ಪೋಸ್ಟ್‌ಗಳು

ಟ್ವಿಲೈಟ್...

ಇಮೇಜ್
ಟ್ವಿಲೈಟ್... ಇದು 34-35 ವರ್ಷದ ಹಿಂದಿನ ಸಂದರ್ಭ... ಆಗ ನಮ್ಮ ಮನೆಯಲ್ಲಿ ಸಮಯವನ್ನು ತಿಳಿಸುವ ಸಾಧನಗಳು ಯಾವೂ ಇರಲಿಲ್ಲ.ನಮ್ಮ ತಂದೆಯವರು  ಸೂರ್ಯ,ಚಂದ್ರ ನಕ್ಷತ್ರ ಹೀಗೆ ನಿಸರ್ಗದ  ಸಂಗತಿಗಳನ್ನು ವೀಕ್ಷಿಸಿ ಸಮಯವನ್ನು ತಿಳಿಸುತಿದ್ದರು.   ಕೋಳಿ ಗಡಿಯಾರಕ್ಕೆ ಇದ್ದ ಪರ್ಯಾಯವಾಗಿತ್ತು. ಮುಂಗೋಳಿಯ ಕೂಗೇ  ಬೆಳಗಿನ ಮೂರು ವರೆ ಮೂರು ಮುಕ್ಕಾಲರ ಸಮಯ. ಒಕ್ಕಲು ಕಟ್ಟಲು, ದೂರದ ಪಯಣ ಹೀಗೆ ವರ್ಷದಲ್ಲಿ 10-15 ದಿನ ನಾನಾ ಕಾರಣಗಳಿಗೆ ಎದ್ದೇಳುತಿದ್ದೆವು. ಡಿಸೆಂಬರ್,ಜನವರಿ, ಫೆಬ್ರವರಿ ತಿಂಗಳಿಗಳಲ್ಲಿ ವಿಪರೀತ ಚಳಿ ಇದ್ದರೆ, ಏಪ್ರಿಲ್ ಮೇ ತಿಂಗಳಲ್ಲಿ ಸಹಿಸುವಷ್ಟು ಚಳಿ ಇರುತಿತ್ತು.ಮುಂಗೋಳಿಗಳು ಏನೋ ಒಮ್ಮೆಯೋ ಎರಡು ಬಾರಿಯೋ ಕೂಗಿ ಪುನಃ ಮಲಗುತಿದ್ದವು. ಚಳಿಗೆ ನಡುಗುತಿದ್ದದ್ದು ನಾವು.ಸಾಮಾನ್ಯವಾಗಿ ಮುಂಗೋಳಿಗಳು ಕೂಗಿದಾಗ ಎದ್ದರೆ ಮೂಡಣಕ್ಕೆ ಬೆಳ್ಳಿಚುಕ್ಕೆಯೂ ಮೂಡಿರುತ್ತಿರಲಿಲ್ಲ...!ಬೆಳ್ಳಿ ಚುಕ್ಕಿ ಮೂಡಿದ ಮೇಲೆ  ಇತರೆ ಪಕ್ಷಿಗಳ ಚಿಲಿಪಿಲಿ ಆರಂಭವಾಗುತಿತ್ತು.ಇತ್ತ ಬದುಕಿಗಾಗಿ ಡ್ಯೂಟಿಗೆ ಹೋಗಿದ್ದ ನಿಶಾಚರಿಗಳಾದ ಗೂಬೆ, ಬಾವಲಿ, ಬೆಕ್ಕು, ಕರಡಿ,ನರಿ, ಮೊಲ,ಕಾಡು ಹಂದಿಗಳು ಪೊದೆ ಸೇರಿದರೆ,ಇಲಿ-ಹೆಗ್ಗಣಗಳು ಬಿಲ ಸೇರಿಕೊಳ್ಳುತ್ತಾವೆ.ಮೂಡಣದ ದಿಗಂತದಲ್ಲಿ ಬೆಳಕಿನ  ಹರಿವು ಹೆಚ್ಚಿದಂತೆಲ್ಲಾ  ಎಲ್ಲಾ ಪಕ್ಷಿ ಸಂಕುಲ ಆಹಾರವನ್ನು ಹುಡುಕಲು ಫೀಲ್ಡ್ ಗೆ ಇಳಿಯುತ್ತಿದ್ದವು. ಹಣ್ಣ...

ಬೀಸುವ ಕಲ್ಲೂ -ಬಿಸಿ ಇಡ್ಲಿ ವಡೆಯೂ...

#ಬೀಸುವ_ಕಲ್ಲು_ಇಡ್ಲಿವಡೆಯೂ...  ಅದು 1991-92 ಇರಬಹುದು.ನಮ್ಮದು ಒಂದು ತೆಂಗಿನ ತೀರು ಹಾಕಿ ಕಟ್ಟಿದ್ದ ಮಾಳಿಗೆಯ ಒಂದು ಕೊಟ್ಟಿಗೆ.ಅದು ಮಳೆ ಬಂದಾಗ ದನಗಳ ಕೊಟ್ಟಿಗೆಯಾಗಿಯೂ,  ಮಳೆ ಇಲ್ಲದೇ ಇದ್ದಾಗ ನಮ್ಮಗಳ ಕೊಟ್ಟಿಗೆಯಾಗಿಯೂ  ಆಗಿತ್ತು.  ಅದರ ಒಂದು ಮೂಲೆಯಲ್ಲಿ   ಒಂದು ಒಳ್ಳು ಮತ್ತು ಬೀಸುವ ಕಲ್ಲು. ನನಗೆ ಮತ್ತು ನಮ್ಮ ಪಟ್ಟಾಲಂ ಗೆ ಆ ಬೀಸುವ ಕಲ್ಲನ್ನು ತಿರುಗಿಸುವ ಶಕ್ತಿ ಆಗ ಇಲ್ಲದೇ ಇದ್ದುದರಿಂದ ಆಗಾಗ  ಒನಕೆ ಹಿಡಿದು ಏನೇನೋ ಕಾಯಿಗಳು, ಹಲ್ಲಿನಿಂದ ಕಚ್ಚಲಾಗದ ಪದಾರ್ಥಗಳನ್ನು ಜಜ್ಜಿ ತಿನ್ನುತ್ತಿದ್ದೆವು. ಕೆಲವು ಅಪರೂಪದ ದಿನಗಳಲ್ಲಿ ಅಪ್ಪ ಅಮ್ಮ ಕೂಲಿ ಹೊತ್ತು ತರುವಷ್ಟರಲ್ಲಿ ಹೊತ್ತು ಮುಳುಗಿರುತಿತ್ತು. ಕೂಲಿ ಹೋದವರ ಹೊಲಗದ್ದೆಗಳಲ್ಲೋ, ಅಥವಾ ಕೂಲಿಯಿಂದ ಮನೆಗೆ ಬರುವಾಗ  ಹಾದು ಬರುತಿದ್ದ ಹೊಲಗಳಲ್ಲಿಯೋ ಟೊಮೇಟೊ, ನಾಟಿ ಬೆಂಡೆ ಕಾಯಿ, ತೊಗರಿ ಕಾಯಿ'ಕಡಲೆಕಾಯಿ ಇವುಗಳನ್ನು  ನಾವು ನನಗೆಚ್ಚು-ನಿನಗೆಚ್ಚು ಎಂದು ಬಡಿದಾಡಿಕೊಂಡು ತಿನ್ನಲು ಶುರು ಮಾಡಿದರೆ ಇತ್ತ ಅಮ್ಮ ಆಗ ತಾನೇ ಕೂಲಿಯಾಗಿ ತಂದ ರಾಗಿ, ಜೋಳ, ಭತ್ತದ ಕಾಳುಗಳನ್ನು ಬೀಸಿ ನುಚ್ಚು ಮಾಡಲೋ ಅಥವಾ ಹಿಟ್ಟು ಮಾಡಲೋ ಶುರು ಮಾಡುತಿದ್ದರು. ಬೀಸುವಕಲ್ಲಲ್ಲಿ ಬೀಸಬೇಕಿತ್ತು. ಹಗಲೆಲ್ಲಾ ಕೂಲಿ ಕೆಲಸ ಮಾಡಿ ಸುಸ್ತಾಗಿರುತಿದ್ದವರು ಎಡಗೈ -ಬಲಗೈ ಎಂದು ನೂರೆಂಟು ಸರಿ ಬೀಸುವ ಕಲ್ಲು ತಿರುಗಿಸಿ   ಕಾಳುಗಳು ನುಚ್ಚಾಗ...

