ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾವು ಸಂತೋಷವಾಗಿ ಏಕೆ ಮತ್ತು ಹೇಗೆ ಜೀವಿಸಬೇಕು??

ಇಮೇಜ್
ನಾವು ಸಂತೋಷವಾಗಿ ಹೇಗೆ ಮತ್ತು ಏಕೆ ಇರಬೇಕು?? ಮೊನ್ನೆ ಅದ್ಯಾರೋ ಪ್ರಖ್ಯಾತ ವಿವಾಹಿತ ನಟಿಯೋರ್ವಳು ಪಕ್ಕದ ರಾಜ್ಯದ ಇನ್ನೊಬ್ಬ ವಿವಾಹಿತ ನಟನೊಂದಿಗೆ livin ನಲ್ಲಿದ್ದಾರಂತೆ..ಅವಳು ಗಂಡನನ್ನು ಬಿಟ್ಟು ಐದು ವರ್ಷ ಆಯಿತಂತೆ..! ಇದನ್ನೆಲ್ಲ ನೋಡಿದವರು -ನೆಟ್ಟಿಗರು ಇವಳೋ ಸಂಪನ್ನ ಗಂಡನಿಗೆ ಮೋಸ ಮಾಡಿದಳು ಎಂತಲೂ,ಅತ್ತ ಅವನೋ ಕಟ್ಟಿಕೊಂಡವಳನ್ನು ಬಿಟ್ಟು ಇನ್ನೊಬ್ಬಳನ್ನ ಕರ್ಕೊಂಡು ಬಂದಾನೆ... ಇವಳು ಎಷ್ಟು ದಿನವೋ..ಎಲ್ಲಾ ದುಡ್ಡು ಆಸ್ತಿಗಾಗಿ..ಹಾಗೆ ಹೀಗೆ ಅದು ಇದೂ ಎಂಥೆಲ್ಲಾ ಮಾತಾಡುತ್ತಿದ್ದುದು ನೀವು ಕೇಳಿರುತ್ತೀರಿ.ಕೆಲವು ಸುದ್ದಿವಾಹಿನಿಗಳಲ್ಲಿ ಬೇರೆ ಯಾವ ಸುದ್ದೀ ಸಮಾಚಾರವನ್ನು ಹಾಕದೇ ವಾರಗಟ್ಟಲೇ ಒಂದೇ ವಿಷಯವನ್ನು ಹಾಕಿಕೊಂಡು 'ಕಾಂಗರೋ ಕೊರ್ಟ್'ನಂತೆ ಮಾತಾಡುತ್ತಿರುವವರನ್ನು ನೀವು ನೋಡಿಯೇ ಇರುತ್ತೀರಿ.ಇಂತಹ ಸಾಂಸಾರಿಕ ಹದ್ದುಮೀರಿದ ಬಿಸಿ ಬಿಸಿ ಸುದ್ದಿಗಳು ನಮ್ಮ ಭಾರತೀಯ ಚಿತ್ರರಂಗದಲ್ಲಿ, ಅಷ್ಟೆ ಯಾಕೆ ನಮ್ಮ ಸಮಾಜದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾವೆ. ನಮ್ಮ ಸಮಾಜದಲ್ಲಿ ಇಂತಹವು ಕಂಡಾಗ ಛೀ.. ಥೂ ಎಂದು ಉಗಳಿ ಉಪ್ಪಾಕಿದರೂ ಕೆಲವು ದಿನಗಳಲ್ಲಿ ಇಂತಹ ಸುದ್ದಿಗಳು ತಣ್ಣಗಾಗಿ ಹೊಸ ಕೇಸ್ಗಳು ಮರಕಳಿಸುತ್ತಲೇ ಇರುತ್ತಾವೆ.ಆದರೂ ಇಂತಹ ಘಟನೆಗಳು ಯಾಕೆ ನಡೆಯುತ್ತಿವೆ...?? ಇಷ್ಟೆಲ್ಲಾ ಹೆಸರು,ಪ್ರತಿಭೆ ಎಲ್ಲಾ ಇದ್ದು 'ಯಾವುದೋ ಒಂದಕ್ಕೇ' ಅವರು ಮಾಡಿದ್ದು ಸರಿನಾ ತಪ್ಪಾ?? ಹೀಗೆ ಸಂಗಾತಿಯ...

