ. ಹಾಗೇ ಕೆಲವು ಸುದ್ದಿವಾಹಿನಿಗಳು ಕೆಲವು ಕ್ರೌರ್ಯದ ಘಟನೆಗಳನ್ನು /ತರವಲ್ಲದ ಕುಟುಂಬವೀಕ್ಷಣೆಗೆ ಯೋಗ್ಯವಲ್ಲದ ದೃಶ್ಯಗಳನ್ನು ಇಂಚಿಂಚು   ವಿಡಿಯೋ ಸಹಿತ ದಿನಪೂರ ಬಿತ್ತರಗೊಳಿಸುವುದು ಕಾರಣ. ಮಾಧ್ಯಮದವರು ಪ್ರಕಾರ ಇದು ಸರಿ ಇರಬಹುದೇನೋ...ಆದರೆ ಇದರಿಂದ ಸಾರ್ವಜನಿಕರಿಗೆ, ಯುವ ಮನಸುಗಳಿಗೆ ತಲುಪುವ ಸಂದೇಶ ಮಾತ್ರ ನಕರಾತ್ಮಕ.

3)ಲವ್ ಮ್ಯಾರೇಜ್ ಗಳು:

 ಪ್ರೇಮವಿವಾಹಗಳು ಸಮಾಜದ ಬದಲಾವಣೆಯಲ್ಲಿ ಪ್ರಮುಖ ಬೆಳವಣಿಗೆ ಎನ್ನಬಹುದು.ಸಮಾಜ ಬದಲಾವಣೆಯ ಪ್ರಮುಖ ಸಾಧನ ಎಂದರೂ ತಪ್ಪಿಲ್ಲ.
ವಿಶೇಷವಾಗಿ ಕಳೆದ ಎರಡು ದಶಕಗಳಿಂದ ವ್ಯಾಪಕವಾಗಿ ಆದಂತಹ ಅಂತರ್ಜಾತಿ,ಅಂತರ್ ಧರ್ಮಿಯ ವಿವಾಹಗಳು  ಇಲ್ಲಿ ಗಮನಿಸಬಹುದು. ಒಂದು ಅರ್ಥದಲ್ಲಿ ಈ ಅಂತರ್ ಜಾತಿ  ವಿವಾಹಗಳು ಸಮಾಜದ ಸಕಾರತ್ಮಕ ಬೆಳವಣಿಗೆ ಮತ್ತು ಬದಲಾವಣೆಗೆ ಹಿಡಿದ ಕನ್ನಡಿಯಂತಿದ್ದರೆ ಇದೇ ಬೆಳವಣಿಗೆ  ಭವಿಷ್ಯದಲ್ಲಿ ಪೈಶಾಚಿಕ, ಅಪರಾಧಿಕ ಕೃತ್ಯಗಳು ನಡೆಯಲು ಕಾರಣವಾಗಿದೆ. ಕಳೆದ ಒಂದು ದಶಕದಲ್ಲಿ ನಡೆದ ಒಟ್ಟಾರೆ ಅಪರಾಧಗಳ ಹಿನ್ನೆಲೆಯನ್ನು ನೋಡಿದರೆ ಆಫರಾದದಲ್ಲಿ ಭಾಗಿಯಾದವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಲಿವಿಂಗ್ ಟುಗೆದರ್, ಲವ್ ಮ್ಯಾರೇಜ್  ಹಿನ್ನೆಲೆ ಯುಳ್ಳವರೆ ಎನ್ನುವುದು ಗಮನಾರ್ಹ.ಅಂತರ್ಜಾತಿ, ಅಂತರಧರ್ಮದಲ್ಲಿ ವಿವಾಹ ಆದವರು ಅಥವಾ ಸಂಬಂಧದಲ್ಲಿ ಇರುವವರು ಸಂಪ್ರದಾಯಿಕ 'ಸಾಮಾಜಿಕ ಭೀತಿ'ಯ ಗಡಿ ರೇಖೆಯನ್ನು ದಾಟಿ ಬಂದಿರುತ್ತಾರೆ.ಆಗ ಅವರಿಗೆ ಸ್ವೇಚ್ಚಾಚಾರ ವರ್ತನೆಗಳನ್ನು ಮಾಡಲು ಅವರಿಗೆ ಯಾವ ಸಂಕೋಚಗಳು  ಇರುವುದಿಲ್ಲ.ಮುಂದುವರೆದು  ಲಿಂಗ ಬೇಧ ಇಲ್ಲದೇ ವ್ಯಕ್ತಿ ನಿಷ್ಠೆ ಕಡಿಮೆ ಆಗಿ ಸಮಾಜದ ರೀತಿ ನೀತಿಗಳಿಗೆ ಅಂಜದೆ ಸದಾ  ಇನ್ನೊಂದು ವ್ಯಕ್ತಿ/ವಸ್ತು ಹಿಂದೆ ಓಡುವುದರಿಂದ ವಿಶ್ವಾಸಘಾತುಕ/ಸಮಾಜ ಘಾತುಕ ಕೆಲಸಗಳಿಗೆ ಅವಕಾಶ ಮಾಡಿಕೊಡುತ್ತದೆ.ಈ ತೆರನಾದ ಸರಣಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.