ಕಾನನ ಸ್ನಾನ...

ಇಮೇಜ್
ಕಾನನ ಸ್ನಾನ.. ಜಪಾನ್ ದೇಶದ ಹೆಸರು ಕೇಳದವರು ಯಾರಿದ್ದಾರೆ??? ಅಂದಾಜು 12 ಕೋಟಿ ಜನಸಂಖ್ಯೆ ಇರುವ ಈ ದೇಶ  ಎರಡನೇ ಪ್ರಪಂಚ ಯುದ್ಧದ ನಂತರ ಫಿನಿಕ್ಸ್ ನಂತೆ ಎದ್ದು ಜಾಗತಿಕವಾಗಿ ವಿಶಿಷ್ಟವಾದ ಅಭಿವೃದ್ಧಿ ಆಲೋಚನೆಗಳಿಂದ ತನ್ನ ಅಸ್ತಿತ್ವವನ್ನು ಮಾದರಿಯಾಗಿ ಉಳಿಸಿಕೊಂಡಿದೆ. ಭಾರತೀಯರ ಜೀವಿತಾವಧಿ ಸರಾಸರಿ 65 ರಿಂದ 70 ವರ್ಷವಾದರೆ ಜಪಾನಿಯರ ಜೀವಿತಾವಧಿ ಸರಾಸರಿ 79 ರಿಂದ 90 ವರ್ಷ.! ಅಣು ಬಾಂಬನಿಂದ ನಲುಗಿದ ನಾಡಿನಲ್ಲಿ ಹುಟ್ಟುವ ಜನ ಅದೆಷ್ಟು ವರ್ಷ ಬದುಕಿಯಾರು?? ಜಗತ್ತಿನದ್ಯಂತ ಮಾತಾಡಿದ ಇಂತಹ ಉಡಾಫೆ ಜನಗಳಿಗೆ ಮಾದರಿಯಾಗಿಯೇ ಇದೆ. ಅವರ ಜೀವನಶೈಲಿ, ವೈಜ್ಞಾನಿಕ ಮತ್ತು ಪ್ರಗತಿಪರ ಆಲೋಚನೆ, ಪ್ರಕೃತಿಯೊಂದಿಗಿನ ಸಾಮರಸ್ಯತೆ  ಜಪಾನೀಯರನ್ನು  ಮತ್ತು ಅವರ ಬದುಕಿನ ಆಯುಷ್ಯವನ್ನು ಭಾರತೀಯರಿಗಿಂತಲೂ, ಇನ್ನಿತರ ದೇಶಗಳಿಗಿಂತಲೂ  ಹೆಚ್ಚಿನ ಮಟ್ಟದಲ್ಲಿ ಸುಧಾರಿಸಿದೆ. ಅಂತದ್ದೊಂದು ಆಚರಣೆಗಳಲ್ಲಿ ಜಪಾನಿಯರು ನಂಬಿರುವಂತಹ ಒಂದು ಪ್ರಕೃತಿ ಚಿಕಿತ್ಸೆ ಎಂದರೆ ಅದು ಅರಣ್ಯ ಸ್ನಾನ. ಅರಣ್ಯ ಸ್ನಾನ ಎಂದರೇ ಪಂಚೇಂದ್ರಿಯಗಳ ಮೂಲಕ ಅರಣ್ಯದ  ಆಗುಹೋಗುಗಳನ್ನು ನೈಜವಾಗಿ ಅನುಭವಿಸುವುದು. ಅಂದರೆ ಹಸಿರು ಸಮೃದ್ಧಿಯ ಅಸ್ವಾದನೆ, ಶುದ್ಧ ಆಮ್ಲಜನಕ ಸೇವನೆ, ಪಕ್ಷಿಗಳ ಕಲರವ ಆಲಿಸುವಿಕೆ ಇತ್ಯಾದಿ.  ನನಗೇನು 90 -100 ವರ್ಷ ಬದುಕುವ ಆಸೆ ಇಲ್ಲವಾದರೂ ಹೆಚ್ಚು ನಡೆಯದೆ ಜಡವಾಗಿರುವ ದೇಹಕ್ಕೆ ಒಂದಷ್ಟು ಕೆಲಸ ಕೊಡಲ...

ಗುಡ್ಡದ ಭೂತ...

