ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸರ್ರಾ ಸಣ್ಣದಾ ದೊಡ್ಡದಾ??

ಇಮೇಜ್
ಸರ್ರಾ ಸಣ್ಣದಾ ದೊಡ್ಡದಾ??  ಎರಡು ಸಾವಿರದ ಎಂಟನೇ ಇಸವಿ. ನಾನು ಅಧ್ಯಾಪನಾ ವೃತ್ತಿಗೆ ಸೇರಿದ ಹೊಸತರಲ್ಲಿ ಸಂಡೂರು ತಾಲ್ಲೂಕಿನ ಉಬ್ಬಲಗಂಡಿ ರಾಜಾಪುರ ಅಲ್ಲೇ ವಾಸ  ಮತ್ತು ಕರ್ತವ್ಯ.ನಿರುದ್ಯೋಗ ಇರುವಾಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಬೇಕಾದರೂ ಕೆಲಸ ಮಾಡಬಲ್ಲೇ ಎಂದು ಸುಲಭ ಮತ್ತು ಆತ್ಮವಿಶ್ವಾಸ ದಿಂದ ಹೇಳುತ್ತಿದ್ದ ಆ ಮಾತು ಆ ರಾಜಾಪುರದಲ್ಲಿ ಜೀವನ ಮಾಡಲು ಹೋದಾಗ ತುಸು ಕಷ್ಟ ಅನಿಸಿತು.   ನನಗಿಂತಲೂ ಆರು ತಿಂಗಳ ಮೊದಲು ಸೇವೇಗೆ ಸೇರಿದ್ದ ಮೌನೇಶ ಮತ್ತು ಸತೀಶ  ಒಂದು ಸಣ್ಣ ಜನತಾ ಮನೆಯಲ್ಲಿ  ಇದ್ದರು. ನಾನು ಮಾರ್ಚ್ ತಿಂಗಳಲ್ಲಿ ಜಾಯಿನ್ ಆದ್ದರಿಂದ ಏಪ್ರಿಲ್ ಹದಿನಾಲ್ಕರ ವರೆಗೆ ಅದೇ ಶಾಲೆಯ ಮುಖ್ಯಗುರುಗಳಾಗಿದ್ದ ರಂಗಪ್ಪ ಚಲವಾದಿ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ಅವರು ಆಗ ಕೆಲವು ದಿನಗಳವರೆಗೆ ಮ್ಯಾರಿಡ್ ಬ್ಯಾಚುಲರ್ ಆಗಿದ್ದರಿಂದ ಅಡುಗೆ ಮಾಡಲು ಅವರಿಗೆ ಮನಸು ಮತ್ತು ಮೈ ಬಗ್ಗದೇ ಇದ್ದದ್ದು,ಆಗತಾನೆ ಹೋದ ನನಗೂ ಆಶ್ರಯ ಸಿಕ್ಕಿದ್ದೂ ಇಬ್ಬರಿಗೂ ಪ್ಲಸ್ ಆಗಿ ಅನುಕೂಲ ಆಗಿತ್ತು. ಇಡೀ ಗ್ರಾಮದಲ್ಲಿ ಒಂದು ಮನೆಯೂ ಶೌಚಾಲಯವಿಲ್ಲದ   ಊರು.ಹಳ್ಳಿಯವರಾದ ನಾವೂ ಬೆಳಿಗ್ಗೆ ಡಬ್ಬಿಯೋ/ಚೆಂಬೋ  ಹಿಡಿದುಕೊಂಡು ಬಯಲು ಶೌಚಕ್ಕೆ ಹೋಗುವುದು ಅಭ್ಯಾಸ ಇತ್ತು. ಹೀಗೆ ಒಂದು ದಿನ ಹೊರಗೆ ಹೋದಾಗ  ಸತೀಶ ಮಾಸ್ಟರ್ ಅವರನ್ನು ನೋಡಿ  ನಾಗರಾಜ ಎಂಬ ಅದೇ ಊರಿನ ವ್ಯಕ್ತಿ ಕಿಲ ಕಿಲ ಅಂತ ನಗುತ...

ಕೋವಿಡ್ ಲ್ಲಿ ಕೂಲಿಕಾರ್ಮಿಕರು ಮತ್ತು ಆಟೋ,ಟ್ಯಾಕ್ಸಿ ಡ್ರೈವರ್ ಗಳ ಸ್ಥಿತಿ..

ಇಮೇಜ್
ಆಟೋ ಡ್ರೈವರ್ ಹೇಳಿದ ಜೀವನ ಕಥೆ. ಕಳೆದ ತಿಂಗಳು  ನಾನು ನನ್ನ ಕಾರನ್ನು ಸರ್ವಿಸ್ ಗೆ ಬಿಟ್ಟು ಮನೆಗೆ ಹಿಂದಿರುಗಬೇಕಿತ್ತು. ಮನೆ ಅಲ್ಲಿಂದ  ಸುಮಾರು ಐದು ಕಿಲೋಮೀಟರ್ ದೂರದಲ್ಲಿತ್ತು. ಅಲ್ಲಿಂದ ಮನೆಗೆ ಬರಲು ನೂರು ಮೀಟರ್ ಗಳಷ್ಟು ನಡೆದು ಬರುತ್ತಿದ್ದೆ.ಕೊರೋನಾ ಇತ್ತಾದರೂ ಲಾಕ್ಡೌನ್ ಇರಲಿಲ್ಲ. ಆಗ   ಸುಮಾರು ಐವತ್ತು ವರ್ಷದ ವ್ಯಕ್ತಿಯೊಬ್ಬರು  ಆಟೋ ಚಲಾಯಿಸಿಕೊಂಡು ಬಂದರು.  ನನ್ನ ನೋಡಿ ಸ್ಲೋ ಮಾಡಿ ಎಸ್ ಪಿ ಸರ್ಕಲ್ ಸಾರ್ ಎಂದನು. ನಾನು ಇನ್ನೂ ಸ್ವಲ್ಪ ನಡೆಯುವ ಯೋಚನೆ ಇದ್ದರೂ ಅವರಾಗಿಯೇ ಬಂದು ಕೇಳಿದರು ಅಲ್ಲದೇ ಖಾಲಿ ಬೇರೆ ಹೋಗುತ್ತಿದ್ದ ಎಂದೇಳಿ ಎಷ್ಟು  ಕೊಡಲಿ ಅಣ್ಣಯ್ಯ ಎಂದಿದ್ದಕ್ಕೆ "ಹತ್ತು ರುಪಾಯಿ ಕೊಡಿ ಸಾರ್" ಎಂದನು. ಸುಮಾರು ಎರಡು ಕಿಲೋಮೀಟರ್  ಆ ಸ್ಥಳ.  ಆ ವ್ಯಕ್ತಿಯ ಯೂನಿಪಾರ್ಮ್ ಅಂಗಿಯ ಕಾಲರ್ ಹರಿದು ಹೋಗಿತ್ತು.ಹಾಗೆ ಮಾತಿಗೆಳೆದೆ.  ದಿನಕ್ಕೆ ಎರಡು ಸಾವಿರ  ಆಗತ್ತಾ ? ನಗುತ್ತಾ ಹಿಂತಿರುಗಿ ನೋಡಿ "ಎಲ್ಲಿ ಸಾರ್ ನಾನ್ನೂರು ಐನೂರು ಆದರೆ   ಅದೇ ದೊಡ್ಡದು  ಅದರಲ್ಲೂ ನೂರೈವತ್ತು ಇನ್ನೂರುಪಾಯಿ ಗ್ಯಾಸ್ ಗೆ ಹೋಗತ್ತೆ ಸಾರ್. ಒಂದು ಕಾಲ ಇತ್ತು  ಎರಡು ಸಾವಿರ ಆಗುತ್ತಿತ್ತು ಈಗ ಅದೆಲ್ಲಾ ಕನಸು ಸಾರ್" ಎಂದು ಬೇಸರದಿ ನುಡಿದನು.  ಏನ್ಮಾಡಕ್ಕಾಗತ್ತೆ ಅಣ್ಣಯ್ಯ ನಿನ್ನದು ಆಟೋ ಆದರೂ ಇದೆ ದಿನಕ್ಕೇ ನೂರೋ ಇನ್ನೂ...