4)  ಶೈಕ್ಷಣಿಕ-ಆರ್ಥಿಕವಾಗಿ ಸ್ವಾವಲಂಬನೆ: 

ದೇಶ ಮುಂದುವರೆಯಲು, ವ್ಯಕ್ತಿಗತವಾಗಿಯೂ ಮುಂದುವರಿಯಲು ಇರುವ ಅದ್ಭುತ ಅವಕಾಶಗಳಲ್ಲಿ ಶೈಕ್ಷಣಿಕವಾಗಿ ಲಭ್ಯ ವಿರುವ ಎಲ್ಲಾ ಅವಕಾಶಗಳು.ಇದು ಕಾಕತಾಳಿಯವಾಗಿ ಇಂದಿನ ದಿನಮಾನಗಳಲ್ಲಿ ಹೆಚ್ಚು ಮಹಿಳೆಯರಿಗೆ ಅನ್ವಯ ಆಗುತ್ತಿದೆ.  ಶೈಕ್ಷಣಿಕ -ಆರ್ಥಿಕ ಸ್ವಾವಲಂಬನೆ ಯೂ  ನಕಾರತ್ಮಕವಾಗಿಯೂ ಸಮಾಜದಲ್ಲಿ ಪ್ರತಿಬಿಂಬಿಸುತ್ತಿದೆ. ನಾನು ಓದಿದ್ದಿನಿ,ನನ್ನ ಹತ್ರ ದುಡ್ಡಿದೆ ಎನ್ನುವ ಒಂದೇ ಕಾರಣ ಅನೇಕ ವ್ಯಾಜ್ಯಗಳು, ವಿಚ್ಚೇಧನಗಳು, ಪುರುಷರ ಮಾನಸಿಕ ಹಿಂಸೆ ಕಿರುಕುಳಗಳು, ಆತ್ಮಹತ್ಯೆಗೂ ಕಾರಣವಾಗಿವೆ.
ಬಹಳಷ್ಟು ಜನ ವಿಶೇಷವಾಗಿ ಹೆಣ್ಣೆತ್ತವರು ಹೆಣ್ಣು ಮಕ್ಕಳನ್ನು ಜಾಸ್ತಿ ಓದಿಸಿ ಬಿಟ್ಟಿವಿ. ಅದಕ್ಕೇ ಇದೆಲ್ಲಾ ಅನುಭವಿಸುತ್ತಾ ಇದ್ದೀವಿ ಎಂದು ಇದೇ ಕಾರಣಕ್ಕೆ ಮಾರ್ಮಿಕವಾಗಿ ಹೇಳುತ್ತಿರುತ್ತಾರೆ. ಎಲ್ಲರೂ ಈ ತರ ಇಲ್ಲ ಎಂಬುದಾದರೂ ಬಹುತೇಕ ಕೌಟುಂಬಿಕ ಸ್ವಾಸ್ತ್ಯ ಇದೇ ಕಾರಣಕ್ಕೆ ಹಾಳಾಗಿ, ವಿಚ್ಚೇದನ, ವಿಧವಾ ಪುನರವಿವಾಹ, living together, ಆಸ್ತಿಪಾಸ್ತಿಗಳ ಪಾಲು ವಿಭಾಗಗಳು ಹೆಚ್ಚುತ್ತಾ ಸಮಾಜ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ.

5) ಮಾನಸಿಕ ವಿಚಲತೆ:

ಪುರುಷ ಪ್ರಧಾನ ದೋರಣೆಗಳು ಮಹಿಳೆಯರಲ್ಲಿ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುವಂತೆ ಮಾಡಿವೆ. ಸದಾ ಕೆಲಸದ ಒತ್ತಡದಲ್ಲಿ ಇರುವವರು ಮನೆಯಲ್ಲಿರುವ ಹೆಂಡತಿ ಮಕ್ಕಳು ಇತರ ಸದಸ್ಯರನ್ನು ಪ್ರೀತಿ ಕಾಳಜಿ ಗೌರವದಿಂದ ನಡೆಸಿ ಕೊಳ್ಳದಿರುವುದು. ಒತ್ತಡಗಳನ್ನು ಕುಟುಂಬ ಸದಸ್ಯರ ಮೇಲೆ ವರ್ಗಯಿಸುವುದು, ಅಗೌರವ,ಪರಸ್ಪರರು ವಿವಾಹೇತರ ಸಂಬಂಧಗಳನ್ನು ಬೆಳೆಸುವುದು ಇನ್ನಿತರ ಕಾರಣದಿಂದ ಮಾನಸಿಕ ಅರೋಗ್ಯ ಹದಗೆಟ್ಟು  ಸಂಬಂಧಗಳ ಹಾಳಾಗಿ ಗಲಾಟೆ, ವೈಷಮ್ಯ ಪರಸ್ಪರರನ್ನು ಕೊಲ್ಲುವ ಮಟ್ಟಕ್ಕೆ ತಲುಪುತ್ತವೆ.

6)  ಆಸ್ತಿ ವ್ಯಾಮೋಹ:  

ಬಹುತೇಕ ಎಲ್ಲ ಸಂಬಂಧಗಳು ಹದಗೆಟ್ಟಿರುವುದು, ಗಲಾಟೆ-ಗದ್ದಲ, ಹೊಡೆದಾಟ, ಬಡಿದಾಟ ಹತ್ಯೆಗಳು ನಡೆದಿರುವುದು 'ಆಸ್ತಿ'ಎಂಬ ಕಾರಣಕ್ಕೆ. ಅದು ಯಾವ ತೆರನಾಗಿಯಾದರೂ ಇರಬಹುದು. ಆಸ್ತಿ ತಲೆಗೆರಿಸಿಕೊಂಡವರು ಅದನ್ನು ಪಡೆಯಲು ಎಂತಹ ಕೃತ್ಯಕ್ಕೂ ಸಿದ್ದವಾಗಿರುವುದು.ಹಣದ ಪರ್ಯಾಯವಾಗಿ ಅಸ್ತಿಯ ವ್ಯಾಮೋಹಕ್ಕೆ ಜನ ಸಿಲುಕಿರುವುದು.

7) ತಪ್ಪಾದ ಮಾದರಿ ಅನುಕರಣೆ ( immitating wrong roll model):

ಸಿನಿಮಾ, ದೂರದರ್ಶನ ಇನ್ನಿತರ ಕಡೆ ನೋಡಿ ಅವರನ್ನು ಅನುಕರಿಸುವುದು. ನೆಚ್ಚಿನ ತಾರೆಗಳು ವಿವಾಹೇತರ ಸಂಬಂಧ ಹೊಂದಿದ್ದಾರೆಂದೂ,ಅವರು ವಿಚ್ಚೇದನ ಹೊಂದಿದ್ದಾರೆಂದೂ, ದೂಮಪಾನ ಮದ್ಯಪಾನ ಕ್ಲಬ್ ಪಬ್ ನಂತಹ ಸಂಸ್ಕೃತಿಯನ್ನು ವಯಕ್ತಿಕವಾಗಿ ಅನುಕರಣೆ ಮಾಡುವುದು ಒಂದು ಕಾರಣವಾಗಿವೆ. ಒಮ್ಮೆ ಅಂತಹ ಮನಸ್ಥಿತಿ ಬಂತೆಂದರೆ ಅದು ಎಲ್ಲಿಗೆ ಹೋಗಿ ನಿಲ್ಲುತ್ತದೋ ಯಾರಿಗೂ ತಿಳಿಯದಾಗಿದೆ.

8) ಜಾರಿಯಲ್ಲಿರುವ ಸಡಿಲ ಕಾನೂನು ನಿಯಮಗಳು:

ಇಂದಿನ ಕಾನೂನು ನಿಯಮಾನುಸಾರ ಪುರುಷರಿಗಿಂತ ಮಹಿಳೆಯರು ಕಾನೂನು ಪ್ರಕ್ರಿಯೆ, ಶಿಕ್ಷೆಗೆ ಒಳಪಡುವುದರಿಂದ ತಪ್ಪಿಸಿಕೊಳ್ಳಲು ಹೆಚ್ಚು ಅವಕಾಶಗಳಿರುವುದು. ಇಂದು ಬಹುತೇಕ ಎಲ್ಲಾ ರೀತಿಯ ಕಾನೂನು ನಿಯಮಗಳು ಮಹಿಳಾ ಪರ ಮತ್ತು ಮಹಿಳಾ ಪೂರಕವಾಗಿರುವುದರಿಂದ ಕಾನೂನು ವಿಚಾರಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದೂ ಕೂಡ ಸ್ತ್ರೀ ದೌರ್ಜನ್ಯ ಹೆಚ್ಚಾಗಲು ಬಹಳ ಪ್ರಮುಖ ಕಾರಣವಾಗಿವೆ.