ಇಮೇಜ್
#ಗುಡ್ಡದ_ಭೂತ  ನಾನು ಉದ್ಯೋಗ ಅರಸಿ ಬಳ್ಳಾರಿಗೆ ಬಂದು ಎರಡು ದಶಕಗಳು ಸಮೀಪಿಸಿವೆ. ಬಳ್ಳಾರಿ ಮೋತಿ ಸರ್ಕಲ್ ನ  ರೈಲ್ವೆ ಟ್ರ್ಯಾಕ್ ಸಮೀಪ ನೈರುತ್ಯ ದಿಕ್ಕಿಗೆ ನೋಡಿದರೆ ದೂರದಲ್ಲೊಂದು ಬೆಟ್ಟದ ಸಾಲು ಕಾಣಿಸುವುದು. ಗಣಿಗಾರಿಕೆ ಉತ್ತುಂಗದಲ್ಲಿದ್ದಾಗ ಅಲ್ಲಿ ಕೇಳಿಸುತ್ತಿದ್ದು ಡೈನಮೈಟ್  ಸದ್ದು, ಕಾಣಿಸುತ್ತಿದ್ದುದು ಕೆಂಧೂಳು, ರಕ್ಕಸ ಲಾರಿಗಳ ಸಾಲು ಒಮ್ಮೆಯಾದ್ರೂ ಅಲ್ಲಿಗೆ ಹೋಗಬೇಕೆನ್ನುವ ಬಯಕೆ ನನ್ನನ್ನು ಸದಾ ಕಾಡುತ್ತಿತ್ತು. ಹೇಳಿಕೇಳಿ ಸುಮಾರು 15 -16 ವರ್ಷಗಳ ಕಾಲ ಅದೇ ಗುಡ್ಡದ ಸಾಲಿನಲ್ಲಿ ನನ್ನ ಕರ್ಮಸ್ಥಳವು ಆಗಿತ್ತು. ಆದರೆ ಅದು ಯಾಕೋ ಅಲ್ಲಿಯವರೆಗೂ ಹೋಗಿ ತಲುಪಲು ಸಾಧ್ಯ ಆಗಲೇ ಇಲ್ಲ. ನನ್ನ ಮಡದಿ ಕುಮುದಾಳಿಗೆ ಆ ಗುಡ್ಡವನ್ನು ತೋರಿಸಿ ಅಲ್ಲಿ ಬೆಳ್ಳಗೆ ಕಾಣಿಸ್ತಾ ಇದೆಯಲ್ಲ ಅಲ್ಲಿಗೆ ಒಂದು ದಿನ ಹೋಗಬೇಕು ಎಂದು ಸದಾ ಹೇಳುತ್ತಿದ್ದೆ. ಒಂದೆರಡು ಬಾರಿ ಕೇಳಿದ ಅವಳು ಮೂರು ನಾಲ್ಕನೇ ಬಾರಿ ಹೇಳಿದಾಗ 'ನಿಮಗೊಂದು ಗುಡ್ಡದ ಭೂತ ಹಿಡಿದಿದೆ' ಎಂದು ಚೇಡಿಸುತ್ತಿದ್ದಳು. ಹೋಗ್ತೀನಿ ಒಂದಲ್ಲ ಒಂದು ದಿನ ನಾನಲ್ಲಿಗೆ ಹೋಗಿಯೇ ಹೋಗುತ್ತೇನೆ ಎಂದು ಹೇಳುತ್ತಿದ್ದೆ. ಒಂದು ವರ್ಷದಿಂದ ಈಚೆಗೆ ಯಾವುದಾದರೂ ಸರ್ಕಾರಿ ರಜೆ ದಿನಗಳು ಮತ್ತು ಭಾನುವಾರ ಎಲ್ಲಿಯಾದರೂ ಹೀಗೆ ಗುಡ್ಡ ಬೆಟ್ಟ ಇಷ್ಟದ ಸ್ಥಳಗಳನ್ನ ಸುತ್ತುವ ಅಭ್ಯಾಸ  ಮಾಡಿಕೊಂಡಿದ್ದೇನೆ. ಜೊತೆಗೆ ಯಾರನ್ನಾದರೂ ಕರೆಯೋಣ ಎಂದರೆ ಬೆಳಿಗ್ಗೆ 4- 5 ಗಂಟೆಗೆ ಎದ್ದು ನನ್ನ ಜ...

ಸೃಷ್ಠಿ -ಹಸಿವು -ಹೆಣ್ಣು..

ಸೃಷ್ಠಿ v/s ಕಾನೂನು... ಮೊನ್ನೆ ನನ್ನ ಮಗಳದೊಂದು ಆದರ್ಶ ಶಾಲೆಗೆ ಪ್ರವೇಶ ಪರೀಕ್ಷೆ ಇತ್ತು. ಎಲ್ಲಾ ಸಿದ್ಧತೆಯೊಂದಿಗೆ ಪರೀಕ್ಷೆಗೆ ಹೊರಟ ನಾವು ಹೋಗುವ ರಸ್ತೆಯಲ್ಲೊಂದು ರೈಲ್ವೆ ಟ್ರ್ಯಾಕ್ ದಾಟಿ ಹೋಗಬೇಕಿತ್ತು. ಸುಧಾ ಗೇಟ್ ಫ್ಲೈಓವರ್ ನಿರ್ಮಾಣ ಕಾರ್ಯದ ನಿಮಿತ್ತ ಆ ಗೇಟ್ ನ ವಾಹನ ಸಂಚಾರದ ಭಾರವನ್ನೆಲ್ಲಾ ಒಂದೇ ಗೇಟ್ ನಿರ್ವಹಿಸುತ್ತಿದ್ದುದರಿಂದ ತುಸು ಟ್ರಾಫಿಕ್ ಹೆಚ್ಚೇ ಇತ್ತು. ರೈಲು ಹಾದು ಹೋಗುವವರೆಗೂ ಕಾದು ನಿಂತಿದ್ದ ನಾವು ನನ್ನ ಮುಂದೆ ನಾಲ್ಕೈದು ಬೈಕುಗಳು ಅವುಗಳ ಮುಂದೆ ಟಾಮ್ ಟಾಮ್ ಒಂದರಲ್ಲಿ ಕಂಠದ ಮಟ್ಟ ಕರಬುಜಾ ಹಣ್ಣುಗಳು ತುಂಬಿದ ಗಾಡಿ ಒಂದು ಇತ್ತು. ಬೇಸಿಗೆ ಆದ್ದರಿಂದ ಬೆಳಗಿನ 10 ಗಂಟೆಯ ಬಿಸಿಲು ಸಾಧಾರಣವೇನೂ ಇರಲಿಲ್ಲ. ಸರಿಯಾಗಿಯೇ ಇತ್ತು. ಉದ್ದನೆಯ ಗೂಡ್ಸ್ ಗಾಡಿಯೊಂದು ಪಾಸ್ ಆದಮೇಲೆ ವಾಹನಗಳಿಂದ ಶಬ್ದಮಾಲಿನ್ಯ ವಾಯು ಮಾಲಿನ್ಯ ಅಧಿಕವಾಯಿತು. ಯಾವುದೇ ಟ್ರಾಫಿಕ್ ರೂಲ್ಸ್ ಫಾಲೋ ಮಾಡದೇ ಅಡ್ಡಾ ದಿಡ್ಡಿ ವಾಹನಗಳನ್ನು ಚಾಲನೆ ಮಾಡುವವರು ಬಳ್ಳಾರಿಯಲ್ಲಿ  ಅಂತವರೇ ಹೆಚ್ಚಾಗಿ ಕಾಣ ಸಿಗುವ,  ಸರಿಯಾಗಿ ಹೋಗುವವನೇ ಸರಿ ಇಲ್ಲವೇನೋ ಎಂಬಂತೆ ಯಾವಾಗಲೂ ಅನಿಸುತ್ತಿರುತ್ತದೆ.ಯರ್ರಾಬಿರ್ರಿ ಹೋಗುತ್ತಿದ್ದ ಬರುತಿದ್ದ ವಾಹನಗಳ ಮದ್ಯೇ ಮುಂದೆ ಸಾಗುತ್ತಿರುವಾಗ ಮುಂದಿದ್ದ ಕರಭುಜಾ ಹಣ್ಣಿನ ಗಾಡಿಯಿಂದ ಒಂದು ಹಣ್ಣು ಬಿತ್ತು. ಆ ಟಾಮ್ ಟಾಮ್ ಅವನಿಗೆ ಹಣ್ಣು ಬಿದ್ದದ್ದು ಗೊತ್ತಾಗಲಿಲ್ಲ ಅನಿಸುತ್ತೆ ಅವನು ವಾಹನ ದಟ್ಟಣೆ ಕಡಿಮ...

