ಪೋಸ್ಟ್‌ಗಳು

ಜನವರಿ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಿಳೆಯರೂ ಮತ್ತು ಮರೆಯದ ಸೇಡುಗಳು...

ಇಮೇಜ್
#ಮಹಿಳೆಯರೂ_ಮತ್ತು_ಮರೆಯದ_ಸೇಡುಗಳು... "ನಾವ್ ಮನೆಗೆ ಹೋಗೋ ದಿಲ್ಲ.... ನಾವ್ ಮನೆಗೆ ಹೋಗೋ ದಿಲ್ಲ.... ನಮ್ಗೆ ಬಾಗಲು ತೇಗೆಯೊರೀಲ್ಲಾ ನಾವ್ ಮನೆಗೆ ಹೋಗೂದಿಲ್ಲ ನಮ್ಗೆ ಬಾಗಲು ತೆಗೆಯೊರೀಲ್ಲಾ ಇಲ್ಲಾ..ಇಲ್ಲಾ.. ಇಲ್ಲಾ......ಇಲ್ಲಾ.."  ಕಳೆದ ಐದಾರು ವರ್ಷಗಳ ಹಿಂದೆ ಟ್ರೆಂಡ್ ಆಗಿದ್ದ ಈ ಹಾಡು ಯಾರು ತಾನೇ ಕೇಳಿಲ್ಲ??ವಿಶೇಷವಾಗಿ ಮದುವೆ ಆದವರೇ ಹತ್ತಾರು ಬಾರಿ rewind -rewind ಮಾಡಿಕೊಂಡು ಈ ಹಾಡನ್ನು ಕೇಳಿದವರು ಬಹಳ ಜನ ಇದ್ದಾರೆ ...ರೆಸ್ಟೋರೆಂಟ್ ಗಳಿಗೆ ಮಜಾ ಮಾಡಲು ಹೋದವರು, ಆಟೋ, ಕ್ಯಾಬ್ ಡ್ರೈವರಗಳು, ರಿಯಾಲಿಟಿ ಶೋ ಗಳಲ್ಲಿ ಮೆಟ್ಲಿಗಳಾಗಿ ಹಾಡುತ್ತಾ  ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಈ ಹಾಡು ತಲುಪಿ ಜನರ ಬಾಯಿಯಲ್ಲಿ ಆಲಾಪಿಸಿದ್ದು  ಎಲ್ಲರಿಗೂ ಗೊತ್ತಿದೆ. ಯಾಕೆ ಈ ಹಾಡು ಇಷ್ಟ ಆಗಿರಬಹುದೆಂದರೇ ಆ ಹಾಡಿನ lyrics, ಅಲ್ಲಿ ಇರುವ ಮಾತುಗಳು ಪ್ರತಿ ಗಂಡOದಿರಿಗೆ ಪ್ರತಿದಿನ ಅವರ ಹೆಂಡತಿಯರು ಹೇಳಿದಂತೆ ಅನಿಸಿದುದ್ದುದು ! ಅವರ ಹೆಂಡತಿಯರು ಮಾತಾಡಿದಾಗ ಬಾಯಿ ಮುಚ್ಚಿಕೊಂಡೋ ಬಯ್ಯಿಸಿಕೊಂಡೋ,ಅಥವಾ ಸಿಟ್ಟಿನಿಂದ ಹಿಂತಿರುಗಿ ಬೈದೊ,ಹೇಗೂ ದಿನಗಳು ತಳ್ಳುತಿದ್ದ ದಿನಗಳಲ್ಲಿ ಇಂಥಾ 'ಗಂಡಂದಿರ ಆಕ್ರೋಶ ' ಹಾಡಾಗಿ ಬಂದದ್ದು,ಇದರ ಸಾಲುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಾದಂತೆನಿಸಿದ್ದರಿಂದ ಸಹಜವಾಗಿ  ಹೆಂಡತಿಯರಿಂದ ಕಿರಿ ಕಿರಿ ಅನುಭವಿಸಿರುವವರನ್ನು ಈ ಸಾಲುಗಳು ಮುಟ್ಟಿದವು ಅನ್ಸತ್ತೆ.....

ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು

*_ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು_*  ✍️ ನಾಗೇಂದ್ರ ಬಂಜಗೆರೆ *ಇದು 'ನಕಲಿಯುಗ'.. ಆದರೆ ಅದ್ಯಾರೋ ಹಿರಿಯರು ಇದನ್ನು 'ಕಲಿಯುಗ'  ಎಂದು ಕರೆದಿರಬೇಕು.,ಈ ಮಾತನ್ನು ಯಾಕೆ ಹೇಳಬೇಕೆನಿಸುತ್ತಿದೆ ಎಂದರೆ   ನಾವು ವ್ಯವಹರಿಸುವ ಹಣದಲ್ಲಿ ಹಲವಾರು ಮುಖಬೆಲೆಯ ಖೋಟ ನೋಟುಗಳನ್ನ ಬಳಸಿ ಅಸಲಿ ನೋಟುಗಳಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದನ್ನು ಕೇಳಿದ್ದೇವೆ. ನೋಡಿದ್ದೇವೆಯೂ ಕೂಡ. ಈಗಂತೂ ನಾವು ಬಳಸುವ ಎಲ್ಲ ವಸ್ತುಗಳಲ್ಲೂ ನಕಲಿ ಯಾವುದು ಅಸಲಿ ಯಾವುದು ಅಂತ ಹುಡುಕುತ್ತಿರುವಾಗ ಇತ್ತೀಚಿನ ದಿನಗಳಲ್ಲಿ  ನಕಲಿಗಳ ಪಟ್ಟಿಗೆ ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿಯೂ ನಕಲಿ ಆದದ್ದು ನಮಗೆಲ್ಲ ಗೊತ್ತೇ ಇದೆ. ನಾನು ಶಿಕ್ಷಕ ವೃತ್ತಿಗೆ ಸೇರಿ ಹದಿನೇಳು ಸಂವತ್ಸರ ಕಳೆಯಿತು.ನನ್ನ ಅನೇಕ ಶಿಷ್ಯೋತ್ತಮರು ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ. ಇನ್ನೂ ಕೆಲವರು ಮೆಡಿಕಲ್,ಇಂಜಿನಿಯರಿಂಗ್, ಡಿಪ್ಲೋಮಾ ,ಐಟಿಐ ಪದವಿಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಗಣನೀಯ ಪ್ರಮಾಣದ ಶಿಷ್ಯಂದಿರು ಲಾರಿ ಡ್ರೈವರ್,ಕ್ಲೀನರ್  ಓನರ್ ಆಗಿಯೂ,ಕೂಲಿ ನಾಲಿ ಮಾಡುತ್ತಾ, ಇನ್ನೂ ಕೆಲವರು ಕುರಿಸಾಕಿಕೊಂಡು ಬದುಕನ್ನು ಕಂಡುಕೊಂಡಿದ್ದಾರೆ. ಈ ಮೊದಲು ನಾನು ಕೆಲಸ ಮಾಡುತ್ತಿದ್ದುದೊಂದು ಗುಡ್ಡಗಾಡು ಪ್ರದೇಶ. ತಾಲ್ಲೂಕು ಕೇಂದ್ರದಿಂದ 40 km ಅಂತರ ಇದ್ದುದರಿಂದ SSLC,PUC,KPSC ಇಂತಹ ಪರೀಕ್ಷಾ ಕರ್ತವ್ಯದಿಂದ ದೂರವೇ ಉಳಿದಿದ್ದ ನನಗೆ...

ರಾಗಿಯನ್ನು ಅಕ್ಕಿ ಮಧ್ಯಲ್ಲಿ ಹಾಕುವುದಿಲ್ಲ ಯಾಕೆ???