ಜಗತ್ತು ಮತ್ತು ಸೂಕ್ಷ್ಮ ಜೀವಿಗಳು..

ಇಮೇಜ್
ಜಗತ್ತು ಮತ್ತು ಸೂಕ್ಷ್ಮಜೀವಿಗಳು.. ಈ ಬ್ರಹ್ಮಾಂಡದ ಸೃಷ್ಟಿಯ ನಂತರ ಮೊಟ್ಟಮೊದಲು ಈ ಭೂಮಿಯ ಮೇಲೆ ಕಾಣಿಸಿಕೊಂಡ ಜೀವಿಗಳೇ ಅಸಂಖ್ಯಾತ ಸೂಕ್ಷ್ಮ ಜೀವಿಗಳು.. ಹೆಸರೇ ಹೇಳುವಂತೆ ಅವು ಕಣ್ಣಿಗೆ ಕಾಣಲಾರದಂತಹವುಗಳಾಗಿದ್ದರಿಂದ ಬಹುಶಃ ಆಧುನಿಕ ಮೈಕ್ರೋ ಸ್ಕೋಪ್ ನಂತಹ ಸಾಧನಗಳು ಆವಿಷ್ಕರಿಸಿದ ನಂತರ ಇವುಗಳು ನಮ್ಮ ಕಣ್ಣಿಗೆ ಕಾಣುವಂತಾದವು. ಈ ಸೂಕ್ಷ್ಮ ಜೀವಿಗಳು ಜೀವಿಸಲು ತಮ್ಮದೇ ಆದ ವ್ಯಾಪ್ತಿಯನ್ನು ಹೊಂದಿದೆ. ಕೆಲವು ನೀರಿನಲ್ಲಿ ಇನ್ನೂ ಕೆಲವು ಪ್ರಾಣಿಗಳಲ್ಲಿ ಹೀಗೆ ತಾವು ಜೀವಿಸಲು ಒಂದು ಸ್ಥಳವನ್ನು ಹುಡುಕಿಕೊಳ್ಳುತ್ತಾವೆ.ಎರಡ್ಮೂರು ವರ್ಷಗಳಿಂದ ಈಚೆಗೆ ಅಂತಹ ಸೂಕ್ಷ್ಮ ಜೀವಿಗಳ ಬಗ್ಗೆ ನಮಗೆಲ್ಲಾ ಹೆಚ್ಚೇ ತಿಳಿದಿದೆ. ಅದರಂತೆ ಈ ಸಸ್ಯಗಳಿಗೂ ಅನೇಕ ಜೀವಿಗಳು ಯಮ ಸ್ವರೂಪಿಯಂತೆ ಕಾಡುತ್ತವೆ.ಮನುಷ್ಯರಿಗೆ ಬರುವ ಬಿ ಪಿ,ಶುಗರ್ ,ಕ್ಯಾನ್ಸರ್ ನಂತಹ ರೋಗಗಳಂತೆ ಸಸ್ಯಗಳಲ್ಲಿಯೂ ರೋಗದ ಬಾದೆಗಳ ಬಗ್ಗೆ ಒಂದಷ್ಟು ತಿಳಿಯುವ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಅಕ್ಕನ ಬಾಣಂತನ ಮಾಡಲು ನಮ್ಮ ಭಾವನವರ ಅಜ್ಜಿ ಬಂದಿದ್ದರು.ಅವರಿಗೆ ಆಗಲೇ ಸುಮಾರು ಎಂಭತ್ತೈದು ತೊಂಭತ್ತು ವರ್ಷ ಆಗಿತ್ತು.ಆ ಅಜ್ಜಿ ಬರುತ್ತಲೇ ಉತ್ತುತ್ತಿ,ಒಣಕೊಬ್ಬರಿ, ಕಲ್ಲುಸಕ್ಕರೆ, ಅಂಟು,ಬಾಣಂತಿ ಕಾರ ಅದು ಇದು ಎಂದು ಸಂತೆ ಮಾಡಿಕೊಂಡು ಬಂದಿದ್ದರು.ಅದೆಲ್ಲವೂ ಒಳ್ಳಿನಲ್ಲಿ ಕುಟ್ಟಿ ಕುಟ್ಟಿ ಒಂದು ಡಬ್ಬಿಯಲ್ಲಿ ತುಂಬಿಡುವ ಹೊತ್ತಿಗೆ  ಮಗುವಿಗೆ ಶೀತ ಆಗಿತ್ತು. ...