9) 'ಬೂಮರಾಂಗ್' ಪರಿಣಾಮ: ನಾವು ಸಮಾಜಕ್ಕೆ ಏನನ್ನು ಮಾಡ್ಬೇಡಿ, ಯಾವುದು ತಪ್ಪು, ತಪ್ಪು ಎಂದು ಒತ್ತಿ ಒತ್ತಿ ಹೇಳುತ್ತಿದ್ದೇವೋ/ ಬೋಧಿಸುತಿದ್ದೆವೋ ಅದೇ ಸಮಾಜ ಮಾಡುತ್ತಿದೆ.ಎದುರಾಗುವ ಎಲ್ಲಾ ಸಂದರ್ಭಗಳಲ್ಲಿ ಯಾವುದು ಹೆಚ್ಚು ಒತ್ತು ನೀಡಲಾಗುತ್ತಿದೆಯೋ ಅಲ್ಲೇ ನಾವು ಎಡವುತ್ತಿರುವುದು.

ಪರಿಹಾರೋಪಾಯಗಳೇನು??

1)ಕಾನೂನು ಸುಧಾರಣೆ: 

ಸದ್ಯ ಲಿಂಗ ತಾರತಮ್ಯದ ರೀತಿ ಭಾಸವಾಗುತ್ತಿರುವ ತಪ್ಪಿತಸ್ತ ಆರೋಪಿಗಳ ವಿರುದ್ಧವಾಗಿ ಕಠಿಣ ಕ್ರಮ ಜರುಗಿಸುವ ನಿಯಮಗಳು ಜಾರಿಯಾಗಬೇಕು.ಈಗಲೂ ಜನ ಸಾಮನ್ಯರ ದೃಷ್ಟಿಯಲ್ಲಿ ದುಡ್ಡಿದವರಿಗೆ ಕಾನೂನಿನಲ್ಲಿ ರಕ್ಷಣೆ ಸಿಗತ್ತೆ ದುಡ್ಡಿದ್ದರೆ ಏನು ಬೇಕಾದರೂ ಆಗತ್ತೆ ಎನ್ನುವ ಸಂಶಯ ಇದೆ. ಅದನ್ನು ಹೋಗಲಾಡಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ.ಆದರೆ ದುರುಪಯೋಗ ಆಗದಂತೆಯೂ ಎಚ್ಚರ ವಹಿಸಬೇಕು.

2) ಮಾಧ್ಯಮಗಳ ನಿಯಂತ್ರಣ:

ಮಾಧ್ಯಮಗಳಲ್ಲಿ ಬಿತ್ತರವಾಗುವ ವಿಷಯ ವಸ್ತುಗಳ ಮೇಲೆ ಈಗಾಗಲೇ  ನಿರ್ಬಂಧಗಳು ಇದ್ದಾವೆ.ಆದರೂ ಒಂದು ನಿಮಿಷದ ವಿಷಯವನ್ನು ಒಂದು ದಿನ ಪೂರಾ ಎಳೆಯುವ ಅನಗತ್ಯ  ಹದ್ದುಮೀರಿದ ಸಂಸಾರಿಕ  ವಿಷಯಗಳ ಚರ್ಚೆ, ಯಾರದ್ದೋ ಕರ್ಮಕಾಂಡದ ವಯಸ್ಕ ವೀಡಿಯೋಗಳ ಪ್ರಸಾರ ಇವೆಲ್ಲವೂ ಅಪ್ರಸ್ತುತವಾಗಿರುವುದರಿಂದ ನಿರ್ಬಂಧ ಮಿತಿ ಏರಬೇಕಿದೆ. ಇದಕ್ಕಾಗಿ ಸಂಸತ್ತಿನ ನೆರವು ತೆಗೆದುಕೊಳ್ಳಬಹುದು.

3)ಭ್ರಮಾ ಬದುಕಿನಿಂದ ವಾಸ್ತವ ಬದುಕಿನ ಚಿತ್ರಣದೆಡೆಗೆ: 

ಮೊಬೈಲ್ ವೀಕ್ಷಣೆ ರೀಲ್ಸ್ ಗಳ ವೀಕ್ಷಣೆಯಿಂದ ನೈಜವಾದದು ಯಾವುದು?ನಕಲಿ ಯಾವುದು? ಎಂಬುದನ್ನು ಎಳೆ ವಯಸ್ಸಿನಿಂದಲೇ ತಳಮಟ್ಟದಲ್ಲಿ ಗುರುತಿಸುವಂತಹ ಶಿಕ್ಷಣ ಮತ್ತು ಬದುಕಿನ ಅನುಭವ ದೊರೆಯಬೇಕಿದೆ.