ಸ್ವಾತಂತ್ರ ಇದ್ದರೂ ಬದುಕು ಅತಂತ್ರ...

ಇಮೇಜ್
*#ಸ್ವಾತಂತ್ರ್ಯ_ಬಂದರೂ_ಬದುಕು_ಅತಂತ್ರ...* Nagendra Banjagere   *ದಾಸ್ಯಕ್ಕೆ ತೆರಿಗೆಯ ತೇದು ಗ್ಯರಸೆ ಗ್ಯರಸೆ  ದಿನಸೀ ಧಾನ್ಯ ಬೆಳೆದ ಅನ್ನದಾತ ಅಂದು  ತಲೆಯಲ್ಲಿ ಅಕ್ಷರವಿರಲಿಲ್ಲ ಎದೆಯಲ್ಲಿ ಅಕ್ಕರೆಯಿತ್ತು ಸಕಲ ಜೀವಿಗಳಲ್ಲಿ...* *ಜವಾರಿ ಬೆಳೆದು ತಿಂದುಂಡ ಜನರ ಜೀವ  ಗುಂಡ್ಕಲ್ಲು.. ಗುಡಿಸಲಾದರೂ ಜೋಪಡಿಯಾದರೂ ಚಳಿ ಮಳೆ ಸಿಡಿಲಿಗೆ  ಬೆದರದೆ...* *ಸ್ವದೇಶಿಗಳೇಕೆ ತೆರಬೇಕು  ಪರದೇಶಿಯರಿಗೆ ತೆರಿಗೆ??ದಂಗೆದ್ದರು  ಒಟ್ಟಾದರು ಇಷ್ಟಾದರೂ ಪರದೇಶಿಗಳ ಸ್ವದೇಶದಿ ಓಡಿಸಿ ತಿರಂಗವ ಹಾರಿಸಿ ಜನಗಣಮನ ಹಾಡಿ..ಅಖಂಡ ದೇಶವು ಮೂರಾಗಿ ಇಬ್ಬಾಗಿಸಿ..* *ಭಾರತಮಾತೆ ಹೆಣ್ಣು..ಆದಿವಕಾಲದಿಂದಲೂ ಸ್ವಾತಂತ್ರ ಕಸಿದ ಜನ ಸ್ವತಂತ್ರ ಸಿಕ್ಕ ಮೇಲೂ  ಸ್ವಾತಂತ್ರ್ಯ ಕೊಡದೆ ಜನಗಣಮನ ಹೇಳುವ ಜನಮನ...* *ಅನ್ನದಾತನ ಬೆಳೆಗೆ ಬೆಲೆ ಇಲ್ಲದಾಯ್ತು ಅನ್ನವಿಲ್ಲದಂತಾಯ್ತು... ರಾಜಕಾರಣಿಗಳು ಅನ್ನ ರಾಜನಿಗೆ ಬೀಜದ ಹೆಸರಲ್ಲಿ ಅರೆ ಜೀವ.. ಕೀಟನಾಶಕದಿ ಪೂರ ಜೀವವ ತೆಗೆದು ತರಾವರಿ ತೆರಿಗೆಯ ಬರೆ ಹಾಕಿ ಬೀದಿಗೆ ನೇತಾಕಿದರು ಅವನ...* *ಶ್ರಮಿಕರ ರಕ್ತ ಬೆವರು ಹೀರಿ ಸಂಪಾದಿಸಿದ ಧನಿಕನ ಮನೆಯ ಮೇಲೆ ತಿರಂಗ ಧರ್ಪದಿ ನಗುತ್ತಿದ್ದರೆ ತಿರುಕನ ಮನೆಯ ತಿರಂಗ ಸ್ವಾತಂತ್ರ್ಯದ ಸಂಕೇತವಾದರೂ ನಿಂದೇನೂ ನಡೆಯದೆಂಬಂತಿತ್ತು...* Happy Independence day... ✍️ *ನಾಗೇಂದ್ರ ಬಂಜಗೆರೆ.*

ಸಂಗನಕಲ್ಲು ಮತ್ತು ಶಬ್ಧದ ಕಲ್ಲುಗಳು..