ತೊಂಡೆಹಣ್ಣು..

ಇಮೇಜ್
ತೊಂಡೆಹಣ್ಣು.. ಆಗ ತಾನೆ ಮಳೆಬಿದ್ದು ಎಳೆಯ ಹುಲ್ಲು ಚಿಗುರಿ ನಂತರ ಬಾರದ ಮಳೆಗೆ ಬಯಲಿನ ಹುಲ್ಲು ಬಾಡಿದರೆ ಗಿಡ-ಗಂಟೆಗಳ ಕೆಳಗೆ ಕೆಲವು ದಿನಗಳು ಹಸಿರಾಗಿಯೇ ಇರುತ್ತದೆ.ಅಂತಹ ದಿನಗಳಲ್ಲಿ ದನಗಳ ಮೇಯಿಸಲು ಗೋಮಾಳಕ್ಕೆ ಹೋದರೆ  ಬೀಸುತ್ತಿದ್ದ ಆಷಾಢ ದ ಗಾಳಿಗೆ ಹನ್ನೊಂದು ಹನ್ನೆರಡು ಗಂಟೆಗೆ ಹೊಟ್ಟೆ ಚುರುಗುಟ್ಟುತ್ತಿತ್ತು.ಆಗ ನಾವು ಉಣ್ಣುತ್ತಿದ್ದದು ಬೆಳಿಗ್ಗೆ ಮತ್ತು ರಾತ್ರಿ ಎರಡೇ ಹೊತ್ತು..ದಿನವಿಡೀ ದನಗಳ ಹಿಂದೆ ಅಲೆದು ಅಲೆದು ಆಗುತ್ತಿದ್ದ ಸುಸ್ತನ್ನು ತಣಿಸುತ್ತಿದ್ದುದು ಆಗಿನ ಕಾಲದಲ್ಲಿ ಸಿಗುತ್ತಿದ್ದ ಕವಳೆ,ಕಾರೆ,ತೊಂಡೆ ಹಣ್ಣುಗಳೇ ನನಗೆ ರಸದ ಔತಣ..ಅಲ್ಲೊಂದು ಇಲ್ಲೊಂದು ಇದ್ದ ಗಿಡಗಳಲ್ಲಿ ಬೆಳಗಾಗುತ್ತಲೇ ಪಕ್ಷಿಗಳೆಲ್ಲ ತಿಂದುಗುಳಿರುತ್ತಿದ್ದವು. ಅಳಿದುಳಿದ ಹಣ್ಣುಗಳಿಗಾಗಿ ಯಾರು ಆ ಗಿಡಗಳ ಬಳಿ  ಮೊದಲು ಹೋಗುವರೋ ಅವರಿಗೆ  ಎರಡನೇ ಪ್ರಾಶಸ್ತ್ಯದ ಹಣ್ಣುಗಳು ದೊರೆಯುತ್ತಿದ್ದವು. ಆ ಎರಡನೇ ಪ್ರಾಶಸ್ತ್ಯದ ಹಣ್ಣುಗಳಿಗಾಗಿ ದನಗಳ ಹಿಂದೆ ಅಲೆಯುವುದಕ್ಕಿಂತ ಹೆಚ್ಚು ಅಲೆಯುತ್ತಿದ್ದೆ. ಅನೇಕಗಿಡಗಳ ಮೇಲೆ ಹಸಿರ ಹೊದಿಕೆಯಂತೆ ಹಬ್ಬಿದ್ದ ತೊಂಡೆಯ ಬಳ್ಳಿಯಲ್ಲಿ  ನೇತಾಡುತ್ತಿದ್ದ ಕೆಂಪನೆಯ ಹಣ್ಣುಗಳು. ಆಹಾ.. ಆ ಕೆಂಪನೆಯ ಹಣ್ಣುಗಳಲ್ಲಿ ಇಳಿದಿರುತ್ತಿದ್ದ ಸಕ್ಕರೆಯ ಪಾಕದಂತಹ ಹನಿಗಳು ಇರುವ ಹಣ್ಣು ಅದ್ಬುತ ರುಚಿ ಇರುತ್ತಿದ್ದವು.ಅಂತಹ  ತೊಂಡೆಹಣ್ಣುಗಳು ಸಿಕ್ಕರೆ ಆಗಾಗುತ್ತಿದ್ದ ಸಂತಸಕ್ಕೆ ಮಿತಿಯೇ ಇರುತ್ತಿರಲಿ...