*ಹಿಟ್ಟಿನ ಗಿರಣಿಯಲ್ಲಿ ರಾಗಿಯನ್ನು ಮಧ್ಯ ಹಾಕುವುದಿಲ್ಲ ಯಾಕೆ??* *ಮೊನ್ನೆ ನಾನು ರಾಗಿ ತೆಗೆದುಕೊಂಡು ನಮ್ಮ ಮನೆಯ ಸಮೀಪ ಇರುವ ಪ್ಲೋರ್ ಮಿಲ್ ಗೆ ಹೋಗಿದ್ದೆ..ಆ ಫ್ಲೋರ್ ಮಿಲ್ ನ ಹುಡ್ಗ ನನ್ನ ಡಬ್ಬ ನೋಡಿದ ಕೂಡಲೇ ರಾಗಿ  ಅಲ್ಲವಾ  ಸಾರ್...??ಲೇಟ್ ಆಗತ್ತೆ ಏಳು ಮುಕ್ಕಾಲು-ಎಂಟು ಗಂಟೆಯಂಗೆ ಬನ್ನಿ ಎಂದೇಳಿದ.. ಸರಿ ಎಂದು ಬಾಕ್ಸ್ ಇಟ್ಟು ಮನೆಗೆ ಬಂದು ಸರಿಯಾಗಿ ಏಳು ಮುಕ್ಕಾಲಿಗೆ ಹೋದೆ.. ಆ ಪ್ಲೋರ್ ಮಿಲ್ ಹುಡುಗ  ನನ್ನ ಡಬ್ಬದ ಕಡೆ ನೋಡದೆ ಇನ್ನೂ ಅಕ್ಕಿ ಗೋಧಿಗಳನ್ನೇ ರುಬ್ಬುತ್ತಿದ್ದ..* *ಏನಪ್ಪ ಹಾಕಿಲ್ಲವಲ್ಲ ಇನ್ನು ...??* *ಆಯ್ತು ಸಾ..ಇನ್ನೇರಡು ಇದ್ದಾವೆ..* *ಒಂದೈದು ನಿಮಿಷ ಅಂದ...* *ಕೈಗೆ ಮೊಬೈಲ್ ತೆಗೆದು ಬೈಕಿಗೆ ಆನಿಕೊಂಡು  ಒಂಟಿ ಕಾಲಲ್ಲಿ ಹಾಗೆ ನಿಂತೆ..* *ಒಬ್ಬ ನಲವತ್ತು- ನಲವತ್ತೆರಡು ವಯಸ್ಸಿನ ಪುರುಷನೊಬ್ಬ  ಮೂರುದಿನದಿಂದ ಮನೆಯಾಕೆ ಹಿಟ್ಟು ಮಾಡಸ್ಕೊಂಡ್ ಬಾ ಅಂತ ಹೇಳಿ ಇವ ಹ್ಞು...ಹ್ಞು... ಅಂತ ಅನ್ಕೊಂಡ್  ಹಿಟ್ಟು ಮಾಡಿಸದೇ ಪೈನಲ್  ಆಗಿ  ನೀ ಏನ್ ಹಾಕಿಸ್ಕೊಂಡ್ ಬರುವೆಯಾ ಇಲ್ಲಾ ಉಪವಾಸ ಹಾಕ್ಲ ??ಎಂದು  ಮನೆಯಾಕೆ ಜೋರು ಮಾಡಿದ ಮೇಲೆ ಅವಸರವಸರವಾಗಿ ಬಕೇಟ್ ಹಿಡಿದು ಬಂದಂತಿತ್ತು. ಬಂದವನೇ ಬಕೇಟ್ ಕೆಳಗಿಟ್ಟು ಹಿಟ್ಟು ಮಾಡಿಸದೇ ಇರುವ ಎಲ್ಲಾ ಡಬ್ಬಗಳ  ಮುಚ್ಚಳಗನ್ನು  ತೆಗೆದು ಅದೇನು ಇದೇನು ಎಂದು ದಡ ದಡ ಚೆಕ್ ಮಾಡುತ್ತಾ ಇದ್ದ..* *"ಜ್ವಾಳ ಗ...

ಇನ್ಮೇಲೆ ನೀನು ನನ್ನನ್ನು ಎಲ್ಲಿ ಕರೆಯಬೇಡಯ್ಯ....