ಮದುಚಂದ್ರದ ತಾಣ ಊಟಿ..

ಇಮೇಜ್
ಊಟಿಯ ಪಯಣ.. ನಮ್ಮ ಮದುವೆಗೂ ಮುನ್ನಾ ಊಟಿಗೆ ಹೋಗಬೇಕು ಎಂದು ನಾನು ಕುಮುದಾ ರಮ್ಯ ಚೈತ್ರಕಾಲದಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ಆದರೆ ಮದುವೆಯ ನಂತರ ಊಟಿಗೆ ಹೋಗುವ ನಮ್ಮ ಯೋಚನೆ ಮತ್ತು ಯೋಜನೆ ಸಾಕಾರವಾಗಲಿಲ್ಲ. ಊಟಿ ನೋಡುವ ತವಕ ನಮ್ಮನ್ನು ಬಿಟ್ಟೋಗಿರಲಿಲ್ಲ. ಅಂತೂ ಇಂತು ತನೇಹಾ ಹುಟ್ಟಿ ಮೂರು ವರ್ಷದ ನಂತರ ದಿನಾಂಕ ೧೪-೦೪-೨೦೧೭ ಶಾಲೆಯಲ್ಲಿ ಮಹಾನ್ ಚೇತನ ಅಂಬೇಡ್ಕರ್ ಜಯಂತಿಯನ್ನು ಮುಗಿಸಿಕೊಂಡು ಮಧ್ಯಾಹ್ನದ ಊಟ ಮಾಡಿಕೊಂಡು ನನ್ನ ಕರ್ತವ್ಯದ ಸ್ಥಳ ಅಂತಾಪುರದಿಂದ ಸಂಜೆ ಮೂರು ಗಂಟೆ ಸುಮಾರಿಗೆ ಊಟಿಗೆ ಹೋಗಲು ಶುರುವಾಗಿತ್ತು ನಮ್ಮ  ಪಯಣದ ಹಾದಿ. ನಾನು,ಕುಮುದಾ  ಮಗಳು ತನೇಹಾ, ಮುದ್ದಿನ ಶಿಷ್ಯ ಸಿದ್ದೇಶ ಹಾಗೂ ದೇವರಾಜ ಮತ್ತು ಸಣ್ಣ ರುದ್ರ ಎಂಬ ಅತಿಥಿ ಶಿಕ್ಷಕರು ನಮ್ಮ ಜೊತೆಯಲ್ಲಿ ಇದ್ದರು. ಬೇಸಿಗೆಯಾದ್ದರಿಂದ ನಾಲ್ಕೂ ಕಿಟಕಿಗಳು ಓಪನ್ ಇದ್ದವು. ರೋಡ್ ಪ್ರೀ ಇದ್ದರೆ ನನ್ನ ಗಾಡಿಯ ವೇಗ ಕನಿಷ್ಠ  110-120 km/h ಇರುತ್ತದೆ. ಅದರಂತೆ  ಬಳ್ಳಾರಿಯಿಂದ ನಂಜನಗೂಡಿಗೆ ಹೋಗಿ ಅಲ್ಲಿ ರಾತ್ರಿ ಉಳಿದು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ಅಲ್ಲಿಂದ ಊಟಿಗೆ ಹೊರಡುವುದು ನಮ್ಮ ಪ್ಲಾನ್ ಆಗಿತ್ತು.  ಅದೆಷ್ಟು ಬಾರಿ ಮೈಸೂರಿಗೆ ನಾವು ಜಾಲಿರೈಡ್ ಹೊಗಿದ್ದೇವೋ ಗೊತ್ತಿಲ್ಲ. ಪ್ರತಿ ಬರಿಯೂ  ವಿಶೇಷ ವಿಭಿನ್ನ.. ಅಂದು ಶ್ರೀರಂಗ ಪಟ್ಟಣ ದ ಬಳಿ ಯಾವುದೂ ಒಂದು ಹೋಟೆಲ್ ಲ್ಲಿ  ವೆಜ್ ಊಟವನ್ನು ಪಾರ್...

ಹೋಮ,ಹವನ ಮತ್ತು ಪ್ರಾಣಿ ಬಲಿಕೊಟ್ರೆ ಕೊರೋನಾ ಹೋಗತ್ತಾ?