ಇಮೇಜ್
ನಾ ಕಂಡ ಸಂಗನಕಲ್ಲು.... ಒಂದೆರಡು ದಿನಗಳಿಂದ ಬಳ್ಳಾರಿಯಲ್ಲಿ ಸ್ವಲ್ಪ ಮಳೆ. ಮಳೆ ಎಂದರೇ ಬಿಟ್ಟು ಬಿಡದೇ ಸುರಿಯುವುದಲ್ಲ ಬದಲಾಗಿ ಬರೀ ಬಿಸಿಲು ಗಾಳಿಯಲ್ಲದ ದಿನಕೊಮ್ಮೆಯೋ ಎರಡು ಬಾರಿಯೋ  ಹತ್ತಿಪ್ಪತ್ತು ನಿಮಿಷ ಬಂದೋಗುವ ಸಾಧಾರಣ ಮಳೆ.. ನಮ್ಮ್ ಉಡುಪಿ ಮಂಗಳೂರಿಂನಂತಹ ಕರಾವಳಿ ಭಾಗದಲ್ಲಿ ಎಷ್ಟು ಮಳೆ ಸುರಿದರೂ ಮಳೆ ನಿಂತ ಮರು ಕ್ಷಣ ಮಳೆಯೇ ಬಂದಿಲ್ಲದಂತಹ ಉರಿ ನಮ್ಮ ಬಯಲು ಸೀಮೆಕಡೆ ಇರುವುದಿಲ್ಲ... ಒಮ್ಮೆ ಮಳೆ ಸುರಿದರೆ ಮೂರು ನಾಲ್ಕು ದಿನ ಕೆಸರು  ತಂಪು ಇದ್ದೇ ಇರುತ್ತದೆ. ನಾಳೆ ಸಂಡೇ ಎಲ್ಲಿಗಾದರೂ ಹೋಗೋಣ ಎಂದು ಯೋಚನೆ ಮಾಡಿದಾಗ ನೆನಪಾಗಿದ್ದು ಬಳ್ಳಾರಿಯ ಸಂಗನಕಲ್ಲು. ಹೆಗಲಿಗೆ ಕ್ಯಾಮೆರಾ ಹಾಕಿ, ಗಾಡಿ ಹತ್ತಿ ಹೋಗಿ ಇಳಿದದ್ದು ಸಂಗನಕಲ್ಲಿನ ತಪ್ಪಲಿನಲ್ಲಿ.    ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಜ್ವಾಲಾಮುಖಿಯ ಪರಿಣಾಮದಿಂದ   ನಿರ್ಮಾಣವಾದ  spike ಬೆಟ್ಟವೇ ಈ ಸಂಗನಕಲ್ಲುಗಳ ರಾಶಿ. ಜ್ವಾಲಾಮುಖಿಯಾಗಿ ಗುಡ್ಡ ರಚನೆಯಾದ ಕಾಲದಲ್ಲಿ    ಭೂಮಿಯ ಅಂತರಾಳದಲ್ಲಿ(Mantal) ಸುಮಾರು 70 ಕಿಲೋ ಮೀಟರ್ ಆಳದಲ್ಲಿ ಉದುಗಿದ್ದ ಆಲಿವಿನ್ ಡಯಾಬೇಸ್ ಅಥವಾ ಆಲಿವಿನ್ ಬಸಾಲ್ಟ್  ಕಲ್ಲಿನ ರಾಶಿ ಮ್ಯಾಂಟಲ್ ನಲ್ಲಿನ ಕೆಲವು  ಅಡಚಣೆಗಳಿಂದಾಗಿ ಭೂಮಿಯ ಮೇಲ್ಮೈ ಮೇಲೆ ಬರುತ್ತವೆ. ಜ್ವಾಲಾಮುಖಿ ಸ್ವರೂಪದ ಗಟ್ಟಿಹುಂಡೆಗಳಂತಹ ಕಲ್ಲುಗಳನ್ನ ಈಗಲೂ ಕೂಡ ನಾವು ಅಲ್ಲಿ ಕಾಣಬ...

ಸಮಾಜದಲ್ಲಿ ಬದಲಾಗುತ್ತಿರುವ ಅಧಿಕಾರ ಚಲನಶೀಲತೆ...

ಇಮೇಜ್
*_ಸಮಾಜದಲ್ಲಿ ಬದಲಾಗುತ್ತಿರುವ ಅಧಿಕಾರ ಚಲನಶೀಲತೆ..._* ✍️ ನಾಗೇಂದ್ರ ಬಂಜಗೆರೆ  ಅವರೊಬ್ಬ 65 ವರ್ಷದ ನಿವೃತ್ತ ಅಧಿಕಾರಿ. ವಯಸ್ಸಾದ ಮೇಲೆ ಬಿಪಿ, ಶುಗರ್, ಕೋಪ, ಕೊಬ್ಬು, ದುಡ್ಡು, ಆಸ್ತಿ ಪಾಸ್ತಿ ಎಲ್ಲವೂ ಕೂಡ ಅಧಿಕವಾಗಿಯೇ ಇದ್ದವು. ಅದರೊಟ್ಟಿಗೆ ತಿನ್ನುವ ಚಪಲವು ಕೂಡ ಇತ್ತು. ಅಂದು ಭಾನುವಾರ ಆಗಿದ್ದರಿಂದ ಒಂದುವರೆ-ಒಂದುವರೆ ಕೆಜಿಯ 3 ಕೆಜಿ ಮೀನನ್ನು ತರಿಸಿದ್ದರು. ಮಧ್ಯಾಹ್ನ 2 ಗಂಟೆ ಸಮಯ.ತನ್ನ ಹೆಂಡತಿ ಪಲ್ಲವಿ ಫಿಶ್ ಫ್ರೈಯನ್ನ ಮಾಡುತ್ತಿದ್ದಾರೆ. ಆ ಅಸ್ಸಾಮಿ ಸಂಡೇ ಆದ್ದರಿಂದ ಮತ್ತು nonveg ಇದ್ದುದರಿಂದ ಸ್ವಲ್ಪ ಮದ್ಯಸೇವನೆಯನ್ನೂ ಮಾಡಿ ಬಾಟಲ್ ಕೂಡ ಟೇಬಲ್ ಮೇಲೆ ಇಟ್ಟುಕೊಂಡಿದ್ದರು.ಕರಿದ ಮೀನಿನ ವಾಸನೆಯ ಟೆಂಪ್ಟ್ ತಾಳಲಾರದೆ ಡೈನಿಂಗ್ ಟೇಬಲ್ ಬಳಿ ಬಂದ ಅವರು ಅಡುಗೆ ಮನೆ ಕಡೆ ನೋಡಿದರು.  ಪಲ್ಲವಿ :ಏನು ತಿಂತಿರಾ?? ನಿವೃತ್ತ ವ್ಯಕ್ತಿ :ಬಾಯಿ ಚಪ್ಪರಿಸುತ್ತಾ 'ಹುಂ...' ಒಂದು ಪ್ಲೇಟ್ ಗೆ ಎರಡು ಮೀನು ಫ್ರೈ ಹಾಕಿ 'ತಗ' ಎಂದಳು...  ಆ ವ್ಯಕ್ತಿ ತಾನೇ ಹೋಗಿ ಆ ಮೀನಿನ ಪ್ಲೇಟ್ ನ್ನು ತೆಗೆದುಕೊಂಡು dainning ಟೇಬಲ್ ಕುರ್ಚಿಗೆ ಕೂತನು.. ಮೀನನ್ನು ಬಾಯಿಗೆ ಹಾಕುತ್ತಾ... 'ಲೇ ಮೀನ್ ಫ್ರೈಗೆ ಇನ್ನೂ ಸ್ವಲ್ಪ ಖಾರ ಹಾಕಬೇಕಿತ್ತು... ನಿಂಗ್ ಗೊತ್ತಾಗಲ್ಲ ಯಾವಳ್......  ......'ಎಂದು ಗೊಣಗುತ್ತಿದ್ದರು.  ಹಾಂ... ಖಾರನ ??? 'ತಗ' ಎಂದು ಮುಚ್ಚಳ ತೆಗೆದೇ ಇರಿಸಿದ್ದ ಸುಮಾರ...