ಇಮೇಜ್
*#ನೀನ್ ನನ್ನ ಇನ್ಮೇಲೆ ಎಲ್ಲೂ ಕರೀಬೇಡಯ್ಯ ನಾನು ನಿನ್ನ ಜೊತೆಗೆ ಬರಲ್ಲ...* *ಆರುಷಿ  ಕೋಟೆನಾಡು ಚಿತ್ರದುರ್ಗದಲ್ಲಿ ಪಿಯುಸಿ ಮುಗಿಸಿ ಶಿಕ್ಷಕನಾಗಲು ಡಿ .ಇಡಿ ಮಾಡಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದ. ಯಾವಾಗಲೋ ಊರಿಗೆ ಹೋಗುವಾಗ ಬಸ್ಸಲ್ಲಿ ಆಕಸ್ಮಿಕವಾಗಿ ಕಂಡ ಕ್ಲಾಸ್ ಮೇಟ್ ಅಕ್ಷತಾಳೊಂದಿಗೆ ಮಾತಾಡಿ ದ.ಆರುಷಿ ಮತ್ತು ಅಕ್ಷತಾ ಪ್ರೈಮರಿ ಸ್ಕೂಲ್ ಕ್ಲಾಸ್ಮೇಟ್ಸ್ ಆದರೂ ಹೈಸ್ಕೂಲ್ ಪಿಯೂ ಬೇರೆ ಬೇರೆ ಕಡೆ ಮುಗಿಸಿದ್ದರು. ಪ್ರೈಮರಿ ನಂತರ  ಅವರಿಬ್ಬರೂ ಎಂದು ಬೇಟಿಯಾಗಲೇ ಇಲ್ಲ.. ಅಂದು ಬಸ್ಸಿನಲ್ಲಿ ಬೇಟಿಯಾಗಿದ್ದೇ ಪಸ್ಟ್ ಟೈಂ.. ಬಹಳದಿನಗಳ ನಂತರ ಪರಸ್ಪರ ಕುಶಲೋಪರಿ ಮಾತನಾಡಿದ ಇಬ್ಬರೂ ನೆಕ್ಸ್ಟ್ ಏನು ಮಾಡಬೇಕು ಅಕ್ಷತಾ ಎಂಬ ಪ್ರಶ್ನೆಗೆ ಡಿ ಇಡಿ ಮಾಡಬೇಕು ಅಂತ ಇದ್ದೀನಿ ಅಪ್ಲಿಕೇಶನ್ ಹಾಕಿದ್ದೇನೆ ಎಂದಳು.ನಾನು ಡಿ ಇಡಿ ಗೆ ಹಾಕಿದ್ದೇನೆ ಸೆಲೆಕ್ಷನ್ ಲಿಸ್ಟ್ ಯಾವಾಗ ಬಿಡುತ್ತಾರೋ ನೋಡಬೇಕು ಎಂದು ಮಾತನಾಡುತ್ತಾ ಬಂದೆವು. ಇದಾಗಿ ಒಂದು ತಿಂಗಳಾಗಿರಬಹುದು. ಅಕ್ಷತಾ ಚಳ್ಳಕೆರೆ ನಗರದ ಡಿ ಇಡಿ ಕಾಲೇಜಿಗೆ ಅಡ್ಮೀಷನ್ ಆಗಿ ಕಾಲೇಜಿಗೆ ಹೋಗುತ್ತಿದ್ದಾಳೆ ಎಂದು ತಿಳಿಯಿತು. First ಲಿಸ್ಟಲ್ಲಿ ನನ್ನದು ಸೆಲೆಕ್ಷನ್ ಆಗಿರಲಿಲ್ಲ. ಆದರೆ ಅಕ್ಷತಾ ಪೇಮೆಂಟ್ ಕಟ್ಟಿ ಕಾಲೇಜಿಗೆ ಅಡ್ಮಿಷನ್ ಪಡೆದಿದ್ದಳು. ಎರಡು ಮೂರನೇ ಲಿಸ್ಟ್ ಗೆ ಕಾಯುತ್ತಿದ್ದ ನಾನು ಡಿ ಇಡಿ ಹೇಗಿರುತ್ತದೆಂಬ ಕುತೂಹಲದಿಂದ ಮತ್ತು ಎರಡನೇ ಲಿಸ್ಟ್ ನ ಮಾಹಿತಿಗಾಗ...