ಇಮೇಜ್
ಇತ್ತೀಚಿನ ದಿನಗಳಲ್ಲಿ ಕೊರೊನಾ ಹೆಸರಿನಲ್ಲಿ ಮಾಡುತ್ತಿರುವ  ಪೂಜೆ,ಹೋಮ ಹವನ ಮೌಢ್ಯಾಚರಣೆ ಹಿಂದಿಗಿಂತಲೂ ಇಂದು ಅಧಿಕ ಆಗಿದೆ ಅದರ ಬಗ್ಗೆ ಒಂದಷ್ಟು ನೋಡುವ..  ಮೌಡ್ಯ -೧ ಕೊರೋನಾ ನಿಯಂತ್ರಣಕ್ಕೆ  ದೇವರಕಾಯಿ: ಮನ್ನೇಕೊಟೆ ಎಂಬುದು ಚಳ್ಳಕೆರೆ ತಾಲೂಕಿನ ಸುಮಾರು ಎರಡುಸಾವಿರ ಜನಸಂಖ್ಯೆ ಇರುವ ಗ್ರಾಮ ನನ್ನ ತವರಿನ ನೆರಹೊರೆಯ ಗ್ರಾಮ. ಲಾಕ್ ಡೌನ್ ಘೋಷಣೆ ಮಾಡಿದ ನಂತರ ಬೆಂಗಳೂರಿನಿಂದ ತವರಿಗೆ ಹಿಂದುರುಗಿದ ಕಾರಣದಿಂದ ಅಲ್ಲಲ್ಲಿ ಸೊಂಕು ಹರಡಿ ಸುಮಾರು ಸಕರಾತ್ಮಕ(positive ) ಆಗಿದ್ದಾರೆ. ಮೂಗಿರುವವರೆಗೆ ನೆಗಡಿ ಕೆಮ್ಮು ತಪ್ಪಿದ್ದಲ್ಲ ಹೋಗತ್ತೆ ಬಿಡು ಅದೇನು ಮಹಾ ಎಂದು ಉದಾಸೀನ ಮಾಡಿದುದರ ಫಲವಾಗಿ ಒಂದೇ ಗ್ರಾಮದಲ್ಲಿ ಮೇ ತಿಂಗಳಲ್ಲಿ ಹದಿನೈದಕ್ಕೂ ವಿವಿಧ ವಯಸ್ಸಿನ ಜನರು ಅಸುನೀಗಿದ್ದಾರೆ. ಇಡೀ ಊರನ್ ಊರೇ ದಂಗು ಬಡಿದಂತಾಗಿ ಸ್ಥಳೀಯ ಆಡಳಿತ ವೈದ್ಯಕೀಯ ನೆರವು ಮತ್ತು ಆತ್ಮಸ್ಥೈರ್ಯ ಸಿಗದೇ  ಅಲ್ಲಿನ ಜನರು  ಕೋವಿದಮ್ಮಳ ಓಡಿಸಲು ಮಾರಿಯೇ ಸರಿ ಎಂದು  ಅಷ್ಟ ದಿಕ್ಕಿನಲ್ಲಿ ಮಾರಿದೇವರಿಂದ ಮಂತ್ರಿಸಿದ  ಕಾಯಿಗಳನ್ನು  ಕೆಂಪು ವಸ್ತ್ರ ಬಳಸಿ ಕಟ್ಟಿದ್ದಾರೆ. ಇದರಿಂದ  ಗ್ರಾಮಕ್ಕೆ ಕೋವಿದಮ್ಮಳಿಂದಾಗುವ ಬಲಿ ನಿಲ್ಲು ಬಹುದು ಎಂಬುದು ಈ ಜನರ ನಂಬಿಕೆಯಾಗಿದೆ.  ಮಂತ್ರಿಸಿದ ಕಾಯಿ ಕಟ್ಟಿರುವುದು ಮೌಢ್ಯ -೨ ಬುಡ್ಡೇಕಲ್ಲಿಗೆ ನೀರಿನ ಅಭಿಷೇಕ: ಒಕ್ಕಲು ತುಳಿಸಲು ಮೇ...

ಕಾಯಿನ್ ಪೋನು-ಕಬ್ಬಿಣದ ಬಿಲ್ಲೆಯೂ..

ಇಮೇಜ್
ಕೋಟೆಯ ನಾಡಿನಲ್ಲಿ ಓದಬೇಕು ಅನ್ನೋದು ನಾನು ಚಳ್ಳಕೆರೆಯಲ್ಲಿ ಹೈಸ್ಕೂಲ್ ಓದುತ್ತಿದ್ದಾಗ ಅಂದುಕೊಳ್ಳುತ್ತಿದ್ದೆ. ಪ್ರಾಥಮಿಕ ಶಿಕ್ಷಣವನ್ನು ಗ್ರಾಮಾಂತರ ಪ್ರದೇಶದಲ್ಲಿ ಮುಗಿಸಿದ ನಾನು ಹೈಸ್ಕೂಲಿಗೆ ತಾಲ್ಲೂಕು ಕೇಂದ್ರಕ್ಕೆ ಬಂದೆ. ಪಿ ಯು ಶಿಕ್ಷಣವನ್ನು ಇನ್ನೊಂದು ಮೆಟ್ಟಿಲು ಮೇಲೇರಿ ಜಿಲ್ಲಾ ಕೇಂದ್ರದಲ್ಲಿ ಮುಗಿಸಬೇಕು ಅನ್ನುವುದು ನನ್ನ ಕನಸಾಗಿದ್ದರೂ ಎಸ್ ಎಸ್ ಎಲ್ ಸಿ ಪಾಸ್ ಆದರೆ ನೋಡುವಾ  ಎಂದು ಅಂದುಕೊಂಡು  ಸುಮ್ಮನಾಗಿದ್ದೆ. ಅದೃಷ್ಟವಶಾತ್ ಹತ್ತನೇ ತರಗತಿಯನ್ನು ಯಾವುದೇ ಹೆಚ್ಚುವರಿ ದಂಡಯಾತ್ರೆ ಇಲ್ಲದೇ ಮೊದಲ ಪ್ರಯತ್ನದಲ್ಲಿ ಯಶಸ್ವಿ ಆದ ಖುಷಿಗೆ    ತೆಲುಗು ಜ್ಯೂನಿಯರ್ ಎನ್ ಟಿ ಆರ್ ನ  'ಆದಿ' ಪಿಚ್ಚರ್ ನೋಡಿ ಮನೆ ಮಂದಿಗೆಲ್ಲಾ ಹೇಳಿ  ಸಂಭ್ರಮಿಸಿದ್ದೆ.ಮನೆಯಲ್ಲಿ ನಮ್ಮ ಅಣ್ಣ ಹತ್ತು ನಮ್ಮ ಭಾವ ಲ್ಯಾಬ್ ಟೆಕ್ನಿಷಿಯನ್ ಗೆ ಆಡ್ಮಿಷನ್ ಆಗಬೇಕೆಂದು ನಮ್ಮ ಭಾವ  ಮತ್ತು ಅವರ ಸಮಕಾಲೀನ ಅವರ ತಮ್ಮ ಶಿವರಾಮನಿಗೂ ನನಗೂ  ಸೀಟ್ ವಿಚಾರಿಸಿ ಇಟ್ಟಿದ್ದರು. ನಾನೂ ಬಹುತೇಕ ಲ್ಯಾಬ್ಗೆ ಪಿಕ್ಸ್ ಆಗಿದ್ದೆ. ಆದರೆ ಬದಲಾದ ಸನ್ನಿವೇಶದಲ್ಲಿ ಏನಾಯಿತೋ ಗೊತ್ತಿಲ್ಲ  ನಮ್ಮಿಬ್ಬರನ್ನು  ಚಿತ್ರದುರ್ಗದ ಚಂದ್ರವಳ್ಳಿಯ   'ಎಸ್ ಜೆ ಎಂ ಕಲಾ ಮತ್ತು ವಾಣಿಜ್ಯ ಕಾಲೇಜಿಗೆ'  ಸೇರಿಸಿ ನಮಗೂ ಅಚ್ಚರಿ ಮೂಡಿಸಿದ್ದರು.ನಮ್ಮ ಜೊತೆಗೆ ನನ್ನ ಸೋದರ ಸಂಬಂಧಿಯಾದ ನಾಗರಾಜ   ಸೈ...

ಬೇಕಲ್ ಕೋಟೆ..