ಕಾವೇರಿ ನೀನೆಷ್ಟು ಸುಂದರಿ..??part-2

ಇಮೇಜ್
ಕಾವೇರಿ ನೀನೆಷ್ಟು ಸುಂದರಿ??   Part-2 ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿರುವಾಗ ನಮ್ಮ ಊರಿನವರೇ ಆದ ರಂಗಪ್ಪ ಎಂಬುವವರು ವಾರಕ್ಕೆ ಕನಿಷ್ಟ ಎರಡ್ಮೂರು ಬಾರಿಯಾದರೂ ನಮ್ಮ ಗುರುಗಳಾದ ಶಿವಾನಂದಪ್ಪ ಸರ್ ಬಳಿ  ಬಂದು ಅದು ಇದು ಮಾತಾಡುತ್ತಿದ್ದರು. ಅವರನ್ನು ಕಂಡ ಕೂಡಲೇ ನಾವೆಲ್ಲರೂ  'ರಂಗಪ್ಪ ಹದಿನೆಂಟು ಟುಮಕೂರು' ಎಂದು ಹಾಡು ಹೇಳುತ್ತಿದ್ದೆವು. ಕಾಲಕ್ರಮೇಣ ನನಗೆ ಗೊತ್ತಾಗಿದ್ದು ಎಲ್ಲರ ಹೆಸರುಗಳೂ ದೇವರ ಹೆಸರುಗಳು ಅಂತ. ಆಗ ನನಗನ್ನಿಸಿದ್ದು ಈ ರಂಗಪ್ಪನ ಹೆಸರಿಗೆ  ತುಮಕೂರು ತಳುಕು ಹಾಕಿಕೊಂಡಿದ್ದರಿಂದ ತುಮಕೂರಿನಲ್ಲಿ ರಂಗಸ್ವಾಮಿ ದೇವಸ್ಥಾನ ಇದೆ  ಅದೇ ರಂಗನಾಥ ಸ್ವಾಮಿಯ ಹೆಡ್ಡಾಪೀಸು ಅನ್ಕೊಂಡಿದ್ದೆ.ಪ್ರೌಢಶಾಲೆಯಲ್ಲಿ ಮೊಟ್ಟಮೊದಲ ಬಾರಿಗೆ ಶಾಲಾ ಪ್ರವಾಸಕ್ಕೆ ಮೈಸೂರಿಗೆ ಹೋಗಿದ್ದೆವು.ಡಿಸೆಂಬರ್ ನಲ್ಲಿ ಬೆಳ್ಳಂಬೆಳಿಗ್ಗೆ ಗದ ಗದ ನಡುಗುತ್ತಾ  ಐದುಹೆಡೆಯ ಬೃಹತ್ ಸರ್ಪದ ಮೇಲೆ ಮಲಗಿದ ದೇವರ ದರ್ಶನವನ್ನು ಪಡೆದಿದ್ದೆವು.ನಮ್ ಮಾಸ್ಟರ್ ಒಬ್ಬರು ''ಸ್ವಾಮಿ ರಂಗನಾಥ ಕಾಪಾಡಪ್ಪ" ಎಂದು ನನ್ನ ಮುಂದೆಯೇ ಕೈ ಮುಗಿದಾಗ ಆ ದೇವರು ರಂಗನಾಥ ಸ್ವಾಮಿ ಎಂದು ನನಗೆ ತಿಳಿದದ್ದು... ಆ ದೇವರಿಗಿಂತ ಆ ಕಲ್ಲಿನ ಸರ್ಪವ (ಆದಿಶೇಷನ)ಕಂಡು ಅಬ್ಬಾ.. ಎಷ್ಟು ದೊಡ್ಡಹಾವು ಎಂದು ಉದ್ಗಾರ ತೆಗೆಯುವಂತೆ ಇತ್ತು.ಇಂದಿಗೂ ಅದು ಹಾಗೇ ಇದೆ. ಆದರೆ ಅಂದು ನಾವು ಚಿಕ್ಕವರಿದ್ದುದರಿಂದ ಹಾವು ಮಾತ್ರ ಬಾರೀ ದೊಡ್ಡದಾಗಿ ನನಗೆ ಕಂಡಿ...