ಸಲಹು ಸಲುಹಿದ ಭೂಮಿಯ...

ಇಮೇಜ್
*ಸಲಹು ಸಲಹಿದ ಭೂಮಿಯ..* ನೋಡು ಬಾ ಭೂರಮೆಯ ಸಿಂಗಾರ.. ಹಾಸಿಹಳು ಹಸಿರ ಹಾಸಿಗೆ ಮುಡಿದಿಹಳು ಸಪ್ತರಂಗಿನ ಸುಮಗಳ ಬಂದು ನೋಡು ಭೂತಾಯ ಮಡಿಲು ಬರಿದಲ್ಲ  ಜೀವಿಗಳಿಗೆ ಆಗಿಹಳು  ಸರ್ವಸ್ವ.. ಸಲುಹುತಿಹಳು  ಸಕಲಜೀವರಾಶಿಗಳ .. ಧರೆಗಾಗಿ ಸಾವಿರ ಕಥಾನಕ ಗತಿಸಿದವು ಧರೆಗಾಗಿ ದೊರೆಗಳು ಆಳಿದರು ರಾಜ್ಯವ ವಿಸ್ತರಿಸಿದರು  ಕಾಶ್ಮೀರದಿಂ ಕನ್ಯಾಕುಮಾರಿವರೆಗೆ. ಆದರೂ ಧರೆಯ ಮಣ್ಣು ಈ ದೊರೆಗಳಿಗೆ ಸೇರದೆ  ದೊರೆಗಳೇ ಮಣ್ಣಿಗೆ ಸೇರಿದರು ಕೊನೆಗೆ.. ಭೂಮಿಗಾಗಿ ನಡೆದಿದೆ ದೇಶ ದೇಶಗಳ ಮಧ್ಯೆ ಕದನ ಭೂಮಿಗಾಗಿ ಕೊಂದಿಹರು ಹೆತ್ತವರ ಪ್ರೀತಿಸಿದ ಬಂಧುಗಳ ಮರೆತು ಮೂರು ದಿನದ ಬದುಕಿಗೆ.. ಬೇಟೆಯಾಡಿ ಬಡಿದು ತಿಂದರು ಖಗ- ಮೃಗಗಳ..ಭಸ್ಮ ಮಾಡಿದರು  ಅಳಿದುಳಿದ ಗಿಡಮರಗಳ ಖನಿಜದ ಖಜಾನೆಗೆ ಹಾಕಿದರು ಕನ್ನ.. ತೆಗೆದರು ಗ್ಯಾಸ್ ಪೆಟ್ರೋಲ್ ಚಿನ್ನ. ಅದೆಷ್ಟು ದಿನ ಬರಬಹುದು ಇನ್ನಾ.?? ಅಂದು ಬೀಜ ಬಿತ್ತಿ ಹೊನ್ನಬೆಳೆ ಬೆಳೆದರು ನಮ್ಮ ಅಜ್ಜ ಮುತ್ತಾತ..ಅನ್ನವ ನೀಡಿದ ಭೂಮಿಗೆ ದೈವಭಕ್ತಿಯ ಮೆರೆದರು.. ಇಂದು ಅನ್ನವ ಬೆಳೆವ ಮಣ್ಣಿನಲಿ ಯೋಜಿಸಿಹರು ಪ್ರಿಂಟ್ ಹಾಕಲು ನೋಟು.! ಆದರೆ ಹೊಟ್ಟೆಗೆ ಏನು ತಿನ್ನಬೇಕಾಗುವುದೇನೋ ?? ಜೀವ ಜಲ ಇರುವುದು ಇಲ್ಲೆ ಮಂಗಳ ಚಂದಿರನಂತೆ ಬರಡುಗಲ್ಲಲ್ಲ ಈ ಭೂಮಿ  ನಿನ್ನ ಚಟ-ವಟಿಕೆಗೆ  ಕಾವಲಿ ಕಾದಂತೆ ಕಾದಿಹುದು ಈ ನೆಲ ತಾಪಕ್ಕೆ ನಿರ್ಗಲ್ಲು ಜಾರುತಿಹದು ಸಾಗರ ಸರಿಯುತಿಹುದು ಕಾಪಾಡು ...

ಬದುಕು ಬದಲಾವಣೆ...

ಇಮೇಜ್
#ಬದುಕು_ಬದಲಾವಣೆ.. (ಪ್ರಾಣಿ ಪಕ್ಷಿಗಳ ಜಾಡು ಹಿಡಿದು.. ) ಕಳೆದ ಏಳೆಂಟು ವರ್ಷಗಳ ಹಿಂದೆ ಹಳ್ಳಿಯೊಂದರಲ್ಲಿ ಬಾಡಿಗೆ ಮನೆಯಲ್ಲಿ ಇದ್ದೆ. ಆ ಬಾಡಿಗೆ ಮನೆಯ ಮಾಲೀಕನದು ಒಂದು ಎಮ್ಮೆ ಮೊಣಕ ಇತ್ತು. ಸಾಮಾನ್ಯವಾಗಿ ಮನೆಯಲ್ಲಿ ಮಿಕ್ಕ ಅನ್ನ, ತರಕಾರಿ, ಸೊಪ್ಪು ಸೋಸಿ ಉಳಿದ ಪದಾರ್ಥ,ಹಾಳಾದ ತರಕಾರಿಗಳು ಹೀಗೆ ಇವೆಲ್ಲವುಗಳನ್ನು ಸೇರಿ ಒಂದು ಮುಸುರೆ ಬಕೇಟ್ಗೆ ಹಾಕಿ ಅದನ್ನ ಮತ್ತೊಂದು ದೊಡ್ಡ ಮಾಸ್ಟರ್ ಮುಸುರೆ ಬಕೇಟಿಗೆ ಸುರಿಯುವುದು ವಾಡಿಕೆ ಇತ್ತು. ನಮಗೆ ಅದು ಮುಸುರೆ... ಅದೇ ಎಮ್ಮೆಗೆ ಮೃಷ್ಟನ್ನ ಭೋಜನ! ಪ್ರತಿದಿನ ಸಂಜೆ ಆ ಎಮ್ಮೆಗೆ  ರಸಕವಳದ ಸಮಯ. ಅಕ್ಕಪಕ್ಕದ ಆರೇಳು ಮನೆಯ ಮುಸುರೆ ಕುಡಿದು ತಿಂದು ತೇಗುತಿದ್ದ ಎಮ್ಮೆ ಮೊದಲು ಸಪೂರ ಸಣಕಲು ಇದ್ದ ಮೊಣಕ 5-6 ತಿಂಗಳು ಮುಸುರೆ ಕುಡಿದದ್ದರಿಂದಲೂ ಮತ್ತು ಮಳೆಗಾಲ ಆರಂಭ ಆದ್ದರಿಂದ ಎಮ್ಮೆಗೆ ಕೊಬ್ಬು ಜಾಸ್ತಿ ಆಗುತ್ತಾ 'ಕೊಬ್ಬಿದ ಮಹಿಷಿ'ಆಗಿ ಹೋಯಿತು.! ಹೀಗೆ ಒಂದು ದಿನ ಕೈಯಲ್ಲಿ ಶಾಲೆಯ ಬೀಗದ ಗೊಂಚಲು ಹಿಡಿದು  'ಝಲ್... ಝಲ್' ಎಂದು ಝಣಪಿಸುತ್ತಾ  ನಿಧಾನಕ್ಕೆ ಮನೆಗೆ ಬರುತ್ತಿದ್ದೆ. ನಾನು ಮನೆಯ ಗೇಟ್ ತೆಗೆಯಲು ಕೈ ಹಾಕಿದೆ. ಇನ್ನೇನು ಗೇಟ್ ತೆಗಿಯಬೇಕು ಇತ್ತ  ಕಾಂಪೌಂಡ್ ಒಳಗೆ  ನಮ್ಮ ಮನೆಯ ಮಾಲೀಕನ ಮಗಳು ಒಂದೆರಡು ಮೊಟ್ಟೆಯ ಶೆಲ್ ಗಳು ತೇಲುತಿದ್ದ ಒಂದು ಸಾಧಾರಣ ಬಕೆಟ್ ಮುಸುರೆಯನ್ನು ಇನ್ನೊಂದು ದೊಡ್ಡ ಮಾಸ್ಟರ್ ಮುಸುರೆ ಬಕೇಟಿಗೆ ಸುರಿಯುತಿದ್ದಳು. ಗೇಟು ತೆಗ...