ಇಮೇಜ್
ಬೇಕಲ್ ಕೋಟೆ.. 2019 ರ ಮೇ 18 ರಂದು ಕೇರಳದ ಮನ್ನಾರ್ ಗೆ ಹೋಗಬೇಕು ಎಂದು ಅಂದಿನ ಪಯಣದ ಗುರಿ ನಿರ್ಧಾರ ಆಗಿತ್ತು. ನಮ್ಮ ಪಯಣದ ಗುರಿ ದೂರ ಇದ್ದರೆ ನೇರವಾಗಿ ಅಲ್ಲಿಗೆ ಹೋಗಿ ತಲುಪುವುದಾಗಿರದೇ ಪಯಣದ ಹಾದಿಯಲ್ಲಿ ಬರುವ ಪ್ರತಿಯೊಂದು ಸ್ಥಳಗಳನ್ನು ಆಸ್ವಾಧಿಸುತ್ತಾ ದಾರಿಯುದ್ದಕ್ಕೂ ಸಿಗುವ ಝರಿ,ತೊರೆ ನದಿಗಳನ್ನು ನೋಡುತ್ತಾ,ಅಲ್ಲಿ ಸಿಗುವ ಹಣ್ಣುಗಳ ರಾಶಿಯೊಂದಿಗೆ ಮಂದವೇಗದ ಪಯಣ ನಮ್ಮದು.ಅಂದು ರಾತ್ರಿ ಬಾಳೇಹೊನ್ನೂರು  ರಂಭಾಪುರಿ ಪೀಠದಿಂದ ನಮ್ಮ ಪಯಣ  ಮುಂಜಾನೆ ಐದುಗಂಟೆಗೆ ಆರಂಭ.ಮಲೆನಾಡಿನ ಮಧ್ಯಭಾಗ ಆಗಿದ್ದರಿಂದ ಈ ಮೊದಲು ಮೂರು ನಾಲ್ಕು ಬಾರಿ ಒಳ್ಳೆಯ ಹದಮಳೆ ಬಿದ್ದಿದ್ದರಿಂದ ಮುಂಜಾನೆಯ ದಟ್ಟ ಮಂಜಿನ ಜೊತೆಗೆ  ಚಳಿಯೂ ಆಗುತ್ತಿತ್ತು.ಬಾಳೆಹೊನ್ನೂರಿನ ಬಸ್ಟಾಂಡ್ ಎದುರು ಯಾವುದೋ ಒಂದು ಹೋಟೆಲ್‌ ನಲ್ಲಿ ಮಲೆನಾಡಿನ ಕಾಫಿ ಕುಡಿದು  ಕಾರು ಹತ್ತಿ ಹೊರಟೆವು. ಬಾಳೆಹೊನ್ನೂರು ಕುಮುದಾಳ ಹುಟ್ಟೂರು.ಕುಮುದಾಳ ಬಾಲ್ಯದ ಊರು ಆಗಿದ್ದರಿಂದ ಅವಳ ಬಾಲ್ಯದಲ್ಲಿದ್ದ ಅಂದಿನ ಮಲೆನಾಡಸೊಬಗನು ಕೇಳುತ್ತಾ  ಕಾರಲ್ಲಿ ಬಿಸಿಗಾಳಿ ಹಾಕಿ ಚಳಿಕಾಯಿಸಿಕೊಳ್ಳುತ್ತಾ  ಹೊರನಾಡಿನ ಅನ್ನಪೂರ್ಣೆಯ ದರ್ಶನಕ್ಕೆ ನಮ್ಮ ದಾರಿ ಸಾಗಿತ್ತು. ಆ ರಸ್ತೆಯು  ಪಕ್ಕ ಭದ್ರಾನದಿಯ ಇಕ್ಕೆಲದಲ್ಲೇ ಸಾಗುವ ನಮಗೆ ಕೆಲದೂರದವರೆಗೆ ದಟ್ಟ ಇಬ್ಬನಿಯೂ ಕಂಡರೆ ಇನ್ನೂ ಕೆಲದೂರದವರೆಗೆ ಸಾಧಾರಣವಾದ ಮಂಜು  ಸಿಂಚನ ಆಗುತ್ತಿತ್ತು. ಹದ...

ನಾನು ಮತ್ತು ದೆವ್ವ part-5

*ದೆವ್ವ ಮತ್ತು ನಾನು..* (Part-5) *೨೦೧೨ ರಲ್ಲಿ ಆಗ ನಾನು ನನ್ನ ದುಡಿಮೆಯಲ್ಲಿ ಹೊಸ ಟೂ ವೀಲರ್ ಬೈಕ್ ನ್ನು ಕೊಂಡುಕೊಂಡಿದ್ದೆ.ಅದರಲ್ಲೇ ನಾನು ಬಳ್ಳಾರಿ ಸಿಟಿಯಿಂದ ನನ್ನ ಕರ್ತವ್ಯದ ಸ್ಥಳಕ್ಕೆ ಹೋಗಿಬರುತ್ತಿದ್ದೆ.  ಹೀಗೆ ಮುಂದುವರೆದಿತ್ತು.ಹಲಕುಂದಿ ಮಠದ ಎದುರುಗಡೆ ಆಗಾಗ ಬೀಕರ ಅಪಘಾತಗಳಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಪಾದಚಾರಿಗಳು ಅಸುನೀಗುತ್ತಿದ್ದರು. ಆದ್ದರಿಂದ ಆ ಮಠದ ಎದುರುಗಡೆ  ಮೈನ್ಸ್ ಲಾರಿಗಳು ಹಾಗೂ ಇತರೆ ವಾಹನಗಳ ವೇಗ ತಗ್ಗಿಸಲು ರೋಡ್ ಹಂಪ್ಸ್ ಗಳನ್ನು ಹೆಚ್ಚವರಿಯಾಗಿ ಹಾಕಿದ್ದರು.ನನ್ನ ಅಲೆದಾಟ ಹೀಗೆ ಇದ್ದಾಗ ಒಂದು ದಿನ  ಬೆಳಿಗ್ಗೆ ಶಾಲೆಗೆ ಹೋಗುವಾಗ ಒಂದು ತಾಯಿ ಮತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಒಂದೇ ಸಮಯದಲ್ಲಿ ಲಾರಿಗೆ ಸಿಕ್ಕು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇದಾಗಿ ಒಂದುವಾರ ಆಗಿರಬೇಕು ನಾನು ಗಾಡಿಯಲ್ಲಿ  ಶಾಲೆಗೆ ಹೋಗುವಾಗ ಆ ಮಠದ ಎದುರು ಹಂಪ್ಸ್  ಮೇಲೆ ಹತ್ತುತ್ತಿದ್ದಂತೆ  ಏನಾಯಿತೋ ಗೊತ್ತಿಲ್ಲ  ಕ್ಷಣಾರ್ಧದಲ್ಲಿ ಇದ್ದಕ್ಕಿದ್ದಹಾಗೆ ಗಾಡಿಯಿಂದ ಬಿದ್ದೆ. ಬಿದ್ದ ರಭಸಕ್ಕೆ ಎಡ ಕಾಲು ಪಾದ ಹಾಗೂ ಮೊಣಕಾಲು ತರಚಿ ಹೋಯಿತು ಬ್ಯಾಗ್ ನಲ್ಲಿದ್ದ ಲಂಚ್ ಬಾಕ್ಸ್ ಜಸ್ಟ್ ಓಪನ್ ಆಗಿತ್ತು ಆದರೆ  ಅಷ್ಟಾಗಿ ಚೆಲ್ಲದ ಸ್ಥಿತಿಯಲ್ಲಿ ಇತ್ತು.ಅಂದು ವೇಗ ಕನಿಷ್ಠ ಮಟ್ಟದಲ್ಲಿದ್ದದುರಿಂದ ಏನೋ ದೊಡ್ಡ ಮಟ್ಟದ ಪೆಟ್ಟು ಆಗಲಿಲ್ಲ ಅಲ್ಲದೆ ಆ ಕ್ಷಣ ನನ್ನ ಹಿಂದೆ ಮುಂದೆ ಯಾವ ದೊ...

