ಒಲವು..
💕ಒಲವು💕 ಒಲವೆ ಓ ಒಲವೇ.. ಎಷ್ಟೊಂದು ಮಧುರ ಒಲವೇ... ನಿನ್ನೊಲವಿನ ಒಲವೇ ಈ ಜಗದಬಾಳ್ವೆಯ ಬಲವು.. //ಒಲವೇ// ಒಲವೇನೇ ನನ್ ಉಸಿರು ಈ ಒಲವಿನ ಜೀವನದೀ ಎಲ್ಲವೂ ಸಿಕ್ಕಿದೆ ಅಂದುಕೊಂಡರೂ ನಮ್ಮಿಂದ ದೂರವೇ ಉಳಿದಿದೆ ಅದೇ ನಮ್ಮವರ 'ಒಲವು'*//ಒಲವೇ// ನಗುವಾಗಿದೆ ಗೆಲುವಾಗಿದೆ ನೋವಾಗಿದೆ ಈ ಒಲವು ಒಲವಿಗೆ ಒಲವೇ ಸಾಟಿ ಆಗಬೇಕಿತ್ತು ಆದರೆ ಇಹರು ಹಲವರು ಒಲವಿನ ಕ್ರೂರಿಗಳಾಗಿ.. ನಿಷ್ಕಲ್ಮಶ ಒಲವಿಗೆ ಬಂದಿದೆ ಇಂದು ಆಪತ್ತು... ಜಗದ ಎಲ್ಲಾ ಒ'ಲವ್ವಿ'ನ ಹಿಂದೆ ಅಡಗಿದೆ ಸಂಪತ್ತು...!! ಒಲವು ಸದಾ ಹಸಿರಾಗಿರಲಿ ನಮ್ಮೊಲವದೀ ಉಸಿರಾಗಿರುವವರಿಗೆ ಹುಸಿಯಾಗದಿರಲಿ ನಮ್ಮೊಲವ ನಂಬಿರುವವರಿಗೆ.. /ಒಲವೇ/ ✍️ನಾಗೇಂದ್ರ ಬಂಜಗೆರೆ