ಕಾವೇರಿ ನೀನೆಷ್ಟು ಸುಂದರಿ..part-1

ಇಮೇಜ್
ಕಾವೇರಿ ನೀನೆಷ್ಟು ಸುಂದರಿ... ಕನ್ನಡ ನಾಡಿನ ಜೀವನದಿ ಈ ಕಾವೇರಿ... ಓ ಓ ಕಾವೇರಿ... ಈ ವೈಯ್ಯಾರಿ. ಈ ಹಾಡನ್ನು ನಾನು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ  ಹಲವು ಬಾರಿ ಕೇಳಿದ್ದೆ.. ಆಗ ಕೇಳಿದ ಮತ್ತೊಂದು ಹಾಡು ಎಂದರೆ ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ಸಾಗಿಸು... ಈ ಎರಡೂ ಹಾಡುಗಳನ್ನು ಕೇಳಿದಾಗಿನಿಂದ ಕಾವೇರಿಯನ್ನು ನೋಡಬೇಕು ಎಂದು ಮನಸಿನಲ್ಲಿ ಅನಿಸುತ್ತಿತ್ತು.. ಆ ವಯಸ್ಸಿನಲ್ಲಿ  ಮುಂದೊಂದು ದಿನ ನೋಡಬೇಕು ಎಂದೆನಿಸಿತ್ತಾದರೂ ಪ್ರೌಢಶಾಲೆಯಲ್ಲಿದ್ದಾಗ  ಮೈಸೂರಿಗೆ ಪ್ರವಾಸ ಬಂದಾಗ ಕಾವೇರಿಯ  ಕೆ ಆರ್ ಎಸ್ ನೋಡಿ ಪುಳಕಗೊಂಡಿದ್ದೆ. ಹಾಡುಗಳಲ್ಲಿ ಅಡಗಿದ ಕಾವೇರಿಯ ಮಹತ್ವ ಅರ್ಥ ಆಗಬೇಕಾದರೆ ಕಾವೇರಿಯ ಮೂಲದಿಂದ ನೋಡಬೇಕು   ಆಗ ಮಾತ್ರ ಕಾವೇರಿಯ ಬಗ್ಗೆ ಗೊತ್ತಾಗೋದು  ಎಂದೆನಿಸಿತ್ತು‌. ಇದು ಸಾಕಾರಗೊಂಡಿದ್ದು  ಕೈ ಹಿಡಿದ ಕುಮುದಾ ಜೊತೆಯಿರಲು, ಕೈಯಲ್ಲಿ ಕಾರು, ಜೇಬಲ್ಲಿ ನಾನೇ ದುಡಿದ ಕಾಸಿದ್ದಾಗ ನಾವು ತೀರ್ಮಾನಿಸಿದ್ದು ಎಷ್ಟು ಸಾದ್ಯವೋ ಅಷ್ಟು ದೇಶ ಸುತ್ತಬೇಕು ಅಂತ! ದೇಶವನ್ನಂತೂ ಸಂಪೂರ್ಣ ಸುತ್ತಲಾಗಿಲ್ಲ ಆದರೆ ಕೆಲವೇ ಪ್ರದೇಶಗಳನ್ನಾದರೂ ನೋಡಿದ್ದೇವೆ. ಅದರಲ್ಲಿ ಈ ಲೇಖನದಲ್ಲಿ ನಿಮಗೆ ತಿಳಿಸಲಿಚ್ಚಿಸುವುದು  ಕಾವೇರಿಯ ಹುಟ್ಟಿನಿಂದ ಹೊಗೆನಕಲ್ ವರೆಗೂ  ಅವಳ ಹೆಜ್ಜೆಯ ಹಾದಿಯಲ್ಲಿ ಮೂಡಿದ ಜಲಧಾರೆಗಳ ಸೊಬಗು..ಆ  ಸೌಂದರ್ಯವನ್ನು ನಾನು ಕಂಡ ಅನುಭವದ ಪ್ರವಾಸಿ ಕಥನ....