ನಾಳೆ ಬಾ..

ಇಮೇಜ್
ನಾಳೆ ಬಾ.. ನಾನು ಅಂದು ಶಾಲೆಗೆ ಒಂಬತ್ತು ಗಂಟೆಯ ಒಳಗೆ ಹೋಗಿದ್ದೆ. ಶಾಲೆಯ ಬಾಗಿಲನ್ನು ತೆರೆದಿರಲಿಲ್ಲ. ಒಬ್ಬನೇ ಏನ್ ಮಾಡವುದೆಂದು  ನಮ್ಮ ದೋಸ್ತಿಗಳು ಇರುವ ಏರಿಯಾಕ್ಕೆ ಹೋದೆ ಅಲ್ಲಿ ಹೋಗಿ ನೋಡಿದರೆ ಜನರೆಲ್ಲಾ ಗುಂಪು ಗುಂಪಾಗಿ ಒಂದು ಮನೆಯ ಬಾಗಿಲಿಂದ ಇನ್ನು ಮನೆಯ ಬಾಗಿಲಿಗೆ ಹೋಗುತ್ತಿದ್ದರು. ಅದನ್ನು ಸ್ವಲ್ಪ ದೂರದಲ್ಲಿ ನೊಡಿದ ನಾನು ಏನೋ ಜಗಳ ಇರಬೇಕು ಎಂದು ಅಂದು ಕೊಂಡು ಹತ್ರ ಹೋದರೆ ಜಗಳ ಅಲ್ಲ ಹಂಗಂತೆ ಹಿಂಗಂತೆ ಎಂದು ಮನೆಯ ಬಾಗಿಲಿಗೆ "ನಾಳೆಬಾ" ಎಂದು ದೇವರಾಜ ಬಾಗಿಲ ಮೇಲೆ ಬರೆಯುತ್ತಿದ್ದ. ರಾತ್ರಿಯ ವೇಳೆ ಯಾರಾದರೂ ಹೊರಗಿನಿಂದ ಮಾತಾಡಿಸಿದರೆ ಬಾಗಿಲು ತೆಗಿಬೇಡಿ ಎಂದು ಹೇಳುತ್ತಿದ್ದರು. ಅವರ ಮಾತಿನ ಮದ್ಯೆ ಅಕ್ಕ ಪಕ್ಕದ ಊರುಗಳ ಹೆಸರುಗಳೂ ತೇಲಿ ಬರತ್ತಿದ್ದವು.ರೆಡ್ಡಿಹಳ್ಳಿಯಾಗೆ  ಹಂಗೆ ಅಂತೆ ಆಗಿದ್ದು..ನನಗೆ ವಿಷಯ ಏನು ಅಂತ  ಅರ್ಥ ಆಗಲಿಲ್ಲ. ನಮ್ಮ ಚಿಕ್ಕಮ್ಮ ಒಬ್ಬರು ಸುಮಂಗಳಮ್ಮ ಅಂತಾ ಇದ್ದರು.ಅವರೂ  ಬಾರಿ ಮಾತನಾಡುತ್ತಿದ್ದರು.ನಾನು ಹತ್ತಿರ ಹೋಗಿ ಏನಾಯಿತು ಚಿಕ್ಕಮ್ಮ ಎಂದೆ. ಅಯ್ಯೋ ನಾಗೇಂದ್ರ ಬಹಳ ದೊಡ್ಡ ಕತೆ ಇದೆಯೆಂದು ಹೇಳಲು ಶುರುಮಾಡಿದರು.. "ದೇವರೆಡ್ಡಿಹಳ್ಳಿಯಲ್ಲಿ  ಅವಿವಾಹಿತ ಕನ್ಯೆಯೋರ್ವಳು ಆಕಸ್ಮಿಕವಾಗಿ ಏನೋ ಆಗಿ ಸತ್ತೋಗಿದ್ದಾಳಂತೆ.ಮದುವೆ ಆಗಿರಲಿಲ್ಲ ಅಲ್ಲಾ ಅದಕ್ಕೆ ಅವಳು ದೆವ್ವ ಆಗಿ ಸುತ್ತಲೂ ಹತ್ತೂರು ತಿರುಗುತ್ತಿದ್ದಾಳಂತೆ" ಅಂದರು. ಆಯಮ್ಮ ತಿರುಗಿದರೆ ...

ಹಲಸಿನಹಣ್ಣು..

