ಅಭಿಮಾನ ಮತ್ತು ದೇಶದ ಅಭಿವೃದ್ಧಿ..
#ಅಭಿಮಾನ_ಮತ್ತು_ದೇಶದ_ಅಭಿವೃದ್ಧಿ.. ಕೆಲವೇ ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದ ವಿಷಯ..ಅದೇನೆಂದರೇ ಭಾರತ ಇಡೀ ವಿಶ್ವದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಲಿದ್ದು ಇಲ್ಲಿರುವ ಮಾನವ ಸಂಪನ್ಮೂಲದ ಸದ್ಬಳಕೆಯಾದರೆ ಇಡೀ ವಿಶ್ವದಲ್ಲೇ ಭಾರತ ಪ್ರಚಂಡ ಪ್ರಬಲ ರಾಷ್ಟ್ರಗಳ ಪೈಕಿ ಭಾರತವೇ ಅಗ್ರಗಣ್ಯ ರಾಷ್ಟ್ರ ಆಗುವುದು ಎಂದು ವಿಶ್ಲೇಷಿಸುತ್ತಿದ್ದರು. ಇದಕ್ಕಾಗಿ ಭಾರತದಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಇರಬಹುದಾದ ಯುವ ಜನಸಂಖ್ಯೆಯ ಪ್ರಮಾಣ, ಆ ಯುವ ಶಕ್ತಿಗೆ ಇರಬಹುದಾದ ಕೌಶಲಗಳ ದೂರದೃಷ್ಟಿ,ದೇಶದ ಸುಸ್ಥಿರ ಅಭಿವೃದ್ಧಿಯ ಬೆಳವಣಿಗೆಗೆ ಮಾಡಿಕೊಂಡಿರುವ ಒಟ್ಟಾರೆಯ ಭವಿಷ್ಯದ ಸಿದ್ಧತೆಯನ್ನು ಸರ್ವೆ ಮಾಡಿದಾಗ ತಿಳಿದು ಬಂದದ್ದು ಭಾರತದ ಜನಸಂಖ್ಯೆಯನ್ನು ನೋಡಿ ಜಾಗತಿಕ ಮಟ್ಟದಲ್ಲಿ ಪ್ರಬಲ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮವ ಯಾವುದೇ ಲಕ್ಷಣಗಳು ಇಲ್ಲ... ಬದಲಾಗಿ ದೇಶದ ಯುವ ಸಮೂಹ ಸಾಗುತ್ತಿರುವ ದಿಕ್ಕು, ಯೋಚನೆಗಳು, ಕೌಶಲಗಳು,ದೂರದೃಷ್ಟಿ,ಜನಪ್ರತಿನಿಧಿಗಳ ಬದ್ಧತೆ ನೋಡಿದರೆ ಇಂದು ಇರುವ ಜ್ಞಾನ,ಮೌಲ್ಯಗಳೂ ಕಡಿಮೆಯಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಜಾಗತಿಕವಾಗಿ ಯಾರೂ ಆತಂಕ ಪಡುವ ಅವಶ್ಯಕತೆಯೇ ಇಲ್ಲ ಎಂದು ಅಂತಿಮ ತೀರ್ಮಾನಕ್ಕೆ ಬಂದು ಅವರ ಸಿದ್ದತೆಯಲ್ಲಿ ಅವರು ಪ್ರಗತಿಯತ್ತ ಮುಂದೆ ಸಾಗುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ಈ ತರ ನಿರ್ಧಾರಕ್ಕೆ ಬರಲು ಕೆಲ ಕಾರಣ ಮತ್ತು ಉದಾಹರಣೆಗಳು ಇಂ...