ಕನಸಿನ ಪಯಣ..part-3
ಕನಸಿನ ಪಯಣ.. (The journey in the Dream) (ಕನಸಿನ ಕಥಾ ಸರಣಿ ) part-3 ಅದು ಶನಿವಾರ ರಾತ್ರಿ.. ನೆಡ್ರಿ ಊರಿಗೆ ಹೋಗದ ಬಹಳ ದಿನಗಳಾಯಿತು.. ಊರಿಗಾದರೂ ಹೋಗಿಬರೋಣ ಎಂದಳು ಆರೋಹಿ.. ಆರುಷಿ: ಸರಿ ಬೆಳಿಗ್ಗೆ ಆರು ಗಂಟೆ ಒಳಗಡೆ ಮನೆ ಬಿಟ್ಟು ರಸ್ತೆಯಲ್ಲಿರಬೇಕು..ಬೇಗ ರೆಡಿ ಅಗಬೇಕು, ಕಡಿಮೆ ಲಗೇಜ್ ಪ್ಯಾಕ್ ಮಾಡಬೇಕು ಎಂದು ಸಮ್ಮತಿ ಸೂಚಿಸಿದ.. ಬಳ್ಳಾರಿ ನಗರದಿಂದ ಆರುಷಿಯ ಊರು ನೂರು ಕಿಮೀ.. ಬಳ್ಳಾರಿ ಹೊರ ವಲಯದ ಹೀರೆಹಾಳ್ ಗೆ ಬಂದ ಮೇಲೆ ಯಾಕೋ ಸಿಂಗಲ್ ನೇಚರ್ ಕಾಲ್ ಆರುಷಿಯನ್ನು ಒತ್ತಡಕ್ಕೀಡು ಮಾಡಿದ್ದರಿಂದ ಹೈವೇಯ ನರ್ಸರಿಗಳ ಪಕ್ಕದಲ್ಲಿಯೇ ಕಾರು ನಿಲ್ಲಿಸಿ ಕೆಳಗಿಳಿದು ಆನಂದಿಸುತ್ತಿಅ ಅಕ್ಕ-ಪಕ್ಕ ನೋಡಿದಾಗ ಒಂದು ಪಪ್ಪಾಯಿ ಗಿಡದಲ್ಲಿ ಎರಡ್ಮೂರು ಕಾಯಿಗಳು.. ಗಿಡ ಬಾಡಿ ಹೋಗಿದೆ ಅದರಲ್ಲಿ ಒಂದು ಸಾಧರಣ ತೆಂಗಿನ ಕಾಯಿ ಗಾತ್ರದ ಒಂದು ಹಣ್ಣು ಹಣ್ಣಾಗಿತ್ತು. ಆರುಷಿಯು ಕೈ ಎತ್ತಿದರೂ ನಿಲುಕದ ಎತ್ತರದಲ್ಲಿ ಇದ್ದುದರಿಂದ ಅಲ್ಲೇ ಸ್ವಲ್ಪ ದೂರದಲ್ಲಿ ಬಿದ್ದಿದ್ದ ಒಂದೆರಡು ಮೊಳ ಉದ್ದದ ಕೋಲಿನಿಂದ ಆ ಹಣ್ಣನ್ನು ಕೆಡವಿ ಕ್ಯಾಚ್ ಹಿಡಿದು full ಹಣ್ಣಾಗಿದ್ದುದರಿಂದ ಸ್ಥಳದಲ್ಲೇ ಕೈಯಿಂದ ಅದುಮಿ ಓಪನ್ ಮಾಡಿದ. ಆರೋಹಿ ಕಾರಿನಿಂದ ನೋಡು ನೋಡುತ್ತಲೇ ಬಾಯಿಗೆ ಹಾಕಿ ತಿನ್ನುತ್ತಾ ಕಾರಿನ ಬಳಿಗೆ ಬಂದ. ಆರೋಹಿ: ...