ಇಮೇಜ್
  ಹಲಸಿನ ಹಣ್ಣು ನನಗೆ ಹಲಸಿನ ಹಣ್ಣು ಅಂದರೆ ಬಲು ಇಷ್ಟ.ಬಾಲ್ಯದಲ್ಲಿ  ಇದ್ದಾಗ  ಸಿಹಿ ಸಿಹಿಯಾದ ಹಲಸಿನ ತೊಳೆಗಳು ತಿನ್ನುತ್ತಿರುವಾಗ ಸಿಹಿಯ ಸವಿಗೆ ತಿಂದದ್ದು ತೃಪ್ತಿ ಆಗದೇ ಇದ್ದದ್ದುರಲ್ಲಿಯೇ ತೃಪ್ತಿ ಪಡಬೇಕಿತ್ತು. ಹಣ್ಣೆಲ್ಲ ತಿಂದ ಮೇಲೆ  ಉಳಿದ ಬೀಜಗಳನ್ನು ಒಲೆಗೆ ಹಾಕಿ ಸುಟ್ಟುಕೊಂಡು ತಿನ್ನುತ್ತಿದ್ದೆವು.ಹೇಳಿ ಕೇಳಿ ನಮ್ಮದು ಬರ ಬಯಲು ಸೀಮೆ ಆದ್ದರಿಂದ ಹಲಸು ಮಾವು ಇವೆಲ್ಲವೂ ನಮಗೆ ಅಪರೂಪವೇ ಆಗಿದ್ದವು.ನಮಗೆ ಎರಡೋ ಮೂರನೇ ತರಗತಿಯಲ್ಲೋ  'ವಾಸನೆಯ ಬೆಲೆ' ಎಂಬ ಪಾಠ ಇತ್ತು.ಹಲಸಿನ ಹಣ್ಣು ಕೊಯ್ದನಂತರ ಅದರ ವಾಸನೆಯನ್ನು ಬೇರೆಯವರಿಗೆ ತಾಗದಂತೆ ತಡೆಯಲಾಗದೇ ಅವರೂ ಕೂಡ ಯಾರೋ ಹಲಸಿನ ಹಣ್ಣು ಕೊಯ್ದಿದ್ದಾರೆ ಎಂದು  ಹೇಳಿ ಯಾರು ಕೊಯ್ದಿರೋದು ಅಂತ ಪತ್ತೆಹಚ್ಚುವರು ನೋಡಿ ಆಗ ನನಗೆ ಅನಿಸಿದ್ದು ವಾಸನೆಗೂ ಬೆಲೆಯಿದೆ ಅಂತ.ಚಿಕ್ಕವರಿದ್ದಾಗ ಹಲಸಿನ ಸೀಜನ್ ನಲ್ಲಿ ಒಂದು  ಹಣ್ಣು ನಮಗೆ ಸಿಗುತ್ತಿತ್ತಾದರೂ ನಾವಿರುವ ಸಂಖ್ಯೆಗೆ ಅದು ಸಾಲುತ್ತಿರಲಿಲ್ಲ. ನಾನು ಪ್ರೌಢಶಾಲಾ ದಿನಗಳಲ್ಲಿ ತಳ್ಳುವ ಗಾಡಿಯಲ್ಲಿ ಕೊಯ್ದ ಮಾರುವವರ ಬಳಿ ರುಪಾಯಿಗೆ ಎರಡೋ ಮೂರೋ ಕೊಂಡು ತಿನ್ನುತ್ತಿದ್ದೆ.* *ಹಲಸಿನ ಹಣ್ಣು ಹೊಟ್ಟೆ ತುಂಬಾ ತಿಂದದ್ದು ಎಂದರೆ ಮಲೆನಾಡಿನ ಅಳಿಯನಾದ ಮೇಲೆ.ರಜಾ ದಿನಗಳಲ್ಲಿ ಸ್ವಲ್ಪಮಟ್ಟಿಗೆ ತಣ್ಣಗಿರುವ ಎಂದು ಮಲೆನಾಡಿಗೆ ಬರುತ್ತಿದ್ದ ನಾನು ಇರುವಷ್ಟು ದಿನಗಳೂ ಹಲಸು ಮನೆಯಲ್ಲಿ ಕೊಯ್ದ ...

ಐಸ್.. ಐಸ್..

ಇಮೇಜ್
ನಮ್ಮದು ವಲಸೆ ಮತ್ತು ತಿಮ್ಮಣ್ಣನಹಳ್ಳಿಗಳ ಮದ್ಯದಲ್ಲಿ ಇರುವ ತೋಟದ ಮನೆ.ಎರಡೂ ಹಳ್ಳಿಗಳೂ ಸಮ ಸಮಾನ ಅಂತರ  ಯಾವುದು ಹೆಚ್ಚು ಇಲ್ಲ ಕಡಿಮೆಯೂ ಇರಲಿಲ್ಲ. ಅದು ಗ್ರಾಮೀಣ ರಸ್ತೆ ನನಗೆ ಬುದ್ದಿ ಬರುವುದಕ್ಕೆ ಮುಂಚಿನಿಂದಲೂ ಅದು ಡಾಂಬರ್ ರಸ್ತೆಯೇ ಆಗಿತ್ತು. ಆಗೊಂದು ಈಗೊಂದು ಬಸ್ ಗಳೂ ಓಡಾಡುತ್ತಿದ್ದವು. ನನ್ನದೂ  ರಜೆಯ ದಿನಗಳು ಅನಿವಾರ್ಯವಾದರೆ ಇತರೆ ದಿನಗಳಲ್ಲೂ ದನಗಳು/ಎತ್ತುಗಳನ್ನು ಮೇಯಿಸುವುದು ಸಾಮಾನ್ಯವಾಗಿತ್ತು. ಹೀಗೆ ದನಗಳ ಹಿಡಿದು ಮೇಯಿಸುವಾಗ ಎರಡೂ ಹಳ್ಳಿಗಳ  ಪೈಕಿ ಯಾವುದೇ ಒಂದು ಹಳ್ಳಿಯಿಂದ 'ಪೊಂ..' ಎಂಬ ಶಬ್ಧ ಕೇಳಿದ ತಕ್ಷಣ ನಾನು ರಸ್ತೆಯಿಂದ  ಎಷ್ಟೇ ದೂರ ಇದ್ದರೂ,  ನಮ್ಮ ದನಗಳು ಮೆಯ್ಯದೇ ಇದ್ದರೂ ನಾನು ಮಾತ್ರ ರಸ್ತೆಯ ಪಕ್ಕಕ್ಕೆ ಹಾಜರ್! ದನಗಳು ಪರ ಪರ ಎಂದು ಹುಲ್ಲು ಕಿತ್ತು ತಿನ್ನುವ ಶಬ್ಧದ ನಡುವೆ ನಮ್ಮ ಪುಲ್ ಕಾನ್ಸನ್ಟ್ರೇಟಿಂಗ್ ಇದ್ದದ್ದು ಆ "ಪೋಂ" ಎಂಬ ಶಬ್ದದ ಮೇಲೆ. ಅವನೋ ಊರೆಲ್ಲಾ ಸುತ್ತಾಡಿಕೊಂಡು ಗ್ರಾಮದ ಅಂಚಿಗೆ ಬಂದಾಗ ಐಸ್ ಗಿರಾಕಿಗಳಿಗೆ ಒಂದೆರಡು ಬಾರಿ ಜೋರಾಗಿಯೇ ಪೊಂ ಎಂದು  ಕೂಗಿ ಯಾರಾದರೂ ಹುಡುಗರು ಏನಾದರೂ ಹಿಡಿದು ತರುವರೇನೋ ಎಂದು ಹಿಂದೆ ತಿರುಗಿ ನೋಡಿ ನೋಡಿ ಬರುತ್ತಿದ್ದ. ಆ ತರ ಕೂಗುವ ದ್ವನಿ ಬಂದರೆ ಇನ್ನೂ ಕೆಲವೇ ನಿಮಿಷಗಳಲ್ಲಿ ಅವನು ಬರುವವನಿದ್ದರಿಂದ ಅವನು ರಸ್ತೆಯಲ್ಲಿ ಹಾದು ಹೋಗುವಾಗ ಯಾವುದೇ  ರೀತಿಯಿಂದಲೂ ತಪ್ಪಿಸಿಕೊಂಡು ಹೋಗದಂತೆ...

ಕೊರೊನಾ..‌ಕೊರೋನ..