4) ಜವಾಬ್ದಾರಿ ನಿರ್ವಹಣೆ: 

ಪ್ರತಿಯೊಬ್ಬ ವ್ಯಕ್ತಿಯು ವಯೋ ಸಹಜವಾಗಿ ತನ್ನ ಪಾತ್ರಕ್ಕೆ ತಕ್ಕಂತೆ ತನ್ನ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ನಿರ್ವಹಿಸಿದರೆ ಸಮಾಜದಲ್ಲಿ ಮಾನಸಿಕ ಅಸ್ವಸ್ತರೆ ಇರುವುದಿಲ್ಲ.  ಇದು ಇಂದಿನ ದಿನಮಾನಗಳಲ್ಲಿ ಬಹು ಮುಖ್ಯ ಆದ್ಯತೆ ಮತ್ತು ಅನಿವಾರ್ಯವಾದದ್ದು.

5)'ದುಡ್ಡೇ ಎಲ್ಲದೂ' ಎನ್ನುವ ಮನಸ್ಥಿತಿಯಿಂದ ಹೊರಬರಬೇಕಿದೆ.

ಎಲ್ಲ ತೆರನಾದ ಕೆಲಸ ಮಾಡಲು ಶಕ್ತ ವಸ್ತು  ಎಂಬ ನಂಬಿಕೆ ಇರುವದು ಅದು ಹಣಕ್ಕೆ ಮಾತ್ರ. ಹಣದಿಂದ ಸಂಬಂಧಗಳೂ ಸೇರಿ ಯಾರನ್ನೂ ಬೇಕಾದರೂ, ಏನನ್ನೂ ಬೇಕಾದರೂ ಕೊಳ್ಳುವ ತಾಕತ್ತಿದೆ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕಾಗಿ ಹಣದ ಹಿಂದೆ ಓಡುವವನು ಮನುಷ್ಯತ್ವ, ಸಂಬಂಧ,ಜೀವ, ಜೀವದ ಬೆಲೆ ತಿಳಿಯಲಾರನು.


     ಪುರುಷ ದಬ್ಬಾಳಿಕೆಯ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನದೇ ಪಾರುಪತ್ಯ ಮೆರೆದಿದ್ದ ಪರ್ವದಿನಗಳಲ್ಲಿ ಸ್ತ್ರೀ ದೌರ್ಜನ್ಯದ ದಿನಗಳು ಬಂದದ್ದು ಬದಲಾವಣೆ;ಕಾಲಚಕ್ರದ ಚಲನೆ.

   ಬದಲಾವಣೆ ಜಗದ ನಿಯಮ ಇದು ಸರ್ವ ಕಾಲಕ್ಕೂ ಸ್ವೀಕಾರಾರ್ಹ ಮತ್ತು ಸರ್ವ ಸಮ್ಮತವೂ ಹೌದು.  ಆದರೆ ಬದಲಾವಣೆ ನಕಾರಾತ್ಮಕವಾಗಿಯೂ, ಇಡೀ ಸಮಾಜವೇ ದಾರಿ ತಪ್ಪುವ ದಿಕ್ಕಿನಲ್ಲಿ ಸಮಾಜ ಎಂದಿಗೂ ಬದಲಾಗಬಾರದು.ಈ ನಿಟ್ಟಿನಲ್ಲಿ ಸಮಾಜ ಚಿಂತಕರು, ಸರ್ಕಾರಗಳು,ಜನಪ್ರತಿನಿದಿಗಳು, ಸಾಮಾಜಿಕ ನಿಯೋಗಗಳು ಯುಕ್ತ ರೀತಿಯ ನಿರ್ಧಾರ ಮತ್ತು ಮಾರ್ಪಡು ಮಾಡಿಕೊಳ್ಳುವುದರ  ಮೂಲಕ ಬದಲಾಗುತ್ತಿರುವ  ಋಣಾತ್ಮಕ ವೇಗವನ್ನು ಸಕಾರಾತ್ಮಕವಾಗಿಯೂ,ಗುಣಾತ್ಮಕವಾಗಿಯೂ ಬದಲಾಯಿಸಬಹುದು.

✍️ ನಾಗೇಂದ್ರ ಬಂಜಗೆರೆ.
Photo google 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಾನನ ಸ್ನಾನ...

ಗುಡ್ಡದ ಭೂತ...

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..