ಕನಸು ಕಥೆಯಾದಾಗ... kanasu-11

ಇಮೇಜ್
*ಕನಸು ಕಥೆಯದಾಗ...*        ಕನಸು -11 *ಅಂದು ಆದಿತ್ಯವಾರ... ಅರುಷಿಯ ಸಹೋದ್ಯೋಗಿಯೊಬ್ಬರ ಮನೆಯ ಗೃಹಪ್ರವೇಶವೂ ಅಂದು ಇತ್ತು..ಆರುಷಿ ಅಹನಾಳಿಗೆ 11 ಗಂಟೆಗೆ ಸಿದ್ದವಾಗಲು ತಿಳಿಸಿ ಆರುಷಿಯೂ ಮಗಳು ಲಭನ್ಯಳಿಗೆ ಸ್ನಾನ ಮಾಡಿಸಲು ಕರೆಯುತ್ತಿದ್ದರು. ಲಭನ್ಯಳ ಕೈಯಲ್ಲಿದ್ದ ಮೊಬೈಲ್ ಗೆ ಯಾರೋ ಕಾಲ್ ಮಾಡಿದ್ದರಿಂದ ಓಡಿಬಂದು ಮೊಬೈಲ್ ನನಗೆ ಕೊಟ್ಟಳು....  ನನಗೆ ಗೊತ್ತಿರುವವರೇ... ಒಂದು ಕಾರ್ಯಕ್ರಮ ಇದೆ... ಅದುಬಿಟ್ರೆ ಮನೆಯಲ್ಲಿ ಇರುವೆ ಬನ್ನಿ ಎಂದ...ಆದರೆ ಅವರು ಎಷ್ಟು ಗಂಟೆಗೆ ಬರುವರೆಂದಾಗಲಿ; ಇತ್ತ ಆರುಷಿಯೂ ಎಷ್ಟು ಗಂಟೆಗೆ ಬರಬೇಕೆಂದಾಗಲಿ ಹೇಳಲಿಲ್ಲ. ಆರುಷಿಯ ಕುಟುಂಬ ಸಿದ್ದರಾಗಿ ಗೃಹಪ್ರವೇಶಕ್ಕೆ ತೆರಳಿದರು.* *ಸೂರ್ಯನ ಪ್ರಕಾಶಕ್ಕೆ ಹೊಸಮನೆಯ ಗೃಹಪ್ರವೇಶಕ್ಕೆ ಹಾಕಿದ್ದ ಡೆಕೋರೇಷನ್ ಲೈಟ್ಗಳು ಕಾಂತಿಯಿಲ್ಲದ ಸಣ್ಣ ಸಣ್ಣ ಬೆಳಕಿನ ಕಿಡಿಗಳಂತೆ ಕಾಣುತಿದ್ದವು. ಈ ಡೆಕೋರೇಷನ್ ಲೈಟ್ಗಳಿಗೆ ಹಗಲುಹೊತ್ತಿನಲ್ಲಿ ಬಾಡಿಗೆ ಕೊಡುವುದು ವೇಸ್ಟ್...ಹೊರಗಡೆ ಸೂರ್ಯ ಇದ್ದಾಗ  ಸಣ್ಣ ಪುಟ್ಟ ಲೈಟ್ಗಳು ಆಟೋ turn off  ಆಗಬೇಕು...ಗಾಳಿ ಬೀಸುತ್ತಿರುವಾಗ ಬೆಂಕಿ ಕಡ್ಡಿಯಿಂದ ಬೆಂಕಿ ಹೊತ್ತಿಸಲು ಆಗುವುದಿಲ್ಲವಲ್ಲ...?ಅಂತಾದೊಂದು ನಿಯಮ ಈ ಲೈಟ್ ಗಳ ವಿಚಾರದಲ್ಲೂ ಒಂದು ಭೌತಶಾಸ್ತ್ರವು ಭವಿಷ್ಯದಲ್ಲಾದರೂ ಬರಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆಯನ್ನು ಅಹನಾಳಿಗೆ ತಿಳಿಸುತ್ತಾ ಇಂದಿನ ಕಾರ್ಪೊರ...

ಮಹಿಳೆಯರೂ ಮತ್ತು ಮರೆಯದ ಸೇಡುಗಳು...