ಕೊರೊನಾ.. ಕೊರೋನಾ.. ದೇಶ ದೇಶಗಳ ಎಲ್ಲೇ ಮೀರಿ   ರಾಜ್ಯ ರಾಜ್ಯದೊಳು ತೂರಿ ತಲುಪಿತು  ಹಳ್ಳಿ ಊರು ಕೇರಿ. ಅದೇ  ಮಾರಿ ಕೋರೋನಾ . ನಾ ಬಲಶಾಲಿ ಎಂದು  ಎದೆಯುಬ್ಬಿ ಬೀಗುತ್ತಿದ್ದೆ..  ನೀ ಅಂಗೈಯಲ್ಲೇ ಬಂದು ಅವಿತು ಕುಳಿತದ್ದು ಮರೆತಿದ್ದೆ.. ಹೊಯ್ ಕೊರೊನಾ ನಿನ್ನ ತವರಂತೆ ವುಹಾನ ನೀನೆ ಕಕ್ಕಬೇಕು ನಿಜನಾ ಹತ್ತಿಕ್ಕಿದೆಯಲ್ಲಾ ನಮ್ಮೆಲ್ಲರ ಜೀವ, ಜೀವನನಾ.. ಅಲ್ಪ ಸ್ವಲ್ಪ ಉಳಿದಿದ್ದ ಸಂಸ್ಕಾರ  ಅದನೂ ನುಂಗಿದೆ  ಅಷ್ಟೇ ಅಲ್ಲ ನಮ್ಮೆಲ್ಲರ ಅಮೂಲ್ಯ ಹಿತ ಬಂಧುಗಳ ಬಲಿ ಪಡೆದ ರಕ್ಕಸ ನೀನಾದೆ.. ಸಣ್ಣವನೆಂದು ನಿರ್ಲಕ್ಷಿಸುವ ಜನರಿಗೆ ತಕ್ಕ ಪಾಠ ಕಲಿಸಿದೆ ಜಗತ್ತಲ್ಲಿ ಎಲ್ಲವೂ ಬಂದ್ ಆದರೆ ಬಡಾಯಿ ಕೊಚ್ಚಿಕೊಳ್ಳುವ ಬಾಯಿ ಆಗಲಿಲ್ಲ ಬಂದ್.. ನಿನ್ನಾಗಮನ ಪೂರ್ವ ಎಲ್ಲಾ ಕೆಲಸಕ್ಕೂ ನಿಲ್ಲಬೇಕಿತ್ತು ಲೈನ್.. ಆದರೆ  ಈಗ ಎಲ್ಲದೂ ಆಗಿದೆ ಆನ್ಲೈನ್..  ಆಡುತ್ತಾ ಹಾಡುತ್ತಾ ಕುಣಿಯುತ್ತಾ ನಲಿಯುತ್ತಿದ್ದರು ಕಲಿತು ನಿರ್ಭಯವಾಗಿ.. ಮಕ್ಕಳು ಮೊಬೈಲ್ ನೊಡಬಾರದೆಂದವರು ಕೊಡಬೇಡಿ ಎಂದವರು  ಕೊಡುವರು ಎಲ್ ಕೆಜಿ ಯೂಕೆಜಿ ಮಕ್ಕಳೆಲ್ಲಾ ಮನೆಯಲ್ಲೇ ಕಲಿಯುತ್ತಿದ್ದಾರಂತೆ  ಮೊಬೈಲಲ್ಲಿ ನಿನ್ನ ಭಯಕ್ಕೆ... ಆಗ ಬರುತ್ತಿದ್ದರು ಮನೆಯಿಂದ ಶಾಲೆಗೆ ಈಗ ಹೋಗುತ್ತಿದ್ದಾರೆ ಮನೆಯಿಂದ ಕೂಲಿಗೆ. ಹಾಗೆ ಕೆಲ ಶಾಲಾಬಾಲೆಯರು ಗಂಡನ ಮನೆಗೆ.. ಇಲ್ಲಿ  ಬೆಲೆ ಕಟ್ಟಲಾಗುತ್ತಿದೆ ಜೀವ ಮತ್ತು ಸಂಬಂಧಗಳಿಗೆ ಸ...

ಮಾತೆ ಮತ್ತು ಗೋ ಮಾತೇ..

ಮಾತೆ ಮತ್ತು ಗೋಮಾತೆ.. ಹವ್ಯಾಕ ದೇಶದ ಅರಸಿ ನೀನು ಪಶುಪತಿಯ ಸತಿಯೂ ನೀನು ನೀಡುವೆ  ಎನಗೆ ನೀನು ಭೂಲೋಕದ ಅಮೃತ ಹೈನು ಹವಿಸ್ಸನ್ನು ನೀಡುವ ಗೋವು ನೀನು  ನೀನಾಗಿಹೆ ಈ ಧರಿತ್ರಿಯ ಕಾಮದೇನು.. 'ಅಮ್ಮಾ' ಜಗದ ಮೂಲ ನೀನಮ್ಮ  ನಮ್ಮ ದೇವರು ನೀನಮ್ಮ ಈ ಜಗದ ಸಿರಿಯ ಸೀಮಾಂತಿನಿ ನೀನು ಆದಿಯ ಆರ್ಯೆ ನೀನು ಈ ಜಗದ ಮಾಯೆಯೂ ನೀನು... ಈ ಭರತ ಭಮಿಯ ದೇವರ  ಪ್ರತಿರೂಪ   ಮಾತೆ ಮತ್ತು ಗೋಮಾತೆ ಸಾತ್ವಕತೆಯ ಸಾಧ್ವಿಯರು ನೀವು   ಈ ಜಗದ ಜನ ಅಂದುಕೊಂಡಂತೆ ಅಬಲೆಯರು ನೀವಲ್ಲ ಸಬಲೆಯರು ನೀವು.. ಧನಧಾನ್ಯದ ಮೂಲ ನೀವು ಮಹಾಸತಿಯರು ನೀವು.. ನೀವೀಜಗದ ಅರಕ್ಷಕರು ನಿಮಗಿಲ್ಲ ರಕ್ಷಕರು  ನಿಮ್ಮನು ಸಿಕ್ಕ ಸಿಕ್ಕಲ್ಲೇ ಭಕ್ಷಿಸುತಿಹರು.. ದನ ಸಾಕುತಿಹರು ಧನಕ್ಕಾಗಿ ಇವಳನ್ನು  ಧನಕ್ಕಾಗಿ ದಹಿಸುತಿಹರು... ಗೃಹಿಣಿಗೆ ಗೃಹಬಂಧನ  ಗೋವಿನ ಹರಣ ಮುಕ್ತವಾಗಬೇಕಿದೆ ಎಂದ ಇಂದ್ರ... ✍️ನಾಗೇಂದ್ರ ಬಂಜಗೆರೆ.

ಎಣ್ಣೆ.. ಎಣ್ಣೆ..