ಆವಿಷ್ಕಾರದ ಆಳ -ಹರಿವು..

ಇಮೇಜ್
#ಆವಿಷ್ಕಾರದ_ಆಳ_ಹರಿವು.. ಬಸ್ಸ್ಟ್ಯಾಂಡ್ನಲ್ಲಿ ನ ಇಬ್ಬರು ಪುರುಷರು ನಿಂತಿದ್ದರು ... ಇಬ್ಬರಿಗೂ ಪರಸ್ಪರ ಸಂಬಂಧವೇನೂ ಇಲ್ಲ.ಒಬ್ಬ  40 ವರ್ಷದ  ವಿವಾಹಿತ ಮದ್ಯ ವಯಸ್ಕ. ಮತ್ತೊಬ್ಬ 25 ವರ್ಷದ  ಅವಿವಾಹಿತ ತರುಣ ... ಇಬ್ಬರ ಮುಂದೆ ಒಂದು ಸುಂದರ ಹುಡುಗಿ ಮುಂಗುರುಳ ಸರಿಸುತ್ತಾ ಹಾದುಹೋದಳು. ಇಲ್ಲಿ ಪ್ರಸಂಗ ಒಂದೇ ಆದರೂ  ಈ ಇಬ್ಬರ ಯೋಚನೆಗಳು ಬೇರೆ ಬೇರೆ ಯಾಗಿದ್ದ ವು. ಅವಿವಾಹಿತ ಭವಿಷ್ಯದ ಸುಂದರ ಕನಸು ಕಂಡರೆ ವಿವಾಹಿತನಿಗೆ ತನ್ನ 'ಭೂತ' ನೆನಪಾಯಿತು.ಒಂದು ಸೆಕೆಂಡ್....ಇಲ್ಲಿ 'ಭೂತ' ಅಂದರೆ ಅವನ ಮನೆಯಲ್ಲಿ ಇರುವುದು ಅಲ್ಲ ಮಾರ್ರೆ....! Past... Past ...  ಕಳೆದು ಹೋದದ್ದು...ಅವನ ಮನೆಯಲ್ಲಿರುವರು ಭೂತ ಅಂತ ನೀವು ಅರ್ಥ ಮಾಡಿಕೊಂಡರೆ ಬಾರಿ ಯಡವಟ್ಟಾದೀತು.. ಮಾರ್ರೆ... _ಸನ್ನಿವೇಶ -1_  ಕಳೆದ 20 ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಇದ್ದರು.. ಈಗಲೂ ಇದ್ದಾರೆ...ಅವರ ಹೆಸರು ಜೇಮ್ಸ್ ಅಲಿಯಾಸ್ ರಂಗಸ್ವಾಮಿ...ಅಂತ.ಆತ ಅಂದಿಗಾಗಲೇ  ಕ್ರಿಶ್ಚಿಯನ್  ಧರ್ಮಕ್ಕೆ ಮತಾಂತರ ಹೊಂದಿ ಸುಮಾರು ಏಳೆಂಟು ವರ್ಷಗಳ ಕಾಲ ಆಗಿತ್ತು. ಈ ಮತಾಂತರ ಆದ ಕ್ರಿಶ್ಚಿಯನ್ನರು ಕಂಡ ಕಂಡವರಲ್ಲಿ  ನೀವು ಚರ್ಚ್ ಗೆ ಬನ್ನಿ, ಕ್ರಿಶ್ಚಿಯನ್ ನ ಧರ್ಮವನ್ನು ಬೆಂಬಲಿಸಿ ಅಥವಾ ಮತಾಂತರ ಆಗಿ ಎಂದು ಹೇಳುವುದು ಸಾಮಾನ್ಯ..ಅಲ್ಲಲ್ಲಿ ಈಗಾಗಲೇ ಸಾಕಷ್ಟು ಜನರನ್ನು ಮತಾಂತರ ಮಾಡಿರುವುದು ನೀವು ನೋ...