MAGPIE SYNDROME-ಮ್ಯಾಗ್ ಪೈ ಸಿಂಡ್ರೋಮ್...

ಇಮೇಜ್
Magpie Syndrome.. (ಮನೋವೈಜ್ಞಾನಿಕ ಲೇಖನ) ಘಟನೆ-1 ಕಳೆದ ಹತ್ತು ವರ್ಷಗಳ ಹಿಂದಿನ ಘಟನೆ..  ನಾನು British council ಎಂಬ ತರಬೇತಿಯನ್ನು ಕೊಡಲು ಸಂಪನ್ಮೂಲ ಶಿಕ್ಷಕನಾಗಿ ನಿಯೋಜಿತನಾಗಿದ್ದೆ. ತರಬೇತಿ ಪಡೆಯಲು ಹತ್ತಾರು ಹಳ್ಳಿಗಳಿಂದ ಐವತ್ತು-ಅರವತ್ತು ಶಿಕ್ಷಕ/ಶಿಕ್ಷಕಿಯರು ಆಗಮಿಸಿದ್ದರು. ಹೀಗೆ ಒಂದೆರಡುದಿನ ತರಬೇತಿ ನಡೆದಿದ್ದಾಗ ಒಂದು ದಿನ  ಮಧ್ಯಾಹ್ನ ಊಟದ ಸಮಯದಲ್ಲಿ ಕೆಲವರು ನಿಂತು ಕುಳಿತು ಊಟಮಾಡುತ್ತಿರುವಾಗ ಒಬ್ಬ ಮಹಿಳಾ ಶಿಕ್ಷಕಿ  ತಟ್ಟೆ ಹಿಡಿದು  ನಾನು ನಮ್ಮ colleague ಮುಜಾವರ್ ಊಟಮಾಡುತ್ತಾ ಮಾತಾಡುತ್ತಿದ್ದ ನಮ್ಮ ಬಳಿ ಬಂದರು..  "ಸಾರ್ ನೀವು ಕೆಲಸ ಮಾಡುವುದು ವರದಾಪುರನಾ"??  ನಾವು:"ಹೌದು ಮೇಡಂ..."  ಮೆಡಂ: "ಸಾರ್.. ನಮ್ಮದು ರಾಮಾಪುರ...."  ನಾವು:ಹೌದ್ರಾ?? ನಾವು ಅಲ್ಲಿಂದಲೇ ಡೈಲಿ ಓಡಾಡುವುದು ಮೆಡಂ.. ಗೊತ್ತಿರಲಿಲ್ಲ  ನೀವು ರಾಮಾಪುರದವರು ಅಂತ..  ಮೆಡಂ- ಸಾರ್ ನೀವು ನಮ್ಮೂರಿಂದನೇ  ರಾಜಾಪುರಕ್ಕೆ ಹೋಗುವುದು. ಯಾವಾಗಲಾದರೂ ಮನೆಗೆ ಬನ್ನಿ ಸಾರ್.. ನಾವು:ಖಂಡಿತವಾಗಿಯೂ ಬರುತ್ತೇವೆ ಮೇಡಂ.. ಮೇಡಂ-"ಬರಲೇ ಬೇಕು ಸಾರ್ ನೀವು..ಎಂದು ಕಡಕ್ ಆಗಿ ನುಡಿದರು."  ನಾವು: ಮೆಡಂ.. ದಿನಾಲು ಅಲ್ಲೇ ಓಡಾಡ್ತೀರುತ್ತೇವೆ..ಯಾವಾಗಲಾದರೂ ಬರೋಣ ತಗೋಳಿ.. ಮುಜಾವರ್:ಮತ್ತೆ ರೀ ಮೇಡಂ..  ಮನೆಯಾಗೆ ಅತ್ತೇ ಮಾವ ಇದ್ದರ್ರೀ?? ಮೇಡಂ-...