ನನ್ನವಳಿಗೆ ನಾ ಕೇಳಿದೆ ಲೇ ಮೊದಲೆಲ್ಲ ನೀ  ಹತ್ತಿರ ಕರೆದು ಪಕೋಡ,ನಿಪ್ಪಟ್ಟು.ಚಕ್ಕಲಿ  ಕೋಡುಬಳೆ ಕೊಡುತ್ತಿದ್ದೆ ನೀ ಕರಿದು.. ಈಗ ನಾಲ್ಕೈದು ತಿಂಗಳಿನಿಂದ ನೀ ಯಾಕೆ ಏನನ್ನು ಕರೆದು ಕೊಡುತ್ತಿಲ್ಲ ಕರಿದು? ಅದಕ್ಕೆ ಅವಳೆಂದಳು ನನ್ನ ಇನಿಯ ನೀ ನನಗೆ ಜೊತೆಯಾದಾಗ   ನಿ ತೂಗತ್ತಿದ್ದೆ ನಲವತ್ತೇಳು  ಈ ಹೆಣ್ಣು ಕರೆದು ಎಣ್ಣೆಯಲಿ ಕರಿದು ಕೊಟ್ಟಿದ್ದರಿಂದಲೇ ನೀ ತೂಗುತ್ತಿರುವೆ ಎಪ್ಪತ್ತೇಳು. ಒಳ್ಳೆಣ್ಣೆಆಗಿಹುದು ಬಾರೀ ದುಭಾರಿ ಹೋಟ್ಟೆ ಬೆಳೆಸಿ ಆಯಿತು ಬಾರಿ  ಎದ್ದು Walk ಹೋಗಿ ಎರಡುಬಾರಿ  ಎಂದು  ತಂದಿಟ್ಟಳು ತಣ್ಣೀರು.. ಮೊನ್ನೆ ಎಣ್ಣೆಯ Tin ತರಲು ಹೋದಾಗ ನನ್ನ ಜೇಬು ಸುಟ್ಟಿದ್ದು ನೆನಪಾಗಿ ಹೊಟ್ಟೆಯ ಸವರುತಾ ಮೇಲೆದ್ದೆ.. ಸಾಕಿ ಸಲುಹಿದ ಹೊಟ್ಟೆಯ ಕರಗಿಸಲು ಮಾಡಿದೆ  ಬಿರುಸಾದ Walk ಬಿರಿಬಿರಿ ಮುಂಜಾನೆ ಚಳಿ ಮಾಯ ಆಗಿರುವುದರಿಂದ  ಸುತ್ತು ಹಾಕಿದೆ ಹತ್ತು ಹಲವು ಬಾರಿ ಸಂಜೆಗೆ ಸ್ವಲ್ಪ ಕಾಲುನೋವಾಗಿ  ಮರುದಿನ ಮುಂಜಾನೆಗೆ ನೋವ ಆಗಿತ್ತು ಭಾರೀ ಮನೆಯಲ್ಲೇ ಕುಳಿತಿದ್ದೆ ಕಾಲನೋವಿಗೆ ಹೆದರಿ ನನ್ನವಳು ಕೇಳಿದಳು ಒಂದೇ ದಿನಕ್ಕೇ ಹೊಟ್ಟೆ ಕರಗಿತೇನ್ರಿ ನಾ ಹೇಳಿದೆ ನನ್ನ ನಲ್ಲೇ  ನನ್ನ ಕಾಲುನೋವಾಗಿದೆಯಲ್ಲೇ  ನೋವಿನೆಣ್ಣೆ ತರ್ರೀ ಹಚ್ಚಿ ನೀಯುವೆಂದಳು  ಅಂಗಡಿಗೆ ಹೋಗಿ ನೋವಿನ  ಕೇಳಲು ಎಣ್ಣೆ   ಕೊಡೆಂದನು   ನೂರ ಎಂಭತ್ತ.. ಇದ...

ಮುದ್ದು ಶ್ವಾನ ಮತ್ತು ಮಾರ್ಜಾಲ

ಮುದ್ದು ಶ್ವಾನ-ಮಾರ್ಜಾಲ  ಮಕ್ಕಳ ಹೆಂಗೆಳೆಯರ ಮುದ್ದು ಮಾರ್ಜಾಲ ಮನೆಯ ಕಾವಲುಗಾರ ನೀನೇ  ಶ್ವಾನ.. ಇಬ್ಬರೂ ಅಚ್ಚುಮೆಚ್ಚಿನ ಮಿತ್ರರು ಮನುಷ್ಯರಿಗೆ.. ಸದಾ ಬೆಚ್ಚಗಿರಲು ಒಲೆಯ ಪಕ್ಕದಲ್ಲಿ ನಿನ್ನ ಟಿಕಾಣಿ ಸಾಕುವ ವ್ಯಾಘ್ರ ನೀನು ಬಳಕುವ  ಮಾಯಾ ಮಾರ್ಜಾಲ ನೀನು ಯಾಕೆ ನೀ ಕಣ್ಣು ತೆರೆದು ಹಾಲು ಕುಡಿಯಲೊಲ್ಲೇ?? ಆದಿಮಾನವನ ಶ್ವಾಸ ನೀನು  ಓ ಶ್ವಾನ ನೀನು ಪಕ್ಕದಲ್ಲಿ ಇರುವ ದೈರ್ಯ ಅಲ್ಲವೇ ನಮ್ಮೀ ನಾಗರೀಕತೆಯು ಬೆಳೆದದ್ದು? ನಿನ್ನ ನಿಯತ್ತಿಗೆ ಸಾಟಿ ಇಲ್ಲ ಯಾರೂ ಬೇಕಾಗಿದೆ ನಮಗೆ ಕಿಂಚಿತ್ತಾದರೂ ನಿನ್ನ ನಿಯತ್ತು.   ನೀವಿಬ್ಬರೇ ನಮಗೆ ರಂಜನೆ ಭೌ ಬೌ..ಮಿಯಾಂವ್ ಮಿಯಾಂವ್..ಗಳೇ ನಮಗಾದವು ಸಂಗೀತದ ಮನೋರಂಜನೆ.. ಓ ಬಾವುಗಾ ನೀನೇಕೆ ಓಡುವೆ  ನಾಯಿಯ ಕಂಡರೇ?   ಮಾಡುವರು  ಮನೆಯಲಿ ಯಾರಾದರೂ ಕಚ್ಚಾಡಿದರೆ ಶ್ವಾನ ಮಾರ್ಜಾಲದ  ಹೋಲಿಕೆ ಅಜನ್ಮ ವೈರಿಗಳಲ್ಲ ನೀವು ಜೊತೆಯಾಗಿರೆ ಜನ್ಮ ಜನ್ಮದ ಮಿತ್ರರಂತೆ.. ನಿಮ್ಮ ನೋಡಿ ಕಲಿಯಬೇಕಿದೆ ನಾವು ಸಣ್ಣ ಸಣ್ಣದಕ್ಕೂ ಜಗಳ ಆಡಿ  ಹಾವು ಮುಂಗುಸಿಯಂತೆ ಮುನಿಸಿಕೊಂಡು ಮೂತಿತಿರುವುತ್ತಿರುವ ನಾವೂ.. ✍️ನಾಗೇಂದ್ರ ಬಂಜಗೆರೆ.