ಇಮೇಜ್
#ಮಹಿಳೆಯರೂ_ಮತ್ತು_ಮರೆಯದ_ಸೇಡುಗಳು... "ನಾವ್ ಮನೆಗೆ ಹೋಗೋ ದಿಲ್ಲ.... ನಾವ್ ಮನೆಗೆ ಹೋಗೋ ದಿಲ್ಲ.... ನಮ್ಗೆ ಬಾಗಲು ತೇಗೆಯೊರೀಲ್ಲಾ ನಾವ್ ಮನೆಗೆ ಹೋಗೂದಿಲ್ಲ ನಮ್ಗೆ ಬಾಗಲು ತೆಗೆಯೊರೀಲ್ಲಾ ಇಲ್ಲಾ..ಇಲ್ಲಾ.. ಇಲ್ಲಾ......ಇಲ್ಲಾ.."  ಕಳೆದ ಐದಾರು ವರ್ಷಗಳ ಹಿಂದೆ ಟ್ರೆಂಡ್ ಆಗಿದ್ದ ಈ ಹಾಡು ಯಾರು ತಾನೇ ಕೇಳಿಲ್ಲ??ವಿಶೇಷವಾಗಿ ಮದುವೆ ಆದವರೇ ಹತ್ತಾರು ಬಾರಿ rewind -rewind ಮಾಡಿಕೊಂಡು ಈ ಹಾಡನ್ನು ಕೇಳಿದವರು ಬಹಳ ಜನ ಇದ್ದಾರೆ ...ರೆಸ್ಟೋರೆಂಟ್ ಗಳಿಗೆ ಮಜಾ ಮಾಡಲು ಹೋದವರು, ಆಟೋ, ಕ್ಯಾಬ್ ಡ್ರೈವರಗಳು, ರಿಯಾಲಿಟಿ ಶೋ ಗಳಲ್ಲಿ ಮೆಟ್ಲಿಗಳಾಗಿ ಹಾಡುತ್ತಾ  ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಈ ಹಾಡು ತಲುಪಿ ಜನರ ಬಾಯಿಯಲ್ಲಿ ಆಲಾಪಿಸಿದ್ದು  ಎಲ್ಲರಿಗೂ ಗೊತ್ತಿದೆ. ಯಾಕೆ ಈ ಹಾಡು ಇಷ್ಟ ಆಗಿರಬಹುದೆಂದರೇ ಆ ಹಾಡಿನ lyrics, ಅಲ್ಲಿ ಇರುವ ಮಾತುಗಳು ಪ್ರತಿ ಗಂಡOದಿರಿಗೆ ಪ್ರತಿದಿನ ಅವರ ಹೆಂಡತಿಯರು ಹೇಳಿದಂತೆ ಅನಿಸಿದುದ್ದುದು ! ಅವರ ಹೆಂಡತಿಯರು ಮಾತಾಡಿದಾಗ ಬಾಯಿ ಮುಚ್ಚಿಕೊಂಡೋ ಬಯ್ಯಿಸಿಕೊಂಡೋ,ಅಥವಾ ಸಿಟ್ಟಿನಿಂದ ಹಿಂತಿರುಗಿ ಬೈದೊ,ಹೇಗೂ ದಿನಗಳು ತಳ್ಳುತಿದ್ದ ದಿನಗಳಲ್ಲಿ ಇಂಥಾ 'ಗಂಡಂದಿರ ಆಕ್ರೋಶ ' ಹಾಡಾಗಿ ಬಂದದ್ದು,ಇದರ ಸಾಲುಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಾದಂತೆನಿಸಿದ್ದರಿಂದ ಸಹಜವಾಗಿ  ಹೆಂಡತಿಯರಿಂದ ಕಿರಿ ಕಿರಿ ಅನುಭವಿಸಿರುವವರನ್ನು ಈ ಸಾಲುಗಳು ಮುಟ್ಟಿದವು ಅನ್ಸತ್ತೆ.....

ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು

*_ಇಂದಿನ ಮಕ್ಕಳು ಮತ್ತು ಪರೀಕ್ಷೆಗಳು_*  ✍️ ನಾಗೇಂದ್ರ ಬಂಜಗೆರೆ *ಇದು 'ನಕಲಿಯುಗ'.. ಆದರೆ ಅದ್ಯಾರೋ ಹಿರಿಯರು ಇದನ್ನು 'ಕಲಿಯುಗ'  ಎಂದು ಕರೆದಿರಬೇಕು.,ಈ ಮಾತನ್ನು ಯಾಕೆ ಹೇಳಬೇಕೆನಿಸುತ್ತಿದೆ ಎಂದರೆ   ನಾವು ವ್ಯವಹರಿಸುವ ಹಣದಲ್ಲಿ ಹಲವಾರು ಮುಖಬೆಲೆಯ ಖೋಟ ನೋಟುಗಳನ್ನ ಬಳಸಿ ಅಸಲಿ ನೋಟುಗಳಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದನ್ನು ಕೇಳಿದ್ದೇವೆ. ನೋಡಿದ್ದೇವೆಯೂ ಕೂಡ. ಈಗಂತೂ ನಾವು ಬಳಸುವ ಎಲ್ಲ ವಸ್ತುಗಳಲ್ಲೂ ನಕಲಿ ಯಾವುದು ಅಸಲಿ ಯಾವುದು ಅಂತ ಹುಡುಕುತ್ತಿರುವಾಗ ಇತ್ತೀಚಿನ ದಿನಗಳಲ್ಲಿ  ನಕಲಿಗಳ ಪಟ್ಟಿಗೆ ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿಯೂ ನಕಲಿ ಆದದ್ದು ನಮಗೆಲ್ಲ ಗೊತ್ತೇ ಇದೆ. ನಾನು ಶಿಕ್ಷಕ ವೃತ್ತಿಗೆ ಸೇರಿ ಹದಿನೇಳು ಸಂವತ್ಸರ ಕಳೆಯಿತು.ನನ್ನ ಅನೇಕ ಶಿಷ್ಯೋತ್ತಮರು ಸರ್ಕಾರಿ ನೌಕರಿಯನ್ನು ಪಡೆದಿದ್ದಾರೆ. ಇನ್ನೂ ಕೆಲವರು ಮೆಡಿಕಲ್,ಇಂಜಿನಿಯರಿಂಗ್, ಡಿಪ್ಲೋಮಾ ,ಐಟಿಐ ಪದವಿಯನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಗಣನೀಯ ಪ್ರಮಾಣದ ಶಿಷ್ಯಂದಿರು ಲಾರಿ ಡ್ರೈವರ್,ಕ್ಲೀನರ್  ಓನರ್ ಆಗಿಯೂ,ಕೂಲಿ ನಾಲಿ ಮಾಡುತ್ತಾ, ಇನ್ನೂ ಕೆಲವರು ಕುರಿಸಾಕಿಕೊಂಡು ಬದುಕನ್ನು ಕಂಡುಕೊಂಡಿದ್ದಾರೆ. ಈ ಮೊದಲು ನಾನು ಕೆಲಸ ಮಾಡುತ್ತಿದ್ದುದೊಂದು ಗುಡ್ಡಗಾಡು ಪ್ರದೇಶ. ತಾಲ್ಲೂಕು ಕೇಂದ್ರದಿಂದ 40 km ಅಂತರ ಇದ್ದುದರಿಂದ SSLC,PUC,KPSC ಇಂತಹ ಪರೀಕ್ಷಾ ಕರ್ತವ್ಯದಿಂದ ದೂರವೇ ಉಳಿದಿದ್ದ ನನಗೆ...